Just In
- 24 min ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 14 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 14 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 15 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
Don't Miss!
- News
ಸ್ವಾತಂತ್ರ್ಯ ದಿನಾಚರಣೆ: ಜನ ಸೇರದಂತೆ ತಡೆಯಲು ಕೇಂದ್ರ ರಾಜ್ಯಗಳಿಗೆ ಸೂಚನೆ
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಬೆಂಗಳೂರಿನ ಈ ಜಾಗದಲ್ಲಿ 5 ನಿಮಿಷ ಅಲ್ಲ, 30 ಸೆಕೆಂಡ್ ಸಹ ಪಾರ್ಕ್ ಮಾಡುವಂತಿಲ್ಲ!
ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದೆ. ಪ್ರತಿದಿನವೂ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಂಗಳೂರಿಗೆ ವಲಸೆ ಬರುತ್ತಿರುತ್ತಾರೆ. ಹೀಗಾಗಿ ವಾಹನಗಳ ಸಂಖ್ಯೆ ಕೂಡಾ ಹೆಚ್ಚಳವಾಗುತ್ತಿದ್ದು, ಜನದಟ್ಟಣೆಯೊಂದಿಗೆ ಪಾರ್ಕಿಂಗ್ ಸಮಸ್ಯೆಯೂ ಸಹ ಬಿಗಡಾಯಿಸುತ್ತಿದೆ.

ಹೊಸ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ಪಾರ್ಕಿಂಗ್ ಸಮಸ್ಯೆ ಕೂಡಾ ಹೆಚ್ಚಳವಾಗುತ್ತಿದ್ದು, ಸಂಚಾರಿ ನಿಯಮ ಪಾಲನೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಿದ್ದರೂ ರೂಲ್ಸ್ ಪಾಲಿಸದ ವಾಹನ ಸವಾರರು ಕೆಲವೊಮ್ಮೆ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಇತರರಿಗೂ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದ್ದಾರೆ.

ಪ್ರಮುಖ ರಸ್ತೆಗಳಿಂತಲೂ ಮನೆಯ ಮುಂದೆ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಎಲ್ಲರಿಗಿಂತಲೂ ಹೆಚ್ಚು ಸಮಸ್ಯೆಗೆ ಒಳಗಾಗುವುದು ಬೆಂಗಳೂರಿನ ಮನೆ ಮಾಲೀಕರು ಎಂದರೆ ತಪ್ಪಾಗುವುದಿಲ್ಲ. ಪಾರ್ಕಿಂಗ್ ಸಮಸ್ಯೆಯಿಂದ ಕೆಲವು ವಾಹನ ಮಾಲೀಕರು ಸಾಕಷ್ಟು ಸಲ ಮನೆ ಗೇಟ್‌ನ ಮುಂಭಾಗವೇ ವಾಹನಗಳನ್ನು ಪಾರ್ಕ್ ಮಾಡಿ ಹೋಗುವುದರಿಂದ ಗೇಟ್ ಓಪನ್ ಮಾಡಲು ಸಾಧ್ಯವಾಗದೇ ಇಕ್ಕಟ್ಟಿನಲ್ಲಿ ಸಿಕ್ಕಿಬೀಳುವುದು ಸಾಮಾನ್ಯವಾಗಿರುತ್ತದೆ.

ಮನೆ ಮುಂದೆ ಅಪರಿಚಿತರ ವಾಹನ ಪಾರ್ಕ್ ಮಾಡುವುದರಿಂದ ಬೇಸತ್ತಿರುವ ಬೆಂಗಳೂರಿನ ಮನೆಯ ಮಾಲೀಕರೊಬ್ಬರು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡುವ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಲು ಹೊಸ ಉಪಾಯ ಮಾಡಿದ್ದು, ಪಾರ್ಕಿಂಗ್ ಸಮಸ್ಯೆಯಿಂದ ಮುಕ್ತಿಗಾಗಿ ಕಾಂಪೌಂಡ್‌ಗೆ ನೇತು ಹಾಕಿರುವ ವಿಶೇಷ ರೀತಿಯ ನೋ ಪಾರ್ಕಿಂಗ್ ಬೋರ್ಡ್ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ನೀವು ಹಲವೆಡೆ ಮನೆಯ ಮುಂಭಾಗದಲ್ಲಿ ಅಥವಾ ಕಂಪೌಂಡ್‌ಗಳಲ್ಲಿ ಇಲ್ಲವೇ ಗೇಟ್‌ಗಳಲ್ಲಿ ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ನೋಡಿರಬಹುದು. ಬಹುತೇಕ ಎಲ್ಲಾ ನೋ ಪಾರ್ಕಿಂಗ್ ಬೋರ್ಡ್‌ಗಳೂ ಸಹ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಇದ್ದರೂ ಅವುಗಳೆಲ್ಲವೂ ಒಂದೇ ರೀತಿಯದ್ದಾಗಿರುತ್ತದೆ.

ಆದರೆ ಪಾರ್ಕಿಂಗ್ ಸಮಸ್ಯೆ ತಪ್ಪಿಸಲು ಆದಿತ್ಯ ಮೋರಾರ್ಕ್ ಎಂಬ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ನೋ ಪಾರ್ಕಿಂಗ್ ಬೋರ್ಡ್ ಇದೀಗ ವೈರಲ್ ಆಗಿದ್ದು, ಮನೆ ಮಾಲೀಕರಿಗೆ ವಾಹನ ಸವಾರರ ಮೇಲೆ ಕನಿಕರವೇ ಇಲ್ಲ ಎಂಬ ಹಾಸ್ಯಾಸ್ಪದ ತಲೆಬರಹದೊಂದಿಗೆ ವೈರಲ್ ಆಗುತ್ತಿದೆ.

ಫೋಟೋದಲ್ಲಿ ಎಚ್ಚರಿಕೆಯ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, 'ನೀವಿಲ್ಲಿ ಪಾರ್ಕ್ ಮಾಡುವುದರ ಬಗ್ಗೆ ಯೋಚನೇಯೇ ಮಾಡಬೇಡಿ' ಎನ್ನುವ ಬೋರ್ಡ್ ತೂಗುಹಾಕಲಾಗಿದ್ದು, ಮತ್ತೊಂದು ಬೋರ್ಡ್‌ನಲ್ಲಿ "ಕೇವಲ ಐದು ನಿಮಿಷಕ್ಕಲ್ಲ, 30 ಸೆಕೆಂಡ್‌ಗೂ ಸಹ ಇಲ್ಲಿ ಪಾರ್ಕ್ ಮಾಡುವ ಬಗ್ಗೆ ಯೋಚನೆಯೂ ಮಾಡಬೇಡಿ' ಎಂದು ಬರೆಯಲಾಗಿದೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇದರ ಕುರಿತಾಗಿ ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಆದಿತ್ಯ ಮೋರಾರ್ಕ್ ಪೋಸ್ಟ್ ಮಾಡಿರುವ ಈ ಪೋಸ್ಟ್‌ಗೆ ನೂರಾರು ಸಾವಿರಾರು ಜನ ಲೈಕ್ ಮಾಡಿದ್ದಾರೆ. ಹಲವಾರು ಮಂದಿ ಇದನ್ನು ರೀಟ್ವೀಟ್ ಮಾಡಿದ್ದಾರೆ.

ಕೆಲವರು ಈ ಬೋರ್ಡ್ ಹಾಕಿರುವ ಮನೆ ಮಾಲೀಕನ ನಿರ್ಧಾರವನ್ನು ಸಮರ್ಥಿಸಿದರೆ ಇನ್ನು ಕೆಲವರು ಇದನ್ನು ವಿರೋಧಿಸಿದ್ದಾರೆ. ಎಲ್ಲೂ ಪಾರ್ಕ್ ಮಾಡಲು ಸ್ಥಳವಿಲ್ಲದೇ ಇರುವಾಗ ಮನೆ ಮುಂದೆ ತುಸು ಪಾರ್ಕ್ ಮಾಡುವುದು ಅಷ್ಟು ದೊಡ್ಡ ಅಪರಾಧವೇನಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ.

ಎಚ್ಚರಿಕೆಯ ಬೋರ್ಡ್ ಕುರಿತಾಗಿ ಇನ್ನು ಕೆಲವರು ಮನೆಯ ಮುಂದೆ ಅಥವಾ ಗೇಟ್‌ನಲ್ಲಿ ಪಾರ್ಕ್ ಮಾಡುವುದರಿಂದ ನಾವು ಎದುರಿಸುವ ಸಮಸ್ಯೆಗೆ ಅಂದರೆ ಮನೆ ಮಾಲೀಕರು ಎದುರಿಸುವ ಸಮಸ್ಯೆಗೆ ಹೊಣೆ ಯಾರು ಎಂದು ವಾದಿಸುತ್ತಿದ್ದಾರೆ.

ವಾಸ್ತವದಲ್ಲಿ ಎರಡೂ ಕಡೆಯವರ ವಾದದಲ್ಲೂ ನ್ಯಾಯವಿದ್ದರೂ ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಿದರೆ ಶಿಕ್ಷಿಸಲು, ಪಾರ್ಕಿಂಗ್ ಮಾರ್ಷಲ್‌ಗಳು, ಮತ್ತು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸದ ವಾಹನಗಳನ್ನು ಹೊತ್ತೊಯ್ಯಲು ಟ್ರಕ್‌ಗಳು ನಗರದೆಲ್ಲೆಡೆ ಸುಳಿದಾಡುತ್ತಲೇ ಇರುತ್ತದೆ.

ಆದರೂ ಸಹ ಕೆಲವರು ನಿಯಮ ಮೀರಿ ನೋ ಪಾರ್ಕಿಂಗ್ ಜಾಗದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಇದರಿಂದ ಸಹಜವಾಗಿಯೇ ಅಲ್ಲಿರುವ ಜನರಿಗೆ ತೊಂದರೆಯಾಗುತ್ತದೆ. ಇನ್ನು ಕೆಲವೊಮ್ಮೆ ಪಾರ್ಕ್ ಮಾಡಲು ಬೇರೆಡೆ ಸ್ಥಳವಿದ್ದರೂ ಮತ್ತೊಬ್ಬರ ಮನೆಯ ಮುಂದೆ ಪಾರ್ಕ್ ಮಾಡಿ ಹೋಗುವವರೂ ಆ ಮನೆಯ ಮಾಲೀಕರಿಗೆ ತಮ್ಮಿಂದ ಆಗುವ ತೊಂದರೆಯನ್ನು ಯೋಚಿಸದೇ ಹೋಗುವುದು ವಿಪರ್ಯಾಸವೇ ಸರಿ.