ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

'ರಿಷಿ ಸುನಕ್' ಸದ್ಯ ಈ ಹೆಸರು ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾರಣವಿಷ್ಟೇ ಭಾರತೀಯ ಮೂಲದ ವ್ಯಕ್ತಿ ಬ್ರಿಟನ್ ಪ್ರಧಾನಿಯಾಗಿರುವುದು. ಈ ಹಿಂದೆ ಬ್ರಿಟೀಷರು ದೇಶವನ್ನು ಆಳಿದ್ದರು, ಆದರೀಗ ಭಾರತ ಮೂಲದ ವ್ಯಕ್ತಿ ದಿ ಗ್ರೇಟ್ ಬ್ರಿಟನ್ನಿಗೆ ಪ್ರಧಾನಿಯಾಗಿ ಇಂಗ್ಲೆಂಡಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

ರಿಷಿ ಸುನಕ್ ಅವರು ನಮ್ಮ ಕರ್ನಾಟಕ ಮೂಲದ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಅಳಿಯ ಎಂಬುದು ಮತ್ತಷ್ಟು ಖುಷಿ ನೀಡುವ ವಿಚಾರ. ಇವರ ಮದುವೆ ಬೆಂಗಳೂರಿನಲ್ಲಿಯೇ ಹಿಂದೂ ಸಂಪ್ರದಾಯದಂತೆ ನಡೆದಿತ್ತು. ರಿಷಿ ಸುನಕ್ ವಯಸ್ಸು ಕೇವಲ 42, ಕಳೆದ 200 ವರ್ಷಗಳಲ್ಲಿ ಬ್ರಿಟನ್‌ ಅನ್ನು ಆಳಿರುವ ಪ್ರಧಾನಿಗಳಲ್ಲಿ ಅತೀ ಚಿಕ್ಕ ವಯಸ್ಸಿನವರು ರಿಷಿ ಸುನಕ್.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

ಇಷ್ಟು ಸಣ್ಣ ವಯಸ್ಸಿಗೆ ಬ್ರಿಟನ್ ಪ್ರಧಾನಿಯಾಗಿರುವ ರಿಷಿ ಸುನಕ್ ಬ್ರಿಟನ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಯುವ ಶ್ರೀಮಂತನಿಗೆ ಕಾರುಗಳೆಂದರೆ ಮೋಜಿದ್ದರೂ ಕೆಲವೇ ಕಾರುಗಳನ್ನು ಹೊಂದಿದ್ದಾರೆ. ಇವು ಅವರ ಆಲ್ ಟೈಮ್ ಫೆವರೆಟ್ ಎಂಬುದು ವಿಶೇಷ.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

ಅವರ ಕಾರುಗಳನ್ನು ನೋಡುವುದಾದರೆ ಲ್ಯಾಂಡ್ ರೋವರ್ ಡಿಸ್ಕವರಿ, ಜಾಗ್ವಾರ್ XJ ಮತ್ತು ವೋಕ್ಸ್‌ವ್ಯಾಗನ್ ಗಾಲ್ಫ್ Mk6 GTI ನಂತಹ ಕಾರುಗಳನ್ನು ಹೊಂದಿದ್ದಾರೆ. ಈ ಪ್ರತಿಯೊಂದು ಕಾರಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

1. ಲ್ಯಾಂಡ್ ರೋವರ್ ಡಿಸ್ಕವರಿ

ರಿಷಿ ಸುನಕ್‌ನ ಗ್ಯಾರೇಜ್‌ನಲ್ಲಿರುವ ಈ ಉನ್ನತ-ಮಟ್ಟದ SUV 3.0 ಲೀಟರ್ 6-ಸಿಲಿಂಡರ್ ಎಂಜಿನ್ 355 HP ಪವರ್ ಉತ್ಪಾದಿಸುತ್ತದೆ. ಈ ಡಿಸ್ಕವರಿ ಹಿಂಭಾಗದಲ್ಲಿ ಸ್ಥಿರವಾದ ಪನೋರಮಿಕ್ ಗ್ಲಾಸ್ ರೂಫ್ ಮತ್ತು ಮುಂಭಾಗದಲ್ಲಿ ಸ್ಲೈಡಿಂಗ್ ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿದೆ.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

ರಿಷಿ ಸುನಕ್ ಅವರ ಈ ಐಷಾರಾಮಿ ಕಾರು ನೋಡಲು ಸಾಮಾನ್ಯವಾಗಿ ಕಂಡರೂ ಬಲವಾದ ಎಂಜಿನ್ ಅನ್ನು ಹೊಂದಿದೆ. ಇದು ಕೇವಲ 7.6 ಸೆಕೆಂಡುಗಳಲ್ಲಿ 60 mph (100 ಕಿ.ಮೀ) ಅನ್ನು ತಲುಪಬಲ್ಲದು. ಈ ಲ್ಯಾಂಡ್ ರೋವರ್ ನ ಅತ್ಯಧಿಕ ವೇಗ 120 mph (209 ಕಿ.ಮೀ) ಇದೆ.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

2. ಜಾಗ್ವಾರ್ XJ

ಜಾಗ್ವಾರ್ ಬ್ರಿಟಿಷ್ ವಾಹನ ತಯಾರಕ ಕಂಪನಿಯಾಗಿದ್ದು, ಜಾಗ್ವಾರ್ ಮಾದರಿಯು ಕಂಪನಿಯ ಜನಪ್ರಿಯ ಕಾರಾಗಿದೆ. ಇದು ಹೆಚ್ಚಿನ ಪರ್ಫಾಮೆನ್ಸ್ ವಿಭಾಗದ ಕಾರಾಗಿದೆ. ರಿಷಿ ಸುನಕ್ ಅವರ ಕಾರು ಸಂಗ್ರಹದಲ್ಲಿರುವ ಅತ್ಯಂತ ಶ್ರೀಮಂತ ವಾಹನ ಇದಾಗಿದೆ.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

ಈ ಉನ್ನತ-ಮಟ್ಟದ ಐಷಾರಾಮಿ ಕಾರು 3L V6 ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 225 ಹಾರ್ಸ್‌ಪವರ್ ಉತ್ಪಾದಿಸಬಲ್ಲದು. 158 mph (254 ಕಿ.ಮೀ) ಗರಿಷ್ಠ ವೇಗವನ್ನು ಹೊಂದಿದೆ. ಇದು 3.9 ಸೆಕೆಂಡುಗಳಲ್ಲಿ 60 mph (100 ಕಿ.ಮೀ) ಅನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

3. ವೋಕ್ಸ್‌ವ್ಯಾಗನ್ ಗಾಲ್ಫ್ Mk6 GTI

ಈ ಫೋಕ್ಸ್‌ವ್ಯಾಗನ್ ವಾಹನವು ಹ್ಯಾಚ್‌ಬ್ಯಾಕ್ ಆಗಿದ್ದು, 207 ಹಾರ್ಸ್‌ಪವರ್ ಮತ್ತು 149 mph (239 ಕಿ.ಮೀ) ಗರಿಷ್ಠ ವೇಗವನ್ನು ಉತ್ಪಾದಿಸುವ 2L ಇನ್‌ಲೈನ್ 4 ಟರ್ಬೊ ಎಂಜಿನ್‌ನೊಂದಿಗೆ ಬರುತ್ತದೆ. ಇದು 6.9 ಸೆಕೆಂಡುಗಳಲ್ಲಿ ಗಂಟೆಗೆ 60 ಮೈಲುಗಳ ವೇಗವನ್ನು ತಲುಪಬಲ್ಲದು.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

ರಿಷಿ ಸುನಕ್‌ರವರ ತಂದೆ-ತಾಯಿ ಪಂಜಾಬಿನವರು. ಪೂರ್ವ ಆಫ್ರಿಕದಲ್ಲಿ ನೆಲೆಸಿದ್ದ ಕುಟುಂಬ 1960ರಲ್ಲಿ ಯುಕೆಗೆ ಹೋಗಿ ವಾಸಿಸಿ ಅಲ್ಲಿಯ ಪೌರತ್ವ ಪಡೆದರು. ರಿಷಿ ಸುನಕ್‌ ಹುಟ್ಟಿ ಬೆಳೆದದ್ದು ಬ್ರಿಟನ್‌ನಲ್ಲಿಯೇ. ಆದರೆ ಮೂಲ ಮಾತ್ರ ಭಾರತ ಎಂಬುದು ಗಮನಿಸಬೇಕು.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

ಪ್ರಧಾನಿಯಾಗುವ ಮೊದಲು ರಿಷಿ ಸುನಕ್ ಅವರು 2019 ರಿಂದ 2020 ರವರೆಗೆ ಖಜಾನೆಯ ಮುಖ್ಯ ಕಾರ್ಯದರ್ಶಿ (Treasury's chief secretary) ಸ್ಥಾನವನ್ನು ಹೊಂದಿದ್ದರು. 2020 ರಿಂದ 2022 ರವರೆಗೆ ಖಜಾನೆಯ ಕುಲಪತಿಯಾಗಿ ಸೇವೆ ಸಲ್ಲಿಸಿದರು.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

ಬ್ರಿಟನ್‌ನ ಅತ್ಯಂತ ಶ್ರೀಮಂತರು ರಿಷಿ ಸುನಕ್

ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾಮೂರ್ತಿ ಬ್ರಿಟನ್‌ನ ಅತ್ಯಂತ ಶ್ರೀಮಂತರ 250 ಪಟ್ಟಿಯಲ್ಲಿ 222ನೇ ಸ್ಥಾನದಲ್ಲಿದ್ದಾರೆ. ರಿಷಿ ಸುನಕ್ ಅವರ ಪತ್ನಿ ಅಕ್ಷತಾಮೂರ್ತಿಯವರ ಒಟ್ಟು ಆಸ್ತಿ £730 ಮಿಲಿಯನ್. ಈ ದಂಪತಿ ಬ್ರಿಟನ್‌ನ ರಾಣಿಯಾಗಿದ್ದ 2ನೇ ಎಲಿಜಬತ್‌ರವರಿಗಿಂತಲೂ ಶ್ರೀಮಂತರು.

ಅತ್ಯಂತ ಶ್ರೀಮಂತ... ಆದ್ರೆ ಸರಳ ವ್ಯಕ್ತಿ: ಭಾರತ ಮೂಲದ ಬ್ರಿಟನ್ ಹೊಸ ಪ್ರಧಾನಿಯ ಕಾರ್ ಕಲೆಕ್ಷನ್

ರಾಣಿಯ ಒಟ್ಟು ಆಸ್ತಿ £430 ಮಿಲಿಯನ್ ಆಗಿದೆ. ರಿಷಿ ಸುನಕ್‌ ಮತ್ತು ಅಕ್ಷತಾ ಮೂರ್ತಿ ದಂಪತಿಗೆ ಒಟ್ಟು ನಾಲ್ಕು ಮನೆಗಳಿವೆ, ಎರಡು ಲಂಡನ್‌ನಲ್ಲಿ ಒಂದು ಯಾರ್ಕ್‌ಶೈರ್ ಮತ್ತು ಲಾಸ್ಏಂಜಲೀಸ್‌ನಲ್ಲಿದೆ. ರಿಷಿ ಸುನಕ್‌ ತಮ್ಮ ಇಪ್ಪತ್ತರ ಹರೆಯದಲ್ಲಿಯೇ ಮಿಲಿಯನರ್‌. ಅವರು ಅಕ್ಷತಾಮೂರ್ತಿಯನ್ನು ಮದುವೆಯಾದ ಬಳಿಕ ಅವರ ಸಂಪತ್ತು ಮತ್ತಷ್ಟು ಹೆಚ್ಚಾಯಿತು.

Most Read Articles

Kannada
English summary
The car collection of India origin Britains new Prime Minister
Story first published: Wednesday, October 26, 2022, 11:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X