ಬಾಪ್‌ರೇ.. ಈ ಬೈಸಿಕಲ್ ವೇಗ ಗಂಟೆಗೆ 80 ಕಿ.ಮೀ!

Posted By:

ನೀವು ಉಸ್ಸಪ್ಪ, ಎಂದು ಏದುಸಿರು ಬಿಡುತ್ತ ಅತಿವೇಗದಲ್ಲಿ ಬೈಸಿಕಲ್ ಸವಾರಿ ಮಾಡಿರಬಹುದು. ಆದ್ರೆ ಬೈಕಿನಂತೆ ಸೈಕಲ್ ವೇಗವಿದ್ರೆ ಹೇಗಿರಬಹುದು? ಆಡಿ ಕಂಪನಿಯ ನೂತನ ಇ-ಬೈಕ್ ವೇಗ ನೋಡಿದ್ರೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡಬೇಕಷ್ಟೇ. ಈ ಇ-ಬೈಕಿನಲ್ಲಿ ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಸಾಗಬಹುದಂತೆ! ಈ ಸೈಕಲ್ ಹೆಸರು Worthersee.

ಬೈಸಿಕಲ್ ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವ ನೂತನ ವರ್ದರ್ಶಿ ಇ-ಬೈಕನ್ನು ರೇಸಿಂಗ್ ವಿನ್ಯಾಸ ನೀತಿನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆ. ಅಂದ್ರೆ ಫಾರ್ಮುಲಾ ಒನ್ ಕಾರಿನಂತೆ ಈ ಬೈಸಿಕಲ್ ರೂಪಿಸಲಾಗಿದೆ. ಹೀಗಾಗಿ ಇದು ವಿಸ್ಮಯಕಾರಿ ವೇಗ ಹೊಂದಿದೆ.

To Follow DriveSpark On Facebook, Click The Like Button

ಈ ಬೈಸಿಕಲ್ ತುಳಿದು ಕಾಲಿನ ಗತಿ ಏನಾಗಬಹುದು ಅನ್ನೋರಿಗಾಗಿ ಇದರಲ್ಲಿ ಎಲೆಕ್ಟ್ರಿಕ್ ಮೋಟರ್ ಇದೆ. ಪೆಡಲ್ ತುಳಿದು ಸುಸ್ತಾದರೆ ಮೋಟರ್ ಆನ್ ಮಾಡಬಹುದು. ಎಲೆಕ್ಟ್ರಿಕ್ ಮೋಟರ್ ನೆರವಿನಿಂದ ಈ ಸೈಕಲಿನಲ್ಲಿ ಗಂಟೆಗೆ ಗರಿಷ್ಠ ವೇಗದಲ್ಲಿ ಸಾಗಬಹುದು ಎಂದು ಡೈಲಿ ಮೈಲ್ ವರದಿ ಮಾಡಿದೆ.

ಈ ಬೈಸಿಕಲನ್ನು ಐದು ರೀತಿಯಾಗಿ ಬಳಕೆ ಮಾಡಬಹುದು. ಕೇವಲ ಸ್ನಾಯು ಶಕ್ತಿಯಿಂದ ಪೆಡಲ್ ತುಳಿಯಬಹುದು. ಬರೀ ಎಲೆಕ್ಟ್ರೀಕ್ ಮೋಟರ್ ಮೂಲಕ ಸೈಕಲ್ ಬಿಡಬಹುದು, ಎಲೆಕ್ಟ್ರಿಕ್ ಮೋಟರ್ ನೆರವಿನಿಂದ ಪೆಡಲ್ ಮಾಡಬಹುದು.

ಹೆಸರೇ ಹೇಳುವಂತೆ ಸ್ನಾಯುಶಕ್ತಿಯಿಂದ ಎಂದರೆ ಸಾಂಪ್ರಾದಾಯಿಕ ಬೈಸಿಕಲುಗಳಂತೆ ಕೇವಲ ಪೆಡಲ್ ತುಳಿದು ಸವಾರಿ ಮಾಡಬೇಕು. ಎಲೆಕ್ಟ್ರಿಕ್ ಮೋಟರ್ ನೆರವು ಪಡೆದು ಪೆಡಲ್ ಬಳಸಿದರೆ 50 ಮೈಲು ವೇಗ ಪಡೆಯಬಹುದು. ಬರೀ ಎಲೆಕ್ಟ್ರಿಕ್ ಮೋಟರ್ ಮಾತ್ರ ಬಳಸಿದರೆ 31 ಮೈಲು ವೇಗ ಪಡೆಯಬಹುದು.

ಇ-ಬೈಕಿನ ವಿಶೇಷತೆ ಇಷ್ಟಕ್ಕೆ ಮುಗಿಯುವುದಿಲ್ಲ. ಇದರಲ್ಲಿ ಗೇರ್ ಶಿಫ್ಟ್ ಆಯ್ಕೆಯಿದ್ದು, ಇದರಲ್ಲಿರುವ ಟಚ್ ಸ್ಕ್ರೀನ್ ಮೂಲಕ ವೇಗ ಹೆಚ್ಚಿಸಿಕೊಳ್ಳಬಹುದು. ಸ್ಮಾರ್ಟ್ ಫೋನ್ ಮೂಲಕವೂ ಇದರಲ್ಲಿರುವ ಕಂಪ್ಯೂಟರನ್ನು ಬಳಸಿಕೊಳ್ಳಬಹುದು. ಇದರ ಹೆಲ್ಮೆಟಿನಲ್ಲಿ ಕ್ಯಾಮರಾವಿದ್ದು, ಬೇಕಾದ್ರೆ ನಿಮ್ಮ ಸ್ಮಾರ್ಟ್ ಫೋನ್ ಇಂಟರ್ನೆಟ್ ಮೂಲಕ ವಿಡಿಯೊ ಚಿತ್ರಗಳನ್ನು ಅಪ್ ಲೋಡ್ ಮಾಡಿಕೊಳ್ಳಬಹುದು.

ಆಡಿ ಇ ಬೈಕ್ ವರ್ದರ್ಶಿ ಪರದೆಯಲ್ಲಿ ಫೇಸ್ ಬುಕ್ ಸ್ಟೇಟಸ್ ಕೂಡ ಕಾಣುತ್ತದೆ. ಈ ಸೈಕಲಿಗೆ ಶಕ್ತಿಶಾಲಿ ಎಲ್ ಇಡಿ ಲೈಟ್ ಕೂಡ ಅಳವಡಿಸಲಾಗಿದೆ. ನೂತನ ಇ-ಬೈಕ್ ದರ ಮಾಹಿತಿ ಲಭ್ಯವಿಲ್ಲ. ಸದ್ಯಕ್ಕೆ ಬೈಕ್ ವೇಗದಲ್ಲಿ ಬೈಸಿಕಲ್ ಸಾಗುವುದನ್ನು ಕಣ್ಮುಚ್ಚಿ ಊಹಿಸಿಕೊಳ್ಳೋಣ.

English summary
Audi e-bike Worthersee runs at 80 kmph. Imagine a bicycle that runs at 80 kmph. Cyclist can choose pure muscle power mode, the electric motor alone, or pedalling supported by the motor.
Story first published: Tuesday, May 22, 2012, 10:09 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark