ಭಾರತದ ವಾಯು ಪ್ರದೇಶದ ಸುರಕ್ಷತೆ ಕಾಯುವ ಯುದ್ಧ ವಿಮಾನಗಳು

By Nagaraja

ಭಾರತೀಯ ಸಶಸ್ತ್ರ ಸೇನಾಪಡೆಯ ಭಾಗವಾಗಿರುವ ಭಾರತೀಯ ವಾಯುಸೇನೆ ಪ್ರಪಂಚದಲ್ಲೇ ಅತಿ ದೊಡ್ಡ ವಾಯು ಸೇನೆಗಳಲ್ಲಿ ಒಂದಾಗಿದೆ. ಭಾರತದ ಗಡಿ ರೇಖೆಯಲ್ಲಿ ಒಳಪಡುವ ವಾಯುಪ್ರದೇಶದ ರಕ್ಷಣೆಯು ಇದರ ಪ್ರಮುಖ ಕರ್ತವ್ಯವಾಗಿದ್ದು, ಯುದ್ಧದಂತಹ ತುರ್ತು ಕಾರ್ಯಾಚರಣೆಯಲ್ಲಿ ವೈಮಾನಿಕ ಸಂಗ್ರಾಮ ನಡೆಸಲಿದೆ.

1932 ಅಕ್ಟೋಬರ್ 08ರಂದು ಅಸ್ಥಿತ್ವಕ್ಕೆ ಬಂದಿರುವ ವಾಯುಪಡೆಯು ವಿಶ್ವದಲ್ಲೇ ಶಕ್ತಿಶಾಲಿ ಯುದ್ಧ ವಿಮಾನಗಳ ಒಡೆತನವನ್ನು ಹೊಂದಿದೆ. ಶತ್ರು ಪ್ರದೇಶವನ್ನು ಒಳ ನುಗ್ಗಿ ಗಾಳಿಯಿಂದ ಗಾಳಿಗೆ ಹಾಗೂ ಅಲ್ಲಿನ ಪ್ರದೇಶಕ್ಕೆ ನೇರ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಭಾರತೀಯ ವಾಯುಸೇನೆಯ ಕೆಲವು ಯುದ್ದ ವಿಮಾನಗಳ ಕುರಿತಾಗಿ ಇಂದು ಮಾಹಿತಿ ನೀಡುವ ಪ್ರಯತ್ನ ಮಾಡಲಿದ್ದೇವೆ.

ಮಿಗ್-21 ಬಿಐಎಸ್

ಮಿಗ್-21 ಬಿಐಎಸ್

ಮಿಗ್-21 ಬಿಐಎಸ್ ಭಾರತದ ಸೂಪರ್ ಸೋನಿಕ್ ಫೈಟರ್ ವಿಮಾನವಾಗಿದೆ. ಇದರ ಡೆಲ್ಟಾ ರೆಕ್ಕೆಗಳು ವಿಶ್ವದಲ್ಲೇ ವಿಶಿಷ್ಟತೆಯನ್ನು ಕಾಪಾಡಿಕೊಳ್ಳಲು ನೆರವಾಗಿದೆ. ಇದರ ಬಾಳ್ವಿಕೆ ಕೊನೆಯ ಹಂತದಲ್ಲಿದ್ದು, ನಿಕಟ ಭವಿಷ್ಯದಲ್ಲೇ ನಿವೃತ್ತಿಯಾಗಲಿದೆ.

ಮಿಗ್-29

ಮಿಗ್-29

ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಮಿಗ್-29 ಪಾತ್ರ ನಿರ್ಣಾಯಕವೆನಿಸಿತ್ತು ಎಂದು ವರದಿಗಳು ತಿಳಿಸುತ್ತದೆ. 11980ರ ಕಾಲಘಟ್ಟದಲ್ಲಿ ಮಿಗ್ 29 ಭಾರತವನ್ನು ಬಂದು ತಲುಪಿತ್ತು.

ಮೀರಾಜ್ 2000

ಮೀರಾಜ್ 2000

ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಮೀರಾಜ್ 2000, ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮಗದೊಂದು ಯುದ್ಧ ವಿಮಾನವಾಗಿದೆ. ಭಾರತೀಯ ವಾಯು ಸೇನೆಯು ಇದಕ್ಕೆ 'ವಜ್ರ' ಎಂಬುದಾಗಿ ವಿಶ್ಲೇಷಿಸಿತ್ತು.

ಮಿಗ್-27

ಮಿಗ್-27

ಪ್ರಮುಖವಾಗಿಯೂ ನೆಲದಾಳಿಗಾಗಿ ಮಿಗ್-27 ಯುದ್ಧ ವಿಮಾನಗಳನ್ನು ಭಾರತೀಯ ವಾಯುಸೇನೆ ಬಳಕೆ ಮಾಡುತ್ತಿದೆ. ಇದು ವಿವಿಧ ವಾತಾವರಣದಲ್ಲೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ಸೆಪ್ ಕ್ಯಾಟ್ ಜಾಗ್ವಾರ್

ಸೆಪ್ ಕ್ಯಾಟ್ ಜಾಗ್ವಾರ್

ತನ್ನ ದಷ್ಟಪುಷ್ಟ ರೆಕ್ಕೆಗಳಲ್ಲೇ ಮಿಸೈಲ್ ಗಳನ್ನು ಹೊತ್ತೊಯ್ಯಲು ಸಾಮರ್ಥ್ಯವುಳ್ಳ ಟ್ವಿನ್ ಎಂಜಿನ್ ಸೆಪ್ ಕ್ಯಾಟ್ ಜಾಗ್ವಾರ್ ಗಾಳಿಯಿಂದ ಗಾಳಿಯಲ್ಲೇ ಮಿಸೈಲ್ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಭಾರತೀಯ ಯುದ್ಧ ನೌಕೆಯಲ್ಲಿ ಅತಿ ಪರಿಣಾಮಕಾರಿ ಎನಿಸಿಕೊಂಡಿರುವ ಇದು ಬಾಂಬ್ ದಾಳಿ ನಡೆಸುವಲ್ಲಿಯೂ ಶಕ್ತವಾಗಿದೆ.

ಎಚ್ ಎಎಲ್ ತೇಜಸ್

ಎಚ್ ಎಎಲ್ ತೇಜಸ್

ಎಚ್ ಎಎಲ್ ತೇಜಸ್ ಒಂದು ಸಿಂಗಲ್ ಸೀಟ್, ಸಿಂಗಲ್ ಜೆಟ್ ಎಂಜಿನ್, ಬಹು ಪಾತ್ರಧಾರಿ ಹಗುರ ಯುದ್ಧ ವಿಮಾನವಾಗಿದೆ. ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಗೊಳಿಸಿದೆ.

ಬೋಯಿಂಗ್ ಸಿ-17 ಗ್ಲೋಬ್ ಮಾಸ್ಟರ್

ಬೋಯಿಂಗ್ ಸಿ-17 ಗ್ಲೋಬ್ ಮಾಸ್ಟರ್

ಇತ್ತೀಚಿನ ಯೆಮೆನ್ ಹಾಗೂ ನೇಪಾಳ ರಕ್ಷಣಾ ಕಾರ್ಯಾಚರಣೆಯಲ್ಲಿ ಬೋಯಿಂಗ್ ವಿಮಾನ ಪ್ರಮುಖ ಪಾತ್ರ ವಹಿಸಿತ್ತು. ಮೂಲತ: ಇದು ಮಿಲಟರಿ ಸಾಗಾಣಿಕೆ ವಿಮಾನವಾಗಿದೆ.

ಲಾಕ್ ಹೀಡ್ ಮಾರ್ಟಿನ್ ಸಿ130ಜೆ ಸೂಪರ್ ಹರ್ಕ್ಯೂಲಸ್

ಲಾಕ್ ಹೀಡ್ ಮಾರ್ಟಿನ್ ಸಿ130ಜೆ ಸೂಪರ್ ಹರ್ಕ್ಯೂಲಸ್

ರನ್ವೇ ರಹಿತ ಪ್ರದೇಶಗಳಲ್ಲೂ ಲ್ಯಾಂಡಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಲಾಕ್ ಹೀಡ್ ಮಾರ್ಟಿನ್ ಸಿ130 ಜೆ ಸೂಪರ್ ಹರ್ಕ್ಯೂಲಸ್, ಜಗತ್ತಿನ ಅತ್ಯಂತ ಎತ್ತರದ ವಾಯು ಪ್ರದೇಶದಲ್ಲಿ ಕಾರ್ಯಾಚರಣೆ ಮಾಡಲು ಶಕ್ತವಾಗಿದೆ.

ಇಲ್ಯೂಷಿನ್ ಐಎಲ್-76

ಇಲ್ಯೂಷಿನ್ ಐಎಲ್-76

ಗ್ಲೋಬ್ ಮಾಸ್ಟರ್ ಆಗಮನಕ್ಕೂ ಮೊದಲು ಭಾರತೀಯ ವಾಯುಸೇನೆಯು ಸ್ವಲ್ಪ ಹಗುರವಾದ ಉಲ್ಯೂಷಿನ್ ಐಎಲ್-76 ನೆಚ್ಚಿಕೊಂಡಿತ್ತು. ಇದೊಂದು ದೂರಗಾಮಿ ಮಿಲಿಟರಿ ಸಾಗಾಣಿಕೆ ವಿಮಾನವಾಗಿದೆ.

ಆವ್ರೊ ಎಚ್ ಎಸ್ 748

ಆವ್ರೊ ಎಚ್ ಎಸ್ 748

ಬ್ರಿಟನ್‌ನ ಆವ್ರೊ ವಿನ್ಯಾಸಗೊಳಿಸಿರುವ ಮಧ್ಯಮ ಗಾತ್ರದ ಟರ್ಬೊ ಪ್ರಾಪ್ ಏರ್ ಲೈನರ್ ಅತಿ ಪುರಾತನ ವಿಮಾನಗಳಲ್ಲಿ ಒಂದಾಗಿದೆ. ಭಾರತದಲ್ಲಿ ಇದರ ಉತ್ಪಾದನಾ ಪರವಾನಗಿಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಪಡೆದುಕೊಂಡಿತ್ತು.

ಆಟೋನೋವ್ ಎಎನ್-32

ಆಟೋನೋವ್ ಎಎನ್-32

ಟ್ವಿನ್ ಎಂಜಿನ್ ಮಿಲಿಟರಿ ಸಾರಿಗೆ ವಿಮಾನವಾಗಿರುವ ಆಟೋನೋವ್ ಎಎನ್-32 ಅನ್ನು ಉಕ್ರೇನ್ ನ ಆಟೋನೋವ್ ಡಿಸೈನ್ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಭಾರತವು 125ರಷ್ಟು ಇಂತಹ ವಿಮಾನಗಳನ್ನು ಖರೀದಿಸಿದ್ದು, ಈ ಪೈಕಿ 105ರಷ್ಟು ಈಗಲೂ ಸೇವೆಯಲ್ಲಿದೆ.

ಡಾರ್ನಿಯರ್ ಡು 228

ಡಾರ್ನಿಯರ್ ಡು 228

ಅತ್ಯಂತ ಕಡಿಮೆ ರನ್ವೇಯಲ್ಲಿ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಮಾಡಲು ಶಕ್ತವಾಗಿರುವ ಡಾರ್ನಿಯರ್ ಡು 228, ಭಾರತೀಯ ವಾಯುಸೇನೆಯ ಕಡಿಮೆ ದೂರದ ಉಪಯುಕ್ತ ವಿಮಾನವಾಗಿದೆ.

ಇಲ್ಯೂಷಿನ್ ಐಎಲ್-78

ಇಲ್ಯೂಷಿನ್ ಐಎಲ್-78

ಅಂತರಿಕ್ಷದಲ್ಲೇ ಇಂಧನ ಮರುತುಂಬುವಿಕೆ ವ್ಯವಸ್ಥೆಯುಳ್ಳ ಈ ಯುದ್ಧ ವಿಮಾನವನ್ನು ಪ್ರಮುಖವಾಗಿ ಸು-30, ಮಿಗ್-29 ಹಾಗೂ ಮೀರಾಜ್ 2000 ವಿಮಾನ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಲು ಬಳಕೆ ಮಾಡಲಾಗುತ್ತದೆ.

ಬೆರೀವ್ ಎ-50 ಫಾಲ್ಕನ್

ಬೆರೀವ್ ಎ-50 ಫಾಲ್ಕನ್

ಇಲ್ಯೂಷಿನ್ II-76 ತಳಹದಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇಸ್ರೇಲ್ ಹಾಗೂ ರಷ್ಯಾ ನಡುವಣ ಒಪ್ಪಂದದ ಭಾಗವಾಗಿ ಇದು ಭಾರತವನ್ನು ಬಂದು ತಲುಪಿತ್ತು. ಇದು ದೇಶದತ್ತ ಒಳ ನುಗ್ಗುವ ಶತ್ರುಪಡೆಯ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಎಂಬ್ರೇಯರ್ 145 ಅವೆಕ್ಸ್

ಎಂಬ್ರೇಯರ್ 145 ಅವೆಕ್ಸ್

ಮುಂಚಿತವಾಗಿ ಎಚ್ಚರಿಕೆ ನೀಡಬಲ್ಲ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವ ಯುದ್ಧ ವಿಮಾನ ಇದಾಗಿದೆ.

ಬಿಎಇ ಹಾಕ್

ಬಿಎಇ ಹಾಕ್

ಪ್ರಮುಖವಾಗಿ ಬಿಎಇ ಹಾಕ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಯ ಪೈಲಟ್ ಗಳಿಗೆ ಅಂತಿಮ ಹಂತದ ತರಬೇತಿ ನೀಡುವ ಸಲುವಾಗಿ ಬಳಕೆ ಮಾಡಲಾಗುತ್ತದೆ.

ಎಚ್ ಎಎಲ್ ಎಚ್ ಜೆಟಿ-16 ಕಿರಣ್

ಎಚ್ ಎಎಲ್ ಎಚ್ ಜೆಟಿ-16 ಕಿರಣ್

ಇದನ್ನು ಸಹ ಪ್ರಮುಖವಾಗಿಯೂ ಭಾರತೀಯ ವಾಯುಸೇನೆಯ ಪೈಲಟ್ ಗಳ ತರಬೇತಿಗಾಗಿ ಬಳಕೆ ಮಾಡಲಾಗುತ್ತದೆ. ಈ ಎರಡು ಸೀಟುಗಳ ಲಘು ಯುದ್ಧ ವಿಮಾನಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ನಿರ್ಮಿಸಿದೆ.

ಪಿಲಾಟಸ್ ಪಿಸಿ-7

ಪಿಲಾಟಸ್ ಪಿಸಿ-7

ಸ್ವಿಜರ್ಲೆಂಡ್‌ನ ಪಿಲಾಟಸ್ ವಿಮಾನಯಾನ ಸಂಸ್ಥೆ ನಿರ್ಮಿಸಿರುವ ಈ ಉದ್ದವಾದ ರೆಕ್ಕೆಗಳ ವಿಮಾನವನ್ನು ತರಬೇತಿಗಾಗಿ ಬಳಕೆ ಮಾಡಲಾಗುತ್ತದೆ. ಇದನ್ನು 2630 ಕೀ.ಮೀ. ವ್ಯಾಪ್ತಿಯ ವರೆಗೂ ಕಾರ್ಯಾಚರಣೆಗಾಗಿ ಬಳಕೆ ಮಾಡಬಹುದಾಗಿದೆ.

ಸುಖೋಯ್ 30 ಎಂಕೆಐ

ಸುಖೋಯ್ 30 ಎಂಕೆಐ

ಎದುರಾಳಿ ರಾಷ್ಟ್ರದ ಸಂಪೂರ್ಣ ವಾಯು ನೆಲೆಯನ್ನು ಧ್ವಂಸಗೊಳಿಸಲು ಸಾಮರ್ಥ್ಯವುಳ್ಳ ಸುಖೋಯ್ 30 ಎಂಕೆಐ ಒಂದು ಬಹುಪಾತ್ರದಾರಿ ಯುಧ್ದ ವಿಮಾನವಾಗಿದೆ. ಅಲ್ಲದೆ ಗರಿಷ್ಠ 3000 ಕೀ.ಮೀ. ವ್ಯಾಪ್ತಿಯ ವರೆಗೂ ವಾಯು ದಾಳಿ ನಡೆಸಬಹುದಾಗಿದ್ದು, ಇಂಧನ ಮರು ತುಂಬುವ ಮೂಲಕ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ.

Most Read Articles

Kannada
Read more on ವಿಮಾನ plane
English summary
Warbirds Of The Indian Air Force
Story first published: Monday, June 1, 2015, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X