ನಿಯಂತ್ರಣ ತಪ್ಪಿದ ವೇಗದ ಬೈಕ್ ಸವಾರಿ- ಇಬ್ಬರು ಕೆಟಿಎಂ ಸವಾರರು ದುರ್ಮರಣ

Written By:

ಅತಿವೇಗದಲ್ಲಿದ್ದ ಕೆಟಿಎಂ ಡ್ಯೂಕ್ 390 ಬೈಕ್ ಒಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದ್ದು, ಭೀಕರ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ನಿಯಂತ್ರಣ ತಪ್ಪಿದ ವೇಗದ ಬೈಕ್ ಸವಾರಿ-ಇಬ್ಬರು ಕೆಟಿಎಂ ಸವಾರರು ದುರ್ಮರಣ

ಇಂದು ಬೆಳಗಿನ ಜಾವ 5 ಗಂಟೆಗೆ ಈ ಭೀಕರ ಅಪಘಾತ ನಡೆದಿದ್ದು, ಹಿಂದಿನ ದಿನ ಸ್ನೇಹಿತರೊಬ್ಬರ ಬರ್ತ್ ಡೇ ಪಾರ್ಟಿ ಮುಗಿಸಿಕೊಂಡು ವಾಪಸ್ ಬರುತ್ತಿರುವಾಗ ಈ ದುರಂತ ಸಂಭವಿಸಿದೆ. ಈ ವೇಳೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೊಬ್ಬ ಗಾಯಾಳು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ನಿಯಂತ್ರಣ ತಪ್ಪಿದ ವೇಗದ ಬೈಕ್ ಸವಾರಿ-ಇಬ್ಬರು ಕೆಟಿಎಂ ಸವಾರರು ದುರ್ಮರಣ

ಇನ್ನು ಸಾವನ್ನಪ್ಪಿದವರನ್ನು ವಿಜಯವಾಡ ಮೂಲದ ಪಿವಿಎಂ ಯಶವಂತ್(21) ಮತ್ತು ಮಧ್ಯಪ್ರದೇಶ ಮೂಲದ ಎಂ.ಕ್ರಿರ್ತಿಕ್ ಚೌಧರಿ(20) ಎಂದು ಗುರುತಿಸಲಾಗಿದ್ದು, ಕೆಎಲ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಓದುತ್ತಿದ್ದರು ಎನ್ನಲಾಗಿದೆ.

ನಿಯಂತ್ರಣ ತಪ್ಪಿದ ವೇಗದ ಬೈಕ್ ಸವಾರಿ-ಇಬ್ಬರು ಕೆಟಿಎಂ ಸವಾರರು ದುರ್ಮರಣ

ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ವಿಜಯವಾಡ ಪೊಲೀಸರು, ಅಪಘಾತ ಸಂಭವಿಸಿದ ಸ್ಥಳದಲ್ಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ.

ನಿಯಂತ್ರಣ ತಪ್ಪಿದ ವೇಗದ ಬೈಕ್ ಸವಾರಿ-ಇಬ್ಬರು ಕೆಟಿಎಂ ಸವಾರರು ದುರ್ಮರಣ

ಕೆಲವು ಸಿಸಿಟಿವಿಗಳಲ್ಲಿ ಅಪಘಾತಕ್ಕೂ ಮುನ್ನ ಕೆಟಿಎಂ ಡ್ಯೂಕ್ 390 ಬೈಕ್ 120 ಕಿ.ಮಿ ಗಿಂತಲೂ ಹೆಚ್ಚು ವೇಗವಾಗಿ ಚಾಲನೆ ಮಾಡುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಘಟನಾ ಸ್ಥಳದಲ್ಲಿನ ಸಿಸಿಟಿವಿಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದುತ್ತಿರುವ ಸ್ಪಷ್ಟ ಚಿತ್ರಣ ಕಂಡುಬಂದಿದೆ.

ನಿಯಂತ್ರಣ ತಪ್ಪಿದ ವೇಗದ ಬೈಕ್ ಸವಾರಿ-ಇಬ್ಬರು ಕೆಟಿಎಂ ಸವಾರರು ದುರ್ಮರಣ

ರಸ್ತೆ ವಿಭಜಕಕ್ಕೆ ಗುದ್ಧಿದ ಪರಿಣಾಮ ಬೆಂಕಿ ಹೊತ್ತಿಕ್ಕೊಳ್ಳುತ್ತಿರುವ ದೃಶ್ಯಗಳು ಸಹ ಕಂಡುಬಂದಿದ್ದು, ಘಟನೆಗೆ ಅತಿ ವೇಗದ ಬೈಕ್ ಚಾಲನೆಯೇ ಕಾರಣ ಎಂಬುವುದನ್ನು ಪ್ರಾಥಮಿಕ ಹಂತದ ತನಿಖಾ ವರದಿಯಲ್ಲಿ ಬಹಿರಂಗ ಪಡಿಸಿದ್ದಾರೆ.

ನಿಯಂತ್ರಣ ತಪ್ಪಿದ ವೇಗದ ಬೈಕ್ ಸವಾರಿ-ಇಬ್ಬರು ಕೆಟಿಎಂ ಸವಾರರು ದುರ್ಮರಣ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ವೇಗದ ಬೈಕ್ ಸವಾರಿಗೂ ಮುನ್ನ ಅಗತ್ಯ ಎಚ್ಚರಿಕೆ ವಹಿಸಿ ಜೊತೆಗೆ ವಸತಿ ಪ್ರದೇಶಗಳಲ್ಲಿ ವೇಗವಾಗಿ ಬೈಕ್ ಸವಾರಿ ಮಾಡುವುದು ಹಲವು ದುರಂತಗಳಿಗೆ ಕಾರಣವಾಗುತ್ತದೆ ಅಲ್ಲದೇ ನಿಮ್ಮ ಪ್ರಾಣಕ್ಕೂ ಹಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

English summary
Read in Kannada about Students speeding on KTM Duke 390 lose life after high speed crash.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark