'ದೊಡ್ಮನೆ ಹುಡುಗ' ಪುನೀತ್ ಸೂಪರ್ ಬೈಕ್ ಕರಾಮತ್ತು

Written By:

ಪವರ್ ಸ್ಟಾರ್ ಪುನೀತ್ ರಾಜ್ ಅಭಿನಯದ 'ದೊಡ್ಮನೆ ಹುಡುಗ' ಶೂಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಈ ನಡುವೆ ಪುನೀತ್ ರಾಜ್ ಕುಮಾರ್ ಸೂಪರ್ ಬೈಕ್ ಏರುವ ಮೂಲಕ ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ.

ಮೊದಲೇ ಬೈಕ್ ಕ್ರೇಜ್ ಹೊಂದಿರುವ ಪುನೀತ್ ಅವರಿಗೆ ದೊಡ್ಮನೆ ಹುಡುಗ ಚಿತ್ರದಲ್ಲಿ ಹಾರ್ಲೆ ಡೇವಿಡ್ಸನ್ ಸಿವಿಒ ಲಿಮಿಟೆಡ್ ಎಡಿಷನ್ ದುಬಾರಿ ಬೈಕ್ ಚಾಲನೆ ಮಾಡಲಿದ್ದಾರೆ ಎಂಬುದು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಅತ್ಯಂತ ದುಬಾರಿ ಬೈಕ್ ಗಳಲ್ಲಿ ಒಂದಾಗಿರುವ ಹಾರ್ಲೆ ಡೇವಿಡ್ಸನ್ ಸಿವಿಒ ಲಿಮಿಟೆಡ್ ಬೆಲೆ, ವಿಶಿಷ್ಟತೆಗಳ ಬಗ್ಗೆ ಅರಿಯಲು ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

To Follow DriveSpark On Facebook, Click The Like Button
'ದೊಡ್ಮನೆ ಹುಡುಗ' ಪುನೀತ್ ಸೂಪರ್ ಬೈಕ್ ಕರಾಮತ್ತು

ಹಾರ್ಲೆ ಡೇವಿಡ್ಸನ್ ಪೈಕಿ ಅತಿ ದುಬಾರಿ ಬೈಕ್ ಗಳಲ್ಲಿ ಒಂದಾಗಿರುವ ಸಿವಿಒ ಲಿಮಿಟೆಡ್ 50 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ಬೆಲೆ) ದುಬಾರಿಯೆನಿಸಿದೆ.

'ದೊಡ್ಮನೆ ಹುಡುಗ' ಪುನೀತ್ ಸೂಪರ್ ಬೈಕ್ ಕರಾಮತ್ತು

1801 ಸಿಸಿ ಎಂಜಿನ್ ಬಳಕೆಯಾಗಿರುವ ಹಾರ್ಲೆ ಡೇವಿಡ್ಸನ್ ಸಿವಿಒ ಲಿಮಿಟೆಡ್ ಬೈಕ್ ನಲ್ಲಿ ಟ್ವಿನ್ ಕೂಲ್ಡ್ ಟ್ವಿನ್ ಕ್ಯಾಮ್ 110 ತಂತ್ರಗಾರಿಕೆ ಆಳವಡಿಕೆಯಾಗಿದೆ. ಅಲ್ಲದೆ ಬರೋಬ್ಬರಿ 416 ಕೆ.ಜಿ ಭಾರವನ್ನು ಹೊಂದಿರಲಿದೆ.

ಪ್ರೊಜೆಕ್ಟ್ ರಷ್ ರೂಂ

ಪ್ರೊಜೆಕ್ಟ್ ರಷ್ ರೂಂ

ಪ್ರೊಜೆಕ್ಟ್ ರಷ್ ರೂಂ ಎಂಬ ನಾವೀನತ್ಯೆಯ ತಂತ್ರಗಾರಿಕೆಯನ್ನು ಹಾರ್ಲೆ ಡೇವಿಡ್ಸನ್ ಸಿವಿಒ ಲಿಮಿಟೆಡ್ ಎಡಿಷನ್ ಬೈಕ್ ನಲ್ಲಿ ಬಳಕೆ ಮಾಡಲಾಗಿದೆ. ಇದರಂತೆ ದುಬಾರಿ ಕಾರಿನಲ್ಲಿರುವುದಕ್ಕೆ ಸಮಾನವಾದ ಎಬಿಎಸ್, ಡೈಟೈಮ್ ಎಲ್ ಇಡಿ ಹೆಡ್ ಲ್ಯಾಂಪ್, ಫಾಗ್ ಲ್ಯಾಂಪ್, ಟೂರ್ ಪ್ಯಾಕ್ ಲಗ್ಗೇಜ್ ಕ್ಯಾರಿಯರ್, ಪ್ರಕಾಶಮಾನವಾದ ಟರ್ನ್ ಸಿಗ್ನಲ್, ಬ್ರೇಕ್ ಲೈಟ್ ಮುಂತಾದ ಸೌಲಭ್ಯಗಳು ದೊರಕಲಿದೆ.

ಬ್ರೆಂಬೊ ಬ್ರೇಕ್ (Brembo break)

ಬ್ರೆಂಬೊ ಬ್ರೇಕ್ (Brembo break)

ಹಾರ್ಲೆ ಡೇವಿಡ್ಸನ್ ಸಿಇಒ ಲಿಮಿಟೆಡ್ ಬೈಕ್ ನಲ್ಲಿ ಅತ್ಯಾಧುನಿಕ ಬ್ರೆಂಬೊ ಬ್ರೇಕ್ ಆಳವಡಿಸಲಾಗಿದೆ. ಇದು ಗರಿಷ್ಠ ನಿರ್ವಹಣೆಯಲ್ಲೂ ಅತ್ಯುತ್ತಮ ಸ್ಥಿರತೆ ಪ್ರದಾನ ಮಾಡಲಿದೆ.

ಎಲ್ ಇಡಿ ಹೆಡ್ ಲೈಟ್ ಮತ್ತು ಎಲ್ ಇಡಿ ಫಾಲ್ ಲ್ಯಾಂಪ್

ಎಲ್ ಇಡಿ ಹೆಡ್ ಲೈಟ್ ಮತ್ತು ಎಲ್ ಇಡಿ ಫಾಲ್ ಲ್ಯಾಂಪ್

ಇಂತಹ ಸೌಲಭ್ಯಗಳು ಕಾರಿನಲ್ಲಿ ಮಾತ್ರ ಕಾಣಸಿಗಬಹುದು. ಆದರೆ ಹಾರ್ಲೆಯ ಈ ಪವರ್ ಫುಲ್ ಬೈಕ್ ನಲ್ಲಿ ಎಲ್ ಇಡಿ ಹೆಡ್ ಲೈಟ್ ಮತ್ತು ಎಲ್ ಇಡಿ ಫಾಗ್ ಲ್ಯಾಂಪ್ ಸೇವೆ ಇರಲಿದೆ.

ರಿಫ್ಲೆಕ್ಸ್ ಲಿಂಕ್ಡ್ ಬ್ರೇಕ್ ಜೊತೆ ಎಬಿಎಸ್

ರಿಫ್ಲೆಕ್ಸ್ ಲಿಂಕ್ಡ್ ಬ್ರೇಕ್ ಜೊತೆ ಎಬಿಎಸ್

ಪರಿಪೂರ್ಣ ಟೂರಿಂಗ್ ಬೈಕ್ ಎಂದೆನಿಸಿಕೊಳ್ಳುವ ನಿಟ್ಟಿನಲ್ಲಿ ರಿಫ್ಲೆಕ್ಸ್ ಲಿಂಕ್ಡ್ ಬ್ರೇಕ್ ಎಬಿಎಸ್ ಜೋಡಣೆ ಮಾಡಲಾಗಿದೆ. ಇದರಿಂದ ಯಾವುದೇ ಕಠಿಣ ಪರಿಸ್ಥಿತಿ ಎದುರಾದರೂ ಬೈಕ್ ಸ್ಕಿಡ್ ಆಗುವ ಭಯ ಬೇಡ.

ಹ್ಯಾಂಡ್ ನಿಯಂತ್ರಣ

ಹ್ಯಾಂಡ್ ನಿಯಂತ್ರಣ

ಚಾಲನೆ ವೇಳೆ ಸುಲಭ ನಿರ್ವಹಣೆಗಾಗಿ ಹ್ಯಾಂಡಲ್ ಬಾರ್ ಪಕ್ಕದಲ್ಲೇ ಬಹು ಕ್ರಿಯಾತ್ಮಕ ಸ್ವಿಚ್ ಗಳ ನಿಯಂತ್ರಣ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

ವಿಶಿಷ್ಟತೆಗಳು

ವಿಶಿಷ್ಟತೆಗಳು

ಕ್ರೋಮ್ ಡ್ಯುಯಲ್ ಎಕ್ಸಾಸ್ಟ್,

ಪ್ರಭಾವಿ ಬಣ್ಣಗಳ ಮಿಶ್ರಣ,

ಎಲ್ ಇಡಿ ರಿಯರ್ ಫೇಸಿಂಗ್ ಬ್ರೇಕ್ ಲೈಟ್ಸ್,

ಬುಲೆಟ್ ಟರ್ನ್ ಸಿಗ್ನಲ್,

ವಿಶಿಷ್ಟತೆಗಳು

ವಿಶಿಷ್ಟತೆಗಳು

ಟ್ಯಾಂಕ್ ಆ್ಯಂಡ್ ಫೆಂಡರ್ ಬ್ಯಾಡ್ಜ್,

ಹೈ ಫ್ಲೋ ಏರ್ ಬ್ಯಾಕ್,

ಪರಿಷ್ಕೃತ ಫೇರಿಂಗ್,

ಸ್ಯಾಡಲ್ ಬ್ಯಾಗ್ ಮತ್ತು ಫ್ರಂಟ್ ಫೆಂಡರ್,

ನೈಜ ಹಾರ್ಲೆ ಡೇವಿಡ್ಸನ್ ಶೈಲಿ,

ಹೊಸ ಮಿರರ್, ಕಸ್ಟಮ್ ವೀಲ್

ವಿಶಿಷ್ಟತೆಗಳು

ವಿಶಿಷ್ಟತೆಗಳು

ಆರಾಮದಾಯಕ ಸೀಟು,

ತಾಪ ಕಡಿಮೆ ಮಾಡಲು ಫೇರಿಂಗ್ ವಿನ್ಯಾಸ,

ಅತ್ಯುತ್ತಮ ಲೆಗ್ ರೂಂ,

ಬ್ಯಾಕ್ ಆರ್ಮ್ ರೆಸ್ಟ್,

ಸ್ಯಾಡಲ್ ಬ್ಯಾಗ್

ಟೂರ್ ಪ್ಯಾಕ್ ವಿನ್ಯಾಸ

'ದೊಡ್ಮನೆ ಹುಡುಗ' ಪುನೀತ್ ಸೂಪರ್ ಬೈಕ್ ಕರಾಮತ್ತು

ಇದಕ್ಕೂ ಮೊದಲು ಅಣ್ಣಾ ಬಾಂಡ್ ಚಿತ್ರಕ್ಕಾಗಿ ಅಸ್ಥಿಪಂಜರದ ವಿನ್ಯಾಸವನ್ನು ಹೋಲುವ ಬೈಕ್ ಅನ್ನು ಪುನೀತ್ ಓಡಿಸಿರುವುದು ನೀವಿಲ್ಲಿ ನೆನಪಿಸಿಕೊಳ್ಳಬಹುದು. ಇದನ್ನು ಬಳಿಕ ಹರಾಜಿಡಲಾಗಿತ್ತು.

 

English summary
Kannada Actor Puneeth Rajkumar Rides Harley Davidson CVO Limited.
Story first published: Wednesday, April 22, 2015, 16:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark