ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ನಿಯಂತ್ರಿತ ವಿಮಾನ

Written By:

ಇದು ಸ್ಮಾರ್ಟ್‌ಫೋನ್‌ಗಳ ಕಾಲ. ಸ್ಮಾರ್ಟ್‌ಫೋನ್ ಇಲ್ಲದವರಿಗೆ ಬೆಲೆ ಇಲ್ಲ, ಸ್ಟೇಟಸ್ ಇಲ್ಲ. ಅಷ್ಟೇ ಅಷ್ಟೇ ಯಾಕೆ ಗರ್ಲ್‌ಫ್ರೆಂಡ್ ಕೂಡಾ ಸಿಗಲ್ಲ ಬಿಡಿ! ವಿಷಯ ಏನೇ ಇರಲಿ ನಾವಿಂದು ಮಾತನಾಡುತ್ತಿರುವುದು ಸ್ಮಾರ್ಟ್‌ಫೋನ್‌ಗೆ ಸಂಬಂಧಪಟ್ಟ ವಿಚಾರ.

ಮಿಸ್ ಮಾಡದಿರಿ: ಇದುವೇ ನಾಸಾ ಸ್ಕೈಟ್ರಾನ್

ಅದೇನಂತೀರಾ? ಜರ್ಮನಿಯ ಮೂಲದ ಟೊಬಿ ರಿಚ್ ಎನ್ನುವ ಸಂಸ್ಥೆಯೊಂದು ಸ್ಮಾರ್ಟ್‌ಫೋನ್ ನಿಯಂತ್ರಿತ ವಿಮಾನ ತಯಾರಿಸಿದೆ. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿದೆಯಲ್ಲವೇ? ಉತ್ತರಕ್ಕಾಗಿ ಚಿತ್ರಪುಟದತ್ತ ಮುಂದುವರಿಯಿರಿ...

To Follow DriveSpark On Facebook, Click The Like Button
ಸ್ಮಾರ್ಟ್‌ಪ್ಲೇನ್

ಸ್ಮಾರ್ಟ್‌ಪ್ಲೇನ್

ಹೌದು ಸ್ಮಾರ್ಟ್ ಫೋನ್‌ಗಳನ್ನು ತಯಾರಿಸುವುದರಲ್ಲಿ ಪರಿಣತವಾಗಿರುವ ಈ ಸಂಸ್ಥೆಯು ಸ್ಮಾರ್ಟ್‌ಫೋನ್ ನಿಯಂತ್ರಿತ ಸ್ಮಾರ್ಟ್‌ಪ್ಲೇನ್ ವಿಮಾನಗಳನ್ನು ತಯಾರಿಸಿದೆ.

ವಿಶೇಷತೆ ಏನು?

ವಿಶೇಷತೆ ಏನು?

ನಿಜವಾಗ್ಲೂ ಇದು ಹಗುರ ಭಾರದ ಸ್ಮಾರ್ಟ್‌ಪ್ಲೇನ್ ಆಗಿದ್ದು, 15 ನಿಮಿಷಗಳ ವರೆಗೆ ಹಾರಾಡುವ ಸಾಮರ್ಥ್ಯ ಹೊಂದಿದೆ. 13 ನಿಮಿಷಗಳಲ್ಲಿ ಚಾರ್ಜ್ ಮಾಡಿಸುವಂತಹ ಈ ಸ್ಮಾರ್ಟ್‌ಪ್ಲೇನ್ ಗರಿಷ್ಠ 200 ಅಡಿ ಎತ್ತರದಲ್ಲಿ ಹಾರಬಲ್ಲದು.

ಸಂಪರ್ಕ ಹೇಗೆ?

ಸಂಪರ್ಕ ಹೇಗೆ?

ಬ್ಲೂಟೂತ್ ಮೂಲಕ ಸ್ಮಾರ್ಟ್‌ಪ್ಲೇನ್‌ನಿಂದ ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಸಾಧಿಸಬಹುದಾಗಿದೆ. ಒಮ್ಮೆ ಸಂಪರ್ಕ ಸಾಧಿಸಿದರೆ ನಿಮಗೆ ಬೇಕಾದ ಹಾಗೆ ಕೈಯಿಂದಲೇ ಮೇಲೆ ಕೆಳಕ್ಕೆ, ಎಡಕ್ಕೆ ಬಲಕ್ಕೆ ಎಲ್ಲಿಗೆ ಬೇಕಾದರೂ ವೇಗ ನಿಯಂತ್ರಣವನ್ನು ಸಾಧಿಸಬಹುದಾಗಿದೆ. ಇನ್ನು ವಿಶೇಷತೆ ಏನೆಂದರೆ ಒಂದೇ ಕೈಯಲ್ಲಿ ನಿಯಂತ್ರಿಸಬಹುದಾಗಿದೆ.

ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ನಿಯಂತ್ರಿತ ವಿಮಾನ

ಹಗುರ ಭಾರದ ವಿಮಾನವಾಗಿದ್ದರಿಂದ ಪೂರ್ಣವಾಧಿಯ ಬಳಕೆಗಾಗಿ ಸ್ಮಾರ್ಟ್‌ಪ್ಲೇನ್‌ಗಳನ್ನು ತಯಾರಿಸಲಾಗಿಲ್ಲ. ಹಾಗಿದ್ದರೂ ನಿಮಗೆ ಮೋಜು ಅಂತೂ ಖಂಡಿತ ದೊರಕಲಿದೆ. ಇದು ವಿ.4.3 ಅಥವಾ ಅದಕ್ಕಿಂತ ಮೇಲ್ಪಟ್ಟ ಬ್ಲೂಟೂತ್ ವರ್ಷನ್ ಹೊಂದಿರುವ ಎಲ್ಲ ಆಂಡ್ರಾಯ್ಡ್ ಡಿವೈಸ್‌‌ಗಳಲ್ಲಿ, ಐಫೋನ್ 4ಎಸ್, ಐಪೊಡ್ ಟಚ್ 5ನೇ ಜನರೇಷನ್ ಹಾಗೂ ಮೇಲ್ಪಟ್ಟ ಮತ್ತು ಐಪ್ಯಾಡ್ ಥರ್ಡ್ ಜನರೇಷನ್ ಮತ್ತು ಮೇಲ್ಪಟ್ಟ ಡಿವೈಸ್‌ಗಳಲ್ಲಿ ಕಾರ್ಯ ನಿರ್ವಹಿಸಲಿದೆ.

ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ನಿಯಂತ್ರಿತ ವಿಮಾನ

ಪ್ರಸ್ತುತ ಸ್ಮಾರ್ಟ್‌ಪ್ಲೇನ್, ಫ್ಲೈಟ್ ಅಸಿಸ್ಟ್ ಮೋಡ್ ಸಹ ಹೊಂದಿದ್ದು, ಇದು ಆಟೋ ಪೈಲಟ್ ಮೋಡ್ ತರಹನೇ ಕೆಲಸ ಮಾಡಲಿದೆ. ಸ್ಮಾರ್ಟ್‌ಪ್ಲೇನ್ ಜೊತೆ ಸಂಪರ್ಕ ಸಾಧಿಸುವುದು ಬಹಳ ಸುಲಭ. ಅಲ್ಲದೆ ಸಂಪರ್ಕ ಸಾಧಿಸಿದ ಕೆಲವೇ ಸೆಕೆಂಡುಗಳಲ್ಲಿ ನಿರ್ವಹಿಸಬಹುದಾಗಿದೆ.

ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ನಿಯಂತ್ರಿತ ವಿಮಾನ

ಮೂರು ಸಾವಿರದಷ್ಟು (49 ಅಮೆರಿಕನ್ ಡಾಲರ್) ದುಬಾರಿಯಾಗಿರುವ ಈ ಸ್ಮಾರ್ಟ್‌ಪ್ಲೇನ್ ಸೀಮಿತ ಅವಧಿಯ ವರೆಗೆ ಮಾತ್ರ ಮಾರಾಟದಲ್ಲಿರಲಿದೆ.

ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ನಿಯಂತ್ರಿತ ವಿಮಾನ

ಪ್ರಮುಖವಾಗಿಯೂ ಸ್ಮಾರ್ಟ್‌ಪ್ಲೇನ್‌ಗಳನ್ನು ಒಳಾಂಗಣ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದ್ದು, ವಿಮಾನ ಪ್ರೇಮಿಗಳ ಕನಸನ್ನು ನನಸಾಗಿಸಲಿದೆ. ಈ ಮೂಲಕ ನೀವು ಕೂಡಾ ವಿಮಾನ ಚಾಲಕನ ರೋಚಕತೆಯನ್ನು ಅನುಭವಿಸಬಹುದಾಗಿದೆ.

ಸ್ಮಾರ್ಟ್‌ಪ್ಲೇನ್ ವೀಡಿಯೋ ವೀಕ್ಷಿಸಿ

English summary
Toby Rich, a German company set up in Bremen has come up with something really cool! They have created a one-of-a-kind smartphone-operated aircraft, the Smart-Plane.
Story first published: Monday, July 7, 2014, 6:03 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark