ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

By Nagaraja

ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಟೊಯೊಟಾ ಇನ್ನೋವಾ ಕ್ರೈಸ್ಟಾ ಭಾರಿ ಬೇಡಿಕೆಯನ್ನು ಕಾಯ್ದುಕೊಂಡಿದೆ. ಹಾಗಿರಬೇಕೆಂದರೆ ಇನ್ನೋವಾ ಕ್ರೈಸ್ಟಾ ಪರಿಷ್ಕೃತ ಆವೃತ್ತಿಯೊಂದು ಪ್ರತ್ಯಕ್ಷಗೊಂಡಿದ್ದು, ವಾಹನ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ.

ತಮಿಳುನಾಡಿದ ಕೊಯಂಬತ್ತೂರು ತಳಹದಿಯ ವಾಹನ ಮಾರ್ಪಾಡು ಸಂಸ್ಥೆ ಕಿಟ್ ಅಪ್ ಆಟೋಮೋಟಿವ್ ಇನ್ನೋವಾಗೆ ಹೊಸ ವಿನ್ಯಾಸವನ್ನು ಕಲ್ಪಿಸಿ ಕೊಟ್ಟಿದೆ. ಈ ಸಂಬಂಧ ವಿವರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಇನ್ನೋವಾ ಕ್ರೈಸ್ಟಾ ಕಾರಿನ ಮುಂಭಾಗವನ್ನು ಸಂಪೂರ್ಣವಾಗಿ ಮರು ವಿನ್ಯಾಸಗೊಳಿಸಲಾಗಿದೆ. ಇದು ಈ ಬಹು ಬಳಕೆಯ ವಾಹನಕ್ಕೆ ನೈಜ ಕಾರಿನ ವಿನ್ಯಾಸವನ್ನು ತುಂಬುತ್ತಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಕಾರಿನ ಕೆಳ ಭಾಗದ ವರೆಗೂ ವಿನ್ಯಾಸ ವೃದ್ಧಿಸಿಕೊಳ್ಳಲಾಗಿದ್ದು, ಕಡಿಮೆ ರಸ್ತೆ ಸಾನಿಧ್ಯವನ್ನು ಕಾಣಬಹುದಾಗಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಇಲ್ಲಿ 19 ಇಂಚುಗಳ ಚಕ್ರಗಳ ಜೊತೆಗೆ ಪಿಯಾನೊ ಬ್ಲ್ಯಾಕ್ ರೂಫ್ ಫಿನಿಶಿಂಗ್ ಇರಲಿದೆ. ಇದು ಕಾರಿಗೆ ಪ್ರೀಮಿಯಂ ಸ್ಪರ್ಶವನ್ನು ತುಂಬಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಪರಿಷ್ಕೃತ ಇನ್ನೋವಾ ಕ್ರೈಸ್ಟಾದಲ್ಲಿ ಡೇ ಟೈಮ್ ರನ್ನಿಂಗ್ ಬೆಳಕಿನ ಸೇವೆಯನ್ನು ಕೊಡಲಾಗಿದೆ. ಜೊತೆಗೆ ಎಲ್ ಇಡಿ ಫಾಗ್ ಲ್ಯಾಂಪ್ ಕೂಡಾ ಇರಲಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಕಾರಿನ ಬದಿಯಲ್ಲೂ ಸರಳ ಹಾಗೂ ಶುಭ್ರ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ. ಡೋರ್ ಕೆಳಭಾಗದಲ್ಲಿ ಬದಲಾವಣೆ ಮಾಡಲಾಗಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಹಿಂಬದಿಯಲ್ಲಿನ ರಿಯರ್ ಸ್ಪಾಯ್ಲರ್ ಇನ್ನೋವಾಗೆ ಕ್ರೀಡಾತ್ಮಕ ಶೈಲಿಯನ್ನು ನೀಡಲಿದೆ. ಎಕ್ಸಾಸ್ಟ್ ಕೊಳವೆಗೂ ಫಿನಿಶಿಂಗ್ ಟಚ್ ನೀಡಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಿಂದುಗಡೆ ಡ್ಯುಯಲ್ ರಿಯರ್ ಸ್ಪಾಯ್ಲರ್ ಜೋಡಣೆ ಮಾಡಿರುವುದು ಕಂಡುಬರುತ್ತದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಕಾರಿನೊಳಗೆ ಲೆಥರ್ ಸೀಟುಗಳು ಆಕರ್ಷಕವೆನಿಸುತ್ತಿದ್ದು, ಹೆಚ್ಚು ಪ್ರೀಮಿಯಂ ವಿನ್ಯಾಸವನ್ನು ತುಂಬುತ್ತದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಕಾರಿನ ಡೋರ್ ಗಳಲ್ಲೂ ಲೆಥರ್ ಹೋದಿಕೆಯು ಮತ್ತಷ್ಟು ಐಷಾರಾಮಿ ಅನುಭವನ್ನು ನೀಡಲಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಅದೇ ರೀತಿ ಡ್ಯಾಶ್ ಬೋರ್ಡ್ ನಲ್ಲೂ ಲೆಥರ್ ಹೋದಿಕೆಗಳನ್ನು ಜೋಡಿಸಲಾಗಿದ್ದು, ನಿಮ್ಮ ಪ್ರಯಾಣವನ್ನು ಆನಂದದಾಯಕವಾಗಿಸಲಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಮ್ಯೂಸಿಕ್ ಸಿಸ್ಟಂಗಳಲ್ಲೂ ಬದಲಾವಣೆಗಳನ್ನು ತರಲಾಗಿದೆ. ಇಲ್ಲಿ ಎರಡನೇ ಸಾಲಿನ ಪ್ರಯಾಣಿಕರಿಗೂ ಸೀಟುಗಳಲ್ಲಿ ಜೋಡಿಸಲಾಗಿರುವ ಮಾನಿಟರ್ ಸೇವೆಯಿರಲಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಮನರಂಜನೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಸಬ್ ವೂಫರ್ ಸೌಂಡ್ ಸಿಸ್ಟಂ ಸಹ ಇರಲಿದೆ.

ಹೊಸ ಸ್ವರೂಪದಲ್ಲಿ ಇನ್ನೋವಾ ಕ್ರೈಸ್ಟಾ ಚಮಕ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಇದು 2.4 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ 343 ಎನ್ ಎಂ ತಿರುಗುಬಲದಲ್ಲಿ 148 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 2.8 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ 360 ಎನ್ ಎಂ ತಿರುಗುಬಲದಲ್ಲಿ 172 ಅಶ್ವಶಕ್ತಿಯನ್ನು ನೀಡಲಿದೆ.

Most Read Articles

Kannada
English summary
Toyota Innova Crysta Modified — Scooped Inside Out!
Story first published: Friday, August 5, 2016, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X