ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

By Nagaraja

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಇಡೀ ಜಗತ್ತೇ ಹೊಸ ಸಂಚಾರ ವ್ಯವಸ್ಥೆಯನ್ನು ಪಡೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಪೂರ್ಣವಾಗಿಯೂ ಆಯಸ್ಕಾಂತೀಯ ತೇಲುವ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ನಾಸಾದ ಏಮ್ಸ್ ರಿಸರ್ಚ್ ಸೆಂಟರ್ ಅವಿರತ ಪ್ರಯತ್ನದಲ್ಲಿ ತೊಡಗಿದೆ.

ಸಂಪೂರ್ಣ ಪರಿಸರ ಸ್ನೇಹಿ ಭವಿಷ್ಯದ ಕ್ಷಿಪ್ರ ಸಾರಿಗೆ ವ್ಯವಸ್ಥೆ ರೂಪಿಸುವುದು ನಾಸಾ ರಿಸರ್ಚ್ ಪಾರ್ಕ್ ಗುರಿಯಾಗಿದೆ. ಇದಕ್ಕಾಗಿ ವಿಜ್ಞಾನಿಗಳು ಬಾಹ್ಯಾಕಾಶ ತಂತ್ರಜ್ಞಾನದ ನೆರವನ್ನು ಪಡೆಯುತ್ತಿದ್ದಾರೆ.

ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

ನಾಸಾ ಅಭಿವೃದ್ಧಿಪಡಿಸುತ್ತಿರುವ ಸ್ಕೈಟ್ರಾನ್ (SkyTran), ಆಯಸ್ಕಾಂತೀಯ ತೇಲುವ ತಂತ್ರಜ್ಞಾನದಿಂದ ನಿಯಂತ್ರಿಸಲ್ಪಟ್ಟಿದ್ದು, ಗಂಟೆಗೆ 150 ಮೈಲ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

ಇದು ಯಾವುದೇ ಟ್ರಾಫಿಕ್ ಅಥವಾ ಪರಿಸರ ಮಾಲಿನ್ಯದ ಕಿರಿಯಿಲ್ಲದೆ ನೀವು ಬಯಸಿದ ಗುರಿ ಕ್ಷಿಪ್ರ ವೇಗದಲ್ಲಿ ತಲುಪುವಲ್ಲಿ ನೆರವಾಗಲಿದೆ. ಇದರಲ್ಲಿ ಇಬ್ಬರಿಗೆ ಸಂಚರಿಸಬಹುದಾಗಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

ನಾಸಾ ಸ್ಕೈಟ್ರಾನ್ ನಿಮ್ಮ ಬದುಕನ್ನು ನೈಜವಾಗಿಸಲಿದೆ. ಇದು ಹೆಚ್ಚು ಸುಸ್ಥಿರವಾಗಿದ್ದು, ಹಿಂದಿನಗಿಂತಲೂ ಹೆಚ್ಚು ವೇಗಯುತ ಹಾಗೂ ಹಸಿರು ತಂತ್ರಜ್ಞಾನವನ್ನು ಒಳಗೊಂಡಿರಲಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

ನಾಸಾ ವಿಜ್ಞಾನಿಗಳು ಹೇಳುವ ಪ್ರಕಾರ ಸ್ಕೈಟ್ರಾನ್ ಮೂಲಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಹೈ ಸ್ಪೀಡ್ ರೈಲುಗಳಿಗೆ ಆಳವಡಿಸುವ ಪ್ರಯತ್ನ ಮಾಡಲಾಗಿದೆ. ಇದು ನಿಮ್ಮ ಪಯಣವನ್ನು ಆರಾಮದಾಯಕವಾಗಿಸಲಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

ಸದ್ಯ ಪೂರ್ಣ ರೂಪದ ಸ್ಕೈಟ್ರಾನ್ ಅಭಿವೃದ್ಧಿಪಡಿಸುವುದರಲ್ಲಿ ತೊಡಗಿರುವ ನಾಸಾ, ಇದಕ್ಕಾಗಿ ಪರೀಕ್ಷಾರ್ಥ ಪ್ರದೇಶವಾಗಿ ಇಸ್ರೇಲಿನ ಟೆಲ್ ಅವಿವ್ ನಗರವನ್ನು ಆರಿಸಿದೆ. ಈ ಮಹತ್ತರ ಯೋಜನೆಗೆ ಇಸ್ರೇಲ್‌ನ ಏರೋಸ್ಪೇಸ್ ಇಂಡಸ್ಟ್ರಿ (ಐಎಐ) ನೆರವಾಗಲಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

ಸ್ಕೈಟ್ರಾನ್ ಸಿಸ್ಟಂ ರೈಲು ಜಾಲಗಿಂತ 10 ಪಟ್ಟು ಅಗ್ಗವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಡುತ್ತಾರೆ. ಹಾಗೆಯೇ ಹೈವೇ ನಿರ್ಮಾಣಗಿಂತಲೂ 100 ಪಟ್ಟು ಅಗ್ಗವಾಗಲಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

ಹಸಿರು ಕ್ರಾಂತಿ ಅನುಸರಿಸುವ ಮೂಲಕ ಮುಂದಿನ ತಲೆಮಾರಿನ ಜೀವನವನ್ನು ಆರೋಗ್ಯಕರವಾಗಿಸುವುದು ನಾಸಾ ಉದ್ದೇಶವಾಗಿದೆ. ಇದು ಸಂಪೂರ್ಣವಾಗಿಯೂ ಸೋಲಾರ್ ಪ್ಯಾನೆಲ್‌ಗಳಿಂದ ನಿಯಂತ್ರಿತವಾಗಿರುವುದರಿಂದ ಕಡಿಮೆ ಶಕ್ತಿ ಬಳಕೆಯಾಗಲಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

ಭಾರತ, ಚೀನಾಗಳಂತಹ ರಾಷ್ಟ್ರಗಳಲ್ಲೂ ಇದರ ಬಳಕೆಯ ಸಾಧನೆಯನ್ನು ಮನಗಂಡಿರುವ ನಾಸಾ ಮುಂಬರುವ ವರ್ಷಗಳಲ್ಲಿ ದೇಶದಲ್ಲೂ ಪ್ರಾಯೋಗಿಕವಾಗಿಯೂ ಆಳವಡಿಸಿದರೆ ಅಚ್ಚರಿಪಡಬೇಕಾಗಿಲ್ಲ. ಇದರಲ್ಲೇ ನೀವು ಕಂಪ್ಯೂಟರ್ ನಿಯಂತ್ರಿಸುವುದು, ಇಂಟರ್‌ನೆಟ್ ಸೇವೆ, ಸ್ಮಾರ್ಟ್ ಫೋನ್ ಹಾಗೂ ಇಮೇಲ್ ಬಳಕೆ ಮಾಡಬಹುದಾಗಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

ಕೆಲವು ಜನರು ಸಾರ್ವಜನಿಕ ಪಯಣವನ್ನು ಬಯಸುವುದಿಲ್ಲ. ಇದೇ ಕಾರಣದಿಂದಾಗಿ ವೈಯಕ್ತಿಕ ಕಾರುಗಳಲ್ಲಿ ಪಯಣಿಸುತ್ತಾರೆ. ಇದನ್ನು ತಪ್ಪಿಸಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಕೈಟ್ರಾನ್‌ಗಾಗಿ ಆರ್ಡರ್ ಮಾಡಬಹುದಾಗಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ನಾಸಾದಿಂದ ಸ್ಕೈಟ್ರಾನ್ ಅಭಿವೃದ್ಧಿ

ಸದ್ಯ ಇವೆಲ್ಲವೂ ಪ್ರಾಯೋಗಿಕ ಹಂತದಲ್ಲಿದ್ದು, ಈ ಮಹತ್ತರ ಯೋಜನೆಯನ್ನು ನಾಸಾ ಕೈಗೆತ್ತಿಕೊಂಡಿರುವುದರಿಂದ ವಾಹನ ಪ್ರೇಮಿಗಳಲ್ಲಿ ನಿರೀಕ್ಷೆಗೆ ಕಾರಣವಾಗಿದೆ.

ಸ್ಕೈಟ್ರಾನ್ ಮಹತ್ತರ ಯೋಜನೆಯ ವೀಡಿಯೋ ವೀಕ್ಷಿಸಲು ಮರೆಯದಿರಿ

Most Read Articles

Kannada
Story first published: Tuesday, July 1, 2014, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X