ಈ ಟಾಟಾ ನ್ಯಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಪ್ರಪಂಚದ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವ ಕಾರುಗಳಲ್ಲಿ ಟಾಟಾ ಸಂಸ್ಥೆಯ ನ್ಯಾನೊ ಕೂಡಾ ಒಂದು. ಬಿಡುಗಡೆಗೊಂಡ ಪ್ರಾರಂಭದಲ್ಲಿ ಕೇವಲ ರೂ. 1ಲಕ್ಷಕ್ಕೆ ಈ ಕಾರು ಖರೀದಿಗೆ ಲಭ್ಯವಿತ್ತು. ಆದರೆ ನಂತರ ಈ ಕಾರಿನ ವಿನ್ಯಾಸದಲ್ಲಿ ಬಹುದೊಡ್ದ ಐಷಾರಾಮಿ ಬದಲಾವಣೆಗಳನ್ನು ಪಡೆದು ರೂ.22 ಕೋಟಿಗೆ ಬೆಲೆಬಾಳುವ ಹಾಗೆ ನಿರ್ಮಾಣ ಮಾಡಲಾಗಿದೆ.

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಹೌದು, 2011ರಲ್ಲಿ ನ್ಯಾನೊ ಗೋಲ್ಡ್ ಪ್ಲಸ್ ಕಾರು ರೋಲ್ಸ್ ರಾಯ್ಸ್ ಕಾರುಗಳನ್ನು ಹಿಂದಿಕ್ಕುವ ಕಾಗೆ ಸಂಪೂರ್ಣವಾಗಿ ಐಷಾರಾಮಿ ವಿನ್ಯಾಸದಿಂದ ತಯಾರು ಮಾಡಲಾಗಿತ್ತು. ಆದರೆ ಈ ವಿಶೇಷ ಕಾರಿನಲ್ಲಿ ಅಂತಹ ಐಷಾರಾಮಿ ಫೀಚರ್ಸ್ ಏನಿದೆ ಎಂಬುವುದು ನಿಮ್ಮ ಪ್ರಶ್ನೆಯಾಗಿರಬಹುದು. ಅದಕ್ಕೆ ಉತ್ತರವೆಂದರೆ ನ್ಯಾನೊ ಗೋಲ್ಡ್ ಪ್ಲಸ್ ಕಾರನ್ನು ಉತ್ಪಾದಿಸುವ ಸಮಯದಲ್ಲಿ 80 ಕೆಜಿ 22 ಕ್ಯಾರೆಟ್ ಚಿನ್ನವನ್ನು ಮತ್ತು 15 ಕೆಜಿ ಬೆಳ್ಳಿಯನ್ನು ಬಳಸಲಾಗಿತ್ತು.

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಇಷ್ಟೆ ಅಲ್ಲದೆ ಈ ಕಾರಿನಲ್ಲಿ ಬೆಲೆಬಾಳುವ ಹರಳುಗಳನ್ನು ಸಹ ಬಳಸಲಾಗಿದ್ದು, ಟಾಟಾ ಗ್ರೂಪ್‍ನ ಟೈಟಾನ್ ಇಂಡಸ್ಟ್ರಿ ಮತ್ತು ಗೋಲ್ಡ್ ಪ್ಲಸ್ ಜ್ವೆಲರಿ ಕಂಪೆನಿಯ ಭಾಗಸ್ವಾಮ್ಯದಲ್ಲಿ ಈ ಕಾರನ್ನು ನಿರ್ಮಾಣ ಮಾಡಲಾಗಿತ್ತು. ಕೇವಲ ನಾನ್ಯೊ ಮಾತ್ರವಲ್ಲ ಇಂತಹ ಅತ್ಯಂತ ಬೆಲೆಬಾಳುವ ಹಲವು ಕಾರುಗಳು ಕೂಡಾ ಇದೆ. ಅವುಗಳ ಬಗ್ಗೆ ತಿಳಿಯಲು ಮುಂದಕ್ಕೆ ಓದಿರಿ...

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಮೆಕ್‍‍ಲಾರೆನ್ ಎಫ್1

90ರ ದಶಕದಲ್ಲಿ ಮೆಕ್‍‍ಲಾರೆನ್ ಎಫ್1 ಕಾರು ಗಂಟೆಗೆ 384 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದ್ದು, ಈ ಕಾರು ಜಗತ್ತಿನಲ್ಲಿ ದೊರೆಯುವ ಅತ್ಯಂತ ವೇಗದ ಕಾರುಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿತ್ತು. ಈ ಕಾರು 6.1 ಲೀಟರ್ ಬಿಎಂಡಬ್ಲ್ಯೂ ವಿ12 ಎಂಜಿನ್ ಸಹಾಯದಿಂದ 618ಬಿಹೆಚ್‍ಪಿ ಹಾರ್ಸ್ ಪವರ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಈಗಲೂ ಕೂಡಾ ಈ ಕಾರಿಗೆ ಮಾರುಕಟ್ಟೆಯಲ್ಲಿ ಕ್ರೇಜ್ ಇದ್ದು, ಗೋರ್ಡಾನ್ ಮುರ್ರೆ ಎಂಬಾತ ಕಾರಿನ ತೂಕವನ್ನು ಕಡಿಮೆ ಮಾಡಲಿ ಎಂಜಿನ್ ಬೇನ ಮೇಲ್ಭಾಗವನ್ನು ಸಂಪೂರ್ಣವಾಗಿ 24 ಕ್ಯಾರೆಟ್ ಗೋಲ್ಡ್ ಇಂದ ಕವರ್ ಮಾಡಿದ್ದಾನೆ. ಏಕೆಂದರೆ ಅತ್ಯಧಿಕ ಶಾಖ ನಿರೋಧಕ ಲೋಹವು ಉತ್ತಮ ಚಿನ್ನ ಎಂಬ ಕಾರಣ.

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಲೈಕೆನ್ ಹೈಪರ್‍‍‍ಸ್ಪಾಟ್

ಲೈಕೆನ್ ಹೈಪರ್‍‍‍ಸ್ಪಾಟ್ ಕಾರು ಲಭ್ಯವಿರುವ ಅತ್ಯಂತ ವಿಲಕ್ಷಣ ಕಾರುಗಳಲ್ಲಿ ಒಂದಾಗಿದ್ದು, ಈ ಕಾರು ಆರ್‍‍ಯುಎಫ್ ಆಧಾರಿತ 3.7 ಲೀಟರ್ ಟ್ವಿನ್ ಟರ್ಬೋ ಎಂಜಿನ್ ಸಹಾಯದಿಂಡ 780ಬಿಹೆಚ್‍ಪಿ ಹಾರ್ಸ್‍‍ಪವರ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಈ ಕಾರಿನ ವಿಶೇಷವೆಂದರೆ ಈ ಕಾರನ್ನು ದುಬಾಯ್ ಪೋಲೀಸ್ ಫೋರ್ಸ್‍‍ರವರು ಕೂಡಾ ಬಳಸುತ್ತಿದ್ದು, ಈ ಕಾರು ಬಂಗಾರದ ಆಯ್ಕೆಯಲ್ಲಿ ಕೂಡಾ ಖರೀದಿಸಬಹುದಂತೆ. ಆದುದರಿಂದ ಕ್ಲೈಂಟ್‍ನ (ಗ್ರಾಹಕನ) ಕೋರಿಕೆಯ ಮೆರೆಗೆ, ಉನ್ನತ್ತ ಮಟ್ಟದ ಚಿನ್ನದ ದಾರದಿಂದ ಸೀಟ್‍ನ ಭಾಗಗಳಲ್ಲಿ ಹೊಲಿಗೆಯನ್ನು ನೀಡಲಾಗಿದೆ. ಮತ್ತು ಹೆಡ್‍ಲೈಟ್‍ಗಳಲ್ಲಿನ ಭಾಗಗಳನ್ನು ಡೈಮಂಡ್‍‍ನಿಂದ ಸುತ್ತುವರಿಸಲಾಗಿದೆ.

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಕೊನಿಗ್‍ಸೆಂಗ್ ಅಗೆರಾ ಎಸ್ ಹಂಡ್ರಾ

ಕಾರ್ಬನ್ ಫೈಬರ್‍‍ನಿಂದ ಉತ್ಪಾದಿಸಲ್ಪಟ್ಟ ಕ್ರೀಡಾ ಕಾರುಗಳಲ್ಲಿ ಎರಡು ದಶಕಗಳಲ್ಲಿ ಕೊನಿಗ್‍ಸೆಂಗ್ ಕಾರನ್ನು ಹಿಂದಿಕ್ಕಲು ಯಾವ ಸಂಸ್ಥೆಯ ಕಾರಿನಿಂದಲೂ ಸಾಧ್ಯವಾಗಲಿಲ್ಲ. ಸ್ವೀಡಿಶ್ ತಯಾರಕ ಕೊನಿಗ್‍ಸೆಂಗ್ ವಿಶೇಷ ಕಾರುಗಳನ್ನು ತಯಾರಿಸುವಲ್ಲಿ ವಿಶೇಷವಾದ ಆಸಕ್ತಿ ಹೊಂದಿದ್ದು, ಅಗೆರಾ ಎಸ್‍ನ 100 ನೆಯ ಆವೃತ್ತಿಯು ಬೇರೆ ರೀತಿಯಲ್ಲಿ ಪ್ರಸ್ತುತಪಡಿಸಬೇಕೆಂದು ಕಂಪೆನಿಗೆ ಕುತೂಹಲ ತೋರಿತು.

MOST READ: ಹೆಸರಾಂತ ಐಷಾರಾಮಿ ಕಾರುಗಳ ಚೀನಾ ಮಾದರಿಗಳು ಹೇಗಿವೆ ನೋಡಿ..!!

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ನಿರೀಕ್ಷೆಯಂತೆ, ನೂರನೆಯ ಆವೃತ್ತಿಯನ್ನು ಅಗೆರಾ ಎಸ್ ಹಂಡ್ರಾ ಎಂದು ಹೆಸರಿಟ್ಟ ಕೊನಿಗ್‍ಸೆಂಗ್ ವರ್ಣತಹಿತ ಕಾರ್ಬನ್ ಫೈಬರ್ ಫಿನಿಶ್ ಹೊಂದಿದ್ದು, 24 ಕ್ಯಾರೆಟ್ ಚಿನ್ನ ಕೂಡ ಮಾದರಿಗೆ ಹೋಲಿಕೆಗಳನ್ನು ನೀಡಲಾಗಿದೆ. ಕೊನಿಗ್‍ಸೆಂಗ್ ಅಗೆರಾ ಎಸ್ ಹಂಡ್ರಾ ಕಾರು ಪ್ರಸ್ಥುತವಾಗಿ ಹಾಂಗ್ ಕಾಂಗ್‍‍ನಲ್ಲಿದೆ.

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಕಾರ್ಲ್‍ಸ್ಸೊನ್ ಸಿಎಸ್650 ವರ್ಸೈಲ್ಸ್

ಕಾರ್ಲ್‍ಸ್ಸೊನ್ ಮರ್ಸಿಡೀಸ್ ಪ್ಲಾಟ್‍‍‍ಫಾರ್ಮ್‍‍ಗಳಿಂದ ಕೆಲವು ಹೆಚ್ಚು ಯಂತ್ರಗಳನ್ನು ನಿರ್ಮಿಸಲು ಹೆಸರುವಾಸಿಯಾಗಿದೆ, ಆದರೆ ಸಿಎಸ್650 ಕಾರು ವಿಶೇಷವಾಗಿ ತನ್ನ ವಿನ್ಯಾಸದ ಕಾರ್ಯದ ಫಲವಾಗಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಚೀನಾ ಮತ್ತು ಪಶ್ಚಿಮ ಏಶಿಯಾವನ್ನು ಸೇರಿದಂತೆ 25 ಕಾರುಗಳು ಮಾರಾಟಗೊಂಡಿದೆ.

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಕಾರ್ಲ್‍ಸ್ಸೊನ್ ಸಿಎಸ್650 ವರ್ಸೈಲ್ಸ್ ಕಾರಿನ ಕ್ಯಾಬಿನ್ ಒಳಭಾಗದಲ್ಲಿರುವ ಡ್ಯಾಶ್‍‍ಬೋರ್ಡ್, ಸೆಂಟರ್ ಕಂಸೋಲ್, ಏರ್ ವೆಂಟ್ಸ್ ಮತ್ತು ಸ್ಟೀರಿಂಗ್ ವ್ಹೀಲ್ ಅನ್ನು ಬಂಗಾರದಿಂದ ಸಜ್ಜುಗೊಳಿಸಲಾಗಿದ್ದು, ಈ ಕಾರು ರೂ. 3.47 ಕೋಟಿಯ ಬೆಲೆಯನ್ನು ಪಡೆದುಕೊಂಡಿದೆ.

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಜೊಂಡಾ ಹೆಚ್​ಪಿ ಬರ್ಚೆಟ್ಟಾ ಪ್ರಿಮಿಯಂ ಹೈಪರ್ ಕಾರು

ಇತ್ತೀಚೆಗೆ ದುಬಾರಿ ಬೆಲೆಯ ಹೈಪರ್ ಕಾರುಗಳನ್ನು ನಿರ್ಮಾಣ ಮಾಡುವುದು ಮತ್ತು ಖರೀದಿ ಮಾಡುವುದು ಅಂದ್ರೆ ಕೆಲವರಿಗೆ ಕ್ರೇಜ್ ಆಗಿದೆ ಹೋಗಿದೆ. ಯಾಕಂದ್ರೆ ಪ್ರದರ್ಶನಕ್ಕಿಡಲಾಗಿರುವ ಇಲ್ಲೊಂದು ಹೈಪರ್ ಕಾರು ಕೂಡಾ ಹತ್ತಲ್ಲ, ಹದಿನೈದು ಬರೋಬ್ಬರಿ 122 ಕೋಟಿ ಬೆಲೆ ಹೊಂದಿದ್ದು, ಈ ಕಾರಿನಲ್ಲಿರುವ ವಿಶೇಷತೆಗಳು ಸೂಪರ್ ಕಾರು ಪ್ರಿಯರನ್ನೇ ಬೆಚ್ಚಬೀಳಿಸುವಂತಿವೆ.

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

ಹೌದು, ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಇಟಾಲಿಯನ್ ಕ್ರಿಡಾ ಕಾರು ತಯಾರಿಕಾ ಸಂಸ್ಥೆಯಾದ ಪಗಾನಿ ತನ್ನ ವಿನೂತನ ಜೊಂಡಾ ಹೆಚ್​ಪಿ ಬರ್ಚೆಟ್ಟಾ ಪ್ರಿಮಿಯಂ ಹೈಪರ್ ಕಾರು ಮಾದರಿಯನ್ನು ಪ್ರದರ್ಶನ ಮಾಡಿದ್ದು, ಬರೋಬ್ಬರಿ 122 ಕೋಟಿ ಬೆಲೆ ಪಡೆದುಕೊಳ್ಳುವ ಮೂಲಕ ಜಗತ್ತಿನ ಅತಿ ದುಬಾರಿ ಕಾರ್ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

MOST READ: ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಈ ಟಾಟಾ ನಾನೊ ಕಾರು ರೋಲ್ಸ್ ರಾಯ್ಸ್ ಕಾರಿಗಿಂತಾ ಬಲು ದುಬಾರಿಯಂತೆ..!

2018ರ ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್ ಪ್ರದರ್ಶನದಲ್ಲಿ ಪಗಾನಿ ಜೊಂಡಾ ಹೆಚ್​ಪಿ ಬರ್ಚೆಟ್ಟಾ ಪ್ರದರ್ಶನ ಮಾಡಲಾಗಿದ್ದು, ಈ ಹೈಪರ್ ಕಾರು ಮಾದರಿಯು ಲಿಮಿಟೆಡ್ ಎಡಿಷನ್ ಹಿನ್ನೆಲೆಯಲ್ಲಿ ಕೇವಲ 3 ಕಾರುಗಳನ್ನು ಮಾತ್ರವೇ ಪಗಾನಿ ಸಂಸ್ಥೆಯು ಅಭಿವೃದ್ಧಿ ಮಾಡಿದೆಯೆಂತೆ.

Most Read Articles

Kannada
English summary
Cars Made With Gold. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X