ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

By Nagaraja

ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಇತಿಹಾಸ ಪುಟಗಳಲ್ಲಿ ತನ್ನ ಸ್ಥಾನವನ್ನು ಚಿರಸ್ಥಾಯಿಯಾಗಿಸಿರುವ ಆಪಲ್ ಸಂಸ್ಥೆಯ ಜನಕ ಹಾಗೂ ಮಾಜಿ ಮುಖ್ಯಸ್ಥ ದಿವಂಗತ ಸ್ಟೀವ್ ಜಾಬ್ಸ್, ತಂತ್ರಜ್ಞಾನಕ್ಕೆ ನೀಡಿರುವ ಕೊಡುಗೆ ಅಪಾರ.

Also Read: ಆಶ್ಚರ್ಯಚಕಿತಗೊಳಿಸುವ 8 ಕಾರು ತಂತ್ರಜ್ಞಾನಗಳು

ಐಪೊಡ್, ಐಪಾಡ್, ಐಫೋನ್, ಐಮ್ಯಾಕ್, ಐಟ್ಯೂನ್, ಆಪಲ್ ಸ್ಟೋರ್, ಐಟ್ಯೂನ್ ಸ್ಟೋರ್, ಮ್ಯಾಕ್ ಓಪರೇಟಿಂಗ್ ಸಿಸ್ಟಂ ಹೀಗೆ ಸ್ಟೀವ್ ಜಾಬ್ಸ್ ಮುಂದಾಳತ್ವದಲ್ಲಿ ಅಭಿವೃದ್ಧಿಪಡಿಸಿದ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಇಂದಿಗೂ ಭಾರಿ ಬೇಡಿಕೆ ಕಾಪಾಡಿಕೊಂಡಿದೆ. ವಿಶ್ವದ ಅತ್ಯಂತ ಪ್ರಭಾವಿ ಸಿಇಒಗಳಲ್ಲಿ ಓರ್ವರಾಗಿರುವ ಸ್ಟೀವ್ ಜಾಬ್ಸ್ 2011 ಅಕ್ಟೋಬರ್ 05ರಂದು ಕ್ಯಾನ್ಸರ್ ನಿಂದಾಗಿ ತೀರಿಹೋದಾಗ ಅವರ ಕನಸೊಂದು ನನಸಾಗದೇ ಉಳಿದಿತ್ತು...

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ತಮ್ಮ ಜೀವನದ ಅಂತಿಮ ಕಾಲಘಟ್ಟದಲ್ಲಿ ಸ್ಟೀವ್ ಜಾಬ್ಸ್ ಕಂಡ ಕೊನೆಯ ಕನಸು ಇದಾಗಿತ್ತು. 260 ಅಡಿ ಉದ್ದದ ವಿಹಾರ ನೌಕೆ 'ವೀನಸ್' ವಿನ್ಯಾಸ ಕಾಮಗಾರಿಯು ಅರ್ಧದಲ್ಲೇ ಮೊಟಕುಗೊಂಡಿತ್ತು.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ಸ್ಟೀವ್ ಮರಣಾನಂತರ ಈ ದಿಗ್ಗಜನ ಸ್ಮರಣೆಗಾಗಿ ಹಾಲೆಂಡ್‌ನ ಬೋಟ್ ತಯಾರಿಕ ಸಂಸ್ಥೆ ಫೆಡ್‌ಶಿಪ್ (Feadship)ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಅಲ್ಲದೆ ನನಸಾಗದೇ ಉಳಿದಿದ್ದ ಜಾಬ್ಸ್ ಕನಸನ್ನು ಈಡೇರಿಸುವಲ್ಲಿ ಯಶಸ್ವಿಯಾಗಿತ್ತು.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ಅಂದು ತಮ್ಮ ಜೀವನ ಚರಿತ್ರೆಗಾರ ಜೊತೆ ಅನುಭವ ಹಂಚಿಕೊಂಡಿದ್ದ ಸ್ಟೀವ್, "ವೀನಸ್ ಕಾಮಗಾರಿ ಪೂರ್ಣಗೊಳ್ಳುವಾಗ ನಾನು ಜೀವಂತವಾಗಿರುತ್ತೇನೆಂಬ ನಂಬಿಕೆ ನನಲಿಲ್ಲ" ಎಂದು ಬೇಸರು ತೋಡಿಕೊಂಡಿದ್ದರು.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ವೀನಸ್ ವಿಹಾರ ನೌಕೆ ವಿನ್ಯಾಸ ಅಭಿವೃದ್ಧಿಯಲ್ಲಿ ಸ್ಟೀವ್ ಜಾಬ್ಸ್ ಹಾಗೂ ಅವರ ತಂಡ ಪ್ರಮುಖ ಪಾತ್ರ ವಹಿಸಿತ್ತು. ಆದರೆ ದುರದೃಷ್ಟವಶಾತ್ ಈ ಸುಂದರ ನೌಕೆಯಲ್ಲಿ ಸಂಚರಿಸುವ ಅದೃಷ್ಟ ದೊರಕಲಿಲ್ಲ.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ವೀನಸ್ ವಿಹಾರ ನೌಕೆಯ ಸುತ್ತಲ್ಲೂ ಬೃಹತ್ತಾದ ಗಾಜುಗಳಿಂದ ಆವರಿಸಲ್ಪಟ್ಟಿರುವುದು ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ ಹಗುರ ಭಾರದ ಅಲ್ಯೂಮಿನಿಯಂ ಬಳಕೆ ಮಾಡಲಾಗಿದೆ.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ರೋಮನ್ ಪ್ರೀತಿಯ ದೇವತೆ 'ವೀನಸ್' ಎಂಬ ಹೆಸರನ್ನು ಇದಕ್ಕಿಡಲಾಗಿದ್ದು, 27 ಇಂಚುಗಳ ಏಳು ಐಮ್ಯಾಕ್ ನಿಂದ ನಿಯಂತ್ರಿಸ್ಪಟ್ಟಿದೆ.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ಸ್ಟೀವ್ ಜಾಬ್ಸ್ ಮರಣದ ಒಂದು ವರ್ಷದ ಬಳಿಕ ವೀನಸ್ ವಿಹಾರ ನೌಕೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಸ್ಟೀವ್ ಜಾಬ್ಸ್ ಅವರ ಕೊನೆಯ 'ಮಾಸ್ಟರ್ ಪೀಸ್' ಇದಾಗಿದೆ.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ಈ ಐಕಾನಿಕ್ ವಿಹಾರ ನೌಕೆ ನಿರ್ಮಾಣಕ್ಕೆ ಎಷ್ಟು ವೆಚ್ಚ ತಗುಲಿದೆ ಎಂಬುದಕ್ಕೆ ತಕ್ಕ ಮಾಹಿತಿಗಳು ಲಭ್ಯವಾಗಿಲ್ಲ. ಹಾಗಿದ್ದರೂ ಮೂಲಗಳ ಪ್ರಕಾರ ಅಂದಾಜು 140 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚಾಗಿದೆ.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ಅತ್ಯಂತ ಸರಳ ಹಾಗೂ ಸುಂದರ ವಿನ್ಯಾಸವೇ ಇದರ ಪ್ರಮುಖ ಆಕರ್ಷಣೆಯಾಗಿದೆ. ಬಳಿಕ ಇದರ ಕಾಮಗಾರಿಗೆ ಶ್ರಮ ವಹಿಸಿದ ಎಲ್ಲರಿಗೂ ಜಾಬ್ಸ್ ಕುಟುಂಬ ಸದಸ್ಯರು ಧನ್ಯವಾದ ಸಮರ್ಪಿಸಿದ್ದಾರೆ.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ಕೆಲಸಗಾರರ ಕಠಿಣ ಪ್ರಯತ್ನ ಹಾಗೂ ವಿನ್ಯಾಸ ತಂತ್ರಗಾರಿಕೆಯನ್ನು ಮೆಚ್ಚಿರುವ ಜಾಬ್ಸ್ ಕುಟುಂಬ, ವಿಶಿಷ್ಟ ಮಾರ್ಪಾಡುಗೊಳಿಸಿದ ಐಪೊಡ್ ಶಫಲ್ ಎಂಪಿ3 ಪ್ಲೇಯರ್ ಉಡುಗೊರೆಯಾಗಿ ನೀಡಿದೆ.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ಇದಕ್ಕೂ ಮೊದಲು ತಮ್ಮಅಂತಿಮ ಕಾಲಘಟ್ಟದಲ್ಲಿ ಜಾಬ್ಸ್ ಅವರು ಖ್ಯಾತ ವಿನ್ಯಾಸಗಾರ ಪಿಲಿಪ್ ಸ್ಟಾರ್ಕ್ ಎಂಬವರನ್ನು ಆಂತರಿಕ ಡಿಸೈನ್ ಗಾಗಿ ನೇಮಗೊಳಿಸಿದ್ದರು.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ಕೊನೆಗೂ ಅತಿ ಪುರಾತನ ಹಾಗೂ ಪ್ರಖ್ಯಾತ ಯಾಚ್ಟ್ಚ್ ನಿರ್ಮಾಣ ಸಂಸ್ಥೆ ಫೆಡ್ ಶಇಪ್ ಮುಂದಾಳತ್ವದಲ್ಲಿ ಐಕಾನಿಕ್ ವಿಹಾರ ನೌಕೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕೊನೆಯ ಕನಸು!

ಬಂದಿದೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

Most Read Articles

Kannada
English summary
Steve Job's last master piece custom built yacht
Story first published: Wednesday, November 25, 2015, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X