ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

Written By:

ಟ್ರಾಫಿಕ್ ಸಮಸ್ಯೆ ಎನ್ನುವುದು ಜಗತ್ತಿನ ಎಲ್ಲ ದೇಶಗಳ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಇನ್ನೊಂದು ಪ್ರಮುಖ ವಿಚಾರವೇನೆಂದರೆ ಮುಂದುವರೆದ ರಾಷ್ಟ್ರಗಳಲ್ಲೇ ಟ್ರಾಫಿಕ್ ಸಮಸ್ಯೆ ಹೆಚ್ಚು ಎಂಬುವುದು ಗಮಿಸಬೇಕಾದ ಸಂಗತಿ. ಈ ಹಿನ್ನೆಲೆ ಇಂತಹ ಹತ್ತು ಹಲವು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ವೇ ನಡೆಸಿರುವ ಡಚ್ ಮೂಲದ ಟಾಮ್ ಟಾಮ್ ಸಂಸ್ಥೆ, ವಿಶ್ವದ 48 ಪ್ರಮುಖ ರಾಷ್ಟ್ರಗಳ 390 ನಗರಗಳಲ್ಲಿನ ಟ್ರಾಫಿಕ್ ಜಾಮ್ ಮಾಹಿತಿಯನ್ನು ಕಲೆಹಾಕಿದೆ.

ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

10. ಸ್ಯಾಂಟಿಯಾಗೊ, ಚಿಲಿ(ಲ್ಯಾಟಿನ್ ಅಮೆರಿಕಾ)

ಚಿಲಿ ದೇಶದ ರಾಜಧಾನಿಯಾಗಿರುವ ಸ್ಯಾಂಟಿಯಾಗೊ ಪ್ರಮುಖ ಟ್ರಾಫಿಕ್‌ಯುಕ್ತ ನಗರಗಳ ಪೈಕಿ 10ನೇ ಸ್ಥಾನದಲ್ಲಿದೆ. ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಗಿರುವ ಸ್ಯಾಂಟಿಯಾಗೊ ಹತ್ತು ಹಲವು ಬಹುರಾಷ್ಟ್ರೀಯ ಕಂಪನಿಗಳ ನೆಲೆಯಾಗಿದೆ. ಹೀಗಾಗಿ ಸ್ಯಾಂಟಿಯಾಗೊ ವಾತಾವರಣ ಸಾಕಷ್ಟು ಕಲುಷಿತಗೊಂಡಿದೆ.

ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

09. ಝುಹಾಯ್, ಚೀನಾ

ಪ್ರಮುಖ ಟ್ರಾಫಿಕ್‌ಯುಕ್ತ ನಗರಗಳಲ್ಲಿ ಚೀನಾದ ಝುಹಾಯ್ ನಗರ 9ನೇ ಸ್ಥಾನದಲ್ಲಿದೆ. ವಿಶ್ವದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಝುಹಾಯ್ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿದೆ. 2014ರಲ್ಲಿ ಚೀನೀ ಅಕಾಡಮೆ ಆಫ್ ಸೋಶಿಯಲ್ ಸೈನ್ಸ್ ಪ್ರಕಾರ ವಾಸಯೊಗ್ಯ ನಗರ ಎಂದು ಗುರುತಿಸಲಾಗಿತ್ತು. ಆದ್ರೆ ಅತಿಯಾದ ಟ್ರಾಫಿಕ್ ಸಮಸ್ಯೆ ಝುಹಾಯ್ ನಗರದಲ್ಲಿ ತಲೆದೊರಿದೆ.

ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

08. ಸೇಂಟ್ ಪೀಟರ್ಸ್‌ಬರ್ಗ್, ರಷ್ಯಾ

ರಷ್ಯಾದ ಅತ್ಯಂತ ಪಾಶ್ಚಿಮಾತ್ಯ ನಗರಗಳಲ್ಲಿ ಒಂದಾಗಿರುವ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲೂ ಟ್ರಾಫಿಕ್ ಸಮಸ್ಯೆ ಅತಿಯಾಗಿದೆ. ಅತಿ ಜನದಟ್ಟಣೆ ಹೊಂದಿರುವ ಸೇಂಟ್ ಪೀಟರ್ಸ್‌ಬರ್ಗ್, ವಿದೇಶಿ ದೂತವಾಸಗಳನ್ನು, ಅಂತರ್‌ರಾಷ್ಟ್ರೀಯ ಸಂಸ್ಥೆಗಳು, ಪ್ರಮುಖ ವಿದೇಶಿ ಬ್ಯಾಂಕ್‌ಗಳು ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳ ತಾಣವಾಗಿದೆ. ಹೀಗಾಗಿ ಅತಿಯಾದ ವಾಯುಮಾಲಿನ್ಯ ಸೃಷ್ಠಿಯಾಗುತ್ತಿದ್ದು, ಟಾಮ್ ಟಾಮ್ ಸಮೀಕ್ಷೆಯಲ್ಲಿ 8ನೇ ಸ್ಥಾನ ಪಡೆದಿದೆ.

ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

07. ಟರ್ಕಿ, ಇಸ್ತಾಂಬುಲ್

ಅತಿಯಾದ ಟ್ರಾಫಿಕ್‌ಯುಕ್ತ ನಗರಗಳ ಪೈಕಿ ಟರ್ಕಿಯ ಇಸ್ತಾಂಬುಲ್ 7ನೇ ಸ್ಥಾನದಲ್ಲಿದೆ. ಅತಿ ಜನದಟ್ಟಣೆ ಹೊಂದಿರುವ ಪ್ರಮುಖ ನಗರಗಳಲ್ಲಿ ಒಂದಾಗಿರುವ ಟರ್ಕಿ, ಇದೀಗ ಅತಿಯಾದ ಟ್ರಾಫಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಟಾಮ್ ಟಾಮ್ ವರದಿ ಪ್ರಕಾರ ಕೆಲವು ನಿರ್ದಿಷ್ಟ ಕಾಲಾವಧಿಯಲ್ಲಿನ ಪ್ರಯಾಣ ಟ್ರಾಫಿಕ್ ಸಮಸ್ಯೆಯನ್ನು ತಡೆಯಬಹುದಾಗಿದೆ ಎಂದು ಹೇಳಿದೆ.

ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

06. ಚಾಂಗಿಂಗ್, ಚೀನಾ

ಚೀನಾದ ನೈಋತ್ಯ ಪ್ರಾಂತ್ಯದಲ್ಲಿ ಬರುವ ಅತಿದೊಡ್ಡ ನಗರಗಳಲ್ಲಿ ಒಂದಾಗಿರುವ ಚಾಂಗಿಂಗ್, ಪ್ರಮುಖ ಕೈಗಾರಿಕಾ ವಸಾಹತು ಕೇಂದ್ರ ಕೂಡ ಹೌದು. ಅತಿಯಾದ ಜನದಟ್ಟಣೆ ಹೊಂದಿರುವ ಚಾಂಗಿಂಗ್, ಇತ್ತೀಚೆಗೆ ಮೆಗಾಸಿಟಿಯಾಗಿ ಪರಿವರ್ತನೆಯಾಗುತ್ತಿದೆ. ಇದರಿಂದಾಗಿ ಸಹಜವಾಗಿಯೇ ಟ್ರಾಫಿಕ್ ಸಮಸ್ಯೆ ಹೇಳತೀರದಾಗಿದೆ.

ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

05. ಮಾಸ್ಕೋ, ರಷ್ಯಾ

ವಾಸ್ತುಶಿಲ್ವಕ್ಕೆ ಹೆಸರುವಾಸಿಯಾಗಿರುವ ರಷ್ಯಾ ರಾಜಧಾನಿ ಮಾಸ್ಕೋ, ಅತಿಯಾದ ಟ್ರಾಫಿಕ್ ಜಾಮ್ ನಗರಗಳಲ್ಲಿ 5ನೇ ಸ್ಥಾನ ಪಡೆದಿದೆ. ರಷ್ಯಾದ ಅತ್ಯಂತ ಜನಪ್ರಿಯ ನಗರಗಳಲ್ಲಿ ಒಂದಾಗಿರುವ ಮಾಸ್ಕೋ ನಗರಕ್ಕೆ ಇಂದು ಟ್ರಾಫಿಕ್ ಜಾಮ್ ಅತಿದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಹೀಗಾಗಿ ಟ್ರಾಫಿಕ್ ಜಾಮ್ ತಗ್ಗಿಸಲು ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

04. ಜಕಾರ್ತ್, ಇಂಡೋನೇಷ್ಯಾ

ಅತಿಯಾದ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ನಗರಗಳ ಪೈಕಿ ಇಂಡೋನೇಷ್ಯಾ ರಾಜಧಾನಿ ಜಕಾರ್ತ್ 4ನೇ ಸ್ಥಾನದಲ್ಲಿದೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಜಕಾರ್ತ್, ಇಂಡೋನೇಷ್ಯಾದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದೆ. ಹೀಗಾಗಿ ನಿತ್ಯ ಲಕ್ಷಾಂತರ ಜನ ಪ್ರವಾಸಿಗಳು ಆಗಮಿಸುವ ಕಾರಣ ಟ್ರಾಫಿಕ್ ಸಮಸ್ಯೆ ತಲೆದೊರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಅಲ್ಲಿನ ಸರ್ಕಾರ ಪ್ರವಾಸಿಗರಿಗೆ ಉಚಿತವಾಗಿ ಡಬಲ್ ಡೆಕ್ಕರ್ ಬಸ್‍ಗಳ ಸೇವೆಯನ್ನು ಒದಗಿಸುತ್ತಿದೆ.

ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

03. ಬುಚಾರೆಸ್ಟ್, ರೊಮೇನಿಯಾ

ಶ್ರೀಮಂತ ನಗರಗಳಲ್ಲಿ ಒಂದಾಗಿರುವ ರೊಮೇನಿಯಾದ ಬುಚಾರೆಸ್ಟ್ ನಗರಕ್ಕೂ ಟ್ರಾಫಿಕ್ ಜಾಮ್ ಅತಿದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಯುರೋಪಿನ ಪ್ರಮುಖ ಕೈಗಾರಿಕಾ ಕೇಂದ್ರಗಳು ಬುಚಾರೆಸ್ಟ್ ನಗರದಲ್ಲಿದ್ದು, ಪ್ರಮುಖ ದೇಶಗಳೊಂದಿಗೆ ರಸ್ತೆ ಸಂಪರ್ಕ ಹೊಂದಿದೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಅಲ್ಲಿನ ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

02. ಮೆಕ್ಸಿಕೋ ಸಿಟಿ

ಜಗತ್ತಿನ ಅತಿ ಜನನಿಬಿಡ ನಗರಗಳಲ್ಲಿ ಒಂದಾಗಿರುವ ಮೆಕ್ಸಿಕೋ ಸಿಟಿ, ಟಾಮ್ ಟಾಮ್ ಸಮೀಕ್ಷೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಅಗಲವಾದ ರಸ್ತೆಗಳ ಸೌಲಭ್ಯವಿದ್ದರೂ, ಅಲ್ಲಿನ ಜನರಿಗೆ ಹೆಚ್ಚಿನ ಆಯ್ಕೆಗಳು ಇಲ್ಲದ ಕಾರಣ ವಾಹನ ದಟ್ಟಣೆ ಹೆಚ್ಚುತ್ತಿದೆ. ದಿನದ 24 ಗಂಟೆಯೂ ಸದಾ ಟ್ರಾಫಿಕ್ ಅನುಭವಿಸುವ ಅಲ್ಲಿನ ಜನ ಸರ್ಕಾರದ ಕೆಲವು ಕ್ರಮಗಳಿಂದಾಗಿ ಬೇಸತ್ತು ಹೋಗಿದ್ದಾರೆ.

ಟಾಪ್ 10: ಜಗತ್ತಿನ ಅತಿ ಟ್ರಾಫಿಕ್‌ಯುಕ್ತ ನಗರಗಳು ಯಾವವು ಗೊತ್ತೆ?

01.ಬ್ಯಾಂಕಾಕ್, ಥೈಲ್ಯಾಂಡ್

ಪ್ರವಾಸಿಗರ ಆಯ್ಕೆಯಲ್ಲಿ ಮೊದಲನೇ ಸ್ಥಾನದಲ್ಲಿರುವ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್, ಟ್ರಾಫಿಕ ಸಮಸ್ಯೆಯಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಹಿಂದೆ ಸತತ ನಾಲ್ಕು ವರ್ಷಗಳ ಕಾಲ 'ವಿಶ್ವದ ಅತ್ಯುತ್ತಮ ನಗರ' ಎಂಬ ಬಿರುದು ಪಡೆದಿದ್ದ ಬ್ಯಾಂಕಾಕ್, ಇದೀಗ ಟ್ರಾಫಿಕ್ ಸಮಸ್ಯೆಯಿಂದಾಗಿ ಬಳಲುತ್ತಿದೆ. 1980ರ ನಂತರ ಕ್ಷಿಪ್ರ ಬೆಳವಣಿಗೆ ಕಂಡಿದ್ದ ಬ್ಯಾಂಕಾಕ್, ಪ್ರವಾಸಿಗರ ನೆಚ್ಚಿನ ತಾಣವಾಗುತ್ತಿದೆ. ಇದೇ ಕಾರಣಕ್ಕೆ ಅಲ್ಲಿ ತೀವ್ರ ಸಂಚಾರ ದಟ್ಟಣೆ ಉಲ್ಭಣಗೊಳ್ಳುತ್ತಿದೆ.

ಆಫ್ ರೋಡಿಂಗ್ ಪ್ರಿಯರಿಗಾಗಿ ಸಿದ್ಧಗೊಂಡಿರುವ ಜೀಪ್ ವ್ರ್ಯಾಂಗ್ಲರ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಟಾಪ್ 10 top 10
English summary
Here’s a list of top 10 cities with the worst traffic jam in the world in 2017, according to a survey by TomTom.
Story first published: Wednesday, February 22, 2017, 13:31 [IST]
Please Wait while comments are loading...

Latest Photos