ರಾಂಗ್‍ಸೈಡ್ ನಲ್ಲಿ ಬಂದ ಬಸ್‍ ಚಾಲಕನಿಗೆ ಪಾಠ ಕಲಿಸಿದ ಯುವತಿ

ಭಾರತದಲ್ಲಿ ಒನ್ ವೇ, ರಾಂಗ್ ಸೈಡ್‌ಗಳಲ್ಲಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ರಾಂಗ್ ಸೈಡ್ ಡ್ರೈವ್ ಮಾಡಿದವರ ಲೈಸೆನ್ಸ್ ರದ್ದು ಮಾಡಲು ಕೆಲ ನಗರಗಳಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೂ ರಾಂಗ್ ಸೈಡ್‍‍ನಲ್ಲಿ ಚಲಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

ರಾಂಗ್‍ಸೈಡ್ ನಲ್ಲಿ ಬಂದ ಬಸ್‍ ಚಾಲಕನಿಗೆ ಪಾಠ ಕಲಿಸಿದ ಯುವತಿ

ಸರ್ಕಾರಿ ವಾಹನಗಳು ಸಹ ಸಂಚಾರಿ ನಿಯಮವನ್ನು ಉಲ್ಲಂಘಿಸುವುದರಿಂದ ಹೊರತಾಗಿಲ್ಲ. ಹಲವು ರಾಜ್ಯಗಳ ಸರ್ಕಾರಿ ಬಸ್ಸುಗಳು ವೇಗವಾಗಿ ಚಲಿಸಿ ಹಲವು ಅನಾಹುತಗಳನ್ನು ಸೃಷ್ಟಿಸಿರುವ ನೂರಾರು ಉದಾಹರಣೆಗಳಿವೆ. ಅನೇಕ ರಾಜ್ಯಗಳಲ್ಲಿ ಸರ್ಕಾರಿ ಬಸ್ಸುಗಳಿಗೆ ವೇಗ ನಿಯಂತ್ರಣ ಉಪಕರಣವನ್ನು ಅಳವಡಿಸಿದ್ದಾರೆ. ಆದರೂ ಸರ್ಕಾರಿ ಬಸ್ಸುಗಳು ಅದನ್ನು ತೆಗೆದು ವೇಗದಲ್ಲಿ ಸಾಗುತ್ತಾರೆ. ಸಾರ್ವಜನಿಕರು ಹೆಚ್ಚು ಓಡಾಡುವ ಪ್ರದೇಶಗಳಲ್ಲಿಯೂ ಸರ್ಕಾರಿ ಬಸ್ಸುಗಳನ್ನು ಯಮಧೂತನ ರೀತಿಯಲ್ಲಿ ವೇಗವಾಗಿ ಚಲಾಯಿಸುತ್ತಾರೆ.

ಬೆಂಗಳೂರಿನಲ್ಲಿ ಬಿಎಂಟಿ‍ಸಿ ಬಸ್ ಒಂದು ಸಂಚಾರಿ ನಿಯಮವನ್ನು ಗಾಳಿಗೆ ತೂರಿ ರಾಂಗ್‍ಸೈಡ್‍‍ನಲ್ಲಿ ಚಲಿಸುತ್ತಿರುವಾಗ ಬೈಕ್ ಸವಾರನೊಬ್ಬ ಬಸ್ ಚಾಲಕನಿಗೆ ಪಾಠ ಕಲಿಸುರುವ ಘಟನೆಯನ್ನು ಈ ಹಿಂದೆ ನೋಡಿದ್ದೇವು. ಅದೇ ರೀತಿಯ ವೀಡಿಯೊಂದನ್ನು ವಂಡಿಭ್ರಂತನ್ಮಾರ್ ಗ್ರೂಪ್‍‍ನಲ್ಲಿ ಪೋಸ್ಟ್ ಮಾಡಲಾಗಿದೆ.

ರಾಂಗ್‍ಸೈಡ್ ನಲ್ಲಿ ಬಂದ ಬಸ್‍ ಚಾಲಕನಿಗೆ ಪಾಠ ಕಲಿಸಿದ ಯುವತಿ

ಈ ವೀಡಿಯೊದಲ್ಲಿ ಕೇರಳದಲ್ಲಿ ಯುವತಿಯೊಬ್ಬಳು ರಾಂಗ್‍ಸೈಡಿನಲ್ಲಿ ಬರುತ್ತಿದ್ದ ಬಸ್ ಅನ್ನು ತಡೆದು ಸರಿಯಾದ ಮಾರ್ಗದಲ್ಲಿ ಚಲಿಸುವಂತೆ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಡೇರಿಂಗ್ ಯುವತಿಯ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಶೆ ವ್ಯಕ್ತವಾಗುತ್ತಿದೆ.

ರಾಂಗ್‍ಸೈಡ್ ನಲ್ಲಿ ಬಂದ ಬಸ್‍ ಚಾಲಕನಿಗೆ ಪಾಠ ಕಲಿಸಿದ ಯುವತಿ

ಈ ವೀಡಿಯೊದಲ್ಲಿರುವ ಎಲ್ಲಾ ವಾಹನಗಳು ತಮ್ಮ ಮಾರ್ಗದಲ್ಲಿ ಸಂಚರಿಸುತ್ತಿವೆ. ಕೆಎಸ್ಆರ್‍‍ಟಿ‍ಸಿ(ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್ಸು ಚಾಲಕ ಮಾತ್ರ ರಾಂಗ್ ಸೈಡ್ ಮೂಲಕ ನೇರವಾಗಿ ಮುಂದೆ ಸಾಗಲು ಪ್ರಯತ್ನಿಸುತ್ತಾನೆ. ಆದರೆ ಅದೇ ಮಾರ್ಗದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಯುವತಿ ರಾಂಗ್ ಸೈಡ್‍ನಿಂದಾ ಬರುತ್ತಿದ್ದ ಬಸ್‍ ಮುಂದೆ ಬಂದು ತನ್ನ ಸ್ಕೂಟರ್ ಅನ್ನು ನಿಲ್ಲಿಸುತ್ತಾಳೆ.

ರಾಂಗ್‍ಸೈಡ್ ನಲ್ಲಿ ಬಂದ ಬಸ್‍ ಚಾಲಕನಿಗೆ ಪಾಠ ಕಲಿಸಿದ ಯುವತಿ

ಬಸ್ ಮುಂದೆ ಸಾಗಲು ಪ್ರಯತ್ನಿಸುತ್ತಿದ್ದರೆ ಯುವತಿ ಮಾತ್ರ ತನ್ನ ಸ್ಥಳದಲ್ಲೇ ಸ್ಥಿರವಾಗಿ ನಿಲ್ಲುತ್ತಾಳೆ. ಬಸ್ ಚಾಲಕನಿಗೆ ರಾಂಗ್ ಸೈಡ್ ಬಿಟ್ಟು ಸರಿಯಾದ ಮಾರ್ಗದಲ್ಲಿ ಚಲಿಸಲು ಹೇಳುತ್ತಾಳೆ. ಬಸ್ ಚಾಲಕ ಎಷ್ಟೇ ಸಾಹಸ ಮಾಡಿದರು ಮಹಿಳೆ ಮಾತ್ರ ಒಂದು ಇಂಚು ಅಲ್ಲಾಡಲಿಲ್ಲ. ಕಡೆಗೆ ಬಸ್ ಚಾಲಕನು ಬೇರೆ ಮಾರ್ಗವಿಲ್ಲದೇ ತನ್ನ ಎಡಗಡೆಗೆ ಬಸ್ ಅನ್ನು ತಿರುಗಿಸಿ ಮುಂದೆ ಸರಿಯಾದ ಮಾರ್ಗದಲ್ಲಿ ಸಾಗಿದನು.

ರಾಂಗ್‍ಸೈಡ್ ನಲ್ಲಿ ಬಂದ ಬಸ್‍ ಚಾಲಕನಿಗೆ ಪಾಠ ಕಲಿಸಿದ ಯುವತಿ

ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಯಶವಂತಪುರ ಬನಶಂಕರಿ ಬಸ್ ರಾಂಗ್ ಸೈಡ್ ಮೂಲಕ ನೇರವಾಗಿ ಬರುತ್ತಿತ್ತು. ಒನ್ ವೇಯಲ್ಲಿ ಬರುತ್ತಿದ್ದ ಬೈಕ್ ರೈಡರ್ ರೊಚ್ಚಿಗೆದ್ದು, ಬಿಎಂ‍ಟಿಸಿ ಬಸ್‌ ಅನ್ನು ತಡೆದು ನಿಲ್ಲಿಸಿ ನಿಯಮ ಎಲ್ಲರಿಗೂ ಒಂದೇ, ಇದು ಒನ್ ವೇ ಎಂದು ಹೇಳಿ ಬಸ್ಸ್ ಅನ್ನು ಹಿಂದಕ್ಕೆ ಹೋಗಲು ಸೂಚಿಸಿದ್ದ. ಇದರ ಬಗ್ಗೆ ಕೆಲ ಹೊತ್ತು ವಾಗ್ವಾದವೇ ನಡೆದಿತ್ತು. ಇದೇ ವೇಳೆ ಕೆಲ ಕಾರು, ಬೈಕ್ ಕೂಡ ರಾಂಗ್ ಸೈಡಲ್ಲಿ ಬರೋ ಯತ್ನ ಮಾಡಿದ್ದವು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ರಾಂಗ್‍ಸೈಡ್ ನಲ್ಲಿ ಬಂದ ಬಸ್‍ ಚಾಲಕನಿಗೆ ಪಾಠ ಕಲಿಸಿದ ಯುವತಿ

ಬೈಕ್ ಸವಾರ ಮಾತ್ರ ತನ್ನ ನಿಲುವು ಬದಲಿಸಲಿಲ್ಲ. ಇಷ್ಟೇ ಅಲ್ಲ ರಾಂಗ್ ಸೈಡ್‌ನಲ್ಲಿ ಬಂದ ಬಸ್ಸನ್ನೇ ಹಿಂದಕ್ಕೆ ಕಳುಹಿಸಿದ. ಇದು ಎಲ್ಲಾ ವಾಹನ ಸವಾರರಿಗೂ ಪಾಠವಾಗಿದೆ. ಈ ರೀತಿಯ ತಪ್ಪುಗಳನ್ನು ಸರ್ಕಾರಿ ಬಸ್ಸುಗಳೇ ಮಾಡುತ್ತಿರುವುದು ವಿಪರ್ಯಾಸವೇ ಸರಿ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ರಾಂಗ್‍ಸೈಡ್ ನಲ್ಲಿ ಬಂದ ಬಸ್‍ ಚಾಲಕನಿಗೆ ಪಾಠ ಕಲಿಸಿದ ಯುವತಿ

ಟ್ರಾಫಿಕ್ ಉಂಟಾದರೆ ಒಂದು ರೌಂಡ್ ಹೊಡೆಯಬೇಕು ಎಂದೆಲ್ಲಾ ಕಾರಣ ನೀಡಿ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸುತ್ತಾರೆ. ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸಿದೆ. ಹೀಗಾಗಿ ಎಲ್ಲರೂ ನಿಯಮ ಪಾಲನೆ ಮಾಡಿದರೆ ಸೂಕ್ತ. ವಾಹನ ಸವಾರರು ಇನ್ನಾದರೂ ಸಂಚಾರಿ ನಿಯಮವನ್ನು ಪಾಲಿಸಿ ಸರಿದಾರಿಯಲ್ಲಿ ಸಾಗಬೇಕು.

Most Read Articles

Kannada
English summary
Woman on scooter stops bus coming in the WRONG lane: Makes bus take the right lane - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X