ಮೂರ್ಖತನದ ಪರಮಾವಧಿ; ಅಪಾಯ ತಂದಿತ್ತ ವಾಹನಗಳ ಬದಲಾವಣೆ

Written By:

ವಾಹನಗಳ ಬಗ್ಗೆ ಕ್ರೇಜ್ ಹೊಂದಿರುವ ಇಂದಿನ ಯುವ ಜನಾಂಗದವರು ತಮ್ಮ ಗಾಡಿಗಳು ಇತರ ವಾಹಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಅತಿ ಹೆಚ್ಚು ಮಾರ್ಪಾಡುಗಳನ್ನು ತರುತ್ತಾರೆ. ಇಂತಹ ಬದಲಾವಣೆಗಳು ನೋಡಲು ಆಕರ್ಷಕವೆನಿಸಿದರೂ ಕೆಲವೊಂದು ಬಾರಿ ಅಪಾಯವನ್ನು ಆಹ್ವಾನಿಸುತ್ತದೆ.

Also Read: ಪರಿವರ್ತಿತ ಮಹೀಂದ್ರ ಎಕ್ಸ್‌ಯುವಿ500 ಬೆಂಗಳೂರಿನಲ್ಲಿ ಪ್ರತ್ಯಕ್ಷ!

ದ್ವಿಚಕ್ರ ವಾಹನಗಳಲ್ಲಿ ಸಣ್ಣ ಸಣ್ಣ ಸ್ಟಿಕ್ಕರುಗಳಿಂದ ಆರಂಭವಾಗುವ ಇಂತಹ ಬದಲಾವಣೆಗಳ ಪ್ರಭಾವ ಎಲ್ಲಿಯ ವರೆಗೆ ಇದೆಯೆಂದರೆ ಶ್ರೀಮಂತರು ಆಡಂಬರದ ವಾಹನಗಳಲ್ಲೂ ಜಾಣತನ ಮೆರೆಯುತ್ತಾರೆ. ಏನೇ ಆಗಲಿ ಬಿಡಿ ರಸ್ತೆ ಕಾನೂನು ನಿಯಮ ಪಾಲನೆ ಉಲ್ಲಂಘನೆಯಾಗದಿದ್ದಲ್ಲಿ ಇಂತಹ ಪ್ರವೃತ್ತಿಗಳಲ್ಲಿ ಯಾವುದೇ ತೊಂದರೆಯಿಲ್ಲ ಬಿಡಿ. ಆದರೆ ಎಲ್ಲೇ ಮೀರಿದರೆ ?

ಹೆಡ್ ಲೈಟ್

ಹೆಡ್ ಲೈಟ್

ಹೆಡ್ ಲೈಟ್ ಗಳನ್ನು ಮಾರ್ಪಾಡುಗೊಳಿಸುವುದು ಅತಿ ಸಾಮಾನ್ಯವಾಗಿಬಿಟ್ಟಿದೆ. ತಮ್ಮ ವಾಹನ ಭವಿಷ್ಯತ್ತಿನ ಅಥವಾ ಅತಿ ದುಬಾರಿಯಾಗಿ ಕಾಣಿಸಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಾರೆ. ಹೆಡ್ ಲೈಟ್ ಮೂರ್ಖತನ ಎಲ್ಲಿಯ ವರೆಗೆ ಇದೆಯೆಂದರೆ ಇಂತಹ ಎಡವಟ್ಟುಗಳಿಂದಾಗಿ ಮುಂಭಾಗದಿಂದ ಬರುವ ವಾಹನಗಳಿಗೆ ಇದರ ದರ್ಶನವಾಗುವುದಿಲ್ಲ. ಇದು ರಾತ್ರಿ ವೇಳೆಯಲ್ಲಿ ಅಪಘಾತಗಳನ್ನು ಸೃಷ್ಟಿ ಮಾಡುತ್ತವೆ.

ಇಂಡಿಕೇಟರ್

ಇಂಡಿಕೇಟರ್

ಭಾರತದಲ್ಲಿ ಇಂಡಿಕೇಟರ್ ಗಳಿಗೆ ಒಂದು ಸ್ಟ್ಯಾಂಡರ್ಡ್ ಆದ ಕಿತ್ತಳೆ ಬಣ್ಣವಿರುತ್ತದೆ. ಎಡ ಅಥವಾ ಬಲಕ್ಕೆ ತಿರುಗುವಾಗ ಇದರ ಬಳಕೆ ನಿರ್ಣಾಯಕವೆನಿಸುತ್ತದೆ. ಹಾಗಿರುವಾಗ ಇಂತಹ ಪೆದ್ದುತನದಿಂದ ಕಿತ್ತಳೆ ಇಂಡಿಕೇಟರ್ ಜಾಗದಲ್ಲಿ ಬಿಳಿ ಬಣ್ಣವನ್ನು ಉಪಯೋಗಿಸಿದರೆ ಹೇಗಿರಬಹುದು ? ಹೌದು, ನಿಜ ಇದು ಇತರ ವಾಹನಗಳಿಗಿಂತ ವಿಭಿನ್ನವಾಗಿ ಗೋಚರಿಸಲಿದೆ. ಆದರೆ ಅಪಾಯವನ್ನು ಎದುರಿಸಲು ತಯಾರಾಗಿರಿ.

ಮಿರರ್

ಮಿರರ್

ಸೂಕ್ಷ್ಮವಾಗಿ ಗಮನಸಿದರೆ ಇನ್ನು ಕೆಲವು ಸಂದರ್ಭದಲ್ಲಿ ವಾಹನಗಳಲ್ಲಿ ಕನ್ನಡಿಗಳೇ ಇರುವುದಿಲ್ಲ. ಕೆಲವು ಬಾರಿ ಅತ್ಯಂತ ಚೊಕ್ಕದಾದ ಮಿರರ್ ಗಳನ್ನು ವಿಶಿಷ್ಟ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಹಿಂಬದಿಯಿಂದ ಬರುವ ವಾಹನಗಳ ಗೋಚರಣೆ ಪ್ರದಾನ ಮಾಡುವುದರಲ್ಲಿ ಎಡುವುತ್ತದೆ.

ಎಕ್ಸಾಸ್ಟ್

ಎಕ್ಸಾಸ್ಟ್

ತುಂಬಾ ದೂರ ಹೋಗಬೇಕಾಗಿಲ್ಲ. ನಮ್ಮ ಬೆಂಗಳೂರಿನ ಗಲ್ಲಿಗಳಿಗೆ ಇಳಿದರೆ ಸಾಕು. ಭಾರಿ ಅಬ್ಬರದಲ್ಲಿ ಶಬ್ದ ಮಾಡುವ ಕಾರು, ಬೈಕ್ ಗಳು ಅತ್ತಿತ್ತ ತಿರುಗಾಡುವುವನ್ನು ಕೆಲವೇ ಕ್ಷಣಗಳಲ್ಲಿ ಪತ್ತೆ ಮಾಡಬಹುದಾಗಿದೆ. ಇಲ್ಲೂ ನಿಯಮಪಾಲಕರಿಗೆ ಚಳ್ಳೆ ಹಣ್ಣು ತಿನ್ನಿಸಿ ಇಂತಹ ಮಾರ್ಪಾಡುಗಳು ಹಗಲು ದರೋಡೆಯಂತೆ ನಡೆಯುತ್ತಿರುವುದು ನಿಜಕ್ಕೂ ಖೇದಕರ ಸಂಗತಿ.

ಮಾರುತಿಗೆ ಫೆರಾರಿ ಲಾಂಛನ

ಮಾರುತಿಗೆ ಫೆರಾರಿ ಲಾಂಛನ

ಸಾಮಾನ್ಯ ಜನರಲ್ಲಿ ದುಬಾರಿ ಕಾರನ್ನು ಖರೀದಿಸುವಷ್ಟು ಹಣಕಾಸಿನ ತೊಂದರೆ ಕಾಡುತ್ತದೆ. ಆದರೆ ಅವರೇನು ಮಾಡುತ್ತಾರೆ ಗೊತ್ತೇ? ಮಾರುತಿ ಕಾರನ್ನು ಖರೀದಿಸಿ ಅದಕ್ಕೆ ಫೆರಾರಿ ಲೊಗೊ ಅಂಟಿಸಿ ಬಿಡುತ್ತಾರೆ. ಐಷಾರಾಮಿ ಕಾರುಗಳ ಇಂತಹ ಲೊಗೊಗಳು ನಿಮಗೂ ಹಲವು ಬಾರಿ ದರ್ಶನವಾಗಿರಬಹುದು.

ಫಾರ್ಕ್ ರೇಕ್ ಆಂಗಲ್

ಫಾರ್ಕ್ ರೇಕ್ ಆಂಗಲ್

ವಾಹನಗಳ ನಿರ್ಮಾಣದ ವೇಳೆಯಲ್ಲಿ ಪ್ರತ್ಯೇಕ ರೀತಿಯ ತ್ರಿಕೋನವನ್ನು (Fork Rake Angle) ಪಾಲಿಸಲಾಗುತ್ತದೆ. ಆದರೆ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಹಲವರು ಸ್ಥಳೀಯ ಮೆಕ್ಯಾನಿಕ್ ಗಳ ಸಹಾಯದಿಂದ ಸಸ್ಪೆನ್ಷನ್ ಅಥವಾ ಫಾರ್ಕ್ ವ್ಯವಸ್ಥೆಯನ್ನೇ ತಮ್ಮಿಷ್ಟದಂತೆ ಬದಲಾಯಿಸುತ್ತಾರೆ. ಹೀಗೆ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವಾಗ ವಿಶೇಷವಾಗಿಯೂ ತಿರುಗುಗಳಲ್ಲಿ ಬೈಕ್ ಗನ್ನು ಬಾಗಿಸುವಾಗ ಸ್ಥಿರತೆ ಹಾಗೂ ಹ್ಯಾಂಡ್ಲಿಂಗ್ ಗೆ ಕುತ್ತು ಸಂಭವಿಸಲಿದ್ದು, ಅಪಾಯವನ್ನು ಆಹ್ವಾನಿಸಲಿದೆ.

ಹಾರ್ನ್

ಹಾರ್ನ್

ವಿಚಿತ್ರ ಹಾಗೂ ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ ಗಳು ಅತಿ ಹೆಚ್ಚು ಶಬ್ದ ಮಾಲಿನ್ಯವನ್ನುಂಟು ಮಾಡುತ್ತಿದೆ. ಇನ್ನು ಕೆಲವು ವೃದ್ಧ ಹಾಗೂ ಮಕ್ಕಳ ಮನೋಬಲದ ಮೇಲೂ ಪ್ರಭಾವ ಬೀರುವ ಆಂತಕವಿರುತ್ತದೆ. ಹಾಗಾಗಿ ಕೆಲವು ಕ್ಷಣದ ಆನಂದಕ್ಕಾಗಿ ಇಂತಹ ತಪ್ಪು ಕೆಲವನ್ನು ಮಾಡಲು ಮುಂದಾಗದಿರಿ.

ಕರ್ಟೈನ್ಸ್

ಕರ್ಟೈನ್ಸ್

ಇನ್ನು ಕೆಲವು ಬಾರಿ ಇದೇನು ಕಾರೇ ಅಥವಾ ಮದುವೆ ಮಂಟಪವೇ ? ಎಂಬ ಸಂಶಯ ಎದ್ದೇಳುವುದು ಸಾಮಾನ್ಯ. ಕಾರಿನ ವಿಂಡೋಗಳಲ್ಲಿ ಇಂತಹ ಪಟ್ಟಿಗಳನ್ನು ಆಳವಡಿಸುವುದು ನಿಷೇಧಿಸಿದೆಯಾದರೂ ಇದನ್ನು ಲೆಕ್ಕಿಸದೇ ಸವಾರರು ದರ್ಬಾರ್ ನಡೆಸುತ್ತಾರೆ.

ನಂಬರ್ ಪ್ಲೇಟ್

ನಂಬರ್ ಪ್ಲೇಟ್

ರಸ್ತೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಗದೊಂದು ಸಮಸ್ಯೆ ಇದಾಗಿದ್ದು, ಇದನ್ನು ನಿಯಂತ್ರಿಸುವುದು ಸಂಚಾರಿ ಪೊಲೀಸರಿಗೆ ಬಹುದೊಡ್ಡ ಸವಾಲಾಗಿ ಬಿಟ್ಟಿದೆ. ಈ ರೀತಿಯ ಫ್ಯಾನ್ಸಿ ನಂಬರ್ ಗಳ ನೊಂದಣಿಯಿಂದಾಗಿ ತುರ್ತು ಸಂದರ್ಭದಲ್ಲಿ ತೊಂದರೆಗಳು ಎದುರಾಗುತ್ತದೆ.

ಪ್ರಕಾಶಮಾನವಾದ ಬೆಳಕು

ಪ್ರಕಾಶಮಾನವಾದ ಬೆಳಕು

ಇನ್ನು ಕೆಲವು ಬಾರಿ ವಾಹನಗಳಲ್ಲಿ ಅತಿ ಹೆಚ್ಚು ಪ್ರಕಾಶಮಾನವಾದ ಸ್ಪಾಟ್ ಲೈಟ್ ಗಳನ್ನು ಬಳಕೆ ಮಾಡಲಾಗುತ್ತದೆ. ಇದು ಎದುರುಗಡೆಯಿಂದ ಬರುವ ವಾಹನಗಳಿಗೆ ಸಮಸ್ಯೆಯನ್ನು ಸೃಷ್ಟಿ ಮಾಡುತ್ತಿದ್ದು, ವಾಹನದ ನಿಯಂತ್ರಣ ತಪ್ಪುವಂತೆ ಮಾಡುತ್ತದೆ.

ಇವನ್ನು ಓದಿ

3.5 ಲಕ್ಷ ಮತ್ತು ಮಾರುತಿ ಇದ್ದರೆ ಸಾಕು, ನಿಮ್ಮದು ಆಗಲಿದೆ ಸೂಪರ್ ಕಾರ್..!

Read more on ಟಾಪ್ 10 top 10
English summary
From Curtains To Scissor Doors: 10 Stupid Car Alterations People Do
Story first published: Saturday, March 19, 2016, 13:29 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more