'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

Written By:

20ನೇ ಶತಮಾನದ ಅತಿ ದೊಡ್ಡ ದುರಂತಗಳಲ್ಲಿ ಒಂದಾಗಿರುವ ಟೈಟಾನಿಕ್ ಹಡಗು ದುರಂತದ ಬಗ್ಗೆ ಈಗಾಗಲೇ ಹಲವಾರು ಲೇಖನಗಳು ಪ್ರಕಟಗೊಂಡಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಹಲವಾರು ಸಾಕ್ಷ್ಮಚಿತ್ರಗಳು, ಸಿನೆಮಾಗಳು, ಪ್ರಕಾಶನಗಳು ಹೊರಬಂದಿವೆ. ಈ ಪೈಕಿ ನೈಜತೆಗೆ ಹತ್ತಿರವಾಗಿರುವ ಟೈಟಾನಿಕ್ ಚಿತ್ರವು ಮುಳುಗಲಾರದ ಹಡಗಿನ ಭಯಾನಕ ಚಿತ್ರಣವನ್ನೇ ವಿಶ್ವದ ಮುಂದಿಟ್ಟಿದೆ.

Also Read: ಪುನರ್ಜನ್ಮ ಪಡೆಯಲಿರುವ ಟೈಟಾನಿಕ್ ಹಡಗು

1912 ರಲ್ಲಿ ಇಂಗ್ಲೆಂಡಿನ ಸೌತ್‌ಹ್ಯಾಂಪ್ಟನ್‌ನಿಂದ ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಟು, ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋದ ಬೃಹತ್ ಹಡಗು. 'ಮುಳುಗಲಾರದ ಹಡಗು' ಎಂದು ಭಾರೀ ಪ್ರಚಾರ ಪಡೆದು ವಿಶ್ವಪ್ರಖ್ಯಾತವಾಗಿದ್ದ ಟೈಟಾನಿಕ್‌ನ ದಾರುಣ ಅಂತ್ಯ ಮಾನವ ಇತಿಹಾಸದ ಅತ್ಯಂತ ಭೀಕರ ದುರ್ಘಟನೆಗಳಲ್ಲೊಂದು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

'ವೈಟ್ ಸ್ಟಾರ್ ಲೈನ್' ಎಂಬ ಸಾರಿಗೆ ಸಂಸ್ಥೆಯ ಒಡೆತನದಲ್ಲಿದ್ದ ಟೈಟಾನಿಕ್ ಅನ್ನು ಬೆಲ್‌ಫಾಸ್ಟ್‌ನ ಹಾರ್ಲಂಡ್ ಅಂಡ್ ವುಲ್ಫ್ ಎಂಬ ಸಂಸ್ಥೆ ನಿರ್ಮಿಸಿತ್ತು. ಆ ಸಮಯದ ಅತ್ಯಂತ ದೊಡ್ಡ ಹಾಗೂ ವೈಭವೋಪೇತ ಹಡಗುಗಳಲ್ಲಿ ಟೈಟಾನಿಕ್ ಅಗ್ರಸ್ಥಾನ ಪಡೆದಿತ್ತು. ಇಷ್ಟು ಭರ್ಜರಿಯಾಗಿದ್ದ ಹಡಗು ಮುಳುಗುವುದು ಅಸಾಧ್ಯವೆಂದೇ ಎಲ್ಲರ ಭಾವನೆಯಾಗಿತ್ತು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ತನ್ನ ಮೊದಲ ಯಾನದಲ್ಲಿ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಟೈಟಾನಿಕ್ 1912ರ ಏಪ್ರಿಲ್ 14-15ರ ಮಧ್ಯರಾತ್ರಿ ನ್ಯೂಫೌಂಡ್‌ಲ್ಯಾಂಡಿನ ತೀರದಿಂದ ಸುಮಾರು 640 ಕಿಲೋಮೀಟರ್ ದಕ್ಷಿಣದಲ್ಲಿ ನೀರ್ಗಲ್ಲೊಂದಕ್ಕೆ ಡಿಕ್ಕಿ ಹೊಡೆಯಿತು. ನೀರ್ಗಲ್ಲು ಅಪ್ಪಳಿಸಿದ ಮೂರು ಗಂಟೆಗಳೊಳಗೆಯೇ, ಏಪ್ರಿಲ್ 15ರ ಮುಂಜಾನೆ 2.20ರ ಸಮಯದಲ್ಲಿ ಟೈಟಾನಿಕ್ ಸುಮಾರು 1500 ಪ್ರಯಾಣಿಕರೊಡನೆ ಸಂಪೂರ್ಣವಾಗಿ ಮುಳುಗಿಹೋಯಿತು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಟೈಟಾನಿಕ್‌ನಲ್ಲಿದ್ದ ಸುಮಾರು 2220 ಪ್ರಯಾಣಿಕರಲ್ಲಿ 1700 ಜನರಿಗೆ ಮಾತ್ರ ಸಾಲುವಷ್ಟು ಲೈಫ್ ಬೋಟುಗಳಿದ್ದದ್ದು ಈ ದುರಂತವನ್ನು ಮತ್ತಷ್ಟು ಘೋರವನ್ನಾಗಿಸಿತು. ಅಲ್ಲಿ ಲಭ್ಯವಿದ್ದ ಕೆಲವೇ ಲೈಫ್ ಬೋಟುಗಳನ್ನೂ ಸಹ ಸರಿಯಾಗಿ ಉಪಯೋಗಿಸಿಕೊಳ್ಳಲಾಗಲಿಲ್ಲ; ಅನೇಕ ಲೈಫ್ ಬೋಟುಗಳು ತಮ್ಮ ಪೂರ್ಣ ಸಾಮರ್ಥ್ಯಕ್ಕಿಂತ ಕಡಿಮೆ ಜನರನ್ನು ಕೊಂಡೊಯ್ದವು. ಕಡೆಗೆ ಈ ದುರಂತದಲ್ಲಿ ಬದುಕುಳಿದವರ ಸಂಖ್ಯೆ ಕೇವಲ 705.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಲೈಫ್ ಬೋಟುಗಳಲ್ಲಿ ಹೊರಟ ಈ ಜನರನ್ನು 'ಕಾರ್ಪೇಥಿಯಾ' ಎಂಬ ಹಡಗು ರಕ್ಷಿಸಿತು. ಈ ಹಡಗು ಟೈಟಾನಿಕ್‌ನಿಂದ ಕಳುಹಿಸಲ್ಪಟ್ಟಿದ್ದ ಅಪಾಯದ ಸಂಕೇತವನ್ನು ಗ್ರಹಿಸಿ ಸಹಾಯಕ್ಕಾಗಿ ತೆರಳುತ್ತಿತ್ತು. ಆದರೆ ಟೈಟಾನಿಕ್ ನೀರ್ಗಲ್ಲಿಗೆ ಡಿಕ್ಕಿ ಹೊಡೆದ ಸಮಯದಲ್ಲಿ ಅದರ ಸಮೀಪದಲ್ಲೇ ಇದ್ದ 'ಕ್ಯಾಲಿಫೋರ್ನಿಯನ್' ಎಂಬ ನೌಕೆಯ ರೇಡಿಯೋ ಗ್ರಾಹಕ ನಿಷ್ಕ್ರಿಯವಾಗಿದ್ದರಿಂದ ಟೈಟಾನಿಕ್‌ಗೆ ಸರಿಯಾದ ಸಮಯದಲ್ಲಿ ನೆರವು ದೊರಕಲಿಲ್ಲ.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಟೈಟಾನಿಕ್‌ನಲ್ಲಿದ್ದ ಮೊದಲ ಮತ್ತು ಎರಡನೇ ದರ್ಜೆ ಪ್ರಯಾಣಿಕರಲ್ಲಿ ಬಹುತೇಕ ಎಲ್ಲ ಮಕ್ಕಳು ಹಾಗೂ ಮಹಿಳೆಯರು ಉಳಿದುಕೊಂಡರು. ತೃತೀಯ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳಲ್ಲಿ ಸುಮಾರು ಮೂರನೇ ಎರಡು ಭಾಗದಷ್ಟು ಬದುಕುಳಿಯಲಿಲ್ಲ. ಹಡಗಿನಲ್ಲಿದ್ದ ಅನೇಕ ಆಗರ್ಭ ಶ್ರೀಮಂತರೂ ಈ ದುರಂತದಲ್ಲಿ ಜೀವತೆತ್ತರು. ಇವರಲ್ಲಿ ಟೈಟಾನಿಕ್‌ನಲ್ಲಿದ್ದ ಅತ್ಯಂತ ಶ್ರೀಮಂತ ವ್ಯಕ್ತಿ ಜಾನ್ ಜೇಕಬ್ ಆಸ್ಟರ್, ಟೈಟಾನಿಕ್‌ನ ಕ್ಯಾಪ್ಟನ್ ಎಡ್ವರ್ಡ್ ಜೆ. ಸ್ಮಿತ್, ಟೈಟಾನಿಕ್‌ನ ವಿನ್ಯಾಸಕಾರ ಥಾಮಸ್ ಆಂಡ್ರೂಸ್, ವಾಣಿಜ್ಯೋದ್ಯಮಿಗಳಾದ ಇಸಿಡಾರ್ ಸ್ಟ್ರಾಸ್, ಬೆಂಜಮಿನ್ ಗುಗನ್‌ಹೀಮ್ ಸೇರಿದಂತೆ ಅನೇಕ ಪ್ರಸಿದ್ಧರೂ ಇದ್ದರು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಈ ದುರಂತದ ಪರಿಣಾಮವಾಗಿ ನೌಕಾಯಾನದ ಸುರಕ್ಷತೆಯ ಬಗೆಗೆ ವಿಶ್ವದ ಗಮನ ಹರಿಯಿತು. ಪ್ರತಿಯೊಂದು ಹಡಗಿನಲ್ಲೂ ಎಲ್ಲ ಪ್ರಯಾಣಿಕರಿಗೂ ಸಾಲುವಷ್ಟು ಲೈಫ್‌ಬೋಟುಗಳಿರಬೇಕಾದುದನ್ನು ಕಡ್ಡಾಯಗೊಳಿಸಲಾಯಿತು. 'ಕ್ಯಾಲಿಫೋರ್ನಿಯನ್' ನೌಕೆಯ ರೇಡಿಯೋ ಗ್ರಾಹಕ ಕಾರ್ಯನಿರತವಾಗಿದ್ದಿದ್ದಲ್ಲಿ ಟೈಟಾನಿಕ್ ದುರಂತದ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿತ್ತೆಂಬುದನ್ನು ಮನಗಂಡ ನಂತರ ಹಡಗುಗಳಲ್ಲಿನ ಸಂಪರ್ಕ ಸಾಧನಗಳು ದಿನದ 24 ಗಂಟೆಗಳೂ ಚಾಲನೆಯಲ್ಲಿರಬೇಕೆಂಬ ನಿಯಮವನ್ನೂ ಜಾರಿಗೆ ತರಲಾಯಿತು. ಸಮುದ್ರದಲ್ಲಿ ನೀರ್ಗಲ್ಲುಗಳ ಕುರಿತು ಮಾಹಿತಿ ನೀಡಿ ಅಪಘಾತಗಳನ್ನು ತಡೆಯಲು ಅಂತರರಾಷ್ಟ್ರೀಯ ಐಸ್ ಪಟ್ರೋಲ್ ಅನ್ನು ಸ್ಥಾಪಿಸಲಾಯಿತು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಈ ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಜೇಮ್ಸ್ ಕ್ಯಾಮರೂನ್, 1997ರಲ್ಲಿ ಟೈಟಾನಿಕ್ ಎಂಬ ಚಲನಚಿತ್ರವನ್ನು ರಚಿಸಿದ್ದರು. ಚಿತ್ರದಲ್ಲಿ ಲಿಯಾನಾರ್ಡೊ ಡಿ ಕಾಪ್ರಿಯೊ ಹಾಗೂ ಕೇಟ್ ವಿನ್ಸ್ಲೆಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಚಿತ್ರದ ರೋಚಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಣಯ ಕಟ್ಟು ಕಥೆಯೊಂದನ್ನು ನಿರ್ದೇಶಕ ಜೇಮ್ಸ್ ಕೆಮರೂನ್ ರಚಿಸಿದ್ದರು. ಆದರೆ ಚಿತ್ರಸಾಹಿತ್ಯ ಬರೆದ ಬಳಿಕವಷ್ಟೇ ಜಾಕ್ ಡಾವ್ಸನ್ ಹಾಗೂ ರೋಸ್ ಡೆವಿಟ್ ಬುಕಾಟೆರ್ ಎಂಬ ನೈಜ ಪ್ರಣಯ ಕಥೆ ನಿಜವಾಗ್ಲೂ ಘಟಿಸಿ ಹೋಗಿತ್ತು ಎಂಬುದು ತಿಳಿದು ಬಂದಿತ್ತು. ತದಾ ಬಳಿಕ ಇದೇ ಕಥಾಪಾತ್ರವನ್ನು ಚಿತ್ರದ ಪ್ರಮುಖ ಕಥಾ ಪಾತ್ರವನ್ನು ನಿರ್ವಹಿಸುತ್ತಿರುವ ಲಿಯಾನಾರ್ಡೊ ಡಿ ಕಾಪ್ರಿಯೊ ಹಾಗೂ ಕೇಟ್ ವಿನ್ಸೆಟ್ ಅವರಿಗೆ ವಹಿಸಿ ಕೊಡಲಾಗಿತ್ತು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

1912ರಲ್ಲಿ ಅವಘಡಕ್ಕೀಡಾದ ಟೈಟಾನಿಕ್ ಹಡಗಿನ ಮೌಲ್ಯ 7.5 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಇದನ್ನು ಈಗಿನ ಡಾಲರ್ ಮೌಲ್ಯಕ್ಕೆ ಹೋಲಿಸಿದಾಗ ಬರೋಬ್ಬರಿ 125ರಿಂದ 150 ಮಿಲಿಯನ್ ಡಾಲರ್ ಗಳಷ್ಟು ದುಬಾರಿಯೆನಿಸುತ್ತದೆ. ಇನ್ನು 1997ರಲ್ಲಿ ಬಿಡುಗಡೆಯಾಗಿದ್ದ ಟೈಟಾನಿಕ್ ಚಿತ್ರ ನಿರ್ಮಾಣಕ್ಕೆ 200 ಮಿಲಿಯನ್ ಡಾಲರ್ ಅಮೆರಿಕನ್ ಡಾಲರ್ ವೆಚ್ಚ ತಗಲಿತ್ತು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಟೈಟಾನಿಕ್ ಚಿತ್ರದಲ್ಲಿ ನಟಿ ಕೇಟ್ ವಿನ್ಸ್ಲೆಟ್ ನಗ್ನ ಚಿತ್ರವನ್ನು ನಟ ಲಿಯಾನಾರ್ಡೊ ಡಿ ಕಾಪ್ರಿಯೊ ಬಿಡಿಸುವ ಚಿತ್ರವು ಹೆಚ್ಚು ರೋಚಕತೆಯನ್ನು ಸೃಷ್ಟಿ ಮಾಡುತ್ತದೆ. ಇದರ ನಿಜಾಂಶವೆಂದರೆ ಸ್ವತ: ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರೇ ಈ ಚಿತ್ರವನ್ನು ಬಿಡಿಸಿದ್ದರು.

ನೀರಿನಡಿಯಲ್ಲಿ ಚಿತ್ರಿಕರಣ

ನೀರಿನಡಿಯಲ್ಲಿ ಚಿತ್ರಿಕರಣ

ನೈಜತೆಯ ಸಿನೆಮಾ ನಿರ್ಮಾಣಕ್ಕೆ ಹೆಚ್ಚಿನ ಒಲವು ತೋರಿರುವ ಜೇಮ್ಸ್ ಕ್ಯಾಮರೂನ್, ಟೈಟಾನಿಕ್ ಮುಳುಗುವ ಸನ್ನಿವೇಶಗಳನ್ನು ನೀರಿನಡಿಯಿಂದಲೇ ಶೂಟಿಂಗ್ ಮಾಡಿದ್ದರು. ಇದಕ್ಕಾಗಿ ರಷ್ಯಾದ ಎರಡು ಜಲಾಂತರ್ಗಾಮಿ (Akademik Mstislav Keldysh) ಹಡಗುಗಳನ್ನು ಬಳಕೆ ಮಾಡಲಾಗಿತ್ತು. ಇದಕ್ಕಾಗಿ ವಿಶಿಷ್ಟ ಕ್ಯಾಮೆರಾಗಳ ನೆರವನ್ನು ಪಡೆಯಲಾಗಿತ್ತು.

ಟೈಟಾನಿಕ್ ಹಡಗಿನ ಸತ್ಯ

ಟೈಟಾನಿಕ್ ಹಡಗಿನ ಸತ್ಯ

ಟೈಟಾನಿಕ್ ಹಡಗು ಮುಳುಗಲು ಒಟ್ಟು ಎರಡು ಗಂಟೆ 40 ನಿಮಿಷ ತೆಗೆದುಕೊಂಡಿತ್ತು. ಕಾಕತಾಳೀಯವೆಂಬಂತೆ ಟೈಟಾನಿಕ್ ಚಿತ್ರದ ಒಟ್ಟು ಅವಧಿಯು 2.40 ನಿಮಿಷಗಳಾಗಿವೆ.

ಕಪ್ಪು ವರ್ಣದ ಪ್ರಯಾಣಿಕ

ಕಪ್ಪು ವರ್ಣದ ಪ್ರಯಾಣಿಕ

ಅಂದಿನ ಕಾಲದಲ್ಲಿ ವರ್ಣಭೇದ ನೀತಿ ಬಹಳ ಪ್ರಬಲವಾಗಿ ಜಾರಿಯಲ್ಲಿತ್ತು ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಅಂತೆಯೇ ಜೋಸೆಫ್ ಪಿಲಿಪ್ ಲೆಮೆರ್ಸಿಯರ್ ಲಾರೊಚೆ ಹಡಗಿನಲ್ಲಿ ಮುಳುಗಿದ ಏಕ ಮಾತ್ರ ಕಪ್ಪು ವರ್ಣದ ವ್ಯಕ್ತಿಯಾಗಿದ್ದಾರೆ.

ವಾದ್ಯ ಘೋಷ

ವಾದ್ಯ ಘೋಷ

ಎಂಟು ಮಂದಿಯ ವಾದ್ಯ ಘೋಷ ತಂಡವನ್ನು ವೆಲ್ಲೆಸ್ ಹೆನ್ರಿ ಹಾರ್ಟ್ಲೀ ಮುನ್ನಡೆಸಿದ್ದರು. ಹಡಗು ಇನ್ನೇನು ಮುಳುಗುವಷ್ಟರಲ್ಲಿ ಎಲ್ಲ ಎಂಟು ಮಂದಿ ಒಟ್ಟು ಸೇರಿ ಸಂಗೀತ ಬಾರಿಸುತ್ತಿದ್ದರು ಎಂಬುದಕ್ಕೆ ಸಾಕ್ಷ್ಯವೇ ಹೇಳುತ್ತದೆ. ಇವರ ಕೆಚ್ಚೆದೆಯ ಹೃದಯವಂತಿಕೆಯನ್ನು ಇಂದಿಗೂ ಇಡೀ ಜಗತ್ತೇ ಸ್ಮರಿಸುತ್ತಿದೆ.

ಸಿನೆಮಾ ಸೆಟ್

ಸಿನೆಮಾ ಸೆಟ್

ಮೆಕ್ಸಿಕೊ ರೊಸರಿಟೊ ಬೀಚ್‌ನಲ್ಲಿರುವ ಫಾಕ್ಸ್ ಬಜಾ ಸ್ಟುಡಿಯೋ ಸಿನೆಮಾ ಸೆಟ್ ಇಂದಿಗೂ ಉಳಿಸಿಕೊಂಡು ಬರಲಾಗಿದೆ. ಇಲ್ಲಿ ಟೈಟಾನಿಕ್ ನೈಜ ಹಡಗಿನ ತದ್ರೂಪವನ್ನು ನಿರ್ಮಿಸಲಾಗಿತ್ತು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಸಿನೆಮಾದ ಕೊನೆಯಲ್ಲಿ ಟೈಟಾನಿಕ್ ಹಡಗು ಮುಳುಗಡೆಯ ಸನ್ನಿವೇಶದಲ್ಲಿ ಗ್ರ್ಯಾಂಡ್ ಸ್ಟೇರ್ ಕೇಸ್ ನಲ್ಲಿ ಜಾಕ್ ಅವರನ್ನು ರೋಸ್ ಭೇಟಿಯಾಗುತ್ತರೆ. ಇದು ಕೂಡಾ ಟೈಟಾನಿಕ್ ಮುಳುಗಿದ ( 2:20 AM) ಸಮಯಕ್ಕೆ ಸಮಾನವಾಗಿದೆ.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಪ್ರಾರಂಭದಲ್ಲಿ ಜಾಕ್ ಡಾವ್ಸನ್ ಪಾತ್ರದಲ್ಲಿ ಟಾಮ್ ಕ್ರೂಸ್ ನಟಿಸುವಂತೆ ಟೈಟಾನಿಕ್ ಚಿತ್ರತಂಡ ಬಯಸಿತ್ತು. ಅದೇ ರೀತಿ ರೋಸ್ ಕಥಾಪಾತ್ರಕ್ಕೆ ಮಡೋನಾ ಆಯ್ಕೆ ಮಾಡಲಾಗಿತ್ತು. ಆದರೆ ಜೇಮ್ಸ್ ಕೆಮರೂನ್ ಆಲೋಚನೆಯೇ ಬೇರೆಯಾಗಿತ್ತು. ಅವರು ಈ ಪಾತ್ರವನ್ನು ಲಿಯಾನಾರ್ಡೊ ಡಿ ಕಾಪ್ರಿಯೊ ಹಾಗೂ ಕೇಟ್ ವಿನ್ಸ್ಲೆಟ್ ಅವರಿಗೆ ವಹಿಸಿಕೊಟ್ಟಿದ್ದರು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಟೈಟಾನಿಕ್ ಜೇಮ್ಸ್ ಕೆಮರೂನ್ ನಿರ್ದೇಶನ ಮಾಡಿದ 10ನೇ ಚಿತ್ರವಾಗಿದೆ. ಅಲ್ಲಿಯ ವರೆಗೆ ಶಸ್ತ್ರಾಸ್ತ್ರಗಳನ್ನು ಕೇಂದ್ರಿಕರಿಸಿ ತಮ್ಮ ಚಿತ್ರವನ್ನು ನಿರ್ಮಿಸುತ್ತಿದ್ದ ಕೆಮರೂನ್ ಮೊದಲ ಬಾರಿಗೆ ಸಂಪೂರ್ಣ ವಿಭಿನ್ನ ಸನ್ನಿವೇಶದ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಿನೆಮಾ ನಿರ್ಮಿಸುವ ಸಾಹಸಕ್ಕೆ ಧುಮುಕಿದ್ದರು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಗ್ಲೋರಿಯಾ ಸ್ಟುವರ್ಟ್ ಚಿತ್ರನಿರ್ಮಾಣ ತಂಡದೊಂದಿಗೆ ಕೆಲಸ ಮಾಡಿದ ಟೈಟಾನಿಕ್ ಹಡಗಿನ ಏಕೈಕ ವ್ಯಕ್ತಿಯಾಗಿದ್ದಾರೆ. ವಾಸ್ತವವಾಗಿ 1912 ರಲ್ಲಿ ಟೈಟಾನಿಕ್ ದುರಂತದ ಬಳಿಕ ಚಿತ್ರ ನಿರ್ಮಾಣದ ವೇಳೆ ಜೀವಂತವಾಗಿ ಬದುಕುಳಿದ ಏಕೈಕ ವ್ಯಕ್ತಿಯೂ ಆಗಿದ್ದರು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಟೈಟಾನಿಕ್‌ನ ಒಂದೇ ಪಾತ್ರಕ್ಕಾಗಿ ಇಬ್ಬರು ಆಸ್ಕರ್ ಪ್ರಶಸ್ತಿಗಾಗಿ ನಾಮನಿರ್ದೇಶನ ಪಡೆದ ಮೊದಲ ಚಿತ್ರವಾಗಿದೆ.

ಅಲ್ಲದೆ 14 ಅಕಾಡೆಮಿ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನ ಪಡೆದುಕೊಂಡಿತ್ತು.

'ಟೈಟಾನಿಕ್' ಮುಳುಗಲಾರದ ಹಡಗಿನ 20 ಸತ್ಯಗಳು

ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ 10 ರೋಚಕ ಸತ್ಯಗಳು

English summary
Titanic Ship Vs Titanic Film Interesting Facts
Story first published: Wednesday, December 9, 2015, 11:43 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more