ನಿಮ್ಮ ಜನ್ಮ ರಾಶಿಗೆ ತಕ್ಕ ಕಾರು ಯಾವುದು?

Posted By: Super Admin

ಪ್ರತಿಯೊಂದು ವಸ್ತುವನ್ನು ಖರೀದಿಸುವ ಮುನ್ನ ತಮ್ಮ ರಾಶಿಗೆ ಆ ವಸ್ತು ಆಗಿ ಬರುತ್ತದೆಯೇ ಎಂದು ತಿಳಿದುಕೊಳ್ಳುವ ಪರಿಪಾಠ ಭಾರತೀಯರು ಮೊದಲಿನಿಂದಲೂ ನೆಡೆಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಕಾರು ಖರೀದಿ ಮಾಡುವ ಮುನ್ನ ತಮಗೆ ಈ ಬಣ್ಣದ ಕಾರು ಆಗಿ ಬರಲಿದೆಯೇ ಎಂಬುದನ್ನು ತಿಳಿಯಲು ಮುಂದೆ ಓದಿ.

ಮೇಷ ರಾಶಿ

ಮೇಷ ರಾಶಿ

ನಕ್ಷತ್ರಗಳು: ಅಶ್ವಿ‌ನಿ, ಭರಣಿ, ಕೃತ್ತಿಕ 1ನೇ ಪಾದ

ಪ್ರತಿ ರಾಶಿಗೂ ಅದರದ್ದೇ ಆದ ಮೂಲ ಗುಣಗಳಿರುವುದರಿಂದಲೂ ರಾಶಿ ಪ್ರಭಾವದಿಂದಾಗಿ ಮೇಷ ರಾಶಿಯವರು ಕೆಲವು ಮೂಲ ಗುಣಗಳನ್ನು ಪಡೆದಿರುತ್ತಾರೆ. ಅಶ್ವಿನಿ, ಭರಣಿ ಮತ್ತು ಕೃತ್ತಿಕಾ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವರದು ಮೇಷ ರಾಶಿಗೆ ಸೇರಿರುತ್ತಾರೆ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಗೆ ಕುಜ ಅಧಿಪತಿಯಾಗಿರುವುದರಿಂದ ಕಡು ಕೆಂಪು ಹಾಗೂ ಬಿಳಿ ಬಣ್ಣ ಹೆಚ್ಚು ಹೊಂದಿಕೆಯಾಗುತ್ತದೆ. ಇದೇ ಕಾರಣಕ್ಕಾಗಿ ಫೆರಾರಿ ಹಾಗೂ ಷೆವರ್ಲೆ ಕ್ರೂಜ್ ಕಾರುಗಳು ಹೆಚ್ಚು ಸೂಕ್ತವೆನಿಸಲಿದೆ.

ಮೇಷ ರಾಶಿ

ಮೇಷ ರಾಶಿ

ದೇವಾನು ದೇವತೆಗಳು ಬಣ್ಣಗಳಿಗೆ ಮೊರೆ ಹೋಗಿದ್ದರು ಎಂಬುದಕ್ಕೆ ಪುರಾಣಗಳಲ್ಲಿ ದೃಷ್ಟಾಂತಗಳಿವೆ. ವಿಘ್ನ ನಿವಾರಕ ಗಣಪತಿಗೆ ಕೆಂಪು ಬಣ್ಣ ಬಲು ಪ್ರಿಯವಂತೆ.

ನಿಮ್ಮ ಜನ್ಮ ರಾಶಿಗೆ ತಕ್ಕ ಕಾರು ಯಾವುದು?

ಈ ಹಿನ್ನೆಲೆಯಲ್ಲಿ ಸೌಭಾಗ್ಯದ ಸಂಕೇತವಾದ ಕೆಂಪು ಬಣ್ಣದ ಕಾರುಗಳನ್ನು ಬಳಕೆ ಮಾಡುವುದು ಹೆಚ್ಚು ಸೂಕ್ತ. ಮೇಕೆಯ ಚಿಹ್ನೆ ಹೊಂದಿರುವ ಮೇಶ ರಾಶಿ ಸಾಮರಸ್ಯ ಮತ್ತು ಶಕ್ತಿಯ ಸಂಕೇತವಾಗಿದ್ದು, ಎಲ್ಲ ರಂಗಗಳಲ್ಲಿ ಬೆಳವಣಿಗೆಯಾಗಿ ಲಾಭ ಕೂಡಿ ಬರುತ್ತದೆ.

ನಿಮ್ಮ ಜನ್ಮ ರಾಶಿಗೆ ತಕ್ಕ ಕಾರು ಯಾವುದು?

ವೃಷಭ ರಾಶಿ

ನಕ್ಷತ್ರಗಳು: ಕೃತ್ತಿಕ 2, 3, 4, ರೋಹಿಣಿ, ಮೃಗಶಿರಾ 1ನೇ ಪಾದ

ವೃಷಭ ರಾಶಿಗೆ ಶುಕ್ರ ಅಧಿಪತಿಯಾಗಿರುವುದರಿಂದ ಇದರ ಬಣ್ಣ ಬಿಳಿ ಹಾಗೂ ಗುಲಾಬಿ.

ನಿಮ್ಮ ಜನ್ಮ ರಾಶಿಗೆ ತಕ್ಕ ಕಾರು ಯಾವುದು?

ಎಲ್ಲರನ್ನು ಬಹುಬೇಗ ಆಕರ್ಷಿಸುವ ಗುಣವನ್ನು ಹೊಂದಿರುವ ಈ ಜಾತಕದವರು ಸ್ತ್ರೀಯರನ್ನು ಆಕರ್ಷಿಸುವ ಗುಣವನ್ನು ಹೊಂದಿದ್ದು, ಗುಲಾಬಿ ಬಣ್ಣದ ಕಾರು ಹೆಚ್ಚು ಸೂಕ್ತವಾಗಿರಲಿದೆ.

ಕಾರು

ಮಿಥುನ ರಾಶಿ

ನಕ್ಷತ್ರಗಳು: ಮೃಗಶಿರಾ 2, 3, 4, ಆರಿದ್ರಾ, ಪುನರ್ವಸು 1, 2, 3ನೇ ಪಾದ

ಸಂವಹನ ಪ್ರತೀಕವಾದ ಮಿಥು ರಾಶಿಯ ಅಧಿಪತಿ ಬುಧ. ಮಾನವೀಯತೆಯಲ್ಲಿ ಅಚಲ ನಂಬಿಕೆಯುಳ್ಳ ನೀವು ವ್ಯಾಪರೋದ್ಯಮದಗಳಲ್ಲಿ ಬೆಳವಣಿಗೆಗಾಗಿ ಶ್ರಮಿಸುತ್ತೀರಿ.

ಕಟಕ ರಾಶಿ

ಕಟಕ ರಾಶಿ

ಮಾತುಗಾರಿಕೆಯಲ್ಲೂ ಪ್ರಾವೀಣ್ಯವನ್ನು ಹೊಂದಿರುವ ಮಿಥುನ ರಾಶಿಯವರು ಬುದ್ದಿವಂತಿಕೆಯಲ್ಲಿ ಎತ್ತಿದ ಕೈ.

ಸಿಂಹ ರಾಶಿ

ಸಿಂಹ ರಾಶಿ

ನಕ್ಷತ್ರಗಳು: ಮಘಾ, ಪುಬ್ಬೆ, ಉತ್ತರಾಷಾಢ 1ನೇ ಪಾದ

ಸೂರ್ಯ ತೇಜಸ್ಸು ಮುಖದಲ್ಲೇ ಹೊಳೆಯುವ ಇವರು ಕೋಪಗೊಂಡರೆ ಉಗ್ರ ಸ್ವಭಾವದವರಾಗುತ್ತಾರೆ. ಸೂರ್ಯ ದೇವ ಅಧಿಪತಿಯಾಗಿರುವ ಸಿಂಹ ರಾಶಿಯವರದ್ದು ಧೈರ್ಯದಲ್ಲಿ ಮುನ್ನುಗ್ಗುವ ಪ್ರವೃತ್ತಿ. ಅಗ್ನಿ ತತ್ವದ ರಾಶಿಯಾಗಿರುವ ಇವರಿಗೆ ಕಿತ್ತಳೆ, ಹಳದಿ ಹಾಗೂ ಕೆಂಪು ಬಣ್ಣಗಳು ಹೊಂದಿಕೆಯಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿ

ಸಾಮಾನ್ಯವಾಗಿ ಸಿಂಹ ರಾಶಿಯವರು ಆಡಂಬರ ಹಾಗೂ ಲಗ್ಷುರಿ ಜೀವನ ಶೈಲಿಯನ್ನು ಇಷ್ಟಪಡುತ್ತಾರೆ. ಹಾಗಾಗಿ ಧೈರ್ಯವಂತ ಇವರಿಗೆ ಕಿತ್ತಳೆ ಬಣ್ಣದ ಲಂಬೋರ್ಗಿನಿ ಅವೆಂಟಡೊರ್ ಅಥವಾ ಫಿಯೆಟ್ ಅವೆಂಚ್ಯುರಾ ಹೆಚ್ಚು ಹೊಂದಿಕೆಯಾಗಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿ

ನಕ್ಷತ್ರಗಳು: ಉತ್ತರಾಷಾಢ 2, 3, 4, ಹಸ್ತಾ, ಚಿತ್ತಾ 1, 2ನೇ ಪಾದ

ಬುಧ ಅಧಿಪತಿಯಾಗಿರುವ ಎರಡನೇ ರಾಶಿ ಕನ್ಯಾ ರಾಶಿಯಾಗಿದ್ದು, ವ್ಯವಸ್ಥಿತ ಜೀವನವನ್ನು ಇಷ್ಟಪಡುತ್ತಾರೆ. ಪಾಲನೆ ಪೋಷಣೆ, ತಾಂತ್ರಿಕ, ಶಿಲ್ಪಕಲೆಗಳಲ್ಲಿ ಜಾಸ್ತಿ ಸಾಮರ್ಥ್ಯವನ್ನು ಹೊಂದಿರುವ ಕನ್ಯಾ ರಾಶಿಯವರಿಗೆ ತೆಳ್ಳಗಿನ ನೀಲಿ ಅಥವಾ ಹಸಿರು ಬಣ್ಣಗಳು ಹೆಚ್ಚು ಹೊಂದಿಕೆಯಾಗುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿ

ಪ್ರತಿಯೊಂದು ಜೀವಿಗೂ ಅದರಲ್ಲೂ ಕನ್ಯಾ ರಾಶಿಯವರಿಗೆ ಹಸಿರು ಬಣ್ಣ ಬೇಗನೇ ಆಕರ್ಷಿತವಾಗುತ್ತದೆ. ಬದುಕಿನಲ್ಲಿ ಹೆಚ್ಚು ಭರವಸೆ ಇಟ್ಟುಕೊಂಡಿರುವ ಇವರಿಗೆ ವೋಲ್ವೋ ವಿ40 ಅಥವಾ ಫೋಕ್ಸ್ ವ್ಯಾಗನ್ ಜೆಟ್ಟಾ ಕಾರುಗಳು ಹೆಚ್ಚು ಸೂಕ್ತವಾಗಲಿದೆ.

ತುಲಾ ರಾಶಿ

ತುಲಾ ರಾಶಿ

ನಕ್ಷತ್ರಗಳು: ಚಿತ್ತಾ 3, 4, ಸ್ವಾತಿ, ವಿಶಾಖ 1, 2, 3ನೇ ಪಾದ

ಸಾಮರಸ್ಯದ ಸಂಕೇತವಾಗಿರುವ ತುಲಾ ರಾಶಿಯ ಅಧಿಪತಿ ಶುಕ್ರ. ಅತ್ಯುತ್ತು ಜ್ಞಾಪಕ ಶಕ್ತಿ, ವಿದ್ಯಾವಂತರು, ಗುಣವಂತರು ಆಗಿರುವ ಇವರು ನಂಬಿಕೆಯ ಮೇಲೆ ಪ್ರೀತಿ, ವಿಶ್ವಾಸ ವ್ಯಕ್ತಪಡಿಸುತ್ತಾರೆ. ನೀಲಕಾಯದವರೂ ಆಗಿರುವ ಇವರಿಗೆ ನೀಲಿ ಬಣ್ಣ ಹೆಚ್ಚು ಸೂಕ್ತವೆನಿಸುತ್ತದೆ.

ತುಲಾ ರಾಶಿ

ತುಲಾ ರಾಶಿ

ಸಮಾಜ ಹಿತ, ಶಾತಿ ಪ್ರಿಯರು, ಜಾಣರೂ, ಹಿತಕರ ಸ್ವಭಾವ ಹೊಂದಿರುವ ಇವರು ಬಿಎಂಡಬ್ಲ್ಯು 3 ಸಿರೀಸ್, ಮಹೀಂದ್ರ ಸ್ಕಾರ್ಪಿಯೊಗಳಂತಹ ಕಾರುಗಳನ್ನು ಇಟ್ಟುಕೊಳ್ಳುವುದು ಹೆಚ್ಚು ಸೂಕ್ತ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ನಕ್ಷತ್ರಗಳು: ವಿಶಾಖ 4, ಅನೂರಾಧ, ಜೇಷ್ಠ

ಪ್ರಬಲ ಚಿಂತನಾ ಶಕ್ತಿಯ ಚೇಳು ಸಂಕೇತವನ್ನು ಹೊಂದಿರುವ ವೃಶ್ಚಿಕ ರಾಶಿಯ ಅಧಿಪತಿ ಅಂಗಾರಕ ಅಥವಾ ಮಂಗಳ. ಚುರುಕು ಬುದ್ಧಿ, ಸ್ವಾವಲಂಬಿತನ, ಹಠ ಸ್ವಭಾವಧಾರಿಯಾದ ವೃಶ್ಚಿಕ ರಾಶಿಯವವರು ಮನಸಾಕ್ಷಿಗೆ ವಿರುದ್ಧವಾಗಿ ಎಂದು ನಡೆದವರಲ್ಲ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಕಡು ಕೆಂಪು, ಕಿತ್ತಳೆ ಹಾಗೂ ಕಪ್ಪು ಬಣ್ಣವು ವೃಶ್ಚಿಕ ರಾಶಿಯವರಿಗೆ ಹೆಚ್ಚು ಸೂಕ್ತವೆನಿಸುವುದು. ಇಂತವರು ಫಿಯೆಟ್ ಲಿನಿಯಾ ಅಥವಾ ಮಸೆರಟಿ ಕಾರುಗಳನ್ನು ಇಟ್ಟುಕೊಳ್ಳುವುದು ಸೂಕ್ತ.

ಧನು ರಾಶಿ

ಧನು ರಾಶಿ

ನಕ್ಷತ್ರಗಳು: ಮೂಲಾ, ಪೂರ್ವಾಷಾಢ, ಉತ್ತರಾಷಾಢ 1ನೇ ಪಾದ

ಪ್ರಯಾಣ, ಸಾಹಸದಲ್ಲಿ ಆಸಕ್ತಿ ಹೊಂದಿರುವ ಧನು ರಾಶಿಯವರು ಲಕ್ಷಣಯುಕ್ತ ಶರೀರ, ಸುಂದರ ದೇಹಕಾಯವನ್ನು ಹೊಂದಿರುತ್ತಾರೆ. ಧನು ರಾಶಿಗೆ ಗುರು ಅಧಿಪತಿಯಾಗಿದ್ದು, ಹಳದಿ ಬಣ್ಣ ಸೂಕ್ತವೆನಿಸುತ್ತದೆ. ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರೂ ಇವರಾಗಿರುತ್ತಾರೆ.

ಧನು ರಾಶಿ

ಧನು ರಾಶಿ

ವಿಧಿಯ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಹೊಂದಿರುವ ಇವರು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಅಲ್ಲದೆ ಸತ್ಯ ನುಡಿಯುವುದು, ಆಧಾತ್ಮ ಪ್ರವೃತ್ತಿಯಲ್ಲಿ ನಂಬಿಕೆಯುಳ್ಳವರಾಗಿದ್ದು, ಫೆರಾರಿ 458 ಇಟಲಿಯಾ, ಸ್ಕೋಡಾ ಒಕ್ಟಾವಿಯಾ ಆರ್ ಎಸ್ ಕಾರು ಹೆಚ್ಚು ಹೊಂದಿಕೆಯಾಗಲಿದೆ.

ಮಕರ ರಾಶಿ

ಮಕರ ರಾಶಿ

ನಕ್ಷತ್ರಗಳು: ಉತ್ತರಾಷಾಢ 2, 3, 4, ಶ್ರವಣ, ಧನಿಷ್ಠ 1, 2ನೇ ಪಾದ

ಶನಿ ಅಧಿಪತಿಯಾಗಿರುವ ಮಕರ ರಾಶಿ ಸತ್ವ ಪರೀಕ್ಷೆ ಹಾಗೂ ಸನ್ನಿವೇಶಗಳಿಂದ ಪ್ರೇರಿತನಾಗಿರುತ್ತಾನೆ. ಹಾಗಾಗಿ ದೀರ್ಘ ಬಾಳ್ವಿಕೆಯ ಬಣ್ಣದ ಬಳಕೆ ಬೇಡ. ಬದಲಾಗಿ ಕಾಲ ಕಾಲಕ್ಕೆ ಬಣ್ಣಗಳ ಬದಲಿಕೆ ಅಗತ್ಯ. ಮಕರ ರಾಶಿಯವರಿಗೆ ಕಪ್ಪು ಬಣ್ಣ ಹೆಚ್ಚು ಸೂಕ್ತವೆನಿಸಲಿದೆ.

ಮಕರ ರಾಶಿ

ಮಕರ ರಾಶಿ

ಶನಿ ದೇವರಿಗೆ ಕಪ್ಪು ಬಣ್ಣ ಬಲು ಪ್ರಿಯ. ಹಾಗಾಗಿ ಬಿಳಿ ಬಣ್ಣವನ್ನು ಉಪಯೋಗಿಸಬಾರದು. ಏಕೆಂದರೆ ಶನಿಗೆ ಚಂದ್ರ ಶತ್ರು. ಮಕರ ರಾಶಿಯವರಿಗೆ ಆಡಿ ಎ8 ಅಥವಾ ನಿಸ್ಸಾನ್ ಸನ್ನಿ ಕಾರುಗಳು ಹೊಂದಿಕೆಯಾಗಲಿದೆ.

ಕುಂಭ ರಾಶಿ

ಕುಂಭ ರಾಶಿ

ನಕ್ಷತ್ರಗಳು: ಧನಿಷ್ಠ 3, 4, ಶತಭಿಷ, ಪೂರ್ವಾಭಾದ್ರ 1, 2, 3ನೇ ಪಾದ

ಶನಿ ಅಧಿಪತಿಯಾಗಿರುವ ಕುಂಭ ರಾಶಿಯವರು ಸಹ ತಮ್ಮದೇ ಹಾದಿಯಲ್ಲಿ ಜೀವನ ನಡೆಸಲು ಬಯಸುತ್ತಾರೆ. ನೇರಳೆ, ತಿಳಿ ನೀಲಿ ಬಣ್ಣ ಇವರಿಗೆ ಹೆಚ್ಚು ಸೂಕ್ತವಾಗುವುದು. ಆದರೆ ಅನಗತ್ಯ ಅಲೆದಾಟದಿಂದ ದೇಹಾಯಾಸ, ಸಂಪತ್ತು ನಷ್ಟ ಹಾಗೂ ಮಾನಸಿಕ ನೆಮ್ಮದ್ದಿ ಕಳಕೊಳ್ಳುವ ಭೀತಿಯಿರುತ್ತದೆ.

ಕುಂಭ ರಾಶಿ

ಕುಂಭ ರಾಶಿ

ಎಲೆಕ್ಟ್ರಾನಿಕ್ ಗಳ ಮೇಲೂ ಆಸಕ್ತಿ ಹೊಂದಿರುವ ಕುಂಭ ರಾಶಿಯವರಿಗೆ ರೇಂಜ್ ರೋವರ್ ಇವೋಕ್ ಹಾಗೂ ಟಾಟಾ ಕ್ಸೆನಾನ್ ಗಳಂತಹ ಕಾರುಗಳು ಹೆಚ್ಚು ಹೊಂದಿಕೆಯಾಗಲಿದೆ. ಸಜ್ಜನ ಸಹವಾಸ, ಬಂಧುಮಿತ್ರರಿಂದ ಸಕಾಲ ಸಹಾಯ ದೊರಕಲಿದೆ.

ಮೀನ ರಾಶಿ

ಮೀನ ರಾಶಿ

ನಕ್ಷತ್ರಗಳು: ಪೂರ್ವಾಭಾದ್ರ 4, ಉತ್ತರಾ ಭಾದ್ರ, ರೇವತಿ

ಗುರು ಅಧಿಪತಿಯಾಗಿರುವ ಮೀನಾ ರಾಶಿಯವರು ಹೆತ್ತವರು, ಗುರು ಹಿರಿಯರಲ್ಲಿ ಅತ್ಯಂತ ಭಕ್ತಿಯುಳ್ಳವರಾಗಿರುವರು. ಸಮುದ್ರ ನೀಲಿ, ತೀಲಿ ಹಳದಿ, ಹಸಿರು ಹಾಗೂ ಬಿಳಿ ಬಣ್ಣಗಳು ಮೀನ ರಾಶಿಗೆ ಹೆಚ್ಚು ಹೊಂದಿಕೆಯಾಗುವುದು.

ಮೀನ ರಾಶಿ

ಮೀನ ರಾಶಿ

ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವ ಮೀನ ರಾಶಿಯವರಿಗೆ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಮತ್ತು ಟೊಯೊಟಾ ಆಲ್ಟೀಸ್ ಕಾರುಗಳು ಹೆಚ್ಚು ಹೊಂದಿಕೆಯಾಗಲಿದೆ. ಅಲ್ಲದೆ ವೃತ್ತಿರಂಗದಲ್ಲಿ ಯಶಸ್ಸು, ಹಣದ ಹರಿವು ಕಂಡುಬರಲಿದೆ.

ನಿಮ್ಮ ಜನ್ಮ ರಾಶಿಗೆ ತಕ್ಕ ಕಾರು ಯಾವುದು?

ಪ್ರತಿ ಬಾರಿಯೂ ಜ್ಯೋತಿಷ್ಯ ಶಾಸ್ತ್ರ ನಿಜವಾಗಬೇಕೆಂದಿಲ್ಲ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ನಿಮ್ಮ ಬಹುಮೂಲ್ಯ ಅನಿಸಿಕೆಗಳನ್ನು ನಮ್ಮ ಜೊತೆಗೂ ಹಂಚಿಕೊಳ್ಳಲು ಮರೆಯದಿರಿ.

Read more on ಕಾರು cars
English summary
Read in Kannada about the perfect car for your zodiac sign. Know more about zodiac sigh that suits to your name and more

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more