TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಮೊದಲ ಬಾರಿಗೆ ಬೋಟ್ ಸರ್ವಿಸ್ ಆರಂಭಿಸಿದ ಉಬರ್- ಪ್ರಯಾಣದ ದರಗಳು ಎಷ್ಟು ಗೊತ್ತಾ?
ಮುಂಬೈ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಕ್ಯಾಬ್ ಸೇವೆಗಳು ಇಲ್ಲವಾದಲ್ಲಿ ಏನೆಲ್ಲಾ ಆಗಬಹುದು ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಹೀಗಾಗಿ ಹತ್ತಾರು ಪ್ರಮುಖ ಸಂಸ್ಥೆಗಳು ಇಂದು ಆ್ಯಪ್ ಮೂಲಕ ಕ್ಯಾಬ್ ಸೇವೆಗಳನ್ನು ಆರಂಭಿಸಿರುವುದಲ್ಲದೇ ಕೋಟ್ಯಾಂಟರ ರೂಪಾಯಿ ವಹಿವಾಟು ನಡೆಸುತ್ತಿದ್ದು, ಇವುಗಳಲ್ಲಿ ಮುಂಚೂಣಿಯಲ್ಲಿರುವ ಉಬರ್ ಸಂಸ್ಥೆಯು ಇದೀಗ ಮತ್ತೊಂದು ಹೊಸ ಮಾದರಿಯ ಕ್ಯಾಬ್ ಸೇವೆ ಆರಂಭಿಸಿದೆ.
ಹೌದು, ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ಯಾಬ್ ಸೇವೆಗಳನ್ನು ನೀಡುತ್ತಿರುವ ಉಬರ್ ಸಂಸ್ಥೆಯು ಯಶಸ್ವಿಯಾಗಿರುವುದಲ್ಲದೇ ಮುಂಬರುವ ದಿನಗಲ್ಲಿ ಹಾರುವ ಕಾರುಗಳ ಸೇವೆಯನ್ನು ಸಹ ಆರಂಭಿಸುವ ತವಕದಲ್ಲಿದ್ದು, ಇದೀಗ ಆ್ಯಪ್ ಮೂಲಕ ಬೋಟ್ ಸೇವೆಗಳನ್ನು ಆರಂಭಿಸಿ ಭಾರೀ ಪ್ರಮಾಣದ ಆದಾಯ ಗಳಿಕೆ ಯೋಜನೆ ರೂಪಿಸಿದೆ.
ಉಬರ್ ಸಂಸ್ಥೆಯು ಇದೇ ಮೊದಲ ಬಾರಿಗೆ ಭಾರತದಲ್ಲಿ ಬೋಟ್ ಸರ್ವಿಸ್ ತೆರೆಯುವ ಮೂಲಕ ಹೊಸ ಉದ್ಯಮಕ್ಕೆ ಚಾಲನೆ ನೀಡಿದ್ದು, ಇನ್ಮುಂದೆ ವಾಣಿಜ್ಯ ನಗರಿ ಮುಂಬೈನಲ್ಲಿ ಆ್ಯಪ್ ಆಧಾರಿತ ಬೋಟ್‌ಗಳ ಸೇವೆಗಳು ಹೆಚ್ಚಲಿವೆ.
ಕ್ಯಾಬ್ ಬುಕ್ ಮಾಡುವ ರೀತಿಯಲ್ಲೇ ಉಬರ್ ಬೋಟ್ ಸೇವೆಗಳಿಗಳಿಗೂ ಆ್ಯಪ್ ಮೂಲಕವೇ ಬುಕ್ ಮಾಡಬಹುದಾಗಿದ್ದು, ಮುಂಬೈನ ಗೇಟ್ ವೇ ಇಂಡಿಯಾದಿಂದ ಎಲಿಪಾಂಟ್ ಐಲ್ಯಾಂಡ್ ಹಾಗೂ ಗೇಟ್ ವೇ ಇಂಡಿಯಾದಿಂದ ಮಂದ್ವಾ ಜೆಟ್ಟಿ ರೋಡ್ ಪಾಯಿಂಟ್ ತನಕ ಬೋಟ್ ಸೇವೆಗಳು ಲಭ್ಯವಿರಲಿವೆ.
ಸದ್ಯ ಗೇಟ್ ವೇ ಇಂಡಿಯಾದಿಂದ ಮಂದ್ವಾ ಜೆಟ್ಟಿ ರೋಡ್ ತಲುಪಲು 98 ಕಿ.ಮಿ ರಸ್ತೆ ಮಾರ್ಗವನ್ನು ತಲುಪಲು ಕನಿಷ್ಠ 3 ಗಂಟೆ 50 ನಿಮಿಷ ಕಾಲವಧಿ ತೆಗೆದುಕೊಳ್ಳುವುದಲ್ಲದೇ ಟ್ರಾಫಿಕ್ ದಟ್ಟಣೆ ಇನ್ನಷ್ಟು ಹೈರಾಣಾಗಿಸುತ್ತೆ. ಹೀಗಾಗಿ ಈ ಮಾರ್ಗವನ್ನು ತಲುಪಲು ಉಬರ್ ಬೋಟಿಂಗ್ ಸೇವೆಗಳು ಮಹತ್ವವಾಗಿವೆ.
ಇದರ ಜೊತೆಗೆ ವಾರಾಂತ್ಯಗಳಲ್ಲಿ ಗೇಟ್ ವೇ ಇಂಡಿಯಾದಿಂದ ಎಲಿಪಾಂಟ್ ಐಲ್ಯಾಂಡ್ ನಡುವೆ ಸಮುದ್ರಯಾನ ಮಾಡ ಬಯುಸುವ ಪ್ರವಾಸಿಗರಿಗೂ ಇದು ಅನುಕೂಲಕರವಾಗಲಿದ್ದು, ಕೈಗೆಟುಕುವ ದರಗಳಲ್ಲಿ ಹೊಸ ಬೋಟ್ ಸೇವೆಗಳನ್ನು ತೆರೆಯಲಾಗಿದೆ.
ಬೋಟಿಂಗ್ ಸೇವಗಳೊಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಭದ್ರತೆ ಒದಗಿಸಿರುವ ಉಬರ್ ಸಂಸ್ಥೆಯು, ಪ್ರಯಾಣಿಕರಿಗೆ ಲೈಫ್ ಜಾಕೇಟ್, ತುರ್ತು ಕರೆ ಸೌಲಭ್ಯ, ಸುರಕ್ಷಾ ಕ್ರಮಗಳ ಮಾಹಿತಿ ಪಟ್ಟಿ ಮತ್ತು ಅಗ್ನಿ ಅವಘಡ ಗಳಿಂದ ತಪ್ಪಿಸಿಕೊಳ್ಳಲು ಹಲವು ಆಧುನಿಕ ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ.
ಹೀಗಾಗಿ ನೀಡಿರುವ ಹೊಸ ಸೌಲಭ್ಯಗಳಿಗೆ ಅನುಗುಣವಾಗಿ ದರ ನಿಗದಿ ಮಾಡಲಾಗಿದ್ದು, ಎರಡು ಮಾದರಿಯ ಬೋಟ್‌ಗಳನ್ನು ಸೇವೆಗೆ ಲಭ್ಯವಿರಲಿವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಟು 8 ಸೀಟರ್ ಮತ್ತು 10 ಪ್ಲಸ್ ಸೀಟರ್ ಬೋಟ್‌ಗಳನ್ನು ಆಯ್ಕೆ ಮಾಡಬಹುದು.
6 ಟು 8 ಸೀಟರ್ ಬೋಟ್‌ಗಳಿಗೆ ರೂ.5700 ದರ ನಿಗದಿ ಮಾಡಿದ್ದರೆ 10 ಪ್ಲಸ್ ಸೀಟರ್ ಬೋಟ್ ಸೇವೆಗಳಿಗೆ ರೂ. 9500 ದರ ನಿಗದಿ ಮಾಡಲಾಗಿದ್ದು, ಗುಂಪುಗಳಲ್ಲಿ ಬೋಟ್ ಪ್ರಯಾಣಿಸುವ ಪ್ರತಿ ಗ್ರಾಹಕರಿಗೆ ಸರಾಸರಿಯಾಗಿ ರೂ.750 ಪಾವತಿಸಬೇಕಾಗುತ್ತೆ.
ಒಂದು ವೇಳೆ ನೀವು ಬೋಟ್‌ನಲ್ಲಿ ಸಿಂಗಲ್ ಆಗಿ ಪ್ರಯಾಣ ಬಯಸುವುದಾದರೇ ಪೂರ್ಣ ಪ್ರಮಾಣದ ದರವನ್ನು ಒಬ್ಬರೇ ಪಾವತಿಸಬೇಕಿದ್ದು, ಪ್ರಾಯೋಗಿಕ ಸೇವೆಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ.
MOST READ: ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ..!
ಮಹಾರಾಷ್ಟ್ರ ಸರ್ಕಾರದ ಮರಿಟೈಮ್ ಬೋರ್ಡ್ ಸಹಯೋಗದಲ್ಲಿ ಹೊಸ ಸೇವೆಯನ್ನು ಆರಂಭಿಸಲಾಗಿದ್ದು, ಇದು ಬೋಟಿಂಗ್ ಕೌಶಲ್ಯ ಹೊಂದಿರುವ ಸ್ಥಳೀಯರಿಗೂ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಉಬರ್ ಸಂಸ್ಥೆಯು ಹೇಳಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಉಬರ್ ಇಂಡಿಯಾ ಮುಖ್ಯಸ್ಥ ಪ್ರಬ್ಜಿತ್ ಸಿಂಗ್ ಅವರು, ಮುಂಬೈನ ಪ್ರಮುಖ ಸ್ಥಳಗಳ ನಡುವಿನ ಪ್ರಯಾಣದ ಅವಧಿಯನ್ನು ತಗ್ಗಿಸಲು ಹೊಸ ಸೇವೆ ಆರಂಭಿಸಲಾಗಿದ್ದು, ಪ್ರಾಯೋಗಿಕವಾಗಿ ತೆರೆಯಲಾಗಿರುವ ಬೋಟ್ ಸರ್ವಿಸ್ ಯಶಸ್ವಿಯಾದಲ್ಲಿ ದೇಶದ ಪ್ರಮುಖ ನಗರಗಳಲ್ಲಿಯೂ ಬೋಟ್ ಸರ್ವಿಸ್ ತೆರೆಯುವ ಯೋಜನೆ ಇದೆ ಎಂದಿದ್ದಾರೆ.
MOST READ: ಬೆಂಗಳೂರಿನಲ್ಲಿ ರಸ್ತೆಗಿಳಿಯಲು ಸಜ್ಜಾದ 3 ಸಾವಿರ ಎಲೆಕ್ಟ್ರಿಕ್ ಬಸ್‌ಗಳು..!
ಇದರಲ್ಲಿ ಪ್ರಮುಖ ಪ್ರಮುಖವಾಗಿ ಚೈನ್ನೈ, ಗೋವಾ, ಮಂಗಳೂರು, ಗುಜರಾತ್, ಕೋಲ್ಕತ್ತಾ ಮತ್ತು ಕೆರಳದಲ್ಲಿ ಬೋಟಿಂಗ್ ಸೇವೆಗಳನ್ನು ತೆರೆಯಲು ವಿಫುಲ ಅವಕಾಶಗಳಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ಯೋಜನೆ ರೂಪಿಸುವುದಾಗಿ ಸುಳಿವು ನೀಡಿದ್ದಾರೆ.
ಇನ್ನು ಕ್ಯಾಬ್ ಸೇವೆಗಳಲ್ಲಿ ಹೊಸ ಬದಲಾವಣೆಗೆ ನಾಂದಿಹಾಡುತ್ತಿರುವ ಉಬರ್ ಸಂಸ್ಥೆಯು ಮುಂಬರುವ 2021ರಿಂದಲೇ ಯುರೋಪ್ ರಾಷ್ಟ್ರ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ಆರಂಭಿಸುತ್ತಿದ್ದು, ಇದಕ್ಕಾಗಿಯೇ ಈಗಾಗಲೇ ಹಲವಾರು ವಿಮಾನಯಾನ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸುತ್ತಿದೆ.