ಭಾರತದ ವಾಯುಸೈನ್ಯಕ್ಕೆ ಮತ್ತೊಂದು ಅಸ್ತ್ರ ಸೇರ್ಪಡೆ !!

Written By:

ರಷ್ಯಾ ತನ್ನ ಹೊಚ್ಚ ಹೊಸ ಬಲಿಷ್ಠ ಮೈಕೋಯನ್ ಗುರೆವಿಚ್ MIG-35 ಫೈಟರ್ ಜೆಟ್ ಅಭಿವೃದ್ಧಿ ಮಾಡುತ್ತಿದ್ದು, ಸದ್ಯದರಲ್ಲೇ ಭಾರತಕ್ಕೆ ಮಾರಾಟ ಮಾಡುವ ತಯಾರಿ ನೆಡೆಸಿದೆ.

ಭಾರತದ ವಾಯು ಸೈನ್ಯಕ್ಕೆ ಮತ್ತೊಂದು ಅಸ್ತ್ರ ಸೇರ್ಪಡೆ !!

ಈ ಫೈಟರ್ ಜೆಟ್ ಅತ್ಯಂತ ಆಧುನಿಕ ಆವೃತಿ ಎಂಬ ಖ್ಯಾತಿ ಪಡೆದುಕೊಂಡಿದ್ದು, 4++ ತಲೆಮಾರಿನ ವಿಶಿಷ್ಟ ರೀತಿಯಲ್ಲಿ ಅಭಿವೃದ್ಧಿ ಹೊಂದಿದ ಜೆಟ್ ಎನ್ನಲಾಗಿದ್ದು, ಸದ್ಯ ಭಾರತ ಈ ಫೈಟರ್ ಜೆಟ್ ತನ್ನದಾಗಿಸಿಕೊಳ್ಳುವ ತವಕದಲ್ಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಭಾರತದ ವಾಯು ಸೈನ್ಯಕ್ಕೆ ಮತ್ತೊಂದು ಅಸ್ತ್ರ ಸೇರ್ಪಡೆ !!

ರಷ್ಯಾ ಅಭಿವೃದ್ಧಿ ಮಾಡುತ್ತಿರುವ ಈ ಫೈಟರ್ ಜೆಟ್ ಕೆಲಸವೂ ಸಂಪೂರ್ಣವಾಗಿ ಮುಗಿದಿದ್ದು, ಇತ್ತೀಚೆಗೆ ನೆಡೆದ ವೈಮಾನಿಕ ಪ್ರದರ್ಶನದಲ್ಲಿ ತನ್ನ ಸಾಮರ್ಥ್ಯಗಳನ್ನು ಪ್ರದರ್ಶನ ಮಾಡಿದೆ.

ಭಾರತದ ವಾಯು ಸೈನ್ಯಕ್ಕೆ ಮತ್ತೊಂದು ಅಸ್ತ್ರ ಸೇರ್ಪಡೆ !!

ಮೈನವಿರೇಳಿಸುವ ಟೈಲ್ ಸ್ಲೈಡ್, ಬ್ಯಾರೆಲ್ ರೋಲ್, ನೆಸ್ಟೆರೋವ್ ಲೂಪ್ ಹಾಗು ಮತ್ತಿತರ ರೀತಿಯ ಪ್ರದರ್ಶನ ಮಾಡುವ ಮೂಲಕ ವೈಮಾನಿಕ ಪ್ರದರ್ಶನಕ್ಕೆ ಆಗಮಿಸಿದ್ದ ಪ್ರೇಕ್ಷಕರನ್ನು ಮೈಕೋಯನ್ ಗುರೆವಿಚ್ MIG-35 ಫೈಟರ್ ಜೆಟ್ ಪುಳಕಿತರಾಗುವಂತೆ ಮಾಡಿತು.

ಭಾರತದ ವಾಯು ಸೈನ್ಯಕ್ಕೆ ಮತ್ತೊಂದು ಅಸ್ತ್ರ ಸೇರ್ಪಡೆ !!

ಭಾರತ ಮತ್ತು ರಷ್ಯಾ ದಶಕಗಳಿಂದಲೂ ಮೈತ್ರಿ ಹೊಂದಿದ್ದು, ಈ ವಿಚಾರವನ್ನು ಪರಿಗಣಿಸಿ ಭಾರತಕ್ಕೆ ಈ ಫೈಟರ್ ಜೆಟ್ ನೀಡಲು ಒಪ್ಪಿಗೆ ಸೂಚಿಸಿದೆ. ರಷ್ಯನ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಹ ಭಾರತದ ಮೇಲೆ ಅತಿ ಹೆಚ್ಚು ನಂಬಿಕೆ ಹೊಂದಿದ್ದಾರೆ ಎಂಬುದು ಅವರ ಮಾತಿನಲ್ಲಿ ತಿಳಿಯುತ್ತದೆ.

ಭಾರತದ ವಾಯು ಸೈನ್ಯಕ್ಕೆ ಮತ್ತೊಂದು ಅಸ್ತ್ರ ಸೇರ್ಪಡೆ !!

"ನಾವು ಭಾರತದ ಜೊತೆ ಟೆಂಡರ್ ಪ್ರಕ್ರಿಯೆಗೆ ಮುಂದಾಗಿದ್ದು, ಜೆಟ್ ಪೂರೈಕೆ ಪ್ರಸ್ತಾಪಕ್ಕೆ ಸಂತೋಷದಿಂದ ಒಪ್ಪಿಗೆ ನೀಡಿದ್ದೇವೆ. ಇನ್ನೂ ಮುಂದೆಯೂ ಸಹ ಭಾರತದ ವಾಯು ಸೈನ್ಯದ ಜೊತೆ ಉತ್ತಮ ಭಾಂದವ್ಯ ಹೊಂದಲು ಇಚ್ಛಿಸುತ್ತೇವೆ" ಎಂದು ಅವರು ತಿಳಿಸಿದರು.

ಭಾರತದ ವಾಯು ಸೈನ್ಯಕ್ಕೆ ಮತ್ತೊಂದು ಅಸ್ತ್ರ ಸೇರ್ಪಡೆ !!

ಈ ಫೈಟರ್ ಜೆಟ್ ಖರೀದಿಯು ಭಾರತದ ಸೈನ್ಯ ಬಲವನ್ನು ಹೆಚ್ಚಿಸಲಿದ್ದು, ಖಂಡಿತವಾಗಿಯೂ ನೆರೆಯ ದೇಶಗಳಲ್ಲಿ ಭಯ ಹುಟ್ಟಿಸಲಿದೆ.

Read more on ವಿಮಾನ plane
English summary
The Mikoyan Gurevich MIG-35 is Russia's latest fighter jet, and going by reports, it is also their most advanced 4++ generation fighter jet yet.
Story first published: Monday, July 24, 2017, 18:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark