ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

Written By:

ಕಳೆದ ಒಂದು ದಶಕದಿಂದ ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಆಧುನಿಕ ಸೌಲಭ್ಯ ಹೊಂದಿರುವ ಐಷಾರಾಮಿ ತೇಜಸ್ ಎಕ್ಸ್‌ಪ್ರೆಸ್ ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ತೇಜಸ್ ವಿಶೇಷತೆ ಏನು?

ಈ ಹಿಂದಿನ ಎಕ್ಸ್‌ಪ್ರೆಸ್ ರೈಲುಗಳಿಂತ ಹೆಚ್ಚಿನ ಸೌಲಭ್ಯಗಳು ತೇಜಸ್ ಎಕ್ಸ್‌ಪ್ರೆಸ್‌ನಲ್ಲಿ ಅಳವಡಿಸಲಾಗಿದ್ದು, ಭಾರತೀಯ ರೈಲ್ವೆ ಇಲಾಖೆ ದೇಶದ ಜನತೆಗೆ ವಿಶ್ವದರ್ಜೆಯ ಸೇವೆ ಒದಗಿಸಲು ಬೃಹತ್ ಯೋಜನೆ ಕೈಗೊಂಡಿದೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

130 ಕಿಮಿ ವೇಗದಲ್ಲಿ ಚಲಿಸಲಿರುವ ತೇಜಸ್ ರೈಲು, ಮೊದಲ ಹಂತವಾಗಿ ಮುಂಬೈ ಮತ್ತು ಗೋವಾ ಮಧ್ಯೆ ಸಂಚಾರ ಆರಂಭ ಮಾಡಲಾಗುತ್ತಿದೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ತದನಂತರ ದೆಹಲಿ ಮತ್ತು ಹರಿಯಾಣದ ನಡುವೆ ಸಂಚಾರ ಆರಂಭವಾಗಲಿದ್ದು, ಮುಂಬರುವ ದಿನಗಳಲ್ಲಿ ದೇಶದ ಪ್ರಮುಖ ನಗರಗಳಿಗೆ ತೇಜಸ್ ಸಂಪರ್ಕ ಕಲ್ಪಿಸಲಿದೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ಸದ್ಯ ದೇಶದಲ್ಲಿ ಗುಣಮಟ್ಟದ ಸೇವೆ ಒದಗಿಸುತ್ತಿರುವ ರಾಜಧಾನಿ ಎಕ್ಸ್‌ಪ್ರೆಸ್ ಹಾಗೂ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳಿಂತ ತೇಜಸ್ ಎಕ್ಸ್‌ಪ್ರೆಸ್ ಭಿನ್ನವಾಗಿದ್ದು, ಪ್ರಯಾಣಿಕರಿಗೆ ಹೊಸ ಅನುಭುತಿ ನೀಡಲಿದೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ವಿಶ್ವದರ್ಜೆ ಸೇವೆಗಳಿಗೆ ಆದ್ಯತೆ

ಎಲ್‌ಸಿಡಿ ಸ್ಕೀನ್‌ಗಳು

ಪ್ರಯಾಣಿಕರಿಗೆ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಪ್ರತಿ ಸೀಟಿನ ಮುಂಭಾಗದಲ್ಲೂ ಎಲ್‌ಸಿಡಿ ಸ್ಕೀನ್ ವ್ಯವಸ್ಥೆ ಕಲ್ಪಿಸಲಾಗಿದೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ಉಚಿತ ವೈ-ಫೈ

ಪ್ರಯಾಣಿಕರು ತಮ್ಮ ಪ್ರಯಾಣದ ಅವಧಿಯಲ್ಲಿ ಉಚಿತ ವೈ-ಫೈ ಬಳಸಿಕೊಳ್ಳಬಹುದಾಗಿದ್ದು, ಇದಕ್ಕಾಗಿ ತೇಜಸ್ ಎಕ್ಸ್‌ಪ್ರೆಸ್‌ನಲ್ಲಿ ಹೊಸ ವ್ಯವಸ್ಥೆ ತರಲಾಗಿದೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ವಿತರಣಾ ಯಂತ್ರಗಳು

ಹೌದು, ಪ್ರಯಾಣದ ವೇಳೆ ನಿಮಗೆ ಬೇಕಾದ ಆಹಾರಗಳನ್ನು ಒದಗಿಸಲು ಹೊಸ ವ್ಯವಸ್ಥೆ ಕಲ್ಪಿಸಲಾಗಿದ್ದು, ನೀವು ಕುಳಿತಲ್ಲೇ ಯಂತ್ರಗಳ ಮೂಲಕವೇ ಆಹಾರ ಪೂರೈಕೆಯಾಗುತ್ತದೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ಆಟೋಮ್ಯಾಟಿಕ್ ಡೋರ್‌ಗಳ

ದೇಶದಲ್ಲೇ ಮೊದಲ ಬಾರಿಗೆ ತೇಜಸ್ ಎಕ್ಸ್‌ಪ್ರೆಸ್‌ನಲ್ಲಿ ಆಟೋಮ್ಯಾಟಿಕ್ ಡೋರ್‌ಗಳ ವ್ಯವಸ್ಥೆ ಜಾರಿ ತರಲಾಗಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷೆ ಸಿಗಲಿದೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ಸಂತಸ ವ್ಯಕ್ತ ಪಡಿಸಿದ ಸುರೇಶ್ ಪ್ರಭು

ಇನ್ನು ಹೊಸ ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಚಿವ ಸುರೇಶ್ ಪ್ರಭು, ತೇಜಸ್ ಎಕ್ಸ್‌ಪ್ರೆಸ್ ಸದ್ಯದಲ್ಲೇ ದೇಶದ ಜನತೆಗೆ ಸೇವೆ ಒದಗಿಸಲಿದೆ ಎಂದಿದ್ದಾರೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷ ತಂತ್ರಜ್ಞಾನ ಅಳವಡಿಕೆ

ದೇಶದಲ್ಲಿ ಪದೇ ಪದೇ ಸಂಭವಿಸುತ್ತಿರುವ ರೈಲು ದುರಂತಗಳನ್ನು ತಗ್ಗಿಸಲು ಕೆಲವು ಸುಧಾರಿತ ತಂತ್ರಜ್ಞಾನಗಳ ಅಳವಡಿಕೆ ಮಾಡಲಾಗಿದ್ದು, ಅಪಘಾತಗಳ ಮುನ್ಸೂಚನೆ ನೀಡಲಿವೆ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ಒಟ್ಟಿನಲ್ಲಿ ರೈಲ್ವೆ ಪ್ರಯಾಣಿಕರಿಗೆ ವಿಶ್ವದರ್ಜೆ ಸೇವೆ ಒದಗಿಸುವ ನಿಟ್ಟಿನಲ್ಲಿ ವಿನೂತನ ಯೋಜನೆ ಜಾರಿಗೆ ತರುತ್ತಿರುವ ಕೇಂದ್ರ ನಿರ್ಧಾರ ಶ್ಲಾಘನೀಯ.

ಸೇವೆಗೆ ಸಿದ್ಧವಾಗಿದೆ ದೇಶದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್

ಇದರ ಜೊತೆ ಈಗಿರುವ ರೈಲು ಸೇವೆಗಳನ್ನು ಉನ್ನತ ಮಟ್ಟಕ್ಕೆ ಎರಿಸುವುದಲ್ಲದೇ ಸದ್ಯದ ಜನಸಂಖ್ಯೆಗೆ ಅನುಗುಣವಾಗಿ ಮತ್ತಷ್ಟು ಹೊಸ ರೈಲುಗಳನ್ನು ಬಿಡುವುದು ಅವಶ್ಯಕತೆಯಿದೆ.

Read more on ರೈಲು train
English summary
The Tejas Express is set to hit the tracks from Mumbai to Goa in June and it heralds the future of Train travel in India.
Please Wait while comments are loading...

Latest Photos