ಸಿಂಪಲ್ ಸಿಎಂ ಎಂದು ಹೇಳಿಕೊಳ್ಳುವ ಅರವಿಂದ್ ಕೇಜ್ರಿವಾಲ್ ಅವರ ಕಾರ್ ಕಲೆಕ್ಷನ್ ಒಮ್ಮೆ ನೋಡಿ...

ದೇಶ ರಾಜಕಾರಣಿಗಳಲ್ಲಿ ಅತಿ ಕಡಿಮೆ ಸಮಯದಲ್ಲೇ ಭಾರೀ ಹೆಸರು ಮಾಡಿದ ವ್ಯಕ್ತಿ ಅರವಿಂದ್ ಕೇಜ್ರಿವಾಲ್. ಇವರು ಪ್ರಸ್ತುತ ದೇಶ ರಾಜಧಾನಿ ದೆಹಲಿಯ ಮುಖ್ಯಮಂತ್ರಿಯಾಗಿದ್ದು, ತುಂಬಾ ಸಿಂಪಲ್ ಸಿಎಂ ಹಾಗೂ ಸಾಮಾನ್ಯರಂತೆ ಜೀವನ ಸಾಗಿಸುವ ವ್ಯಕ್ತಿ ಅಂತಲೇ ಫೇಮಸ್ ಆಗಿದ್ದಾರೆ. ಇಂತಹ ವ್ಯಕ್ತಿಯ ಕಾರ್ ಕಲೆಕ್ಷನ್ ಅನ್ನು ಒಮ್ಮೆ ಈ ಲೇಖನದಲ್ಲಿ ನೋಡೋಣ.

'ಆಮ್ ಆದ್ಮಿ' ಸಿಎಂ ಕೇಜ್ರಿವಾಲ್ ಅವರ ಕಾರುಗಳಿಗೆ ದೆಹಲಿ ಸರ್ಕಾರ 1. 44 ಕೋಟಿ ರೂ. ಖರ್ಚು ಮಾಡಿದೆ ಎಂದು ಆರ್‌ಟಿಐ ಉತ್ತರವೊಂದು ಇತ್ತೀಚೆಗೆ ಬಹಿರಂಗಪಡಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ವಾಹನಗಳನ್ನು ಖರೀದಿಸಲು ದೆಹಲಿ ರಾಜ್ಯ ಸರ್ಕಾರವು 2014 ರಿಂದ ಇಲ್ಲಿಯವರೆಗೆ 1. 44 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಆರ್‌ಟಿಐ ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಇತ್ತೀಚಿನ ಪ್ರತಿಕ್ರಿಯೆ ಬಹಿರಂಗಪಡಿಸಿದೆ.

ಸಿಎಂ ಅರವಿಂದ್ ಕೇಜ್ರಿವಾಲ್, 2013 ರ ದೆಹಲಿ ಚುನಾವಣೆಯ ಪೂರ್ವದಲ್ಲಿ ಸಾಧಾರಣ ನೀಲಿ ವ್ಯಾಗನ್-ಆರ್ ಅನ್ನು ಹೊಂದಿದ್ದರು. 2015 ರಲ್ಲಿ ಕೇಜ್ರಿವಾಲ್ ಅಧಿಕೃತ ಕಾರು ತೆಗೆದುಕೊಳ್ಳಲು ನಿರಾಕರಿಸಿದ್ದರು. 2015 ರ ಚುನಾವಣೆಗೆ ಮುನ್ನ, ಕೇಜ್ರಿವಾಲ್ ಅವರು 'ವಿಐಪಿ ಸಂಸ್ಕೃತಿ'ಯನ್ನು ನಿಷೇಧಿಸುವುದಾಗಿ ಹೇಳಿಕೆ ನೀಡಿದ್ದರು. ಅಂತೆಯೇ 2015 ರಲ್ಲಿ, ಕೇಜ್ರಿವಾಲ್ ಸರ್ಕಾರದಿಂದ ನೇಮಕಗೊಂಡ 21 ಸಂಸದೀಯ ಕಾರ್ಯದರ್ಶಿಗಳಿಗೆ ವಾಹನಗಳನ್ನು ಹಂಚಿಕೆ ಮಾಡಲು ನಿರಾಕರಿಸಿದ್ದರು.

2020 ರ ದೆಹಲಿ ಚುನಾವಣೆಗೆ ಸಲ್ಲಿಸಿದ ಚುನಾವಣಾ ಅಫಿಡವಿಟ್‌ನಲ್ಲಿ, ಅವರು ಯಾವುದೇ ಕಾರು ಹೊಂದಿಲ್ಲ ಎಂದು ಹೇಳಿದ್ದಾರೆ. ಮೋಟಾರು ವಾಹನಗಳ ಕಾಲಂನಲ್ಲಿ 'ನಿಲ್' ಎಂದು ನಮೂದಿಸಿದ್ದಾರೆ. ಆದರೆ ಸಿಎಂ ಕೇಜ್ರಿವಾಲ್ ಅವರು ಇತ್ತೀಚೆಗೆ 2022 ರ ಏಪ್ರಿಲ್‌ನಲ್ಲಿ 36 ಲಕ್ಷ ರೂಪಾಯಿ ವೆಚ್ಚದ MG ಗ್ಲೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ಟೊಯೋಟಾ ಇನ್ನೋವಾ ಮತ್ತು ಮಹೀಂದ್ರಾ ಅಲ್ಟುರಾಸ್ G4 (32 ಲಕ್ಷ ರೂ.) ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರು ಎರಡು ವಿಭಿನ್ನ ಟೊಯೊಟಾ ಇನ್ನೋವಾ ಮಾದರಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಮಾರುತಿ ಆಲ್ಟೋ
ನಾವು ಕಂಡಂತೆ ರಾಜಕೀಯಗಳಲ್ಲಿ ತೊಡಗಿಸಿಕೊಂಡ ಆರಂಭಿಕ ದಿನಗಳಲ್ಲಿ (2012-13) ಅರವಿಂದ್ ಕೇಜ್ರಿವಾಲ್ ಅವರು ಮಾರುತಿ ಆಲ್ಟೋವನ್ನು ಮೊದಲ ಬಾರಿಗೆ ಖರೀದಿಸಿದ್ದರು. ಇದು ಬಹುತೇಕರಿಗೆ ಗೊತ್ತೇ ಇದೆ, ಈ ಕಾರು ಸಣ್ಣ ಹ್ಯಾಚ್‌ಬ್ಯಾಕ್ ಆಗಿದ್ದು ಮಧ್ಯಮ ವರ್ಗದವರು ಖರೀದಿಸಬಹುದಾದ ಕಾರಾಗಿ ಜನಪ್ರಿಯತೆ ಗಳಿಸಿತ್ತು. ಇದರಲ್ಲಿ ಓಡಾಡುವಾಗ ಹಲವು ಬಾರಿ ಕೇಜ್ರಿವಾಲ್ ಕಾಣಿಸಿಕೊಂಡಿದ್ದರು. ನಂತರ ಈ ಕಾರು ಏನಾಯಿತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಮಾರುತಿ ವ್ಯಾಗನ್-ಆರ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಆಲ್ಟೋ ನಂತರ ಮಾರುತಿ ವ್ಯಾಗನ್-ಆರ್ ಖರೀದಿಸಿದ್ದರು. ಇದನ್ನು 2013 ರಲ್ಲಿ ಖರೀದಿಸಿರುವುದಾಗಿ ತಿಳಿದುಬಂದಿದೆ. ಈ ಕಾರಿನಲ್ಲಿ ಪ್ರಯಾಣಿಸುವ ವೇಳೆ ಕೇಜ್ರಿವಾಲ್ ಅವರು ಹಲವು ಬಾರಿ ಕಾಣಿಸಿಕೊಂಡಿದ್ದರು. ಇದು ಐದು ಬಾಗಿಲಿನ ಹ್ಯಾಚ್‌ಬ್ಯಾಕ್ ಮಾದರಿಯಾಗಿದ್ದು, ಮಾರುತಿ ಸುಜುಕಿ ಇದನ್ನು 1999 ರಲ್ಲಿ ಪರಿಚಯಿಸಿತು. ಸದ್ಯ ಇಂದಿಗೂ ಹೊಸ ಜನ್ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಟೊಯೊಟಾ ಇನ್ನೋವಾ
ಸಿಎಂ ಕೇಜ್ರಿವಾಲ್ ಅವರು ಇನ್ನೋವಾ ಕಾರನ್ನು 2015 ರಲ್ಲಿ ಖರೀದಿಸಿರುವುದಾಗಿ ತಿಳಿದುಬಂದಿದೆ. ಸಿಂಪಲ್ ಸಿಎಂ ಎಂದು ಹೇಳಿಕೊಂಡು ಇನ್ನೋವಾದಲ್ಲಿ ಹಲವು ಬಾರಿ ಕಾಣಿಸಿಕೊಂಡು ಚರ್ಚೆಗೆ ಗ್ರಾಸವಾಗಿದ್ದರು. ಈ ಕಾರು ಟೊಯೊಟಾದ ಪ್ರಮುಖ ಮಾದರಿಯಾಗಿದ್ದು, ಇದು ಫ್ಯಾಮಿಲಿ ಕಾರಾಗಿ ಟೊಯೊಟಾದ ಪ್ರಮುಖ ಮಾರಾಟ ಉತ್ಪನ್ನವಾಗಿದೆ. ಇತ್ತೀಚೆಗೆ ಟೊಯೊಟಾ ತನ್ನ ಹೊಸ ಜನ್ ಇನ್ನೋವಾ ಹೈಬ್ರಿಡ್ ಆವೃತ್ತಿಯ ಹೈಕ್ರಾಸ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

MG ಗ್ಲೋಸ್ಟರ್ & ಮಹೀಂದ್ರಾ ಅಲ್ಟುರಾಸ್ G4
ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಆದ ಬಳಿಕ ಕಾಣಿಸಿಕೊಂಡ ದುಬಾರಿ ಕಾರುಗಳೆಂದರೆ ಮಹೀಂದ್ರಾ ಅಲ್ಟುರಾಸ್ G4 ಮತ್ತು MG ಗ್ಲೋಸ್ಟರ್. ಈ ಕಾರುಗಳು ಆಯಾ ವಿಭಾಗದಲ್ಲಿ ಐಷಾರಾಮಿ ಮಾದರಿಗಳಾಗಿದ್ದು, ಟಾಪ್ ಫೀಚರ್‌ಗಳನ್ನು ಆಯಾ ಕಂಪನಿಗಳು ಲೋಡ್ ಮಾಡಿವೆ. ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಉಡುಗೊರೆಯಾಗಿ ಈ ಕಾರುಗಳು ಲಭಿಸಿವೆ ಎನ್ನಲಾಗಿದೆ.

Most Read Articles

Kannada
English summary
Take a look at the car collection of cm arvind kejriwal
Story first published: Thursday, December 8, 2022, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X