123 ವರ್ಷಗಳ ಹಿಂದೆ ನಡೆದ ವಿಶ್ವದ ಮೊದಲ ಮೋಟಾರ್ ರೇಸ್ ಹೇಗಿತ್ತು?

Written By:

ಅದು ಸರಿಯಾಗಿ 123 ವರ್ಷಗಳ ಹಿಂದಿನ ಮಾತು. ಕೇವಲ ಶ್ರೀಮಂತರ ವರ್ಗಕ್ಕೆ ಮಾತ್ರವೇ ಸೀಮಿತವಾಗಿದ್ದ ಮೋಟಾರ್ ರೇಸ್ ಸಾರ್ವಜನಿಕವಾಗಿ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಈ ಮೂಲಕ ಇತಿಹಾಸದ ಪುಟಗಳಲ್ಲಿ ಸೇರಿದ ಪ್ಯಾರಿಸ್ ಮೋಟಾರ್ ರೇಸ್‌ನ್ನು ನೆನಪಿಸಿಕೊಳ್ಳುವ ದಿನ ಇಂದು ಮತ್ತೆ ಬಂದಿದೆ.

To Follow DriveSpark On Facebook, Click The Like Button
123 ವರ್ಷಗಳ ಹಿಂದೆ ನಡೆದ ವಿಶ್ವದ ಮೊದಲ ಮೋಟಾರ್ ಸ್ಪೋರ್ಟ್ ಹೇಗಿತ್ತು?

ಪ್ಯಾರಿಸ್‌ನಲ್ಲಿ ಜುಲೈ 22, 1894ರಲ್ಲಿ ಮೊದಲ ಬಾರಿಗೆ ಸಾವರ್ಜನಿಕವಾಗಿ ನಡೆದ ಮೋಟಾರ್ ರೇಸಿಂಗ್ ಸ್ಪರ್ಧೆ ಎಂದಿಗೂ ಮರೆಯಲಾಗದ ಅವಿಸ್ಮರಣಿಯ ಕ್ಷಣ. ಯಾಕೇಂದ್ರೆ ಅಂದು ನಡೆದ ಕಾರು ಸ್ಪರ್ಧೆಯು ಇಂದಿನ ಪ್ರತಿಷ್ಠಿತ ಫೆ 1 ರೇಸ್‌ಗೂ ಮೂಲ ಎಂದ್ರೆ ತಪ್ಪಾಗಲಾರದು.

123 ವರ್ಷಗಳ ಹಿಂದೆ ನಡೆದ ವಿಶ್ವದ ಮೊದಲ ಮೋಟಾರ್ ಸ್ಪೋರ್ಟ್ ಹೇಗಿತ್ತು?

ಕೇವಲ 20 ಜನರಿಂದ ಕೂಡಿದ್ದ ಪ್ಯಾರಿಸ್ ಮೋಟಾರ್ ರೇಸ್ ಸ್ಪರ್ಧೆಯೂ ಅಂದಿನ ದಿನಗಳಲ್ಲೇ 127 ಕಿ.ಮಿ ದೂರ ಕ್ರಮಿಸಿ ಹತ್ತು ಹಲವು ದಾಖಲೆಗಳಿಗೆ ಕಾರಣವಾಗಿತ್ತು.

123 ವರ್ಷಗಳ ಹಿಂದೆ ನಡೆದ ವಿಶ್ವದ ಮೊದಲ ಮೋಟಾರ್ ಸ್ಪೋರ್ಟ್ ಹೇಗಿತ್ತು?

ಸ್ಪರ್ಧೆಯಲ್ಲಿ ಕೆಲವು ಪೆಟ್ರೋಲ್ ಉತ್ಪಾದಿತ ಕಾರುಗಳನ್ನು ಬಳಕೆ ಮಾಡಿದ್ದರೆ ಇನ್ನು ಕೆಲವರು ಜೆಟ್ ಎಂಜಿನ್ ಪ್ರೇರಿತ ವಾಹನಗಳೊಂದಿಗೆ ರೇಸ್‌ನಲ್ಲಿ ಭಾಗಿಯಾಗಿದ್ದರು. ಈ ಮೂಲಕ ವಿಶ್ವದಲ್ಲೇ ಇದು ಮೊದಲ ಮೋಟಾರ್ ಸ್ಪೋಟ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತು.

123 ವರ್ಷಗಳ ಹಿಂದೆ ನಡೆದ ವಿಶ್ವದ ಮೊದಲ ಮೋಟಾರ್ ಸ್ಪೋರ್ಟ್ ಹೇಗಿತ್ತು?

ಈ ಅವಿಸ್ಮರಣಿಯ ಕ್ಷಣಗಳ ಬಗ್ಗೆ ವರದಿ ಮಾಡಿದ್ದ ಫ್ರೇಂಚ್ ಜನಪ್ರಿಯ ಪತ್ರಿಕೆ ಫಾರ್ ಲೆ ಪೆಟಿಟ್, ಇದೊಂದು ಕುದುರೆ ರಹಿತ ಯಶಸ್ವಿ ಮೋಟಾರ್ ಸ್ಪರ್ಧೆ ಎಂದು ತನ್ನ ಮುಖಪುಟದಲ್ಲಿ ವರ್ಣನೆ ಮಾಡಿತ್ತು.

123 ವರ್ಷಗಳ ಹಿಂದೆ ನಡೆದ ವಿಶ್ವದ ಮೊದಲ ಮೋಟಾರ್ ಸ್ಪೋರ್ಟ್ ಹೇಗಿತ್ತು?

ಯಾಕೇಂದ್ರೆ ಪ್ಯಾರಿಸ್ ಮೋಟಾರ್ ಸ್ಪರ್ಧೆಗೂ ಮುನ್ನ ಕೇವಲ ಹಾರ್ಸ್ ಕಾರ್ಟ್ ಸ್ಪರ್ಧೆಗಳು ಮಾತ್ರ ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಪ್ಯಾರಿಸ್‌ ಜನ ಆಯೋಜನೆ ಮಾಡಿದ್ದ ಮೋಟಾರ್ ರೇಸ್ ಜಗತ್ತಿನ ಹಲವು ಮೋಟಾರ್ ರೇಸ್ ಸ್ಪರ್ಧೆಗಳಿಗೆ ನಾಂದಿಯಾಗಿತ್ತು.

123 ವರ್ಷಗಳ ಹಿಂದೆ ನಡೆದ ವಿಶ್ವದ ಮೊದಲ ಮೋಟಾರ್ ಸ್ಪೋರ್ಟ್ ಹೇಗಿತ್ತು?

ಈ ಸಂದರ್ಭದಲ್ಲಿ ಮೋಟಾರ್ ಜಗತ್ತಿಗೆ ಕಾಲಿಟ್ಟಿದ್ದ ಕಾರ್ಲ್ ಬೆಂಝ್ ಮತ್ತು ಗಾಟ್ಲೀಬ್ ಡೈಮ್ಲರ್ ಕೂಡಾ ಪ್ಯಾರಿಸ್ ಮೋಟಾರ್ ಸ್ಪರ್ಧೆಯನ್ನು ಪ್ರೇರಣೆಯಾಗಿಟ್ಟುಕೊಂಡು ಕಾರು ಉತ್ಪಾದನಾ ಸಂಸ್ಥೆಗಳು ಹುಟ್ಟುಹಾಕಿದ್ದು ಕೂಡಾ ಇತಿಹಾಸ.

English summary
Read in Kannada World’s First Automotive Race Was Held 123 Years Ago On 22 July.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark