ಶಿವಲಿಂಗ ಪತ್ತೆಹಚ್ಚಲು ಹೆದ್ದಾರಿಯಲ್ಲೇ ಗುಂಡಿ ತೋಡಿದ ಭೂಪ !!

Written By:

ಧರ್ಮದಲ್ಲಿ ಹೆಸರಿನಲ್ಲಿ ನೆಡೆದುಕೊಂಡು ಬಂದಿರುವ ಮೂಡ ನಂಬಿಕೆ ಮಾನವನನ್ನು ಎಷ್ಟರ ಮಟ್ಟಿಗೆ ಮೂರ್ಖಗೊಳಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎನ್ನಬಹುದು.

To Follow DriveSpark On Facebook, Click The Like Button
ಶಿವಲಿಂಗ ಪತ್ತೆಹಚ್ಚಲು ಹೆದ್ದಾರಿಯಲ್ಲೇ ಗುಂಡಿ ತೋಡಿದ ವ್ಯಕ್ತಿ ಭೂಪ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚೆಗೆ ಭಾರತ ಹೆಚ್ಚು ಬೆಳವಣಿಗೆಯಾಗುತ್ತಿದ್ದು, ದೇಶದ ನಾಗರಿಕರು ಹೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಆದರೆ ನಂಬಿದರೆ ನಂಬಿ ಬಿಟ್ಟರೆ ಬಿಡಿ, ಭಾರತ ಉನ್ನತ ಮಟ್ಟಕ್ಕೆ ಏರಲು ಬಹಳಷ್ಟು ವರ್ಷಗಳೇ ಬೇಕು.

ಶಿವಲಿಂಗ ಪತ್ತೆಹಚ್ಚಲು ಹೆದ್ದಾರಿಯಲ್ಲೇ ಗುಂಡಿ ತೋಡಿದ ವ್ಯಕ್ತಿ ಭೂಪ

ಯಾಕ್ ಹೇಗೆ ಹೇಳ್ತಿದಾರೆ, ಅನ್ಕೊಂಡ್ರಾ ? ಹೌದು, ಈ ಮೂಢನಂಬಿಕೆ ಭಾರತದಲ್ಲಿ ಇರುವ ವರೆಗೂ ಖಂಡಿತ ನಮ್ಮ ದೇಶಕ್ಕೆ ಒಳಿತಾಗುವ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.

ಶಿವಲಿಂಗ ಪತ್ತೆಹಚ್ಚಲು ಹೆದ್ದಾರಿಯಲ್ಲೇ ಗುಂಡಿ ತೋಡಿದ ವ್ಯಕ್ತಿ ಭೂಪ

ತೆಲಂಗಾಣ ಈ ಮಹಾನ್ ವ್ಯಕ್ತಿ ಮಾಡಿರುವ ಘನಕಾರ್ಯ ಖಂಡಿತ ನಿಮಗೆ ನಗಬೇಕೋ ಇಲ್ಲ ಅಳಬೇಕೊ ಎನ್ನುವ ಪರಿಸ್ಥಿತಿಗೆ ದೂಡುವುದಂತೂ ಖಂಡಿತ.

ಶಿವಲಿಂಗ ಪತ್ತೆಹಚ್ಚಲು ಹೆದ್ದಾರಿಯಲ್ಲೇ ಗುಂಡಿ ತೋಡಿದ ವ್ಯಕ್ತಿ ಭೂಪ

ವ್ಯಕ್ತಿಯೊಬ್ಬ ಶಿವಲಿಂಗವನ್ನು ಪತ್ತೆ ಹಚ್ಚುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಅಗೆದ ಘಟನೆ ತೆಲಂಗಾಣ ರಾಜ್ಯದಲ್ಲಿ ನೆಡೆದಿದ್ದು, ಎಲ್ಲರನ್ನು ಉಬ್ಬೇರಿಸುವಂತೆ ಮಾಡಿದೆ.

ಶಿವಲಿಂಗ ಪತ್ತೆಹಚ್ಚಲು ಹೆದ್ದಾರಿಯಲ್ಲೇ ಗುಂಡಿ ತೋಡಿದ ವ್ಯಕ್ತಿ ಭೂಪ

"ವಾರಾಂಗಲ್- ಹೈದರಬಾದ್ ರಾಷ್ಟ್ರೀಯ ಹೆದ್ದಾರಿಯಡಿಯಲ್ಲಿ ಶಿವಲಿಂಗವೊಂದು ಇದೆ" ಎಂದು ಸ್ವಯಂ ಘೋಷಿತ ದೇವಮಾನವ ಲಖನ್ ಮನೋಜ್ ನಂಬಿಸಿದ್ದ ಕಾರಣ ಈ ವ್ಯಕ್ತಿ ಈ ಕೃತ್ಯಕ್ಕೆ ಕೈಹಾಕಿದ್ದಾನೆ ಎನ್ನಲಾಗಿದೆ.

ಶಿವಲಿಂಗ ಪತ್ತೆಹಚ್ಚಲು ಹೆದ್ದಾರಿಯಲ್ಲೇ ಗುಂಡಿ ತೋಡಿದ ವ್ಯಕ್ತಿ ಭೂಪ

ಸೋಮವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಶಿವಲಿಂಗ ಶೋಧ ಕಾರ್ಯಕ್ರಮ ಆರಂಭವಾಗಿದ್ದು, ಈತನೊಂದಿಗೆ ಗ್ರಾಮಸ್ಥರು ಕೂಡಾ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಶಿವಲಿಂಗ ಇರುವ ಜಾಗ ಮನೋಜ್ ಅವರು ಪ್ರತೀ ಸೋಮವಾರ ಶಿವಲಿಂಗ ಇದೆ ಎಂದು ಹೇಳಲಾಗುತ್ತಿರುವ ಜಾಗಕ್ಕೆ ಪೂಜೆ ಸಲ್ಲಿಸುತ್ತಿದ್ದರು.

ಆದರೆ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಅಗೆಯಲು ಆರಂಭಿಸಿದಾಗ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ವಿಷಯ ತಿಳಿದು ತೆಲಂಗಾಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಸ್ವಯಂಘೋಷಿತ ದೇವಮಾನವ ಮನೋಜ್ ,ಗ್ರಾಮದ ಮುಖ್ಯಸ್ಥ ಹಾಗೂ ಉಳಿದ ಐದು ಮಂದಿಯನ್ನು ಬಂಧಿಸಿದ್ದರು.

English summary
sfesz
Please Wait while comments are loading...

Latest Photos