ಆಟೋಮೊಬೈಲ್ ಕ್ಷೇತ್ರದ ಅಗ್ರ 9 ಶ್ರೀಮಂತ ಉದ್ಯಮಿಗಳು

Written By:

ಜನಪ್ರಿಯ ಫೋರ್ಬ್ಸ್ ನಿಯತಕಾಲಿಕವು ಇತ್ತೀಚೆಗಷ್ಟೇ ಭಾರತದ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ನಿರೀಕ್ಷೆಯಂತೆಯೇ ಈ ಪಟ್ಟಿಯಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಸೇರಿದ ಒಂಬತ್ತು ಮಂದಿ ದಿಗ್ಗಜರು ಕಾಣಿಸಿಕೊಂಡಿದ್ದಾರೆ.

Also Read: ಮಹೀಂದ್ರಗೆ ಹೊಸ ಜೀವ ತುಂಬಿದ ಆನಂದ್ ಮಹೀಂದ್ರ

ಬೆಳೆದು ಬರುತ್ತಿರುವ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಇದರೊಂದಿಗೆ ತಮ್ಮ ಕ್ಷೇತ್ರದಲ್ಲಿ ಉನ್ನತ ಮಟ್ಟದ ಪದವಿಯನ್ನು ಆಲಂಕರಿಸಿರುವ ವ್ಯಕ್ತಿಗಳ ವೇತನದಲ್ಲೂ ಭಾರಿ ಪ್ರಮಾಣದ ಏರಿಕೆಯುಂಟಾಗಿದೆ. ಪ್ರಸ್ತುತ ಲೇಖನದಲ್ಲಿ ಫೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ದೇಶದ 100 ಶ್ರೀಮಂತ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ವಾಹನ ಕ್ಷೇತ್ರದ ಬಗ್ಗೆ ವಿವರಣೆ ನೀಡುವ ಪ್ರಯತ್ನ ಮಾಡಲಾಗುವುದು.

ಆನಂದ್ ಮಹೀಂದ್ರ - 1.1. ಬಿಲಿಯನ್ ಅಮೆರಿಕನ್ ಡಾಲರ್

ಆನಂದ್ ಮಹೀಂದ್ರ - 1.1. ಬಿಲಿಯನ್ ಅಮೆರಿಕನ್ ಡಾಲರ್

ಆನಂದ್ ಮಹೀಂದ್ರ ನಮ್ಮ ನಿಮ್ಮಲ್ಲರಿಗೂ ಚಿರಪರಿಚವಾಗಿರುವ ಮುಖವಾಗಿದ್ದು, ಸಮಕಾಲೀನ ವಾಹನ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಓರ್ವರೆನಿಸಿಕೊಂಡಿದ್ದಾರೆ. ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ವ್ಯವಸ್ಥಾಪಕ ನಿರ್ದೇಶಕರಾಗಿರುವ ಆನಂದ್ ಮಹೀಂದ್ರ, ದೇಶದ ಅತ್ಯಂತ ಶ್ರೀಮಂತ 100 ವ್ಯಕ್ತಿಗಳ ಪಟ್ಟಿಯಲ್ಲಿ 99ನೇ ಸ್ಥಾನದಲ್ಲಿದ್ದಾರೆ.

ಅಭಯ್ ಫಿರೊದಿಯಾ - 1.3 ಬಿಲಿಯನ್ ಅಮೆರಿಕನ್ ಡಾಲರ್

ಅಭಯ್ ಫಿರೊದಿಯಾ - 1.3 ಬಿಲಿಯನ್ ಅಮೆರಿಕನ್ ಡಾಲರ್

ಫೋರ್ಸ್ ಮೋಟಾರ್ಸ್ ಮುಖ್ಯಸ್ಥರಾಗಿರುವ ಅಭಯ್ ಫಿರೊದಿಯಾ ಈಗ ಫೋರ್ಬ್ಸ್ ಪಟ್ಟಿಯಲ್ಲಿ ಮೂರು ಸ್ಥಾನಗಳ ನೆಗೆತ ಕಂಡು 88ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ.

ಎಲ್‌ಡಿ ಮಿತ್ತಲ್ - 2 ಬಿಲಿಯನ್ ಅಮೆರಿಕನ್ ಡಾಲರ್

ಎಲ್‌ಡಿ ಮಿತ್ತಲ್ - 2 ಬಿಲಿಯನ್ ಅಮೆರಿಕನ್ ಡಾಲರ್

ಇಂಟರ್ ನ್ಯಾಷನಲ್ ಟ್ರ್ಯಾಕ್ಟರ್ ಸಂಸ್ಥಾಪಕರಾಗಿರುವ 84ರ ಹರೆಯದ ಎಲ್ ದಾಸ್ ಮಿತ್ತಲ್ 52ನೇ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಈಗಲೂ ತನ್ನ ಪ್ರಭಾವ ಕುಂದಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಬಾಬಾ ಕಲ್ಯಾಣಿ - 2.3 ಬಿಲಿಯನ್ ಅಮೆರಿಕನ್ ಡಾಲರ್

ಬಾಬಾ ಕಲ್ಯಾಣಿ - 2.3 ಬಿಲಿಯನ್ ಅಮೆರಿಕನ್ ಡಾಲರ್

ಭಾರತ್ ಫೋರ್ಜ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ದುಡಿದಿರುವ ಬಾಬಾ ಕಲ್ಯಾಣಿ ದೇಶದ ಪ್ರಮುಖ ಉದ್ಯಮಿಗಳಲ್ಲಿ ಓರ್ವರು. ಆದರೆ ಈ ಸಾಲಿನ ಫೋರ್ಬ್ಸ್ ದೇಶದ 100 ಶ್ರೀಮಂತರ ಪಟ್ಟಿಯಲ್ಲಿ ಎರಡು ಸ್ಥಾನಗಳ ಇಳಿಕೆ ಕಂಡು 41ಕ್ಕೆ ತಲುಪಿದ್ದಾರೆ.

ಅಮಲ್ಗಮೇಷನ್ ಫ್ಯಾಮಿಲಿ - 2.5 ಬಿಲಿಯನ್ ಅಮೆರಿಕನ್ ಡಾಲರ್

ಅಮಲ್ಗಮೇಷನ್ ಫ್ಯಾಮಿಲಿ - 2.5 ಬಿಲಿಯನ್ ಅಮೆರಿಕನ್ ಡಾಲರ್

ಅಮಲ್ಗಮೇಷನ್ ಸಂಸ್ಥೆ ಅಂದರೆ ನಿಮಗೆ ಗೊತ್ತಿಲ್ಲವಾದರೂ ಟಿಎಟಿಎಫ್ ಸಂಸ್ಥೆಯ ಬಗ್ಗೆ ಖಂಡಿತವಾಗಿಯೂ ಕೇಳಿರುತ್ತೀರಾ. ಟ್ರಾಕ್ಟರ್ಸ್ ಆ್ಯಂಡ್ ಫಾರ್ಮ್ ಇಕ್ಯೂಪ್ ಮೆಂಟ್ ದೇಶದಲ್ಲೇ ಎರಡನೇ ಅತಿ ದೊಡ್ಡ ಟ್ರ್ಯಾಕ್ಟರ್ ನಿರ್ಮಾಪಕ ಸಂಸ್ಥೆಯಾಗಿದೆ. ಇದರ ಮುಂದಾಳತ್ವವನ್ನು ಹೊತ್ತಿರುವ ಮಲ್ಲಿಕಾ ಶ್ರೀನಿವಾಸನ್ 10 ಸ್ಥಾನಗಳ ನೆಗೆತ ಕಂಡು 37ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ.

ವಿವೇಕ್ ಚಾಂದ್ ಸೆಹಗಲ್ - 2.5 ಬಿಲಿಯನ್ ಅಮೆರಿಕನ್ ಡಾಲರ್

ವಿವೇಕ್ ಚಾಂದ್ ಸೆಹಗಲ್ - 2.5 ಬಿಲಿಯನ್ ಅಮೆರಿಕನ್ ಡಾಲರ್

ಆಟೋ ಘಟಕ ವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಸೃಷ್ಟಿಸಿರುವ ಗೌರವಕ್ಕೆ ಪಾತ್ರವಾಗಿರುವ ವಿವೇಕ್ ಚಾಂದ್ ಸೆಹಗಲ್ ಅವರ ಮದರ್ ಸನ್ ಸಂಸ್ಥೆಯೀಗ ದೇಶದಲ್ಲಿ ಅತಿ ದೊಡ್ಡ ವಾಹನ ಘಟಕ ನಿರ್ಮಾಣ ಸಂಸ್ಥೆಯಾಗಿ ಮಾರ್ಪಾಟ್ಟಿದೆ. ಅಲ್ಲದೆ ಸೆಹಗಲ್ ಅವರು ಫೋಬ್ಸ್ ಶ್ರೀಮಂತರ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದ್ದಾರೆ.

ಬ್ರಿಜ್‌ಮೋಹನ್ ಲಾಲ್ ಮುಂಜಾಲ್ - 3 ಬಿಲಿಯನ್ ಅಮೆರಿಕನ್ ಡಾಲರ್

ಬ್ರಿಜ್‌ಮೋಹನ್ ಲಾಲ್ ಮುಂಜಾಲ್ - 3 ಬಿಲಿಯನ್ ಅಮೆರಿಕನ್ ಡಾಲರ್

ದೇಶದ ಆಟೋ ವಲಯದ ಅತ್ಯಂತ ಪ್ರಭಾವಿ ಹಾಗೂ ಹಿರಿಯ ವ್ಯಕ್ತಿಗಳಲ್ಲಿ ಓರ್ವರೆನಿಸಿಕೊಂಡಿರುವ ಬ್ರಿಜ್ ಮೋಹನ್ ಲಾಲ್ ಮುಂಜಾಲ್ ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ಕು ಸ್ಥಾನ ಕುಸಿತ ಕಂಡರೂ 27ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಹಜವಾಗಿಯೇ ಹೀರೊ ಮೊಟೊಕಾರ್ಪ್ ಮಾರಾಟ ಸಹ ಹಿನ್ನೆಡೆ ಅನುಭವಿಸಿದೆ.

ವಿಕ್ರಂ ಲಾಲ್ - 4.3 ಮಿಲಿಯನ್ ಅಮೆರಿಕನ್ ಡಾಲರ್

ವಿಕ್ರಂ ಲಾಲ್ - 4.3 ಮಿಲಿಯನ್ ಅಮೆರಿಕನ್ ಡಾಲರ್

ಈಚರ್ ಮೋಟಾರ್ಸ್ ಮಾಜಿ ಸಿಇಒ ಆಗಿರುವ ವಿಕ್ರಂ ಲಾಲ್ ಅದೃಷ್ಟವು ರಾಯಲ್ ಎನ್ ಫೀಲ್ಡ್ ಗಳಂತಹ ಐಕಾನಿಕ್ ಮಾಡೆಲ್ ನಿಂದ ಕುದುರಿಸಿಕೊಂಡಿದೆ ಅಂದರೆ ತಪ್ಪಾಗಲಾಗರು. 2015ನೇ ಸಾಲಿನಲ್ಲಿ 20ನೇ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ವಿಕ್ರಂ ಲಾಲ್ ಒಂಬತ್ತು ಸ್ಥಾನಗಳ ನೆಗೆತ ಕಂಡಿದ್ದಾರೆ.

ಬಜಾಜ್ ಫ್ಯಾಮಿಲಿ: 4.4 ಬಿಲಿಯನ್ ಅಮೆರಿಕನ್ ಡಾಲರ್

ಬಜಾಜ್ ಫ್ಯಾಮಿಲಿ: 4.4 ಬಿಲಿಯನ್ ಅಮೆರಿಕನ್ ಡಾಲರ್

ಪಲ್ಸರ್ ಗಳಂತಹ ನಂ.1 ಕ್ರೀಡಾ ಬೈಕ್ ಗಳನ್ನು ಕೊಡುಗೆಯಾಗಿ ನೀಡಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯು ಅಗ್ರಸ್ಥಾನದಲ್ಲಿದ್ದು, 4.4 ಮಿಲಿಯನ್ ಅಮೆರಿಕನ್ ಡಾಲರ್ ಕಲೆ ಹಾಕಿದೆ. ಅಲ್ಲದೆ ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 19ನೇ ಸ್ಥಾನ ಕಾಪಾಡಿಕೊಂಡಿದೆ.

ಆಟೋಮೊಬೈಲ್ ಕ್ಷೇತ್ರದ ಅಗ್ರ 9 ಶ್ರೀಮಂತ ಉದ್ಯಮಿಗಳು

ದೇಶದ ಪ್ರಖ್ಯಾತ ಉದ್ಯಮಿಗಳ ಜನಪ್ರಿಯ ಕಾರುಗಳು

English summary
Want to know who the wealthiest entities in Indian auto industry? Here are the names
Story first published: Friday, November 27, 2015, 14:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark