ಏನ್ ಗುರು, ದಿನನಿತ್ಯ ಕಾರಿಗೆ ಇಲಿ ದಾಳಿ; ಉಪಾಯ ಏನು?

Written By:

ಹೌದು, ಇದು ಸಾಮಾನ್ಯ ವಿಚಾರ ಅನಿಸಿಕೊಂಡರೂ ಇದರ ಗಂಭೀರತೆಯ ಬಗ್ಗೆ ಚಿಂತೆ ಮಾಡಿದರೆ ಕಾರು ಮಾಲಿಕರಿಗೆ ದೊಡ್ಡ ನಷ್ಟವನ್ನೇ ಉಂಟು ಮಾಡಬಹುದು.

ಇವನ್ನೂ ಓದಿ: ಪಾರ್ಕಿಂಗ್ ಕೌಶಲ್ಯ ವೃದ್ಧಿಸುವುದು ಹೇಗೆ?

ಕಾರಿನೊಳಗಿನ ಕೇಬಲ್ ಇತ್ಯಾದಿ ಘಟಕಗಳನ್ನು ಇಲಿಗಳು ಕಚ್ಚಿ ತುಂಡರಿಸುವುದರಿಂದ ಕಾರು ಮಾಲಿಕರು ವ್ಯಾಪಕ ನಷ್ಟವನ್ನೇ ಭರಿಸಬೇಕಾಗುತ್ತದೆ. ಗ್ರಾಮೀಣ ಪ್ರದೇಶವನ್ನು ಹೋಲಿಸಿದರೆ ನಗರ ಪ್ರದೇಶದಲ್ಲಿ ಇಲಿಯ ಉಪಟಳ ಜಾಸ್ತಿಯಾಗಿರುತ್ತದೆ. ನಗರ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಹೆಚ್ಚಾಗಿರುವುದು ಹಾಗೂ ಅಲ್ಲಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ವೈಫಲ್ಯವಾಗಿರುವುದೇ ಇದಕ್ಕಿರುವ ಪ್ರಮುಖ ಕಾರಣವಾಗಿದೆ.

ವಾಹನಗಳಿಗೆ ಇಲಿ ದಾಳಿಯನ್ನು ತಪ್ಪಿಸುವುದು ಹೇಗೆ?

ಒಟ್ಟಿನಲ್ಲಿ ಕಾರು ಮಾಲಿಕರಿಗೆ ತಲೆ ನೋವಾಗಿ ಪರಿಣಮಿಸಿರುವ ವಾಹನಗಳಲ್ಲಿ ಇಲಿಗಳ ಉಪಟಳವನ್ನು ತಪ್ಪಿಸಲು ನಾವಿಲ್ಲಿ ಸುಲಭೋಪಾಯಗಳನ್ನು ಹೇಳಿ ಕೊಡಲಿದ್ದೇವೆ. ಇದೇ ವೇಳೆ ಇಲಿ ದಾಳಿಯ ಬಗ್ಗೆ ಆರೋಪ ಮಾಡದೇ ನಿಮ್ಮ ಪರಿಸರ ಶುಚಿತ್ವದ ಕಡೆಗೂ ಸ್ವಲ್ಪ ಗಮನ ಕೊಟ್ಟರೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತ ಅಭಿಯಾನಕ್ಕೆ ನೀವು ಕೈಜೋಡಿಸಿದಂತಾಗುತ್ತದೆ.

01. ನಫ್ತಲೀನ್ ಗುಳಿಗೆ

01. ನಫ್ತಲೀನ್ ಗುಳಿಗೆ

ನಫ್ತಲೀನ್ ಎಂಬ ವಿಷಕಾರಿ ರಾಸಾಯನಿಕದಿಂದ ನುಸಿಗುಳಿಗೆ ಅಥವಾ ನುಸಿಗೋಲಿಯನ್ನು ತಯಾರಿಸಲಾಗುತ್ತದೆ. ಇದನ್ನು ದುರ್ವಾಸನೆಯು ಅಪಾಯಕಾರಿ ಇಲಿಗಳ ದಾಳಿಯನ್ನು ತಪ್ಪಿಸಲು ನೆರವಾಗುತ್ತದೆ.

02. ಹೊಗೆಸೊಪ್ಪು

02. ಹೊಗೆಸೊಪ್ಪು

ಇದು ಎಲಿಗಳನ್ನು ತಪ್ಪಿಸಲಿರುವ ಮಗದೊಂದು ಸುಲಭೋಪಾಯವಾಗಿದ್ದು, ಕಾರಿನ ಬೊನೆಟ್ ಮೇಲಕ್ಕೆತ್ತುವ ಮೂಲಕ ಎಂಜಿನ್ ಭಾಗಗಳಲ್ಲಿ ಹೊಗೆಸೊಪ್ಪು ಹರಡಿದರೆ ಸಾಕಾಗುವುದು.

03. ಮೆಣಸಿನ ಪುಡಿ

03. ಮೆಣಸಿನ ಪುಡಿ

ನಿಮ್ಮ ದಿನನಿತ್ಯ ಜೀವನದಲ್ಲಿ ಬಳಕೆ ಮಾಡುವ ಮೆಣಸಿನ ಪುಡಿಯನ್ನು ಬಳಕೆ ಮಾಡುವುದರಿಂದಲೂ ಉಪದ್ರವಕಾರಿ ಇಲಿಗಳನ್ನು ವಾಹನಗಳಿಂದ ದೂರವಿರಿಸಬಹುದು. ಆದರೆ ಇದರ ಬಳಕೆಯ ಬಗ್ಗೆ ಜಾಗ್ರತೆ ವಹಿಸಿ. ಯಾಕೆಂದರೆ ಎಂಜಿನ್ ಬಿಸಿಯಾದ್ದಲ್ಲಿ ನಿಮ್ಮ ಮೂಗಿಗೂ ಖಾರದ ಅನುಭವವಾಗುವ ಭೀತಿಯಿದೆ. ಹಾಗಾಗಿ ಎಂಜಿನ್ ಸ್ಟಾರ್ಟ್ ಮಾಡುವ ಮೊದಲು ಇದನ್ನು ತೆಗೆಯಬೇಕಾಗುತ್ತದೆ.

04. ಇಲಿ ನಿರೋಧಕ ಸ್ಪ್ರೆ

04. ಇಲಿ ನಿರೋಧಕ ಸ್ಪ್ರೆ

ಮಾರುಕಟ್ಟೆಯಲ್ಲೀಗ ಇಲಿ ನಿರೋಧಕ ಸಿಂಪಡನೆಯ ದ್ರವಗಳು ಸಿಗುತ್ತಿದ್ದು, ಇದರ ಬಳಕೆಯಿಂದಲೂ ಇಲಿಗಳ ಕಾಟವನ್ನು ತಪ್ಪಿಸಬಹುದಾಗಿದೆ.

05. ಇಲಿ ವಿಷ

05. ಇಲಿ ವಿಷ

ನಿಮ್ಮ ಕಾರುಗಳಲ್ಲೂ ಎಲಿ ಉಪಟಳವಿದ್ದರೆ ಮನೆಗಳಲ್ಲಿ ಪ್ರಯೋಗ ಮಾಡುವ ಅದೇ ಇಲಿ ವಿಷಗಳ ಪ್ರಯೋಗ ಮಾಡಿದರೆ ಸಾಕು.

06. ಶ್ರವಣಾತೀತ ಧ್ವನಿ

06. ಶ್ರವಣಾತೀತ ಧ್ವನಿ

ಶ್ರವಣಾತೀತ ಧ್ವನಿ ತರಂಗಾಂತರದ ಅಥವಾ ಅಲ್ಟ್ರಾಸೋನಿಕ್ ಧ್ವನಿಯ ಸಹಾಯದಿಂದಲೂ ಇಲಿಗಳ ಕಾಟವನ್ನು ತಪ್ಪಿಸಬಹುದಾಗಿದೆ. ಆದರೆ ಇವುಗಳು ನಿಮ್ಮ ನೆರೆಯ ನಿವಾಸಿಗಳಿಗೆ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇರುವುದರಿಂದ ಇದರ ಬಳಕೆಯ ವೇಳೆ ಎಚ್ಚರಿಕೆ ಅಗತ್ಯ.

07. ಫೀನಾಲ್ (phenol)

07. ಫೀನಾಲ್ (phenol)

ಇಲಿಗಳ ಕಾಟ ಜಾಸ್ತಿಯಾಗಿದ್ದಲ್ಲಿ ನಿಮ್ಮ ಶೌಚಾಲಯಗಳನ್ನು ಸ್ವಚ್ಫವಾಗಿಸಲು ಬಳಸುವ ಫೀನಾಲ್ ದ್ರಾವಣವನ್ನು ಒಮ್ಮೆ ಪರೀಕ್ಷಿಸಿ ನೋಡಬಹುದು.

08. ಬಲೆ

08. ಬಲೆ

ಬಜಾರ್‌ನಲ್ಲಿ ದೊರಕುವ ಬಲೆಗಳ ಮೂಲಕ ಕಾರಿನಲ್ಲಿ ಕಂಡುಬರುವ ಸಣ್ಣ ಸಣ್ಣ ತೂತು ಅಥವಾ ರಂಧ್ರಗಳಲ್ಲಿ ಇದನ್ನು ಲಗತ್ತಿಸಿರಿ. ಅಲ್ಲದೆ ಇಲಿ ಬರಲು ಸಾಧ್ಯತೆಯಿರುವ ಒಳಚರಂಡಿ ದ್ವಾರದಲ್ಲೂ ಇದನ್ನು ಲಗತ್ತಿಸಿದ್ದಲ್ಲಿ ಇಲಿ ದಾಳಿಯನ್ನು ತಪ್ಪಿಸಬಹುದು.

09. ಒಳಚರಂಡಿ

09. ಒಳಚರಂಡಿ

ಇಲ್ಲಿ ಗಮನವಹಿಸಬೇಕಾದ ಪ್ರಮುಖ ಅಂಶವೆಂದರೆ ಯಾವುದೇ ಕಾರಣಕ್ಕೂ ರಾತ್ರಿ ವೇಳೆಯಲ್ಲಿ ಒಳಚರಂಡಿಯ ಬಳಿ ವಾಹನಗಳನ್ನು ನಿಲುಗಡೆಗೊಳಿಸದಿರಿ. ಇಲ್ಲವಾದ್ದಲ್ಲಿ ರಾತ್ರಿ ವೇಳೆಯಲ್ಲಿ ಇಲಿಗಳ ದಾಳಿ ತಪ್ಪಿದ್ದಲ್ಲ.

10. ಕೈಗವಸು ಧರಿಸಿ

10. ಕೈಗವಸು ಧರಿಸಿ

ಮೇಲೆ ತಿಳಿಸಿದ ಎಲ್ಲ ರಾಸಾಯನಿಕ ವಸ್ತುಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೆ ಇಂತಹ ವಸ್ತುಗಳನ್ನು ಬಳಕೆ ಮಾಡುವ ಮೊದಲು ಕೈಗವಸುಗಳನ್ನು ಧರಿಸಲು ಮರೆಯದಿರಿ.

English summary
Here are given some simple tips to protect cars from rats.
Story first published: Thursday, December 4, 2014, 15:40 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more