ಪಿಯಾಜಿಯೊ ವಿಸ್ತರಣೆ: ಐಕಾನಿಕ್ ವೆಸ್ಪಾ ಸ್ಕೂಟರ್ ಬರುತ್ತಾ?

Posted By:
To Follow DriveSpark On Facebook, Click The Like Button
Piaggio SpA planning more expansion
ಇಟಲಿಯ ಪಿಯಾಜಿಯೊ ಕಂಪನಿಯು ಏಷ್ಯಾ ಮಾರುಕಟ್ಟೆಯಲ್ಲಿ ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿದೆ. ಪಿಯಾಗಿಯೊ ಸ್ಪಾ ಕಂಪನಿಯ ವೆಸ್ಪಾ ಸ್ಕೂಟರ್ ಕೂಡ ಕೆಲವು ತಿಂಗಳಲ್ಲಿ ದೇಶದ ರಸ್ತೆಗಿಳಿಯುವ ನಿರೀಕ್ಷೆಯಿದೆ.

ಹೊಸ ಉತ್ಪಾದನೆ, ಮಾಡೆಲ್ ಮತ್ತು ಮಾರಾಟ ಚಟುವಟಿಕೆಗಳ ಮೂಲಕ ಕಂಪನಿಯು ವಿಸ್ತರಣೆಯನ್ನು ಮುಂದುವರೆಸುವುದು 2011-14 ವರ್ಷದ ಕಾರ್ಯತಂತ್ರವಾಗಿದೆ ಎಂದು ವರದಿಯೊಂದು ಹೇಳಿದೆ. ಕಂಪನಿಯು ದೇಶದ ಸ್ಕೂಟರ್ ಮಾರುಕಟ್ಟೆಗೆ ಪ್ರವೇಶಿಸುವುದು ಕೂಡ ಈ ಕಾರ್ಯತಂತ್ರದ ಭಾಗವಾಗಿದೆ.

"ಗ್ರಾಹಕರು, ಕೆಲಸಗಾರರು ಮತ್ತು ಷೇರುದಾರರಿಗೆ ಹೆಚ್ಚು ಮೌಲ್ಯ ಒದಗಿಸಲು ಕಂಪನಿಯು ಸದೃಢ ಉತ್ಪಾದನಾ ಶಕ್ತಿಯಾಗಲಿದೆ. ಇದಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿನ ವಹಿವಾಟಿಗೆ ಹೆಚ್ಚು ಒತ್ತು ನೀಡಲಾಗುವುದು" ಎಂದು ಕಂಪನಿ ಹೇಳಿದೆ.

2012ರ ಫೆಬ್ರವರಿಯಿಂದ ಮಾರ್ಚ್ ನಡುವೆ ನೂತನ ವೆಸ್ಪಾವನ್ನು ರಸ್ತೆಗಿಳಿಸುವ ನಿರೀಕ್ಷೆಯಲ್ಲಿದ್ದೇವೆ" ಎಂದು ಪಿಯಾಜಿಯೊ ವೆಹಿಕಲ್ ಇಂಡಿಯಾದ ನಿರ್ದೇಶಕ ರವಿ ಛೋಪ್ರಾ ಈ ಹಿಂದೆ ಹೇಳಿದ್ದರು.

ಸೂಪರ್ ಬೈಕ್: ಪಿಯಾಜಿಯೊ ಕಂಪನಿಯ "ಏಪ್ರಿಲಿಯಾ" ಸೂಪರ್ ಬೈಕ್ ಭಾರತದಲ್ಲಿ ದೊರಕುತ್ತಿದೆ. ಗ್ರಾಹಕರ ಬೇಡಿಕೆ ತಕ್ಕಂತೆ ಇದನ್ನು ಆಮದುಮಾಡಿಕೊಳ್ಳಲಾಗುತ್ತಿದೆ. ಇದರ ದರ ಸುಮಾರು 18 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ.

English summary
Piaggio SpA planning more expansion in Asia. Company will launch New Vespa in India.
Story first published: Thursday, December 15, 2011, 14:13 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark