ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ಭಾರತೀಯ ರೈಲ್ವೇಯು ಅನೇಕ ರೈಲು ನಿಲ್ದಾಣಗಳನ್ನು ಹೆಚ್ಚು ಆಧುನಿಕಗೊಳಿಸಲು ಅವುಗಳನ್ನು ನವೀಕರಿಸುವ ಕೆಲಸ ಮಾಡುತ್ತಿದೆ. ಅಂತಹ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಕೂಡ ಇದೆ. ಈ ರೈಲು ನಿಲ್ದಾಣವನ್ನು ದೇಶದ ಅತ್ಯಂತ ಆಧುನಿಕ ರೈಲು ನಿಲ್ದಾಣಗಳಲ್ಲಿ ಒಂದಾಗಿ ವಿನ್ಯಾಸಗೊಳಿಸಲಾಗಿದೆ.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ಈಗ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚು ಆಧುನಿಕ ಸೌಲಭ್ಯಗಳೊಂದಿಗೆ ಹೊಸ ನಿಲ್ದಾಣದ ನೋಟವನ್ನು ಹಂಚಿಕೊಂಡಿದೆ. ಹೊಸ ವಿನ್ಯಾಸ ಮತ್ತು ವಾಸ್ತುಶಿಲ್ಪವನ್ನು ನಿಲ್ದಾಣದ ಒಳಗೆ ಮತ್ತು ಹೊರಗೆ ಅಳವಡಿಸಲಾಗಿದೆ. ಉತ್ತಮ ನೋಟ ಮತ್ತು ಸುಧಾರಿತ ಕಾರ್ಯನಿರ್ವಹಣೆಯ ಮೇಲೆ ಕೇಂದ್ರೀಕರಿಸಲಾಗಿದೆ ಎಂಬುದನ್ನು ಈ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ಸರ್.ಎಂ. ವಿಶ್ವೇಶ್ವರಯ್ಯ ರೈಲ್ವೇ ಟರ್ಮಿನಲ್‌ನ ವಿಡಿಯೋವನ್ನು ರೈಲ್ವೇ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ನಿಲ್ದಾಣವನ್ನು "ಆಧುನಿಕ ವಿಶ್ವ ದರ್ಜೆ ನಿಲ್ದಾಣ" ಎಂದು ಕರೆಯುವ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಿಡಿಯೋ ಇದನ್ನು "ವಿಮಾನ ನಿಲ್ದಾಣದಂತಹ ನಿಲ್ದಾಣ" ಎಂದೂ ಸಹ ಹೆಸರಿಸಿದೆ.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ನಿಲ್ದಾಣದ ಹೊರಗೆ ಇರಿಸಲಾಗಿರುವ ರಾಷ್ಟ್ರಧ್ವಜವನ್ನು ತೋರಿಸುವ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ. ನಿಲ್ದಾಣದ ವಿವರಗಳು ಮತ್ತು ವೈಶಿಷ್ಟ್ಯಗಳನ್ನು ತೋರಿಸುತ್ತಾ ಮುಂದುವರಿಯುತ್ತದೆ. 4,200 ಚದರ ಮೀಟರ್ ಟರ್ಮಿನಲ್ ಅನ್ನು ಭಾರತೀಯ ರೈಲ್ವೇ ನಿರ್ಮಿಸಲು 314 ಕೋಟಿ ರೂ. ಮೊತ್ತದೊಂದಿಗೆ ಏಳು ಪ್ಲಾಟ್‌ಫಾರ್ಮ್‌ಗಳು, ಸಂಪೂರ್ಣ ಹವಾನಿಯಂತ್ರಣ ಹೊಂದಿರುವ ಲಾಬಿ, 900 ದ್ವಿಚಕ್ರ ವಾಹನಗಳು ಮತ್ತು 250 ಕಾರುಗಳ ನಿಲುಗಡೆ ಹಾಗೂ ಇತರ ಗಮನಾರ್ಹ ವೈಶಿಷ್ಟ್ಯಗಳು, ಸೇವೆಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಲಿಕೆಗೆ ಪ್ರಮುಖ ಕಾರಣವಾಗಿವೆ.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ಸರ್.ಎಂ. ವಿಶ್ವೇಶ್ವರಯ್ಯ ರೈಲ್ವೇ ಟರ್ಮಿನಲ್ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವ ಭಾರತದ ಮೊದಲ ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದಲ್ಲದೆ, ಪ್ರಯಾಣಿಕರಿಗೆ ಅನುಕೂಲವಾಗುವಂತೆ, ನಿಲ್ದಾಣವು ಪ್ರೀಮಿಯಂ ಲಾಂಜ್‌ಗಳನ್ನು ಸಹ ಪಡೆಯುತ್ತದೆ.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ವಿಮಾನ ನಿಲ್ದಾಣದಂತೆ ಕಾಣುವ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಟರ್ಮಿನಲ್‌ನ ನಿರ್ಮಾಣ ಕಾರ್ಯವು 2020 ರಿಂದ ಪ್ರಾರಂಭವಾಯಿತು, 2 ವರ್ಷಗಳಲ್ಲಿ ಪೂರ್ಣಗೊಳಿಸಲಾಯಿತು. ಆದರೆ ಕೋವಿಡ್-19 ಮತ್ತು ಸಂಪರ್ಕ ರಸ್ತೆಗಳ ಕೊರತೆಯಿಂದಾಗಿ ಉದ್ಘಾಟನೆ ವಿಳಂಬವಾಯಿತು.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ಜೂನ್ 6 ರಂದು ಕರ್ನಾಟಕ ಸರ್ಕಾರವು ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಿತು. ಟರ್ಮಿನಲ್ ಮತ್ತು ಇತರ ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಮೋದಿ ಅವರು ತಮ್ಮ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿ ಪ್ರಾರಂಭಿಸಿದ್ದರು. ರೈಲ್ವೇ ನಿಲ್ದಾಣಗಳನ್ನು ಆಧುನೀಕರಿಸುವ ಕೇಂದ್ರದ ಮಹತ್ವಾಕಾಂಕ್ಷೆಯ ಫಲವಾಗಿ ಬೈಯಪ್ಪನಹಳ್ಳಿಯಲ್ಲಿ ಟರ್ಮಿನಲ್ ಕೂಡ ನಿರ್ಮಿಸಲಾಯಿತು.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ನಿಲ್ದಾಣದಲ್ಲಿನ ವಿಶೇಷತೆಗಳು

ಟರ್ಮಿನಲ್‌ಗೆ ಭಾರತ ರತ್ನ ಪುರಸ್ಕೃತ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ಮಾದರಿಯಲ್ಲಿದೆ. ಟರ್ಮಿನಲ್ ಪ್ರತಿದಿನ 50,000 ಜನರಿಗೆ ಆಶ್ರಯ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ನಿಲ್ದಾಣವು ದಿನಕ್ಕೆ 50 ರೈಲುಗಳನ್ನು ನಿರ್ವಹಿಸಲು ಏಳು ಪ್ಲಾಟ್‌ಫಾರ್ಮ್‌ಗಳು, ಮೂರು ಪಿಟ್ ಲೈನ್‌ಗಳು ಮತ್ತು ಎಂಟು ಸ್ಟೇಬ್ಲಿಂಗ್ ಲೈನ್‌ಗಳನ್ನು ಹೊಂದಿದೆ.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ಅಲ್ಲದೇ ಆರು ಟಿಕೆಟ್ ಕೌಂಟರ್‌ಗಳಿವೆ, ಒಂದನ್ನು ವಿಕಲಚೇತನರಿಗೆ ಮೀಸಲಿಡಲಾಗಿದೆ. ನಿಲ್ದಾಣವು ವಿಶಾಲವಾದ ಪಾರ್ಕಿಂಗ್ ಅನ್ನು ಹೊಂದಿದ್ದು, ಅದು 50 ಆಟೋರಿಕ್ಷಾಗಳು ಮತ್ತು 20 ಕ್ಯಾಬ್‌ಗಳು ಮತ್ತು ಬಸ್‌ಗಳಿಗೆ ವಿಶೇಷ ವಲಯವನ್ನು ಹೊಂದಬಹುದಾಗಿದೆ. ಟರ್ಮಿನಲ್ ವಿಐಪಿ ಲೌಂಜ್, ವೇಟಿಂಗ್ ಹಾಲ್ ಮತ್ತು ಡಿಜಿಟಲ್ ರಿಯಲ್ ಟೈಮ್ ಪ್ರಯಾಣಿಕರ ಮಾಹಿತಿ ವ್ಯವಸ್ಥೆಯನ್ನು ಹೊಂದಿದೆ.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ಇದು ಫುಡ್ ಕೋರ್ಟ್ ಅನ್ನು ಸಹ ಹೊಂದಿರುವುದರ ಜೊತೆಗೆ ಲಿಫ್ಟ್‌ಗಳು, ಎಸ್ಕಾಲೇಟರ್‌ಗಳು, ಸುರಂಗಮಾರ್ಗಕ್ಕೆ ಸಂಪರ್ಕಿಸುವ ಮೆಟ್ಟಿಲುಗಳು ಮತ್ತು ಕಾಲು ಮೇಲ್ಸೇತುವೆಯನ್ನು ಹೊಂದಿದೆ. ಅದರ ಮೂಲಸೌಕರ್ಯವನ್ನು ವಿವರಿಸುವ ಸಂಕೇತ ಭಾಷೆಯ ವೀಡಿಯೊಗಳನ್ನು ಪ್ರವೇಶಿಸಲು ನಿಲ್ದಾಣದಾದ್ಯಂತ QR ಕೋಡ್‌ಗಳೊಂದಿಗೆ ಅನೇಕ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇದು ಪ್ರತಿ ಹಂತದಲ್ಲೂ ಬಹು ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದೆ.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮೆಟ್ರೋ ರೈಲ್ವೇ ಟರ್ಮಿನಲ್ ಅನ್ನು ಸಂಪರ್ಕಿಸಲು ನಗರದ ಮೂಲೆ ಮೂಲೆಗಳಿಂದಲೂ ಬಸ್‌ಗಳನ್ನು ನಿಯೋಜಿಸಿದೆ. ಅಲ್ಲದೇ ಬೆಂಗಳೂರಿನ ಯಾವುದೇ ಮೂಲೆಗೆ ಮೆಟ್ರೋದಲ್ಲಿ ತೆರಳಿದರು ಅಲ್ಲಿಂದ ಮತ್ತೆ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣಕ್ಕೆ ಬರಬಹುದಾಗಿದೆ. ಇನ್ನು ನಿಲ್ದಾಣವು ತುಂಬಾ ತಂಪಾಗಿ ಮತ್ತು ಅಚ್ಚುಕಟ್ಟಾಗಿರುತ್ತದೆ. ನಾವು ವಿಮಾನ ನಿಲ್ದಾಣದಲ್ಲಿ ಇಳಿದಿದ್ದೇವೆ ಎಂಬ ಅನುಭವವನ್ನು ನೀಡುತ್ತದೆ.

ಯಾವುದೇ ಏರ್‌ಪೋರ್ಟ್‌ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸರ್.ಎಂ. ವಿಶ್ವೇಶ್ವರಯ್ಯ ರೈಲ್ವೇ ಟರ್ಮಿನಲ್ ದೇಶದ ಉನ್ನತ ರೈಲ್ವೇ ನಿಲ್ದಾಣಗಳಲ್ಲಿ ಒಂದಾಗಿದ್ದು, ಇದು ನಮ್ಮ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವುದು ಕರ್ನಾಟಕಕ್ಕೆ ಹೆಮ್ಮ ತಂದಿದೆ. ಇನ್ನು ಇದರಲ್ಲಿ ವಿಶ್ವ ದರ್ಜೆಯ ಆಧುನಿಕ ತಂತ್ರಜ್ಞಾನ ಹಾಗೂ ವಿಮಾನ ನಿಲ್ದಾಣದಂತಹ ಐಷಾರಾಮಿತನವನ್ನು ಹೊಂದಿರುವುದು ಬೆಂಗಳೂರನ್ನು ದೇಶದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

Most Read Articles

Kannada
Read more on ರೈಲು train
English summary
This railway station in Bangalore is not inferior to any airport see what it looks like
Story first published: Monday, August 8, 2022, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X