ವಯಸ್ಸಾದರೂ ಕುಂದದ ಅಜ್ಜನ ಡ್ರೈವಿಂಗ್ ಉತ್ಸಾಹ..!

ನಮಗೆ, ವಯಸ್ಸಾದಂತೆ ತೀರಾ ಎಚ್ಚರಿಕೆಯನ್ನು ವಹಿಸಬೇಕಾದ ಪ್ರಮುಖ ಸಂಗತಿಗಳಲ್ಲಿ ಡ್ರೈವಿಂಗ್ ಕೂಡ ಒಂದು. ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ ಹಾಗೂ ಸುರಕ್ಷಿತ ಚಾಲನಾ ಅಭ್ಯಾಸಗಳನ್ನು ಪಾಲಿಸುವ ಮೂಲಕ, ವಯಸ್ಸಾದ ಕಾಲದಲ್ಲಿ ಸುರಕ್ಷಿತವಾಗಿ ಚಾಲನೆ ಮಾಡಲು ಸಾಧ್ಯವಾಗುತ್ತದೆ.

ವಯಸ್ಸಾದರೂ ಕುಂದದ ಅಜ್ಜನ ಡ್ರೈವಿಂಗ್ ಉತ್ಸಾಹ..!

ಪ್ರತಿಯೊಬ್ಬರಿಗೂ ವಯಸ್ಸಾದರೂ, ಯಾವಾಗ ಡ್ರೈವಿಂಗ್ ಮಾಡುವುದನ್ನು ನಿಲ್ಲಿಸಬೇಕೆಂಬ ಬಗ್ಗೆ ಖಚಿತತೆ ಇಲ್ಲ. ಆದರೆ ಯುವ ಚಾಲಕರಿಗೆ ಹೋಲಿಸಿದರೆ ವಯಸ್ಸಾದ ಚಾಲಕರು ಹೆಚ್ಚು ಪ್ರಮಾಣದಲ್ಲಿ ಅಪಘಾತಗಳಿಗೀಡಾಗುತ್ತಾರೆ.

ವಯಸ್ಸಾದರೂ ಕುಂದದ ಅಜ್ಜನ ಡ್ರೈವಿಂಗ್ ಉತ್ಸಾಹ..!

ವಯಸ್ಸಾದಾಂತೆಲ್ಲಾ ದೃಷ್ಟಿ ಕಡಿಮೆಯಾಗುವುದು, ಶ್ರವಣದೋಷ, ಮೋಟಾರ್ ರಿಫ್ಲೆಕ್ಸ್ ಕಡಿಮೆಯಾಗುವುದರ ಜೊತೆಗೆ ಹದಗೆಡುವ ಆರೋಗ್ಯ ಪರಿಸ್ಥಿತಿಗಳು ಸಮಸ್ಯೆಯನ್ನು ತಂದೊಡ್ಡಿ ಅಪಘಾತಗಳಿಗೆ ಕಾರಣವಾಗುತ್ತವೆ.

ವಯಸ್ಸಾದರೂ ಕುಂದದ ಅಜ್ಜನ ಡ್ರೈವಿಂಗ್ ಉತ್ಸಾಹ..!

ಕೇರಳದ ಅಜ್ಜರೊಬ್ಬರು ವಯಸ್ಸಾಗಿದ್ದರೂ ಸಹ ಇನ್ನೂ ಖಾಸಗಿ ಟೂರಿಸ್ಟ್ ಬಸ್ ಅನ್ನು ಚಲಾಯಿಸುತ್ತಿದ್ದಾರೆ. ಈ ಅಜ್ಜ ಬಸ್ ಚಾಲನೆ ಮಾಡುವ ವೀಡಿಯೊವನ್ನು ಯೂಟ್ಯೂಬ್‍‍ನಲ್ಲಿ ಅಪ್‍‍ಲೋಡ್ ಮಾಡಲಾಗಿದೆ. ಅಂದ ಹಾಗೆ ಈ ವೀಡಿಯೊದಲ್ಲಿ ಆ ಅಜ್ಜನ ಹೆಸರು, ವಯಸ್ಸು, ಆ ಸ್ಥಳದ ಹೆಸರು ಸೇರಿದಂತೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ವಯಸ್ಸಾದರೂ ಕುಂದದ ಅಜ್ಜನ ಡ್ರೈವಿಂಗ್ ಉತ್ಸಾಹ..!

ವಯಸ್ಸಾದ ನಂತರ ಚಾಲನಾ ಸಾಮರ್ಥ್ಯವು ಮೊದಲಿನಂತಿರುವುದಿಲ್ಲ. ವಾಹನಗಳನ್ನು ಸುರಕ್ಷಿತವಾಗಿ ಡ್ರೈವ್ ಮಾಡಲು, ವಾಹನಗಳನ್ನು ಮಾಡಿಫೈಗೊಳಿಸುವುದು, ಚಾಲನಾ ವಿಧಾನವನ್ನು ಬದಲಿಸುವುದು, ಚಾಲನೆಗೆ ಅಡ್ಡಿಯುಂಟು ಮಾಡುವ ದೈಹಿಕ ಸಮಸ್ಯೆಗಳನ್ನು ಪರಿಹರಿಸಿ ಕೊಂಡು ಸುರಕ್ಷಿತವಾಗಿ ಚಾಲನೆ ಮಾಡಬಹುದು.

ವಯಸ್ಸಾದರೂ ಕುಂದದ ಅಜ್ಜನ ಡ್ರೈವಿಂಗ್ ಉತ್ಸಾಹ..!

ನಿಯಮಿತ ಆರೋಗ್ಯ ತಪಾಸಣೆಗಳಿಂದಲೂ ಸಹ ಸುರಕ್ಷಿತ ಚಾಲನೆ ಮಾಡಬಹುದು. ಪ್ರತಿ ವರ್ಷ ನಿಮ್ಮ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಿ. ಸರಿಯಾದ ಲೆನ್ಸ್ ಗಳು ಅವಶ್ಯಕವೆಂದು ಖಚಿತಪಡಿಸಿಕೊಳ್ಳಿ. ವಿಂಡ್‌ಶೀಲ್ಡ್, ಮಿರರ್ ಹಾಗೂ ಹೆಡ್‌ಲೈಟ್‌ಗಳನ್ನು ಸ್ವಚ್ಛವಾಗಿರಿಸಿ. ಡ್ಯಾಶ್‌ಬೋರ್ಡ್‌ನಲ್ಲಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿರುವ ಬ್ರೈಟ್‍‍ನೆಸ್ ಅನ್ನು ಹೆಚ್ಚಿಸಿ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ವಯಸ್ಸಾದರೂ ಕುಂದದ ಅಜ್ಜನ ಡ್ರೈವಿಂಗ್ ಉತ್ಸಾಹ..!

ಪ್ರತಿ ವರ್ಷ ಕಿವಿಗಳನ್ನು ಪರೀಕ್ಷಿಸಿಕೊಳ್ಳಿ. ಶ್ರವಣ ಸಾಧನಗಳ ಅಗತ್ಯವಿದ್ದರೆ, ಚಾಲನೆ ಮಾಡುವಾಗ ಅವುಗಳನ್ನು ಧರಿಸಿದ್ದೀರೆಂದು ಖಚಿತಪಡಿಸಿಕೊಳ್ಳಿ. ಡ್ರಾಫ್ಟ್‌ಗಳು ಕೆಲವೊಮ್ಮೆ ಈ ಸಾಧನವನ್ನು ದುರ್ಬಲಗೊಳಿಸುವುದರಿಂದ, ಕಾರ್ ವಿಂಡೋಗಳನ್ನು ತೆರೆಯುವಾಗ ಜಾಗರೂಕರಾಗಿರಿ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಚಾಲನಾ ಸಾಮರ್ಥ್ಯದ ಮೇಲೆ ಕಾಯಿಲೆಗಳು ಅಥವಾ ಔಷಧಿಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ವೈದ್ಯರೊಂದಿಗೆ ಖಚಿತಪಡಿಸಿಕೊಳ್ಳಿ. ಗ್ಲುಕೋಮಾ ಹೊಂದಿದ್ದರೆ, ಟಿಂಟೆಡ್ ಗ್ಲಾಸುಗಳು ಗ್ಲೇರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ವಯಸ್ಸಾದರೂ ಕುಂದದ ಅಜ್ಜನ ಡ್ರೈವಿಂಗ್ ಉತ್ಸಾಹ..!

ಸುರಕ್ಷಿತವಾಗಿ ವಾಹನ ಚಲಾಯಿಸಲು ಸಾಕಷ್ಟು ನಿದ್ರೆ ಮಾಡುವುದು ಅಗತ್ಯವಾಗಿರುವ ಕಾರಣ, ಸಾಕಷ್ಟು ನಿದ್ರೆ ಮಾಡಿರಿ. ಸಾಕಷ್ಟು ನಿದ್ರೆ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಚಾಲನೆಯ ಮೇಲೆ ಯಾವುದಾದರೂ ಪರಿಣಾಮಗಳಾಗುತ್ತವೆಯೇ ಎಂಬುದನ್ನು ವೈದ್ಯರ ಬಳಿ ಪರಿಶೀಲಿಸಿ.

Source: Kerala Drivers/YouTube

Most Read Articles

Kannada
English summary
Senior citizen driving tourist bus in kerala age does not affect skills - Read in Kannada
Story first published: Monday, November 11, 2019, 18:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X