ಸುಜುಕಿ ಹೊಸ ಸ್ಕೂಟರ್ ಬೇಕೆ? ಹೆಚ್ಚು ಕಾಯಬೇಕಿಲ್ಲ

ನೂತನ ಸ್ಕೂಟರಿನ ಟೆಕ್ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಇದು ಆಕ್ಸಸ್ 125 ಮಾದರಿಯಲ್ಲಿ ಬರುವ ನಿರೀಕ್ಷೆಯಿದ್ದು, ಮೈಲೇಜ್, ಪವರ್ ಮತ್ತು ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಇರುವ ನಿರೀಕ್ಷೆಯಿದೆ. ಕಂಪನಿಯು ಆಕ್ಸೆಸ್ 125 ದೇಶದ ರಸ್ತೆಯಲ್ಲಿರುವ ಪ್ರಮುಖ ಶಕ್ತಿಶಾಲಿ ಸ್ಕೂಟರಾಗಿದೆ.
ಸುಜುಕಿ ಆಕ್ಸೆಸ್ 125 ಸ್ಕೂಟರಿಗೆ ದೀರ್ಘಕಾಲದ ಅಂದರೆ 33 ತಿಂಗಳ ವೇಟಿಂಗ್ ಪಿರೆಯಿಡ್ ಇದೆ. ಈ ಸ್ಕೂಟರಿಗೆ ಈಗಲೂ ಅತ್ಯಧಿಕ ಬೇಡಿಕೆಯಿರುವುದು ಇದಕ್ಕೆ ಪ್ರಮುಖ ಕಾರಣ. ಮುಖ್ಯವಾಗಿ ಈ ಸ್ಕೂಟರ್ ಮಧ್ಯಮ ವಯಸ್ಸಿನವರ ನೆಚ್ಚಿನ ಆಯ್ಕೆಯಾಗಿದೆ.
"ನಾವು ಕೇವಲ ಸುಜುಕಿ ಆಕ್ಸೆಸ್ ಸ್ಕೂಟರ್ ಪರಿಚಯಿಸಿ ಸುಮ್ಮನಾಗುವುದಿಲ್ಲ. ಶೀಘ್ರದಲ್ಲಿ ಅಂದರೆ ದೆಹಲಿ ವಾಹನ ಪ್ರದರ್ಶನದಲ್ಲಿ ನೂತನ ಸ್ಕೂಟರನ್ನು ಪರಿಚಯಿಸಲಿದ್ದೇವೆ" ಎಂದು ಕಂಪನಿಯ ಉಪಾಧ್ಯಕ್ಷರಾದ ಅತುಲ್ ಗುಪ್ತಾ ಹೇಳಿದ್ದಾರೆ.
ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ದೊರಕುವ ನಿರೀಕ್ಷೆಯಿದೆ. ಯಾವುದಕ್ಕೂ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ.


Click it and Unblock the Notifications








