ಪಲ್ಸರ್ 200ಎನ್ಎಸ್ ಬುಕ್ಕಿಂಗ್ ಶುರು, ದರ 94 ಸಾವಿರ ರು.

Posted By:
ಕೊನೆಗೂ ಬಜಾಜ್ ಆಟೋ 2012 ಪಲ್ಸರ್ 200ಎನ್ಎಸ್ ಬೈಕ್ ಬುಕ್ಕಿಂಗನ್ನು ತನ್ನ ತವರೂರಾದ ಪುಣೆಯಲ್ಲಿ ಆರಂಭಿಸಿದೆ. ಪಲ್ಸರ್ 200ಎನ್ಎಸ್ ದರ ಕೂಡ ಸೂಪರ್ಬ್! ಪುಣೆ ಆನ್ ರೋಡ್ ದರ ಸುಮಾರು 94,280 ರುಪಾಯಿ. ಎಕ್ಸ್ ಶೋರೂಂ ದರ 85,253 ರುಪಾಯಿ.

ಪುಣೆಯ ಬಜಾಜ್ ಡೀಲರುಗಳು ಪಲ್ಸರ್ 200ಎನ್ಎಸ್ ಬುಕ್ಕಿಂಗ್ ಆರಂಭಿಸಿದ್ದು, ಜೂನ್ 15ರಿಂದ ಡೆಲಿವರಿ ಆರಂಭಿಸುವ ನಿರೀಕ್ಷೆಯಿದೆ. ದೇಶದ ಉಳಿದ ನಗರಗಳಲ್ಲಿ ಬಜಾಜ್ ಪಲ್ಸರ್ 200ಎನ್ಎಸ್ ಶೀಘ್ರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮುಂದಿನ ವಾರದಲ್ಲಿ ಬಜಾಜ್ ಪಲ್ಸರ್ 200ಎನ್ಎಸ್ ಟೆಸ್ಟ್ ಡ್ರೈವ್ ಪ್ರಕ್ರಿಯೆಗೆ ಚಾಲನೆ ಸಿಗುವ ಸಾಧ್ಯತೆಯಿದೆ. ಕಂಪನಿಯು ಪ್ರಪ್ರಥಮ ಬಾರಿಗೆ ಪಲ್ಸರ್ ಬೈಕನ್ನು ದೇಶದ ರಸ್ತೆಗೆ 2001ನೇ ಇಸವಿಯಲ್ಲಿ ಪರಿಚಯಿಸಿತ್ತು.

ಪಲ್ಸರ್ 200ಎನ್ಎಸ್ ಬೈಕ್ 200ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಪಲ್ಸರ್ ಎಂಜಿನ್ ನಾಲ್ಕು ಕವಾಟ, ಮೂರು ಸ್ಪಾರ್ಕ್ ಪ್ಲಗ್, ಅಡ್ವಾನ್ಸ್ ಕಂಬಸ್ಟನ್ ಟೆಕ್ನಾಲಜಿ ಇತ್ಯಾದಿ ವಿಶೇಷತೆಗಳೊಂದಿಗೆ ಆಗಮಿಸಿದೆ.

ಜಗತ್ತಿಗೆ ಪ್ರಪ್ರಥಮ ಬಾರಿಯಾಗಿ ಕಂಪನಿಯು ಟ್ರೈ-ಸ್ಪಾರ್ಕ್ ಟೆಕ್ನಾಲಜಿಯನ್ನು ಪರಿಚಯಿಸಿದೆ. ಇದಕ್ಕಾಗಿ ಕಂಪನಿಯು ಪೇಟೆಂಟ್ ಕೂಡ ಪಡೆದುಕೊಂಡಿದೆ. ನೂತನ ಪಲ್ಸರ್ ಬೈಕ್ 6 ಸ್ಪೀಡಿನ ಮ್ಯಾನುಯಲ್ ಗೇರ್ ಹೊಂದಿದೆ. ಇದೇ ಗೇರ್ ಕೆಟಿಎಂ ಡ್ಯೂಕ್ 200ಎನ್ಎಸ್ ಬೈಕಿನಲ್ಲೂ ಇದೆ.

ಬಜಾಜ್ ಪಲ್ಸರ್ 200ಎನ್ಎಸ್ 9,500 ಆವರ್ತನಕ್ಕೆ 23.5 ಪಿಎಸ್ ಪವರ್ ಮತ್ತು 8 ಸಾವಿರ ಆವರ್ತನಕ್ಕೆ 18.3 ಟಾರ್ಕ್ ಪವರ್ ನೀಡುತ್ತದೆ. ನೂತನ ಪಲ್ಸರ್ 200ಎನ್ಎಸ್ ಬೈಕ್ 143 ಕೆಜಿ ತೂಕವಿದೆ.

ಈ ಬೈಕಿನಲ್ಲಿ ಗಂಟೆಗೆ ಗರಿಷ್ಠ 136 ಕಿ.ಮೀ. ವೇಗದಲ್ಲಿ ಹೋಗಬಹುದು. ಕೇವಲ 9.8 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆಯಬಹುದು. ಇನ್ನೂ ನಿಖರವಾಗಿ ಹೇಳಬೇಕೆಂದರೆ 0-60 ಕಿ.ಮೀ. ವೇಗವನ್ನು ಬರೀ 3.6 ಸೆಕೆಂಡಿನಲ್ಲಿ ಪಡೆಯಬಹುದು.

ನೂತನ ಪಲ್ಸರ್ ಬೈಕಿನಲ್ಲಿ ಪ್ರತಿಗಂಟೆಗೆ 55 ಕಿ.ಮೀ. ವೇಗದಲ್ಲಿ ಸಾಗಿದರೆ ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 58 ಕಿ.ಮೀ. ಮೈಲೇಜ್ ಪಡೆಯಬಹುದು ಎಂದು ಬಜಾಜ್ ಹೇಳಿದೆ.

English summary
Bajaj 2012 Pulsar 200 NS Bookings started in pune. New Bajaj Pulsar 200NS Onroad price Rs 94,280 and Ex-Showroom Price Rs 85,273. Pulsar 200 NS owned liquid cooled 200cc single cylinder engine.
Story first published: Monday, June 4, 2012, 9:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark