ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಲಿಯಾದ ಮತ್ತೊಂದು ಜೀವ..!?

By Rahul Ts

ಎರಡು ದಿನಗಳಿಂದ ದೇಶದ ಆರ್ಥಿಕ ರಾಜಧಾನಿಯಾದ ಮುಂಬೈ ನಗರದಲ್ಲಿ ಧಾರಕಾರ ಮಳೆ ಸುರಿಯುತ್ತಲೆಯಿದೆ. ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿನ ಪ್ರಜೆಗಳ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಲ್ಲಿನ ಪರಿಸ್ಥಿತಿ ಕಷ್ಟಕರವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಣಗೊಂಡ ಮತ್ತೊಂದು ಜೀವ..!?

ಎಲ್ಲಿ ನೋಡಿದರೂ ನದಿಯ ಹಾಗೆ ಹರಿಯುತ್ತಿರುವ ಮಳೆಯ ನೀರು, ಅದರ ಜೊತೆಗೆ ತುಂಬಿ ಹರಿಯುತ್ತಿರುವ ಪಾತ್ ಹೋಲ್‍‍ಗಳು. ಇವೆಲ್ಲವು ಸೇರಿ ಮುಂಬೈ ನಗರದಲ್ಲಿನ ಜನರ ಜೀವನದ ಜೊತೆ ಆಟವಾಡುತ್ತಿವೆ. ಕಳೆದ ಶುಕ್ರವಾರ ಒಬ್ಬ ಮಹಿಳೆ ಬೈಕ್‍‍ನಿಂದ ಕೆಳಕ್ಕೆ ಬಿದ್ದು, ಬಸ್ಸಿನ ಚಕ್ರಗಳಿಗೆ ಸಿಲುಕಿ ಸ್ಥಳದಲ್ಲೆ ಸಾವನಪ್ಪಿದ್ದಾಳೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಣಗೊಂಡ ಮತ್ತೊಂದು ಜೀವ..!?

ವೀಪರೀತವಾದ ಮಳೆಯ ಕಾರಣ ರಸ್ಥೆಯ ಮೇಲಿದ್ದ ಚಿಕ್ಕ ಚಿಕ್ಕ ಗುಂಡಿಗಳು ನೀರಿನಿಂದ ತುಂಬಿಹೋಗಿದ್ದವು. ಒಂದು ಜೋಡಿ ಬೈಕ್‍‍ನಲ್ಲಿ ತಮ್ಮ ಮನೆಗೆ ಹೋಗುತ್ತಿರುವಾಗ, ರೋಡಿನ ಮೇಲೆ ನೀರಿನಿಂದ ತುಂಬಿದ ಗುಂಡಿಯ ಮೇಲೆ ಹೋದ ಕಾರಣ ಹಿಂದೆ ಕೂತಿದ್ದ ಮಹಿಳೆಯು ಕಂಟ್ರೋಲ್ ತಪ್ಪಿ ಕೆಳಕ್ಕೆ ಬಿದ್ದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಣಗೊಂಡ ಮತ್ತೊಂದು ಜೀವ..!?

ಧಾರಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಆಕೆ ಬೈಕ್‍‍ನ ಹಿಂದೆ ಕೂತು ಛತ್ರಿಯನ್ನು ಇಟ್ಟುಕೊಂಡಿದ್ದರು. ಕೆಳಗೆ ಬಿದ್ದ ಕಾರಣದಿಂದ ಪಕ್ಕದಲ್ಲೆ ಹೋಗುತ್ತಿದ್ದ ಬಸ್ಸಿನ ಚಕ್ರಗಳಿಗೆ ಸಿಲುಕಿದಳು. ಬಿದ್ದ ತಕ್ಷಣವೆ ಆಕೆಯನ್ನು ಸ್ವಲ್ಪ ದೂರ ಆ ಬಸ್ಸು ಎಳೆದುಕೊಂಡು ಹೋಯಿತು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಣಗೊಂಡ ಮತ್ತೊಂದು ಜೀವ..!?

ಈ ವಿಷಾದವಾದ ಘಟನೆಯು ಮುಂಬೈ‍‍ನಲ್ಲಿನ ಕಲ್ಯಾಣ್ ಪ್ರಾಂತ್ಯದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಗೊಂಡ ಈ ಘಟನೆಯ ಕುರಿತಾದ ವೀಡಿಯೊ ಅಲ್ಲಿನ ರಹದಾರಿಗಳ ನಿರ್ಮಾಣ, ನಿರ್ವಹಣೆ ಮತ್ತು ಅಧಿಕಾರಿಗಳ ನಿರ್ಲ್ಕ್ಷಯವನ್ನು ತೋರಿಸುತ್ತದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಣಗೊಂಡ ಮತ್ತೊಂದು ಜೀವ..!?

ನಾಲ್ಕು ಲೇನ್‍‍ಗಳ ರಹದಾರಿ, ಅದರಲ್ಲಿ ಒಂದು ಭಾಗವು ನೀರಿನಿಂದ ತುಂಬಿಕೊಂಡಿದ್ದು, ಅದರಲ್ಲಿ ಆ ರೋಡ್ ಮೇಲಿನ ಗುಂಡಿಗಳು ನೀರಿನಿಂದ ತುಂಬಿ ಹೋಗಿದ್ದವು. ನಿಧಾನವಾಗಿ ಹೋಗುತ್ತಿರುವ ವಾಹನವನ್ನು ವೇಗವಾಗಿ ಬಂದ ವಾಹನಗಳು ಓವರ್‍‍ಟೇಕ್ ಮಾಡುವುದು ಸಾಮನ್ಯವೇ. ಈ ಕ್ರಮದಲ್ಲಿ ದ್ವಿಚಕ್ರ ವಾಹನವು ಅಲ್ಲಿನ ಗುಂಡಿಯ ಮೇಲೆ ಹೋದ ಕಾರಣ ಹಿಂದಿದ್ದ ಮಹಿಳೆ ಬೈಕ್‍‍ನಿಂದ ಕೆಳಕ್ಕೆ ಬೀಳುವುದು, ಬಿದ್ದ ನಂತರ ಪಕ್ಕದಲ್ಲೆ ಬಂದ ಬಸ್ಸಿನ ಚಕ್ರಗಳಿಗೆ ಆ ಮಹಿಳೆಯು ಸಿಲುಕಿದಳು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಣಗೊಂಡ ಮತ್ತೊಂದು ಜೀವ..!?

ಆ ಮಹಿಳೆಯ ದೇಹದ ಭಾಗ ಮೊತ್ತವು ಬಸ್ಸ್ ಹಿಂದಿನ ಚಕ್ರಗಳಿಗೆ ಸಿಲುಕಿದರಿಂದ ಆಕೆ ಅಲುಗಾಡಲು ಕೂಡಾ ಸಾಧವಾಗಲಿಲ್ಲ. ಇದರಿಂದ ಆ ಬಸ್ಸು ಆಕೆಯ ದೇಹವನ್ನು ಸ್ವಲ್ಪ ದೂರ ಎಳೆದುಕೊಂಡೆ ಹೋಯಿತು. ನಂತರ ಒಮ್ಮೆ ನಿಂತ ಬಸ್ಸು ಮತ್ತೆ ಆಕೆಯ ದೇಹದ ಮೇಲೆಯೆ ಹೊರಟ ಕಾರಣ ಆಕೆಯು ಅಲ್ಲಿಯೆ ಮರಣ ಹೊಂದಿದಳು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಣಗೊಂಡ ಮತ್ತೊಂದು ಜೀವ..!?

ಮಳೆಯ ಕಾರಣದಿಂದ ರಸ್ಥೆಯಲ್ಲಿ ನೀರು, ನೀರಿನ ಕೆಳಗಿದ್ದ ಚಿಕ್ಕ ಚಿಕ್ಕ ಗುಂಡಿಗಳು, ಆ ಮಹಿಳೆ ಕೂಡ ಬೈಕಿನ ಮೇಲೆ ಒಂದು ಕಡೆ ಕೂರುವುದು, ಇದರ ಜೊತೆಗೆ ಆಕೆಯು ಕೈನಲ್ಲಿ ಇಟ್ಟುಕೊಂಡಿದ್ದ ಛತ್ರಿಯು ಸವಾರನ ಕಣ್ಣನ್ನು ಮುಚ್ಚುವುದು ಇಂತಹ ಅಜಾಗರೂಕತೆಯು ಒಂದು ಪ್ರಾಣವನ್ನು ಬಲಿ ತೆಗೆದುಕೊಂಡಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಣಗೊಂಡ ಮತ್ತೊಂದು ಜೀವ..!?

ಅಲ್ಲಿನ ಹತಾಟನೆಯ ವಾತವರಣದಿಂದ ಪರಿಸ್ಥಿತಿಯು ಮಾರಿಹೋಯಿತು. ಸಮಯವಿಲ್ಲದೆ ಬರುವ ಮಳೆಯಿಂಗಾಗಿ ಅಲ್ಲಿನ ಜೀವನವನ್ನು ಭಯಬೀತರನ್ನಾಗಿ ಮಾಡುತ್ತಿದೆ. ಇದರ ಜೊತೆಗೆ ಅಲ್ಲಿನ ಜನರ ಮತ್ತು ಪ್ರಭುತ್ವ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಂಬಲಾಗದ ಪ್ರಮಾದಗಳು ನಡೆಯುತ್ತಿವೆ. ಆದ್ದರಿಂದ ಮಳೆಗಾಲದಲ್ಲಿ ಸಾಧ್ಯವಾದಷ್ಟು ದ್ವಿಚಕ್ರ ವಾಹದಲ್ಲಿ ಪ್ರಯಾಣಿಸುವುದನ್ನು ನಿಲ್ಲಿಸಿ, ಕ್ಯಾಬ್, ಆಟೋ ಅಥವಾ ಬಸ್‍‍ಗಳಲ್ಲಿ ಸಂಚರಿಸಿ.

ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯ ವೀಡಿಯೊ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಣಗೊಂಡ ಮತ್ತೊಂದು ಜೀವ..!?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಮಳೆಗಾಲದಲ್ಲಿ ಘಾಟ್ ರಸ್ತೆಯಲ್ಲಿ ಸುರಕ್ಷಿತ ಚಾಲನೆಗಾಗಿ ಅಮೂಲ್ಯ ಟಿಪ್ಸ್..

Most Read Articles

Kannada
Read more on accident two wheeler bus
English summary
Woman falls as bike slips over pothole crushed by bus.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more