ಆಕ್ಸೆಸ್, ಆಕ್ಟಿವಾಕ್ಕೆ ಸೆಡ್ಡು: ಎಲ್ಎಂಎಲ್ ಸ್ಕೂಟರ್, ಬೈಕ್

ಕೇಳ್ರಪ್ಪೊ ಕೇಳಿ.....ದೇಶದ ರಸ್ತೆಯಲ್ಲಿರುವ ಸುಜುಕಿ ಆಕ್ಸೆಸ್ 125, ಟಿವಿಎಸ್ ವೆಗೊ, ಆಕ್ಟಿವಾ ಮತ್ತು ಮಹೀಂದ್ರ ರೊಡಿಯೊಗಳಿಗೊಂದು ಅಶುಭ ಸುದ್ದಿ. ಆಕರ್ಷಕ ವಿನ್ಯಾಸ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಬಯಸುವ ದ್ವಿಚಕ್ರ ವಾಹನ ಪ್ರೇಮಿಗಳಿಗಿದು ಸಿಹಿ ಸುದ್ದಿ. ದೇಶದ ರಸ್ತೆಗೆ ಎಲ್ಎಂಎಲ್ ಮತ್ತೆ ಪ್ರವೇಶಿಸಲಿದೆಯಂತೆ!

ನಮಗೆ ಇದೀಗ ಬಂದ ಸುದ್ದಿಯ ಪ್ರಕಾರ ಎಲ್ಎಂಎಲ್ ಹಲವು ಸ್ಕೂಟರ್ ಮತ್ತು ಬೈಕ್ ಮಾಡೆಲ್ ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಇದರಲ್ಲಿ ದೇಶದ ಪ್ರಪ್ರಥಮ 200ಸಿಸಿಯ ಗೇರ್ ಸ್ಕೂಟರ್ ಕೂಡ ಇದೆ. ಉಳಿದಂತೆ ಸೆಲೆಕ್ಟ್ 4 ಎಂಬ ನಾಲ್ಕು ಸ್ಟ್ರೋಕ್ ಸ್ಕೂಟರ್, ಎಲ್ಎಂಎಲ್ ಫ್ರೀಡಂ ಬೈಕ್ ರಸ್ತೆಗಿಳಿಯಲಿದೆ. ವೆಸ್ಪಾ ಯಾವಾಗ ರಸ್ತೆಗಿಳಿಯಲಿದೆ ಎಂದು ಕಂಪನಿ ಸದ್ಯ ತಿಳಿಸಿಲ್ಲ.

ಕಂಪನಿ ಉತ್ಪಾದನೆ ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಇಲ್ಲಿ ಎಲ್ಎಂಎಲ್ ಫ್ರೀಡಂ ಬೈಕ್ ಸೂಪರ್ ಹಿಟ್ ಆಗಿತ್ತು. ಇದೇ ಫ್ರೀಡಂ ಬೈಕ್ ಇನ್ನಷ್ಟು ಶಕ್ತಿಶಾಲಿ ಮತ್ತು ಇಂಧನ ದಕ್ಷತೆಯೊಂದಿಗೆ ಮತ್ತೆ ರಸ್ತೆಗಿಳಿಯಲಿದೆ. ನೂತನ ಫ್ರೀಡಂ ನೋಡಲು ಹಳೆಯ ಫ್ಲಾಟ್ ಫಾರ್ಮ್ ನಲ್ಲಿ ಬಂದರೂ ವಿನ್ಯಾಸ ಮತ್ತು ಫೀಚರ್ ಗಳಲ್ಲಿ ಹೊಸತನ ಕಾಣುವ ನಿರೀಕ್ಷೆಯಿದೆ. ನೂತನ ಎಲ್ಎಂಎಲ್ ಫ್ರೀಡಂ 100ಸಿಸಿ ಮತ್ತು 125 ಸಿಸಿ ಸೆಗ್ಮೆಂಟ್ ಗೆ ಲಗ್ಗೆಯಿಡಲಿದೆ.

ದೇಶದ ಹಳೆಯ ಜಮಾನ ಯಾವತ್ತೂ ಎಲ್ಎಂಎಲ್ ನ್ನು ಮರೆಯಲಿಕ್ಕಿಲ್ಲ. ಫ್ರೀಡಂ ಬೈಕ್ ಮತ್ತು ವೆಸ್ಪಾ ಸ್ಕೂಟರ್ ಗಳ ಮೂಲಕ ಎಲ್ಎಂಎಲ್ ದೇಶದ ರಸ್ತೆಯಲ್ಲಿ ಮಾಡಿದ ಮೋಡಿಯನ್ನು ಮರೆಯುವ ಹಾಗೆ ಇಲ್ಲ. ನೂತನ ಜಮಾನಕ್ಕೆ, ಪ್ರಸಕ್ತ ಯುವ ತಲೆಮಾರಿನ ಮೇಲೆ ಹಳೆಯ ಎಲ್ಎಂಎಲ್ ಹೊಸ ಮೋಡಿ ಮಾಡುವುದನ್ನು ನೋಡಲು ತುಸು ದಿನ ಕಾಯಬೇಕಿದೆ.

Most Read Articles

Kannada
English summary
LML, the erstwhile scooter and bike manufacturer is set to re-enter the Indian market by launching several new models. It is going to begin by launching India's first 200cc geared scooter. This will be followed by a 125cc gearless scooter that will compete with the Suzuki Access125, TVS Wego and the Mahindra Rodeo.
Story first published: Tuesday, July 19, 2011, 13:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X