ವಿಶ್ವಪ್ರಸಿದ್ಧ ರಾಜಮನೆತನದ ಕಾರುಗಳು

Posted By:

ಮಾಧ್ಯಮ ಜಗತ್ತಿನ ಕೇಂದ್ರ ಬಿಂದುವಾಗಿದ್ದ ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಬ್ರಿಟನ್ ರಾಜಕುಮಾರ ವಿಲಿಯಮ್ಸ್ ಪತ್ನಿ ಕೇಟ್ ಮಿಡ್ಲ್‌ಟನ್ ರಾಜಕುಮಾರನಿಗೆ ಜನ್ಮ ನೀಡಿದ್ದಾರೆ. ಬ್ರಿಟನ್ ರಾಯಲ್ ಫ್ಯಾಮಿಲಿಗೆ (ರಾಜ ಮನೆತನ) ಜನಿಸಿದ ಮೊದಲ ಮಗು ಇದಾಗಿದ್ದು, ತಾಯಿ ಮಗು ಆರೋಗ್ಯದಿಂದಿರುವುದಾಗಿ ವರದಿಗಳು ತಿಳಿಸಿವೆ.

ಇದರಂತೆ ಇಂದಿನ ಈ ಲೇಖನದಲ್ಲಿ ಜಗತ್ತಿನ ಪ್ರಸಿದ್ಧ ರಾಜ ಮನೆತನದವರು ಹಾಗೂ ಅವರು ಹೊಂದಿರುವ ಕಾರುಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಹೆಸರಲ್ಲೇ ಸೂಚಿಸಿರುವಂತೆಯೇ ಅತ್ಯಂತ ದುಬಾರಿ ವಿಂಟೇಜ್ ಕಾರುಗಳನ್ನು ರಾಜಮನೆತನದವರು ಹೊಂದಿದ್ದಾರೆ.

ಬೆಂಟ್ಲಿ ಲಿಮೊಸಿನ್

ಬೆಂಟ್ಲಿ ಲಿಮೊಸಿನ್

ಬ್ರಿಟನ್ ರಾಜಕುಮಾರಿ ತನ್ನೆಲ್ಲ ಅಧಿಕೃತ ರಾಜ್ಯ ಪ್ರವಾಸಕ್ಕಾಗಿ ಕಸ್ಟಮೈಸ್ಡ್ ಬೆಂಟ್ಲಿ ಲಿಮೊಸಿನ್ ಕಾರನ್ನು ಬಳಕೆ ಮಾಡುತ್ತಿದ್ದರು. ಕೇಟ್ ಮಿಡ್ಲ್‌ಟನ್ ಜತೆಗಿನ ವಿವಾಹಕ್ಕೆ ತೆರಳಲು ರಾಜಕುಮಾರ ವಿಲಿಯಮ್ಸ್ ಈ ಮರೂನ್ (ಕಂದು-ಕೆಂಪು ಬಣ್ಣ) ಬಣ್ಣದ ಕಾರನ್ನು ಬಳಸಿದ್ದರು.

ಮರ್ಸಿಡಿಸ್ ಬೆಂಝ್ ಜಿ55 ಎಎಂಜಿ

ಮರ್ಸಿಡಿಸ್ ಬೆಂಝ್ ಜಿ55 ಎಎಂಜಿ

ಅಬುದಾಬಿ ಸುಲ್ತಾನ್ ರಾಶೀದ್ ಅಲ್ ನಹ್ಯಾನ್ ಅವರಿಗಾಗಿ ಈ ಕಸ್ಟಮೈಸ್ಡ್ ಕಾರನ್ನು ತಯಾರಿಸಲಾಗಿತ್ತು. ಇದರ 5.5 ಲೀಟರ್ ವಿ8 ಎಂಜಿನ್ 620 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ರೋಲ್ಸ್ ರಾಯ್ಸ್- ಕಿಂಗ್ ಆಫ್ ರಾಜ್‌ಕೋಟ್

ರೋಲ್ಸ್ ರಾಯ್ಸ್- ಕಿಂಗ್ ಆಫ್ ರಾಜ್‌ಕೋಟ್

ಕಿಂಗ್ ಆಫ್ ರಾಜ್‌ಕೋಟ್ 1934 ರೋಲ್ಸ್ ರಾಯ್ಸ್ ಕಾರನ್ನು ಬಳಕೆ ಮಾಡುತ್ತಿದ್ದರು. ರೋಲ್ಸ್ ರಾಯ್ಸ್ ಪೈಕಿ ಅತಿ ವಿರಳ ಎನ್ನಬಹುದಾದ ಈ ಕಾರು 50 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Lexus LS 600h L Landaulet

Lexus LS 600h L Landaulet

ಮೊನಕೊ ಪ್ರಿನ್ಸ್ ಅಲ್ಬರ್ಟ್ II ಅವರಿಗಾಗಿ ಲೆಕ್ಸಾಸ್ ಎಲ್‌ಎಸ್ 600ಎಚ್ ಕಾರನ್ನು ತಯಾರಿಸಲಾಗಿತ್ತು. ಇದರ ಪಾರದರ್ಶಕ ರೂಫ್ ಟಾಪ್ ಪ್ರಮುಖ ಆಕರ್ಷಣೆಯಾಗಿದೆ.

Pagani Zonda Una

Pagani Zonda Una

ಗಲ್ಫ್‌ನ ಖಾತರ್ ರಾಜವಂಶಜರಿಗಾಗಿ ನೀಲಿ ಬಣ್ಣದ ಪಗಾನಿ ಝೋಂಡಾ ಉನಾ ತಯಾರಿಸಲಾಗಿತ್ತು. ಇದರ 7.3 ಲೀಟರ್ ವಿ8 ಎಂಜಿನ್ 690 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ರೋಲ್ಸ್ ರಾಯ್ಸ್ ಫಾಟಂ

ರೋಲ್ಸ್ ರಾಯ್ಸ್ ಫಾಟಂ

ರೋಲ್ಸ್ ರಾಯ್ಸ್ ಫಾಟಂ ಕಾರನ್ನು ಸೌದಿ ಅರೇಬಿಯಾದ ಸುಲ್ತಾನ್ ಅಲ್ವಾಲಿದ್ ಬಿನ್ ತಲಾಲ್ ಅಲ್ ಸೌದ್ ಹೊಂದಿದ್ದರು. ಇದರ ಪವರ್‌ಫುಲ್ 6.75 ಲೀಟರ್ ವಿ12 ಎಂಜಿನ್ 453 ಅಶ್ವಶಕ್ತಿ ಉತ್ಪಾದಿಸುತ್ತಿದೆ. ಕಾರಿನ ಒಳಗಡೆ ವುಡ್ ಫಿನಿಶಿಂಗ್ ಟಚ್ ನೀಡಲಾಗಿದೆ.

Aston Martin DB6 MKII Volante

Aston Martin DB6 MKII Volante

ರಾಜಮನೆತನದ ಪ್ರಿನ್ಸ್ ವಿಲಿಯಮ್ ಹಾಗೂ ಕೇಟ್ ಮಿಡ್ಲ್‌ಟನ್ ತಮ್ಮ ಮದುವೆ ಸಂದರ್ಭದಲ್ಲಿ ಸುತ್ತಾಡಲು ಇದೇ ಕಾರನ್ನು ಬಳಸಿದ್ದರು. ಇದರ ವಿಶೇಷತೆ ಏನೆಂದರೆ ಬ್ರಿಟಿಷ್ ರಾಯಲ್ ಕುಟುಂಬದ ರಾಜ ಉದ್ಯಾನದಲ್ಲಿ ಬೆಳೆದ ದ್ರಾಕ್ಷಿಯಿಂದ ತಯಾರಿಸಲಾಗುತ್ತಿರುವ ಆಲ್ಕೋಹಾಲ್ ಆಧಾರಿತ ಇಂಧನದಿಂದ ಇದು ಚಲಿಸುತ್ತದೆ. ಅಂದರೆ ಪ್ರತಿ ಗ್ಯಾಲನ್ ಇಂದನಕ್ಕೆ 8 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

Customised Rolls Royce

Customised Rolls Royce

ಬ್ರೂನಿ ಸುಲ್ತಾನ ಕಾರುಗಳತ್ತ ಅತೀವ ಆಸಕ್ತಿ ಹೊಂದಿದ್ದರು. ಅವರ ಬಳಿ ಅನೇಕ ಕಾರು ಕಲೆಕ್ಷನ್ ಇರುವುದಲ್ಲದೆ ಅಂದಿನ ಕಾಲದ ಜಗತ್ತಿನ ಐಷಾರಾಮಿ ವಿಮಾನದ ಒಡೆಯರೂ ಕೂಡಾ ಆಗಿದ್ದರು. ಅವರು ತಮ್ಮ ಅಧಿಕೃತ ಪಯಣಕ್ಕಾಗಿ ಕಸ್ಟಮೈಸ್ಡ್ ರೋಲ್ಸ್ ರಾಯ್ಸ್ ಬಳಕೆ ಮಾಡುತ್ತಾರೆ.

Cadillac Limousine

Cadillac Limousine

ಥಾಲೈಂಡ್‌ನ ರಾಜಮನೆತನ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದು, ಇದರಲ್ಲಿ ಕ್ಯಾಡಿಲಾಕ್ ಲಿಮೊಸಿನ್ ಕೂಡಾ ಒಂದಾಗಿದೆ.

Mercedes Pullman 600

Mercedes Pullman 600

ತಂತ್ರಜ್ಞಾನ ಸ್ನೇಹಿ ಕಾರುಗಳನ್ನು ಬೆಲ್ಜಿಯಂ ರಾಜ ಕಿಂಗ್ ಬೌದ್ದೀನ್ ಇಷ್ಟಪಡುತ್ತಾರೆ. ಅಲ್ಲದೆ ಚಿತ್ರದಲ್ಲಿ ತೋರಿಸಿರುವುದು ಮರ್ಸಿಡಿಸ್ ಬೆಂಝ್ ಕಸ್ಟಮೈಸ್ಡ್ ಕಾರಾಗಿದ್ದು, ಹೈಬ್ರಿಡ್ ತಂತ್ರಜ್ಞಾನದ ಸಂಕೇತವಾಗಿದೆ.

1961 MercedesBenz 300SL

1961 MercedesBenz 300SL

ಜೋರ್ಡನ್‌ನ ರಾಜ ಅಬ್ದುಲ್ಲ I ಅತ್ಯಾಕರ್ಷಕ ಕಾರುಗಳನ್ನು ಹೊಂದಿರಲು ಬಯಸುತ್ತಾರೆ. ಇದರಲ್ಲಿ 1961ರ ಮರ್ಸಿಡಿಸ್ ಬೆಂಝ್ 300 ಎಸ್‌ಎಲ್ ಕೂಡಾ ಒಂದಾಗಿದೆ. ಇದರ 6 ಲೀಟರ್ ವಿ8 ಎಂಜಿನ್ 380 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ 135 ಮೈಲ್ ವೇಗತೆಯಲ್ಲಿ ಚಲಿಸಲಿದೆ.

Luma CLR 730 RS

Luma CLR 730 RS

ಸೌದಿ ಅರೇಬಿಯಾದ ಕಿಂಗ್ ಸಾದ್ ಬಿನ್ ಅಬ್ದುಲ್ಲ ಬಿನ್ ಅಬ್ದುಲ್ಲಾಝೀಜ್ ಅಲ್ ಸೌದ್, ಲುಮಾದ ಅತಿ ದುಬಾರಿ ಕಸ್ಟಮೈಸ್ಡ್ ಬಿಎಂಡಬ್ಲ್ಯು ಎಂ5 ಇ60 ಕಾರನ್ನು ಹೊಂದಿದ್ದಾರೆ. ಇದರ 10 ಸಿಲಿಂಡರ್ ಎಂಜಿನ್ 730 ಅಶ್ವಶಕ್ತಿ ಉತ್ಪಾದಿಸುತ್ತದೆ.

Toyota Limousine

Toyota Limousine

ಜಗತ್ತಿನ ಬಹುತೇಕ ಎಲ್ಲ ರಾಜಮನೆತನದವರು ರೋಲ್ಸ್ ರಾಯ್ಸ್ ಹಾಗೂ ಮರ್ಸಿಡಿಸ್ ಬೆಂಝ್ ದುಬಾರಿ ಕಾರುಗಳಲ್ಲಿ ಸಂಚರಿಸಲು ಇಷ್ಟಪಡುವುದಾದರೆ ಜಪಾನ್ ರಾಜವಂಶವರು ಮಾತ್ರ ಟೊಯೊಟಾದಿಂದ ತಯಾರುಗೊಂಡ ಕಸ್ಟಮೈಸ್ಡ್ ಲಿಮೊಸಿನ್ ಕಾರುಗಳನ್ನು ಬಳಕೆ ಮಾಡುತ್ತಾರೆ. ಇದರ 5.0 ಲೀಟರ್ ವಿ12 ಎಂಜಿನ್ 350 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

English summary
The assets of the royal families are known to make headlines for their exclusivity and the distinct designs. This list provides details of the elite cars various royal families from around the world.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more