ದುಬಾರಿ ದಂಡಕ್ಕೆ ಹಲವು ರಾಜ್ಯಗಳ ವಿರೋಧ
ಈ ವರ್ಷದ ಆರಂಭದಲ್ಲಿ ಸಂಸತ್ತು ಅಂಗೀಕರಿಸಿದ ಮೋಟಾರು ವಾಹನ (ಎಂವಿ) ಕಾಯ್ದೆಯನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ 1ರಿಂದ ಭಾರತದ್ಯಾಂತ ಜಾರಿಗೊಳಿಸಿದರು. ಆದರೆ ಹೊಸ ಎಂವಿ ಕಾಯ್ದೆ ತಿದ್ದುಪಡಿಯ ಕುರಿತು ಹಲವು ರಾಜ್ಯಗಳು ವಿಭಿನ್ನ ಅಭಿಪ್ರಯಾಗಳನ್ನು ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಸರ್ಕಾರವು ಈ ಹಿಂದೆ ಹೊಸ ಸಂಚಾರ ನಿಯಮಗಳನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದೆ.

ಪಶ್ಚಿಮ ಬಂಗಾಳ ಸರ್ಕಾರದ ಪ್ರಕಾರ ದಂಡವು ದುಬಾರಿ ಮತ್ತು ಇದು ಭಷ್ಟಾಚಾರ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ಹೊಸ ಎಂವಿ ಕಾಯ್ದೆಯ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಅಧಿಕೃತವಾಗಿ ತಮ್ಮ ನಿಲುವನ್ನು ಘೋಷಿಸಿದ ಬಳಿಕ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ಸರ್ಕಾರಗಳು ಕೂಡ ಇದೆ ನಿಲುವನ್ನು ಹೊಂದಿದ್ದು, ಹೊಸ ಎಂವಿ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಗುಜರಾತ್ ಸರ್ಕಾರವು ಹೆಚ್ಚಿನ ದಂಡದ ಕುರಿತು ವರದಿ ಸಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಧಿಕಾರಿಗಳಿಂದ ವರದಿ ಲಭಿಸಿದ ಬಳಿಕ ಅದನ್ನು ಪರಿಶೀಲಿಸಿ ನಂತರ ಎಂವಿ ಕಾಯ್ದಿಯ ಪ್ರಕಾರ ದಂಡವನ್ನು ಜಾರಿಗೆ ತರುತ್ತೆವೆ ಎಂದು ತಿಳಿಸಿದೆ.

ಈ ಪ್ರಕ್ರಿಯೆಗೆ ಎಷ್ಟು ವಾರಗಳು ಅಥವಾ ತಿಂಗಳುಗಳನ್ನು ತೆಗೆದುಕೊಳ್ಳಬಹುದು ಎಂಬುವುದರ ಕುರಿತು ಸ್ಪಷ್ಟವಾದ ಮಾಹಿತಿ ಇಲ್ಲ. ಅಲ್ಲದೆ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತರುತ್ತದೆಯೇ ಅಥವಾ ವರದಿ ಬರುವವರೆಗೂ ಹಿಂದಿನ ನಿಯಮವನ್ನೇ ಅನುಸರಿಸುತ್ತಾ ಎಂಬುವುದರ ಬಗ್ಗೆಯೂ ಮಾಹಿತಿ ಇಲ್ಲ.

ಮಧ್ಯಪ್ರದೇಶ ಸರ್ಕಾರವು ಎಂವಿ ಕಾಯ್ದೆಯ ಕುರಿತು ವರದಿ ಸಲ್ಲಿಸಲು ಹೊಸ ಸಮಿತಿಯನ್ನು ನೇಮಿಸಿದ್ದಾರೆ. ಸಮಿತಿಯು ವರದಿ ಸಲ್ಲಿಸಿ ಹೊಸ ಕಾಯ್ದೆಯು ಅಧಿಕೃತವಾಗಿ ಕಾರ್ಯರೂಪಕ್ಕೆ ಬರುವವರಿಗೆ ಮೊದಲು ಇದ್ದ ನಿಯಮಗಳನ್ನೇ ಪಾಲಿಸುತ್ತಾರೆ. ಹೊಸ ಕಾಯ್ದೆಯನ್ನು ಯಾವುದೇ ಬದಲಾವನೆಗಳಿಲ್ಲದೆ ಜಾರಿಗೆ ತರಲಾಗುತ್ತದೆಯೇ ಅಥವಾ ರಾಜ್ಯದಲ್ಲಿ ಜಾರಿಗೆ ಬರುವ ಮೊದಲು ಅವುಗಳನ್ನು ಮಾರ್ಪಡಿಸಲಾಗುತ್ತದೆಯೇ ಎಂದು ಮಧ್ಯಪ್ರದೇಶ ಸರ್ಕಾರವು ಸ್ಪಷ್ಟಪಡಿಸಿಲ್ಲ.

ರಾಜಸ್ಥಾನ ರಾಜ್ಯ ಸರ್ಕಾರವೂ ಹೊಸ ನಿಯಮಗಳನ್ನು ವಿರೋಧಿಸಿದೆ ಮತ್ತು ಶೀಘ್ರದಲ್ಲಿ ಎಂವಿ ಕಾಯ್ದೆಯನ್ನು ಜಾರಿಗೆ ತರುವುದಿಲ್ಲವೆಂದು ಹೇಳಿದೆ. ದಂಡವು ಅತಿಯಾಗಿ ಹೆಚ್ಚಾಗಿದ್ದು, ಸಾಮಾನ್ಯ ಪ್ರಯಾಣಿಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಹೊಸ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ರಾಜಸ್ಥಾನ ಸಾರಿಗೆ ಸಚಿವರು ಸಿಎನ್ಎನ್‍ಗೆ ತಿಳಿಸಿದ್ದಾರೆ. ಪಂಜಾಬ್ ಸಹ ಹೊಸ ಕಾಯ್ದೆಯನ್ನು ವಿರೋಧಿಸಿದೆ ಮತ್ತು ದಂಡವು ಅಧಿಕವಾಗಿದೆ ಎಂದು ಹೇಳಿದ್ದಾರೆ.

ದಂಡ ಅತಿಯಾಗಿರುವುದರಿಂದ ಭ್ರಷ್ಟಾಚಾರವನ್ನು ಹೆಚ್ಚಿಸುತ್ತದೆ ಮತ್ತು ಆಕ್ರಮವಾಗಿ ರಸ್ತೆಗಳಲ್ಲಿ ಸಂಚಾರಿಸುವ ವಾಹನ ಚಾಲಕರ ಬಳಿ ಹೆಚ್ಚು ಲಂಚ ಪಡೆಯುತ್ತಾರೆ ಎಂದು ರಾಜ್ಯ ಸರ್ಕಾರಗಳ ವಾದವಾಗಿದೆ. ಇದು ಪ್ರಯಾಣಿಕರಿಗೆ ಕಿರುಕುಳ ನೀಡಿದಂತೆ ಆಗುತ್ತದೆ. ಆದರೆ ಇಲ್ಲಿ ಗಮನಿಸಬೇಕಾಗಿರುವುದು ವಾಹನ ಚಾಲಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರಾ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಹೊಸ ದಂಡವನ್ನು ವಿಧಿಸಲಾಗಿದೆ ಎಂದು ಗಮನಿಸಬೇಕು.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಪ್ರಸ್ತುತ ಭಾರತೀಯ ರಸ್ತೆಗಳು ಪ್ರತಿವರ್ಷವು ಅಪಘಾತಗಳ ಸಂಖ್ಖೆ ಹೆಚ್ಚುತ್ತಿದ್ದು, ಭಾರತೀಯ ರಸ್ತೆಗಳು ವಿಶ್ವದ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ. ಅಪರಾಧಗಳಿಗೆ ಕನಿಷ್ಠ ದಂಡವನ್ನು 1,000 ರೂ.ಗೆ ಹೆಚ್ಚಿಸಲಾಗಿದ್ದು, ಕುಡಿದು ವಾಹನ ಚಲಾಯಿಸುವುದು ಮತ್ತು ರಸ್ತೆಗಳಲ್ಲಿ ತುರ್ತು ವಾಹನಗಳಿಗೆ ಅಡ್ಡಿಯುಂಟುಮಾಡುವಂತಹ ಗಂಭೀರ ಅಪರಾಧಗಳಿಗೆ ಈಗ ದಂಡ 10,000 ರೂ. ದಂಡವನ್ನು ಪ್ರತಿವರ್ಷ ಶೇಕಡಾ 10ರಷ್ಟು ಹೆಚ್ಚಿಸಬಹುದು.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಸಮಾನ್ಯ ರಸ್ತೆ ನಿಯಮ ಉಲ್ಲಂಘನೆಗೆ ದಂಡವನ್ನು ರೂ.1,000 ಕ್ಕೆ ಹೆಚ್ಚಾಸಲಾಗಿದ್ದು, ಕುಡಿದು ವಾಹನ ಚಲಾಯಿಸುವುದು ಮತ್ತು ತುರ್ತು ವಾಹನಗಳಿಗೆ ಅಡ್ಡಿಯುಂಟುಮಾಡುವಂತಹ ಗಂಭೀರ ಅಪರಾಧಗಳಿಗೆ ದಂಡ ರೂ.10.000, ಈ ದಂಡವನ್ನು ಪ್ರತಿವರ್ಷ ಶೇಕಡಾ 10 ರಷ್ಟು ಹೆಚ್ಚಿಸಬಹುದಾಗಿದೆ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ರಾಷ್ಟ್ರದ ರಾಜಧಾನಿ ದೆಹಲಿ ಸೇರಿದಂತೆ ಇತರ ರಾಜ್ಯಗಳು ಈಗ ಹೊಸ ಎಂವಿ ಕಾಯ್ದೆಯನ್ನು ಜಾರಿಗೆ ತಂದಿದೆ. ಅನೇಕ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರಿಗೆ ನ್ಯಾಯಲದ ಚಲನ್ ಅನ್ನು ನೀಡಿದ್ದಾರೆ. ಅನೇಕ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಅನ್‍ಲೈನ್‍ನಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ. ಹೊಸ ಮೋಟಾರು ವಾಹನ ಕಾಯ್ದೆ ಪ್ರಕಾರ ಸ್ಥಳದಲ್ಲೇ ದಂಡ ಪಾವತಿಸುವ ಅಗತ್ಯವಿಲ್ಲ.


Click it and Unblock the Notifications








