ಸವಾರನಿಲ್ಲದೇ ಓಡಿದ ಬೈಕ್- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್..!!

Written By:

ಸವಾರನಿಲ್ಲದೇ ಬೈಕ್ ಒಂದು ಬಹುದೂರದವರೆಗೆ ಸಾಗಿದ ಘಟನೆ ನಡೆದಿದ್ದು, ಘಟನೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹತ್ತಾರು ಕಟ್ಟುಕಥೆಗಳು ಶುರುವಾಗಿವೆ.

ಸವಾರನಿಲ್ಲದೇ ಓಡಿದ ಬೈಕ್- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್..!!

ಇದಕ್ಕೆ ಕಾರಣ ಮೊನ್ನೆಯಷ್ಟೇ ಬೈಕ್‌ವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರನೇ ಇಲ್ಲದೆ ಬಹುದೂರದವರೆಗೆ ಸಾಗಿರುವುದು. ಅಂದಹಾಗೆ ಇದೆಲ್ಲಾ ನಡೆದಿರುವುದು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ.

ಸವಾರನಿಲ್ಲದೇ ಓಡಿದ ಬೈಕ್- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್..!!

ಸವಾರನಿಲ್ಲದೇ ಬೈಕ್ ಒಂದು ಸುಮಾರು 300 ರಿಂದ 400 ಮೀಟರ್ ದೂರ ಸಾಗಿದ್ದು, ವಿಡಿಯೋ ಮಾಡಿದ ಕೆಲವರು ಇದನ್ನು ಘೊಸ್ಟ್ ಬೈಕ್ ಎಂದು ಸಾಮಾಜಿಕ ಜಾಣತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಸವಾರನಿಲ್ಲದೇ ಓಡಿದ ಬೈಕ್- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್..!!

ವಿಡಿಯೋ ಕುರಿತಂತೆ ಸಾಮಾಜಿಕ ಜಾಣತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗಳು ಶುರುವಾಗಿದ್ದು, ಇದು ದೆವ್ವಗಳದ್ದೇ ಕೆಲಸ ಎಂದೆಲ್ಲಾ ಚರ್ಚೆ ನಡೆಯುತ್ತಿವೆ.

ಸವಾರನಿಲ್ಲದೇ ಓಡಿದ ಬೈಕ್- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್..!!

ಇನ್ನು ಸವಾರನಿಲ್ಲದೇ ಬೈಕ್ ಓಡಲು ಕಾರಣ ಏನು ಎನ್ನುವ ಬಗ್ಗೆ ಕೆಲವು ವೈಜ್ಞಾನಿಕ ಕಾರಣಗಳನ್ನು ತಿಳಿಯಲು ಹೋದಾಗ ವಿಡಿಯೋ ಅಸಲಿ ಕಥೆ ಬಯಲಾಗಿದೆ.

ಸವಾರನಿಲ್ಲದೇ ಓಡಿದ ಬೈಕ್- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್..!!

ಯುವಕನೋರ್ವ ಬೈಕ್ ಚಾಲನೆ ಮಾಡುತ್ತಿರುವಾಗ ಬಲ ಭುಜಕ್ಕೆ ಮತ್ತೊಂದು ವಾಹನ ರಭಸವಾಗಿ ಗುದ್ದಿದೆ. ಭೀಕರ ಅಪಘಾತ ಹಿನ್ನೆಲೆ ಬೈಕ್ ಸವಾರ ಸ್ಥಳದಲ್ಲೇ ಉರುಳಿ ಬಿದ್ದಿದ್ದು, ವೇಗದಲ್ಲಿ ಬೈಕ್ ಮಾತ್ರ ಮುಂದೆ ಚಲಿಸಿದೆ.

ಇನ್ನು ಚಿತ್ರದಲ್ಲಿ ಕಾಣುತ್ತಿರುವ ಸೂಪರ್ ಬೈಕ್ ಕ್ರೂಸ್ ಕಂಟ್ರೋಲರ್ ಹೊಂದಿದ್ದು, ಕ್ರೂಜ್ ಕಂಟ್ರೋಲರ್ ಇದ್ದಲ್ಲಿ ಹ್ಯಾಂಡಲ್ ಟಚ್ ಮಾಡಿದೆಯೇ ಸುಮಾರು 500 ಮೀಟರ್ ಪ್ರಯಾಣ ಮಾಡಬಹುದಾಗಿದೆ. ಹೀಗಾಗಿ ಇದು ಯಾವುದೇ ಘೊಸ್ಟ್ ಬೈಕ್ ಅಲ್ಲ ಎಂಬುವುದು ಸಾಬೀತಾಗಿದೆ.

Read more on ವಿಡಿಯೋ video
English summary
Read in Kannada about watch a 'Ghost' motorcycle freaking out motorists on a highway.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark