ರೈತರ ಬೆನ್ನೆಲುಬು; ದೇಶದ ಅಗ್ರ 10 ಟ್ರ್ಯಾಕ್ಟರ್ ಸಂಸ್ಥೆಗಳು

By Nagaraja

ನೇಗಿಲ ಹಿಡಿದ, ಹೊಲದೊಳು ಹಾಡುತ, ಉಳುವ ಯೋಗಿಯ ನೋಡಲ್ಲಿ... ಎಂಬ ರಾಷ್ಟ್ರಕವಿ ಕುವೆಂಪು ಅವರ ನಾಡ ರೈತ ಕವನ ಈಗಲೂ ಎಲ್ಲರ ಮನದಲ್ಲಿ ನಲಿದಾಡುತ್ತಿದೆ. ಆಧುನಿಕ ತಂತ್ರಜ್ಞಾನದ ಅವಿಷ್ಕಾರದೊಂದಿಗೆ ರೈತರೂ ತಮ್ಮ ಕೃಷಿ ಚಟುವಟಿಕೆಗಳಲ್ಲಿ ಹೊಸ ಉಪಕರಣಗಳ ನೆರವನ್ನು ಪಡೆಯುತ್ತಿದ್ದಾರೆ.

ಇವುಗಳಲ್ಲಿ 'ಟ್ರ್ಯಾಕ್ಟರ್' ರೈತರ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಾಟ್ಟಿದೆ. ಈ ನಿಟ್ಟಿನಲ್ಲಿ ದೇಶದ ಮುಂಚೂಣಿಯ ಸಂಸ್ಥೆಗಳು ಅತ್ಯುತ್ತಮ ಟ್ರ್ಯಾಕ್ಟರ್ ಗಳನ್ನು ಒದಗಿಸುತ್ತಿದೆ. ಪ್ರಸ್ತುತ ಲೇಖನದಲ್ಲಿ ದೇಶದ ಅಗ್ರ 10 ಟ್ಯಾಕ್ಟರ್ ಸಂಸ್ಥೆಗಳ ಬಗ್ಗೆ ಚರ್ಚಿಸಲಿದ್ದೇವೆ.

10. ಸ್ಟ್ಯಾಂಡರ್ಡ್ ಟ್ರ್ಯಾಕ್ಟರ್ಸ್

10. ಸ್ಟ್ಯಾಂಡರ್ಡ್ ಟ್ರ್ಯಾಕ್ಟರ್ಸ್

1975ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಸ್ಟ್ಯಾಂಡರ್ಡ್ ಟ್ರ್ಯಾಕ್ಟರ್ಸ್ ಕೃಷಿಕರಿಗೆ ವಿವಿಧ ತರಹದ ಅನುಕೂಲಗಳನ್ನು ಒದಗಿಸುತ್ತಿದೆ. ದೆಹಲಿ ತಳಹದಿಯ ಸಂಸ್ಥೆಯು ಪಂಜಾಬ್ ನಲ್ಲಿ ತಯಾರಿಕಾ ಘಟಕವನ್ನು ಹೊಂದಿದೆ.

09. ಪ್ರೀತ್ ಟ್ರ್ಯಾಕ್ಟರ್ಸ್

09. ಪ್ರೀತ್ ಟ್ರ್ಯಾಕ್ಟರ್ಸ್

1980ನೇ ದಶಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಪ್ರೀತ್ ಟ್ರ್ಯಾಕ್ಟರ್ಸ್ 30ರಿಂದ 90 ಅಶ್ವಶಕ್ತಿ ಉತ್ಪಾದಿಸುವಷ್ಟು ಸಮರ್ಥವಾದ ಟ್ರ್ಯಾಕ್ಟರ್ ಗಳನ್ನು ಒದಗಿಸುತ್ತಿದೆ.

08. ಬಲ್ವಾನ್ ಟ್ರ್ಯಾಕ್ಟರ್ಸ್

08. ಬಲ್ವಾನ್ ಟ್ರ್ಯಾಕ್ಟರ್ಸ್

ಫೋರ್ಸ್ ಮೋಟಾರ್ಸ್ ಅಧೀನತೆಯಲ್ಲಿರುವ ಬಲ್ವಾನ್ ಟ್ರ್ಯಾಕ್ಟರ್ಸ್ ಪುಣೆ ತಳಹದಿಯಲ್ಲಿ ಕಾರ್ಯಾಚಾರಿಸುತ್ತಿದೆ. 1957ರಿಂದಲೇ ಬಲ್ವಾನ್ ಟ್ರ್ಯಾಕ್ಟರ್ಸ್ ಮಾರಾಟದಲ್ಲಿದ್ದು, ವಾಣಿಜ್ಯ ಮತ್ತು ಪ್ರಯಾಣಿಕ ಟ್ರ್ಯಾಕ್ಟರ್ ಗಳನ್ನು ಒದಗಿಸುತ್ತಿದೆ.

07. ಎಚ್ ಎಂಟಿ ಲಿಮಿಟೆಡ್

07. ಎಚ್ ಎಂಟಿ ಲಿಮಿಟೆಡ್

ಎಚ್ ಎಂಟಿ ವಾಚ್ ಗಳು ಹೆಚ್ಚು ಜನಪ್ರಿಯ. ಕೇವಲ ವಾಚ್ ಮಾತ್ರವಲ್ಲದೆ ಟ್ರ್ಯಾಕ್ಟರ್ ವಿಭಾಗದಲ್ಲೂ ಎಚ್ ಎಂಟಿ ತನ್ನ ಪಾರುಪತ್ಯ ಮೆರೆದಿದೆಯೆಂದರೆ ಹಲವರಿಗೆ ಗೊತ್ತಿರದ ವಿಚಾರ. 1971ರಲ್ಲಿ ಸ್ಥಾಪನೆಯಾಗಿರುವ ಎಚ್ ಎಂಟಿ ಲಿಮಿಟೆಡ್ ಬೆಂಗಳೂರು ತಳಹದಿಯಲ್ಲಿ ಕಾರ್ಯಾಚರಿಸುತ್ತಿದೆ.

06. ನ್ಯೂ ಹೊಲ್ಯಾಂಡ್

06. ನ್ಯೂ ಹೊಲ್ಯಾಂಡ್

ದೇಶದ ಶ್ರೇಷ್ಠ ಟ್ರ್ಯಾಕ್ಟರ್ ಸಂಸ್ಥೆಗಳ ಪಟ್ಟಿಯಲ್ಲಿ ಇಟಲಿ ತಳಹದಿಯ ನ್ಯೂ ಹೊಲ್ಯಾಂಡ್ ಆರನೇ ಸ್ಥಾನದಲ್ಲಿದೆ. ಗ್ರಾಹಕ ಸ್ನೇಹಿ ಎಂಬ ಏಕ ಕಾರಣಕ್ಕಾಗಿ ಹೊಲ್ಯಾಂಡ್ ಟ್ರ್ಯಾಕ್ಟರ್ ಗಳು ಹೆಚ್ಚು ಜನಮನ್ನಣೆಗೆ ಪಾತ್ರವಾಗಿದೆ. 1996ರಲ್ಲಿ ನೆಲೆಗೆ ಬಂದಿರುವ ಸಂಸ್ಥೆ ಈಗಾಗಲೇ 2.5 ಲಕ್ಷಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳನ್ನು ಮಾರಾಟ ಮಾಡಿದೆ.

05. ಜಾನ್ ಡೀರ್

05. ಜಾನ್ ಡೀರ್

ಅಮೆರಿಕ ತಳಹದಿಯ ಸಂಸ್ಥೆಯಾಗಿರುವ ಜಾನ್ ಡೀರ್ ಭಾರತದಲ್ಲೂ ಗಮನಾರ್ಹ ಸಾಧನೆ ಮಾಡಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಒಂದುವರೆ ಶತಮಾನಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಜಾನ್ ಡೀರ್ 1837ನೇ ಇಸವಿಯಲ್ಲಿ ಸ್ಥಾಪನೆಯಾಗಿತ್ತು.

04. ಸೊನಲಿಕಾ ಇಂಟರ್ ನ್ಯಾಷನಲ್

04. ಸೊನಲಿಕಾ ಇಂಟರ್ ನ್ಯಾಷನಲ್

ನಾಲ್ಕನೇ ಸ್ಥಾನದಲ್ಲಿರುವ ಪಂಜಾಬ್ ತಳಹದಿಯ ಸೊನಲಿಕಾ ಇಂಟರ್ ನ್ಯಾಷನಲ್ ಭಾರತದ ಅತಿ ಪುರಾತನ ಟ್ರ್ಯಾಕ್ಟರ್ ಸಂಸ್ಥೆಗಳಲ್ಲಿ ಒಂದಾಗಿದೆ. 2004ರಲ್ಲಿ ಸೊನಾಲಿಕಾ ಸಂಸ್ಥೆಯು ಪ್ರಯಾಣಕಿ ಕಾರು ವಿಭಾಗಕ್ಕೂ ಎಂಟ್ರಿ ಕೊಟ್ಟಿತ್ತು.

03. ಎಸ್ಕಾರ್ಟ್ಸ್ ಅಗ್ರಿ ಮೆಷಿನರಿ

03. ಎಸ್ಕಾರ್ಟ್ಸ್ ಅಗ್ರಿ ಮೆಷಿನರಿ

ಭಾರತದ ವ್ಯವಸಾಯಿಕ ವಲಯದಲ್ಲಿ ಹೆಚ್ಚು ಜನಪ್ರಿಯತೆ ಕಾಪಾಡಿಕೊಂಡಿರುವ ಎಸ್ಕಾರ್ಟ್ಸ್ ಅಗ್ರಿ ಮೆಷಿನರಿ ಸಂಸ್ಥೆಯು 40ರಷ್ಟು ರಾಷ್ಟ್ರಗಳಿಗೆ ರಫ್ತು ಮಾಡುತ್ತಿವೆ.

02. ಟ್ರ್ಯಾಕ್ಟರ್ಸ್ ಆ್ಯಂಡ್ ಫಾರ್ಮ್ ಎಕ್ಯೂಪ್ ಮೆಂಟ್ ಲಿಮಿಟೆಡ್ (ಟಿಎಎಫ್ ಇ)

02. ಟ್ರ್ಯಾಕ್ಟರ್ಸ್ ಆ್ಯಂಡ್ ಫಾರ್ಮ್ ಎಕ್ಯೂಪ್ ಮೆಂಟ್ ಲಿಮಿಟೆಡ್ (ಟಿಎಎಫ್ ಇ)

ಚೆನ್ನೈ ತಳಹದಿಯ ಟ್ರ್ಯಾಕ್ಟರ್ಸ್ ಆ್ಯಂಡ್ ಫಾರ್ಮ್ ಎಕ್ಯೂಪ್ ಮೆಂಟ್ ಲಿಮಿಟೆಡ್ ಸಂಸ್ಥೆಯು 1960ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಮಸ್ಸೆ, ಫೆರ್ಗ್ಯೂಸನ್ ಮತ್ತು ಟಫೆ ಸಂಸ್ಥೆಯ ಕೆಲವು ಜನಪ್ರಿಯ ಟ್ರ್ಯಾಕ್ಟರ್ ಮಾದರಿಗಳಾಗಿವೆ. 2005ರಲ್ಲಿ ಹೆಸರಾಂತ ಈಚರ್ ಮೋಟಾರ್ಸ್ ಅಧೀನತೆಯನ್ನು ಪಡೆದಿತ್ತು.

01. ಮಹೀಂದ್ರ

01. ಮಹೀಂದ್ರ

ಪ್ರಯಾಣಿಕ ಕಾರು, ಟ್ರಕ್ ಹೀಗೆ ಎಲ್ಲ ಆಟೋಮೊಬೈಲ್ ಕ್ಷೇತ್ರದಲ್ಲೂ ಅಧಿಪತ್ಯ ಸ್ಥಾಪಿಸಿರುವ ಮಹೀಂದ್ರ, ಟ್ರ್ಯಾಕ್ಟರ್ ವಿಭಾಗದಲ್ಲೂ ಅತ್ಯುತ್ತಮ ಉತ್ಪನ್ನಗಳನ್ನು ಒದಗಿಸುತ್ತಿದೆ. ಮಹೀಂದ್ರ ಟ್ರ್ಯಾಕ್ಟರ್ಸ್ 1964ನೇ ಇಸವಿಯಿಂದಲೇ ಕಾರ್ಯಾಚರಣೆ ನಡೆಸಿತ್ತಿದ್ದು, ಜಗತ್ತಿನಲ್ಲೇ ಮುಂಚೂಣಿಯ ಸ್ಥಾನವನ್ನು ಕಾಪಾಡಿಕೊಂಡಿದೆ.

ರೈತರ ಬೆನ್ನೆಲುಬು; ದೇಶದ ಅಗ್ರ 10 ಟ್ರ್ಯಾಕ್ಟರ್ ಸಂಸ್ಥೆಗಳು

ಇಲ್ಲಿ ಕೊಟ್ಟಿರುವ ಪಟ್ಟಿಯಲ್ಲಿ ನಿಮ್ಮ ಫೇವರಿಟ್ ಟ್ರ್ಯಾಕ್ಟರ್ ಯಾವುದು ?

Most Read Articles

Kannada
English summary
Top 10 Tractor Companies In India
Story first published: Monday, May 9, 2016, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X