ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ- ಕರ್ನಾಟಕಕ್ಕೆ ಯಾವ ಸ್ಥಾನ ಗೊತ್ತಾ?

'ಭಾರತದಲ್ಲಿ ರಸ್ತೆ ಅಪಘಾತ-2016'ರ ವರದಿ ಪ್ರಕಾರ ದೇಶದಲ್ಲಿ ಪ್ರತಿದಿನ ನೂರಾರು ಅಪಘಾತಗಳು ಸಂಭವಿಸುತ್ತಿದ್ದು, ಕರ್ನಾಟಕವು ಇದಕ್ಕೆ ಹೊರತಾಗಿಲ್ಲ. ಕಳೆದ 5 ವರ್ಷಗಳ ಅವಧಿಯಲ್ಲಿ ಇದು ದ್ವಿಗುಣಗೊಂಡಿದ್ದು, ವರದಿಯ ಪ್ರಮುಖಾಂಶಗಳು ಇಲ್ಲಿವೆ ನೋಡಿ.

By Praveen

ಅಪಘಾತ ಸಂಖ್ಯೆಗಳ ಕುರಿತು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ ತಮಿಳುನಾಡಿನ ರಸ್ತೆಗಳಲ್ಲಿ ಅತ್ಯಂತ ಹೆಚ್ಚು ಅಂದರೆ 71,431 (ಶೇ.14.9) ಅಪಘಾತಗಳು ನಡೆದಿದ್ದು, 53,972 (ಶೇ.11.2) ಪ್ರಕರಣಗಳು ದಾಖಲಾಗಿರುವ ಮಧ್ಯಪ್ರದೇಶವು ಎರಡನೇ ಸ್ಥಾನದಲ್ಲಿದೆ.

ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ- ಕರ್ನಾಟಕಕ್ಕೆ ಯಾವ ಸ್ಥಾನ ಗೊತ್ತಾ?

ಇನ್ನು 2016ರ ಅವಧಿಯಲ್ಲಿ ಅತೀ ಹೆಚ್ಚು ರಸ್ತೆ ಅಪಘಾತ ಪ್ರಕರಣಗಳು ವರದಿಯಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, 44,403 ಪ್ರಕರಣಗಳು ವರದಿಯಾಗಿವೆ.

ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ- ಕರ್ನಾಟಕಕ್ಕೆ ಯಾವ ಸ್ಥಾನ ಗೊತ್ತಾ?

ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ನಡೆದ ನಗರಗಳ ಪಟ್ಟಿಯಲ್ಲಿ ರಾಜಧಾನಿ ಬೆಂಗಳೂರು ಕೂಡ ಮೂರನೇ ಸ್ಥಾನ ಗಳಿಸಿದ್ದು, ಬೆಂಗಳೂರಿನಲ್ಲೇ 5,323 ರಸ್ತೆ ಅವಘಡಗಳು ಸಂಭವಿಸಿವೆ.

Recommended Video

MV Agusta Brutale Launched In India | In Kannada - DriveSpark ಕನ್ನಡ
ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ- ಕರ್ನಾಟಕಕ್ಕೆ ಯಾವ ಸ್ಥಾನ ಗೊತ್ತಾ?

ಈ ಹಿಂದಿನ 2015ರ ಅಪಘಾತಗಳ ಸಂಖ್ಯೆ ಹೋಲಿಸಿದರೆ 2016ರಲ್ಲಿ ರಾಜ್ಯದ ರಸ್ತೆಗಳಲ್ಲಿ 392ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಹೆಚ್ಚಾಗಿದ್ದು, ಯುವ ಸಮುದಾಯವೇ ಇದರಲ್ಲಿ ಹೆಚ್ಚು ಬಲಿಯಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ- ಕರ್ನಾಟಕಕ್ಕೆ ಯಾವ ಸ್ಥಾನ ಗೊತ್ತಾ?

ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಮಹಾರಾಷ್ಟ್ರದಲ್ಲಿ ಅಪಘಾತಗಳ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದ್ದು, 2015ರಲ್ಲಿ 63,805 ಅಪಘಾತಗಳು ವರದಿಯಾಗಿದ್ದರೆ, 2016ರಲ್ಲಿ ಇದು 39,878ಕ್ಕೆ ಇಳಿಕೆಯಾಗಿದೆ.

ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ- ಕರ್ನಾಟಕಕ್ಕೆ ಯಾವ ಸ್ಥಾನ ಗೊತ್ತಾ?

ಹಾಗೆಯೇ ನಗರಗಳ ಪೈಕಿ ಚೆನ್ನೈನಲ್ಲಿ ಅತಿ ಹೆಚ್ಚು ಅವಘಡಗಳು ಸಂಭವಿಸಿದ್ದು, 7,846 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಬರುವ ದೆಹಲಿಯಲ್ಲಿ ಕಳೆದ ವರ್ಷ 7,375 ರಸ್ತೆ ಅವಘಡಗಳು ವರದಿಯಾಗಿವೆ.

ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ- ಕರ್ನಾಟಕಕ್ಕೆ ಯಾವ ಸ್ಥಾನ ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ ಕೆಲ ವರ್ಷಗಳಿಂದ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ವಾಹನ ಸವಾರರು ಜಾಗೃತಿಯಿಂದ ವಾಹನ ಚಾಲನೆ ಬೇಕಿದೆ. ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಕಠಿಣ ಕಾನೂನು ಕ್ರಮಗಳನ್ನು ಹೆಚ್ಚಿಸಿದ್ದರು ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

Most Read Articles

Kannada
Read more on ಅಪಘಾತ accident
English summary
Read in Kannada about One person died on the roads every four minutes of 2016, taking the total fatalities to over 150,000, said a government report released on Wednesday.
Story first published: Friday, September 8, 2017, 14:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X