ವಿಡಿಯೋ: ಹೆದ್ದಾರಿಯಲ್ಲಿ ಬೈಕ್ ಸವಾರದಿಂದ ಎಡವಟ್ಟು- ನಿಯಂತ್ರಣ ತಪ್ಪಿದ ಕಾರುಗಳ ಮಧ್ಯೆ ಡಿಕ್ಕಿ

Written By:

ವಾಹನ ಚಾಲನೆ ವೇಳೆ ರಸ್ತೆಗಳಲ್ಲಿ ಕೆಲವೊಮ್ಮೆ ಸವಾರರ ನಡುವೆ ಸಣ್ಣಪುಟ್ಟ ವಾಗ್ವಾದಗಳು ನಡೆಯುವುದು ಕಾಮನ್. ಆದ್ರೆ ಇಲ್ಲೊಬ್ಬ ಬೈಕ್ ಸವಾರ ಕಾರು ಮಾಲೀಕನ ಮೇಲಿನ ಕೋಪಕ್ಕೆ ಮಾಡಿದ ಎಡವಟ್ಟು ಭೀಕರ ರಸ್ತೆ ಅಪಘಾತಕ್ಕೆ ಕಾರಣವಾಗಿದೆ.

To Follow DriveSpark On Facebook, Click The Like Button
ವಿಡಿಯೋ: ಹೆದ್ದಾರಿಯಲ್ಲಿ ಬೈಕ್ ಸವಾರದಿಂದ ಎಡವಟ್ಟು- ನಿಯಂತ್ರಣ ತಪ್ಪಿದ ಕಾರುಗಳ ಮಧ್ಯೆ ಡಿಕ್ಕಿ

ಹೆದ್ದಾರಿಯಲ್ಲಿ ವೇಗದ ಚಾಲನೆ ವಿಚಾರಕ್ಕೆ ಕಾರು ಮಾಲೀಕ ಮತ್ತು ಬೈಕ್ ಸವಾರನ ನಡುವಿನ ಜಗಳ ನಡೆದಿದ್ದು, ಕೋಪಗೊಂಡ ಬೈಕ್ ಸವಾರ ಚಲಿಸುತ್ತಿದ್ದ ಕಾರಿನ ಹಿಂಭಾಗಕ್ಕೆ ಜೋರಾಗಿ ಒದೆ ಕೊಟ್ಟಿದ್ದಾನೆ.

ವಿಡಿಯೋ: ಹೆದ್ದಾರಿಯಲ್ಲಿ ಬೈಕ್ ಸವಾರದಿಂದ ಎಡವಟ್ಟು- ನಿಯಂತ್ರಣ ತಪ್ಪಿದ ಕಾರುಗಳ ಮಧ್ಯೆ ಡಿಕ್ಕಿ

ಬೈಕ್ ಸವಾರ ಜೋರಾಗಿ ಒದೆ ಕೊಡುತ್ತಿದ್ದಂತೆ ಕಾರು ನಿಯಂತ್ರಣ ತಪ್ಪಿದ್ದು, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆ ಕಾರು ಸಹ ಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ವಿಡಿಯೋ: ಹೆದ್ದಾರಿಯಲ್ಲಿ ಬೈಕ್ ಸವಾರದಿಂದ ಎಡವಟ್ಟು- ನಿಯಂತ್ರಣ ತಪ್ಪಿದ ಕಾರುಗಳ ಮಧ್ಯೆ ಡಿಕ್ಕಿ

ಅಂದಹಾಗೆ ಇದೆಲ್ಲಾ ನಡೆದಿದ್ದು ಅಮೆರಿಕದ ಲಾಸ್ ಏಂಜಿಲೀಸ್‌ನಲ್ಲಿ. ಇಷ್ಟೇಲ್ಲಾ ರಾದ್ದಾಂತಕ್ಕೆ ಬೈಕ್ ಸವಾರ ಮತ್ತು ಕಾರು ಚಾಲಕನ ನಡುವಿನ ಕಿತ್ತಾಟವೇ ಕಾರಣ ಎನ್ನಲಾಗುತ್ತಿದೆ.

ಇನ್ನು ಬೈಕ್ ಸವಾರನ ದುಶ್ಕೃತ್ಯ ಮತ್ತೊಬ್ಬ ಕಾರು ಚಾಲಕ ಸೆರೆಹಿಡಿದಿದ್ದು, ಭೀಕರ ರಸ್ತೆ ಅಪಘಾತ ಕಾರಣವಾದ ಹಿನ್ನೆಲೆ ಜೈಲು ಸೇರಿದ್ದಾನೆ.

English summary
Read in Kannada about Biker’s Kick Causes Two Cars To Crash.
Story first published: Saturday, June 24, 2017, 19:38 [IST]
Please Wait while comments are loading...

Latest Photos