ಐದು ಮಿಲಿಯನ್ ಮಾರಾಟಗೊಂಡ ಬಜಾಜ್ ಪಲ್ಸರ್

"ಬಜಾಜ್ ಪಲ್ಸರ್ ರಸ್ತೆಗಿಳಿದ ತರುವಾಯ, ಇಲ್ಲಿವರೆಗೆ ಸುಮಾರು 50 ಲಕ್ಷ ಯನಿಟ್ ಮಾರಾಟವಾಗಿರುವ ನಿರೀಕ್ಷೆಯಿದೆ. ಇದು ಮೋಟರ್‌ಸೈಕಲ್ ಸೆಗ್ಮೆಂಟ್‌ನಲ್ಲಿ ಅತ್ಯಧಿಕ ಸಂಖ್ಯೆಯ ಮಾರಾಟವಾಗಿದೆ" ಎಂದು ಬಜಾಜ್ ಆಟೋ ಪ್ರಕಟಣೆಯಲ್ಲಿ ತಿಳಿಸಿದೆ.
ಬಜಾಜ್ ಪಲ್ಸರ್ ರಸ್ತೆಗಿಳಿದ ನಂತರ ಬೆಸ್ಟ್ ಸೆಲ್ಲರ್ ಬೈಕ್ ಎನಿಸಿಕೊಂಡಿತು. ಇದರ 150 ಸಿಸಿ ಮತ್ತು 180ಸಿಸಿ ಆಯ್ಕೆಯಲ್ಲಿ ದೊರಕುತ್ತದೆ. ಈ ಬೈಕ್ ರಸ್ತೆಗಿಳಿದ ನಂತರ ಅತ್ಯಧಿಕ ಬಾರಿ ಫೇಸ್‌ಲಿಫ್ಟ್ ಅಥವಾ ಪರಿಷ್ಕೃತಗೊಂಡಿದೆ.
ಹೀರೋ ಹೋಂಡಾ ಸ್ಪ್ಲೆಂಡರ್ ಮಾರಾಟ ಕಡಿಮೆಯಾಗಲು ಕೂಡ ಪಲ್ಸರ್ ಪ್ರಮುಖ ಕಾರಣವಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಬಜಾಜ್ ಪಲ್ಸರ್ 200ಎನ್ಎಸ್ ಆವೃತ್ತಿ ರಸ್ತೆಗಿಳಿಯಲಿದೆ. ಇದು ಮುಂದುವರೆದ ತಾಂತ್ರಿಕತೆ ಹೊಂದಿದ್ದು, ಸುಮಾರು 1 ಲಕ್ಷ ರುಪಾಯಿ ಆಸುಪಾಸಿನಲ್ಲಿ ದರ ಹೊಂದಿರಲಿದೆ.
ಕೆಲವು ಬಜಾಜ್ ಶೋರೂಂಗಳಲ್ಲಿ ಪಲ್ಸರ್ 200ಎನ್ಎಸ್ ಬುಕ್ಕಿಂಗ್ ಆರಂಭವಾಗಿದೆ. ಆದರೆ ಇದನ್ನು ಕಂಪನಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications








