ವಿದ್ಯುತ್ ಕಾರಿಗೆ ಚಾರ್ಜ್ ಮಾಡಿಸಲು 'ಲೋಹದ ಹಾವು'

Written By:

ಇನ್ನು ನಿಮ್ಮ ವಿದ್ಯುತ್ ಕಾರಿಗೆ ಚಾರ್ಜ್ ಮಾಡಿಸುವುದು ಬಹಳ ಸುಲಭ. ಜಗತ್ತಿನ ಮುಂಚೂಣಿಯ ಎಲೆಕ್ಟ್ರಿಕ್ ಕಾರು ತಯಾರಿಕ ಸಂಸ್ಥೆಯಾಗಿರುವ ಟೆಸ್ಲಾ ಮೋಟಾರ್ಸ್ ವಿನೂತನ ತಂತ್ರಗಾರಿಕೆಯನ್ನು ಹೊರತಂದಿದೆ. ಅದುವೇ ಲೋಹದ ಹಾವು ಅಥವಾ ಯಂತ್ರ.

ಪ್ರಸ್ತುತ ಕಾನ್ಸೆಪ್ಟ್ ಮಾದರಿಯಲ್ಲಿರುವ ಟೆಸ್ಲಾ ಮೆಟಲ್ ಸ್ನೇಕ್ ಪ್ರಾಯೋಗಿಕ ಹಂತದಲ್ಲಿದೆ. ಈ ಯೋಜನೆ ಯಶಸ್ವಿಯಾದ್ದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಆಳವಡಿಸುವ ಯೋಜನೆಯನ್ನು ಟೆಸ್ಲಾ ಮೋಟಾರ್ಸ್ ಹೊಂದಿದೆ.

To Follow DriveSpark On Facebook, Click The Like Button
ವಿದ್ಯುತ್ ಕಾರಿಗೆ ಚಾರ್ಜ್ ಮಾಡಿಸಲು 'ಲೋಹದ ಹಾವು'

ಕಂಪ್ಯೂಟರ್ ಯುಗದ ಆರಂಭದೊಂದಿಗೆ ಎಲ್ಲ ಕೆಲಸವೂ ಯಾಂತ್ರಿಕವಾಗಿಬಿಟ್ಟಿದೆ. ಮಾನವ ಬುದ್ಧಿಶಕ್ತಿಯಿಂದಲೇ ಹುಟ್ಟಿಕೊಂಡಿರುವ ಈ ಸಿದ್ಧಾಂತವು ಸಾಧ್ಯವಾದಷ್ಟು ಮಾನವ ಸಹಾಯವನ್ನು ಕಡಿಮೆ ಮಾಡುವ ಯೋಜನೆ ಉದ್ದೇಶವಾಗಿದೆ.

ವಿದ್ಯುತ್ ಕಾರಿಗೆ ಚಾರ್ಜ್ ಮಾಡಿಸಲು 'ಲೋಹದ ಹಾವು'

ಅಮೆರಿಕ ಮೂಲದ ಎಲೆಕ್ಟ್ರಿಕ್ ಕಾರು ಸಂಸ್ಥೆ ಟೆಸ್ಲಾ ಮೋಟಾರ್ಸ್ ಇಂತಹದೊಂದು ವಿನೂತನ ಯೋಜನೆ ಅವಿಷ್ಕರಿಸಲು ಮುಂದಾಗಿದೆ.

ವಿದ್ಯುತ್ ಕಾರಿಗೆ ಚಾರ್ಜ್ ಮಾಡಿಸಲು 'ಲೋಹದ ಹಾವು'

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಗಳಲ್ಲಿ ವಿದ್ಯುತ್ ಮರು ತುಂಬಲು ನಿಮ್ಮ ಕಾರನ್ನು ಪಾರ್ಕ್ ಮಾಡಿದ್ದಲ್ಲಿ ಈ ಸ್ವಯಂಚಾಲಿತ ಮೆಟಲ್ ಸ್ನೇಕ್ ಯಂತ್ರ ಅತ್ಯಂತ ಸುಲಭವಾಗಿ ಉಳಿದ ಕೆಲಸವನ್ನು ನೆರವೇರಿಸಲಿದೆ.

ವಿದ್ಯುತ್ ಕಾರಿಗೆ ಚಾರ್ಜ್ ಮಾಡಿಸಲು 'ಲೋಹದ ಹಾವು'

ಕಾರು ಪಾರ್ಕ್ ಮಾಡಿದಾಕ್ಷಣ ಈ ಯಂತ್ರದಲ್ಲಿ ಆಳವಡಿಸಲಾಗಿರುವ ಸೆನ್ಸಾರ್ ಗಳು ಪತ್ತೆ ಹಚ್ಚಲಿದೆ. ಹಾಗೆಯೇ ನೇರವಾಗಿ ನಿಮ್ಮ ಕಾರಿನ ಚಾರ್ಜಿಂಗ್ ತೂತನ್ನು ಕನೆಕ್ಟ್ ಮಾಡಲಿದೆ.

ವಿದ್ಯುತ್ ಕಾರಿಗೆ ಚಾರ್ಜ್ ಮಾಡಿಸಲು 'ಲೋಹದ ಹಾವು'

ಇದರಿಂದ ಕೆಲಸ ಲಾಭ, ಸಮಯ ಲಾಭ ಎಂಬುದನ್ನು ಸಂಸ್ಥೆ ವಿವರಿಸುತ್ತದೆ. ಒಟ್ಟಿನಲ್ಲಿ ಈ ಕೌಶಲ್ಯವು ಎಷ್ಟು ನಿಖರತೆ ಕಂಡುಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Tesla's 'solid metal snake' automatic car charger
Story first published: Monday, August 10, 2015, 10:57 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark