ಡ್ರೀಮ್​ ಕಾರಿನಲ್ಲಿ ಡಿ ಬಾಸ್ ಜೊತೆ ನಟ ರಿಷಬ್‌ ಶೆಟ್ಟಿ ಜಾಲಿ ಡ್ರೈವ್

ಸ್ಯಾಂಡಲ್​​​‌ವುಡ್‌ನ ಚಾಲೆಂಜಿಗ್‌ ಸ್ಟಾರ್‌ ದರ್ಶನ್ ಅವರು ಐಷಾರಾಮಿ ಬೈಕ್ ಮತ್ತು ಕಾರುಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ನಟ. ನಟ ದರ್ಶನ್ ಅವರು ಹಲವಾರು ದುಬಾರಿ ಮತ್ತು ಐಷಾರಾಮಿ ಬೈಕ್ ಮತ್ತು ಕಾರು ಮಾದರಿಗಳನ್ನು ಹೊಂದಿದ್ದಾರೆ.

ಡ್ರೀಮ್​ ಕಾರಿನಲ್ಲಿ ಡಿ ಬಾಸ್ ಜೊತೆ ನಟ ರಿಷಬ್‌ ಶೆಟ್ಟಿ ಜಾಲಿ ಡ್ರೈವ್

ನಿನ್ನೆ ಸಂಜೆ ಮೈಸೂರಿನಲ್ಲಿ ನಟ ದರ್ಶನ್ ಅವರ ಐಷಾರಾಮಿ ಫೋರ್ಡ್‌ ಮಸ್ಟಾಂಗ್ ಜಿಟಿ ಕಾರಿನಲ್ಲಿ ನಟ ಹಾಗೂ ನಿರ್ದೇಶಕ ರಿಷಬ್​ ಶೆಟ್ಟಿ ಅವರು ಒಂದು ಡ್ರೈವ್ ಹೋಗಿ ಬಂದಿದ್ದಾರೆ. ರಿಷಬ್​ ಶೆಟ್ಟಿ ಅವರು ಚಾಲೆಂಜಿಗ್‌ ಸ್ಟಾರ್‌ ದರ್ಶನ್ ಅವರ ಜೊತೆ ತಮ್ಮ ಕನಸಿನ ಕಾರು ಫೋರ್ಡ್‌ ಮಸ್ಟಾಂಗ್ ಜಿಟಿಯಲ್ಲಿ ಡ್ರೈವ್ ತೆರಳಿರುವ ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಡ್ರೀಮ್​ ಕಾರಿನಲ್ಲಿ ಡಿ ಬಾಸ್ ಜೊತೆ ನಟ ರಿಷಬ್‌ ಶೆಟ್ಟಿ ಜಾಲಿ ಡ್ರೈವ್

ನಿರ್ದೇಶಕ ರಿಷಬ್​ ಶೆಟ್ಟಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ 'ನನ್ನ ಡ್ರೀಮ್‌ ಕಾರು ಫೋರ್ಡ್ ಮಸ್ಟಾಂಗ್ ನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ, ಧನ್ಯವಾದಗಳು ದರ್ಶನ್‌ ಸರ್' ಎಂದು ಟ್ವಿಟ್ ಮಾಡಿದ್ದಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಡ್ರೀಮ್​ ಕಾರಿನಲ್ಲಿ ಡಿ ಬಾಸ್ ಜೊತೆ ನಟ ರಿಷಬ್‌ ಶೆಟ್ಟಿ ಜಾಲಿ ಡ್ರೈವ್

ನಟ ಹಾಗೂ ನಿರ್ದೇಶಕ ರಿಷಬ್​ ಶೆಟ್ಟಿ ಸದ್ಯ ಮೈಸೂರಿನಲ್ಲಿ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಿನ್ನೆ ಸಂಜೆ ದರ್ಶನ್ ಹಾಗೂ ರಿಷಬ್​ ಶೆಟ್ಟಿ ಮೈಸೂರಿನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಫೋರ್ಡ್‌ ಮಸ್ಟಾಂಗ್ ಜಿಟಿ ಕಾರಿನಲ್ಲಿ ಡ್ರೈವ್ ಹೋಗಿದ್ದಾರೆ.

ಡ್ರೀಮ್​ ಕಾರಿನಲ್ಲಿ ಡಿ ಬಾಸ್ ಜೊತೆ ನಟ ರಿಷಬ್‌ ಶೆಟ್ಟಿ ಜಾಲಿ ಡ್ರೈವ್

ಇನ್ನು ಚಾಲೆಂಜಿಗ್‌ ಸ್ಟಾರ್‌ ದರ್ಶನ್ ಅವರ ಬಳಿ ಜಾಗ್ವಾರ್, ಆಡಿ ಕ್ಯೂ7, ರೇಂಜ್ ರೋವರ್, ಟೊಯೊಟಾ ಫಾರ್ಚೂನರ್, ಮಿನಿ ಕೂಪರ್, ಮಹೀಂದ್ರಾ ಸ್ಕಾರ್ಪಿಯೋ ಜೊತೆಗೆ ದುಬಾರಿ ಮತ್ತು ಐಕಾನಿಕ್ ಹಮ್ಮರ್ ಎಸ್‍ಯುವಿಯನ್ನು ಹೊಂದಿದ್ದಾರೆ. ಇದರೊಂದಿಗೆ ಈ ಫೋರ್ಡ್‌ ಮಸ್ಟಾಂಗ್ ಜಿಟಿ ಕಾರನ್ನು ಹೊಂದಿದ್ದಾರೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಡ್ರೀಮ್​ ಕಾರಿನಲ್ಲಿ ಡಿ ಬಾಸ್ ಜೊತೆ ನಟ ರಿಷಬ್‌ ಶೆಟ್ಟಿ ಜಾಲಿ ಡ್ರೈವ್

ಇನ್ನು ಫೋರ್ಡ್‌ ಮಸ್ಟಾಂಗ್ ಜಿಟಿ ಕಾರಿನ ಬಗ್ಗೆ ಹೇಳುವುದಾದರೆ, ಈ ದುಬಾರಿ ಕಾರಿನಲ್ಲಿ 5.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 415-ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಡ್ರೀಮ್​ ಕಾರಿನಲ್ಲಿ ಡಿ ಬಾಸ್ ಜೊತೆ ನಟ ರಿಷಬ್‌ ಶೆಟ್ಟಿ ಜಾಲಿ ಡ್ರೈವ್

ಫೋರ್ಡ್‌ ಕಂಪನಿಯು ಮಸ್ಟಾಂಗ್ ಜಿಟಿ ಮಾದರಿಯನ್ನು ಅಪ್ಡೇಟ್ ಮಾಡಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ನ್ಯೂ ಜನರೇಷನ್ ಫೋರ್ಡ್‌ ಮಸ್ಟಾಂಗ್ ಜಿಟಿ ಕಾರಿನ ಎಂಜಿನ್ ಅನ್ನು ಅಪ್ಡೇಟ್ ಮಾಡಲಾಗುತ್ತದೆ. ಈ ಎಂಜಿನ್ ಪ್ರಸ್ತುತ ಮಾದರಿಗಿಂತ 35 ಬಿ‍‍ಹೆಚ್‍ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಡ್ರೀಮ್​ ಕಾರಿನಲ್ಲಿ ಡಿ ಬಾಸ್ ಜೊತೆ ನಟ ರಿಷಬ್‌ ಶೆಟ್ಟಿ ಜಾಲಿ ಡ್ರೈವ್

ಹೊಸ ಫೋರ್ಡ್ ಮಸ್ಟಾಂಗ್‍ನಲ್ಲಿ ಎಂಜಿನ್‍‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ. ಪ್ರಸ್ತುತ ಮಾದರಿಯಲ್ಲಿ ಎಂಜಿನ್‍ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಡ್ರೀಮ್​ ಕಾರಿನಲ್ಲಿ ಡಿ ಬಾಸ್ ಜೊತೆ ನಟ ರಿಷಬ್‌ ಶೆಟ್ಟಿ ಜಾಲಿ ಡ್ರೈವ್

ಫೋರ್ಡ್ ಮಸ್ಟಾಂಗ್ ಜಿಟಿ ವಿಶ್ವದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಫೋರ್ಡ್ ಕಂಪನಿಯು ವರ್ಷಗಳಲ್ಲಿ ಹಲವಾರು ನವೀಕರಗಳನ್ನು ಪರಿಚಯಿಸುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಕೆಲವು ವರ್ಷಗಳ ಹಿಂದೆ ಫೋರ್ಡ್ ಮಸ್ಟಾಂಗ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಕಾರು ಭಾರತೀಯರ ಗಮನಸೆಳೆಯುವಲ್ಲಿ ಯಶ್ವಸಿಯಾಗಿದೆ.

Most Read Articles

Kannada
English summary
Rishab Shetty Enjoyed The Drive In His Dream car With Actor Darshan. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X