ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ನೂತನ ತಂತ್ರಜ್ಞಾನದ ರಸ್ತೆ ಶಾಶ್ವತ ದುರಸ್ತಿಗಾಗಿ ಕರ್ನಾಟಕದ ತೊಂಡೆಬಾವಿ ಗ್ರಾಮವನ್ನು ಆಯ್ಕೆ ಮಾಡಲಾಗಿತ್ತು. ಈಗ ಈ ಮಹತ್ತರ ಯೋಜನೆಯಲ್ಲಿ ಯಶ ದೊರಕಿದ್ದು, ರಸ್ತೆ ಗುಂಡಿಗಳಿಗೆ ಶಾಶ್ವತ ಪರಿಹಾರ ದೊರಕಿದಂತಾಗಿದೆ.

By Nagaraja

ಭಾರತದಲ್ಲಿ ಎಲ್ಲಿಗೂ ತೆರಳಿದರೂ ಗುಂಡಿಗಳಿಂದ ಕೂಡಿದ ರಸ್ತೆಗಳಿಂದ ತುಂಬಿಕೊಂಡಿದೆ. ಕಳಪೆ ಕಾಮಗಾರಿಯ ಬಗ್ಗೆ ಪಿಡಬ್ಲ್ಯುಡಿ ಇಲಾಖೆಯು ಇಲಾಖೆಯು ನಿರ್ಲಕ್ಷ್ಯ ತೋರುತ್ತಿರುವುದು ಪರಿಸ್ಥಿತಿ ಮತ್ತಷ್ಟು ಹದೆಗೆಡಲು ಕಾರಣವಾಗಿದೆ. ರಸ್ತೆ ಗುಂಡಿಗಳಿಂದಾಗಿ ದಿನಂಪ್ರತಿ ಸಾವಿರಾರು ಅಪಘಾತ ಪ್ರಕರಣಗಳು ನಡೆಯುತ್ತಿದ್ದು, ಸಾವು-ನೋವುಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಾಗಿದ್ದರೆ ಇವೆಲ್ಲದಕ್ಕೂ ಶಾಶ್ವತ ಪರಿಹಾರವಿಲ್ಲವೇ? ಖಂಡಿದೆ ಇದೆ. ಈ ಸಂಬಂಧ ವಿವರವಾದ ವರದಿಗಾಗಿ ಲೇಖನದತ್ತ ಕಣ್ಣಾಯಿಸಿರಿ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ಕೆನಡಾ ಮೂಲದ ಪ್ರಾಧ್ಯಾಪಕ ನೆಮ್ ಕುಮಾರ್ ಭಾಂಟಿಯಾ ಎಂಬವರು ಭಾರತದ ಗುಂಡಿಗಳಿಂದ ಕೂಡಿದ ರಸ್ತೆಗಳಿಗೆ ಶಾಶ್ವತ ಪರಿಹಾರವನ್ನು ಹುಡುಕಿದ್ದಾರೆ. ಸ್ವಯಂ ದುರಸ್ತಿಗೊಳಿಸುವ, ದೀರ್ಘ ಬಾಳ್ವಿಕೆ ಹಾಗೂ ಕಡಿಮೆ ವೆಚ್ಚದ ರಸ್ತೆಗಳನ್ನು ಕೆನೆಡಾ ಮೂಲದ ಪ್ರಾಧ್ಯಾಪಕ ಪರಿಚಯಿಸುತ್ತಿದ್ದಾರೆ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಅವರು, ನಮ್ಮ ಬೆಂಗಳೂರಿನಿಂದ 90 ಕೀ.ಮೀ. ದೂರದಲ್ಲಿರುವ ತೊಂಡೆಬಾವಿ ಗ್ರಾಮದಲ್ಲಿ ವಿನೂತನ ಪರೀಕ್ಷೆಯನ್ನು ನಡೆಸಿದ್ದಾರೆ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ದೆಹಲಿಯ ಐಐಟಿಯಲ್ಲಿ ಪದವಿ ಪಡೆದ ಅವರು ಕಳೆದ 34 ವರ್ಷಗಳಿಂದ ಕೆನೆಡಾದಲ್ಲಿ ವಾಸಿಸುತ್ತಿದ್ದಾರೆ. ಇವರು ಐಸಿ-ಇಂಪಾಕ್ಟ್ಸ್ ನ ಕೆನೆಡಾ-ಇಂಡಿಯಾ ರಿಸರ್ಚ್ ಸೆಂಟರ್ ಆಫ್ ಎಕ್ಸೆಲೆನ್ಸ್ ನ ವಿಜ್ಞಾನ ನಿರ್ದೇಶಕ ಕೂಡಾ ಆಗಿದ್ದಾರೆ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ಈ ಕೇಂದ್ರವು ಪ್ರತಿಯೊಂದು ದೇಶಗಳ ಸಮಕಾಲೀನ ಬೇಡಿಕೆಗೆ ಅನುಗುಣವಾಗಿ ವಿವಿಧ ಕಾರ್ಯಯೋಜನೆಗಳ ಅಭಿವೃದ್ಧಿ ಹಾಗೂ ಜಾರಿಗೆ ತರುವತ್ತ ಗಮನ ಹರಿಸುತ್ತಿದೆ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ಇದರಂತೆ 2014ರಲ್ಲಿ ಪ್ರಸ್ತುತ ತಂಡವು ಪಂಚಾಯತ್ ಸದಸ್ಯರೊಂದಿಗೆ ಚರ್ಚೆ ನಡೆಸುವ ಮೂಲಕ ತೊಂಡೆಬಾವಿ ಗ್ರಾಮವನ್ನು ರಸ್ತೆ ದುರಸ್ತಿಗಾಗಿ ಆಯ್ಕೆ ಮಾಡಿಕೊಂಡಿತ್ತು.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

1,200ರಷ್ಟು ಗ್ರಾಮಸ್ಥರು ವಾಸಿಸುವ ಇಲ್ಲಿನ ರಸ್ತೆಯು ಗುಂಡಿಗಳಿಂದ ಅತ್ಯಂತ ಶೋಚನೀಯ ಪರಿಸ್ಥಿತಿಗೆ ಬಂದು ತಲುಪಿತ್ತು. ಇದರಂತೆ ಹೊಸ ರಸ್ತೆ ಕಾಮಗಾರಿಯನ್ನು 2015 ಅಕ್ಟೋಬರ್ ನಲ್ಲಿ ಪೂರ್ಣಗೊಳಿಸಲಾಗಿತ್ತು.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ಮಳೆ, ಬಿಸಿಲು ಸೇರಿದಂತೆ ಎಲ್ಲ ಹವಾಮಾನ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿರುವ ಇಲ್ಲಿನ ರಸ್ತೆಗಳೀಗ ಗ್ರಾಮಸ್ಥರ ಸಂಚಾರಕ್ಕೆ ಶಾಶ್ವತ ಮುಕ್ತಿಯನ್ನು ನೀಡಿದೆ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ಭಾರತೀಯ ರಸ್ತೆಗಳಿಗೆ ಹೋಲಿಸಿದಾಗ 100 ಎಂಎಂಗಳಷ್ಟು ಮಾತ್ರ ದಪ್ಪವಾಗಿರುವ (ಶೇಕಡಾ 60ರಷ್ಟ ಕಡಿಮೆ) ಇಲ್ಲಿನ ರಸ್ತೆಗಳು ನಿರ್ಮಾಣ ವೆಚ್ಚವನ್ನು ಪರಿಗಣಿಸಿದಾಗಲೂ ಶೇಕಡಾ 30ರಷ್ಟು ಅಗ್ಗವೆನಿಸಿದೆ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ರಸ್ತೆ ನಿರ್ಮಾಣಕ್ಕಾಗಿ ಸಿಮೆಂಟ್ ಬಳಕೆ ಮಾಡುವಾಗ ಪರಿಸರಕ್ಕೆ ಮಾರಕವಾಗಿರುತ್ತದೆ. ಇದನ್ನು ತಪ್ಪಿಸಲು ಶೇಕಡಾ 60ರಷ್ಟು ಬೂದಿಯನ್ನು ಬಳಕೆ ಮಾಡಲಾಗುತ್ತದೆ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ಇಲ್ಲಿ ಕಂಡುಬಂದಿರುವ ಗಮನಾರ್ಹ ಸಂಗತಿಯೆಂದರೆ ರಸ್ತೆಗಳಲ್ಲಿ ಒಂದೇ ಒಂದು ಬಿರುಕು ಮೂಡುವುದಿಲ್ಲ ಎಂಬುದು ಆಶ್ಚರ್ಯಚಕಿತಗೊಳಿಸುತ್ತಿದೆ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ರಸ್ತೆ ನಿರ್ಮಿಸಲು ಅತ್ಯಂತ ಶಕ್ತಿಶಾಲಿ ಕಾಂಕ್ರೀಟ್ ಬಳಕೆ ಮಾಡಲಾಗುತ್ತದೆ. ಇನ್ನು ನೀರನ್ನು ಹೀರಿಕೊಳ್ಳಲು ವಿಶೇಷ ರೀತಿಯ ಫೈಬರ್ ಲೇಪನ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗಿದೆ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ತಜ್ಞರ ಪ್ರಕಾರ ಜಲಾಕರ್ಷಣೆಯ ಲೇಪನವನ್ನು ರಸ್ತೆಗೆ ಹಚ್ಚಲಾಗಿದೆ. ಇದರಿಂದಾಗಿ ಬಿರುಕು ಬಿಡುವ ಸಾಧ್ಯತೆ ಕಡಿಮೆಯಾಗಿದ್ದು, ಸ್ವಯಂ ದುರಸ್ತಿ ತಂತ್ರಗಾರಿಕೆಯನ್ನು ಹೊಂದಿದೆ.

ರೋಡ್ ನೆಟ್ಟಗಿಲ್ಲವೇ, ಗುಂಡಿಗಳಿಂದ ಕೂಡಿದೆಯೇ? ಇಲ್ಲಿದೆ ಶಾಶ್ವತ ಪರಿಹಾರ

ಭಾರತೀಯ ರಸ್ತೆಗಳ ಬಾಳ್ವಿಕೆ ಸರಾಸರಿ ಎರಡು ವರ್ಷಗಳಾಗಿವೆ. ಆದರೆ ಇಂತಹ ರಸ್ತೆಗಳು ಕನಿಷ್ಠ 15 ವರ್ಷವಾದರೂ ಬಾಳ್ವಿಕೆ ಬರಲಿದೆ. ಇದು ನಿಜಕ್ಕೂ ಪರಿಣಾಮಕಾರಿಯೆನಿಸಿದ್ದು, ಭಾರತೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳು ಈ ಬಗ್ಗೆ ಗಮನ ಹರಿಸಬೇಕಿದೆ.

Most Read Articles

Kannada
English summary
Radical Technology to Develop Roads
Story first published: Tuesday, October 18, 2016, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X