ಬೆಂಗ್ಳೂರಲ್ಲಿ ಪರಿಸರ ಉಳಿಸೋ ಬಾಡಿಗೆ ಸೈಕಲ್ ಜಾಲ

Posted By:

ಮೆಟ್ರೋ ರೈಲಿಗೆ ಉತ್ತೇಜನ ನೀಡುವ ಪರಿಸರ ಸ್ನೇಹಿ ಬಾಡಿಗೆ ಸೈಕಲ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಮತ್ತು ಪ್ರಯೋಜನಕಾರಿಯಾಗಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್(ಬಿಎಂಆರ್‌ಸಿಎಲ್) ಕಾರ್ಯತಂತ್ರ ರೂಪಿಸುತ್ತಿದೆ. ಮೆಟ್ರೋ ನಿಲ್ದಾಣಗಳಿಗೆ ತಲುಪಲು ಸಾರ್ವಜನಿಕರಿಗೆ ಸುಲಭವಾಗುವಂತೆ ಇನ್ನಷ್ಟು ಬಾಡಿಗೆ ಸೈಕಲ್ ತಂಗುದಾಣಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ.

ಆದರೆ ಬಿಎಂಆರ್‌ಸಿಎಲ್ ನೂತನ ಟೆಂಡರ್ ಕೇವಲ ಮೆಟ್ರೋ ನಿಲ್ದಾಣಗಳ ಬಳಿ ಮಾತ್ರ ಸ್ಥಳಾವಕಾಶ ನೀಡುವುದಾಗಿ ಹೇಳಿದೆ. ಆದರೆ ಇದು ಬಾಡಿಗೆ ಸೈಕಲ್ ವ್ಯವಸ್ಥೆ ಅಥವಾ automated bicycle sharing systems ಯಶಸ್ಸಿಗೆ ಸಾಕಾಗದು. ಸುಮಾರು ಎರಡು ಮೂರು ಕಿ.ಮೀ.ಗೊಂದರಂತೆ ಬಾಡಿಗೆ ಸೈಕಲ್ ತಂಗುದಾಣ ನಿರ್ಮಿಸಿದರೆ ಈ ಯೋಜನೆ ಹೆಚ್ಚು ಜನರನ್ನು ಸೆಳೆಯಲಿದೆ.

To Follow DriveSpark On Facebook, Click The Like Button

ಮೆಟ್ರೋ ನಿಲ್ದಾಣಗಳ ಆಸುಪಾಸಿನಲ್ಲಿ ಸ್ಥಳಾವಕಾಶ ನೀಡುವುದಾಗಿ ಬಿಎಂಆರ್‌ಸಿಎಲ್ ಟೆಂಡರ್ ಹೇಳಿದೆ. ದಿನದ 24 ಗಂಟೆ ಮತ್ತು ವಾರದ ಏಳೂ ದಿನವೂ(24/7) ಈ ಸೇವೆ ನೀಡಲು ಸೈಕಲ್ ಸ್ಟಾಂಡ್ ನಿರ್ಮಿಸಲು ಬಿಡ್ ಕರೆಯಲಾಗಿದೆ. ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರ ಪರವಾನಿಗೆ ಪಡೆದು ಸೈಕಲ್ ನಿಲ್ದಾಣಗಳನ್ನು ಸ್ಥಾಪಿಸಲು ಅವಕಾಶವಿದೆ.

ಆಟೋಮೇಟೆಡ್ ಬೈಸಿಕಲ್ ಷೇರಿಂಗ್ ಸಿಸ್ಟಮ್ ಮೂಲಕ ಜನರು ಸೈಕಲ್ ಗಳನ್ನು ಬಾಡಿಗೆಗೆ ಪಡೆಯಬಹುದು. ವಿಶೇಷವೆಂದರೆ ಈ ಸೈಕಲ್ ಗಳನ್ನು ಬಾಡಿಗೆ ಪಡೆದ ಸ್ಥಳದಲ್ಲಿಯೇ ಹಿಂತುರುಗಿಸಬೇಕೆಂದಿಲ್ಲ. ಒಂದು ಸೈಕಲ್ ನಿಲ್ದಾಣದಲ್ಲಿ ಬಾಡಿಗೆ ಪಡೆದ ಸೈಕಲನ್ನು ಇನ್ನೊಂದು ನಿಲ್ದಾಣದಲ್ಲಿ ಹಿಂತುರುಗಿಸಬಹುದು. ಈಗ ಇಂತಹ ಸೇವೆಯನ್ನು ಎಂಜಿ ರಸ್ತೆ ಮತ್ತು ಬ್ರಿಗೆಡ್ ರಸ್ತೆಯಲ್ಲಿ Kerberon Automations ನೀಡುತ್ತಿದೆ.

ಬಾಡಿಗೆ ಸೈಕಲ್ ವ್ಯವಸ್ಥೆ ಹೆಚ್ಚು ಸ್ಥಳದಲ್ಲಿ ಲಭ್ಯವಾಗಬೇಕು. ಇದರ ನೆಟ್ ವರ್ಕ್ ವಿಶಾಲವಾದಂತೆ ಹೆಚ್ಚು ಹೆಚ್ಚು ಜನರನ್ನು ಸೆಳೆಯಲಿದೆ. ಬಿಎಂಆರ್‌ಸಿಎಲ್ ಕೇವಲ ಖಾಲಿ ಸ್ಥಳವನ್ನು ನೀಡಲಿದೆ. ಆಸಕ್ತಿ ಇರುವರು ಹಣ ಹೂಡಿಕೆ ಮಾಡಿ ಸ್ವಂತವಾಗಿ ಬಾಡಿಗೆ ಸೈಕಲ್ ನಿಲ್ದಾಣ ನಿರ್ಮಿಸಬೇಕು.

ಕೇವಲ ಸೈಕಲ್ ನೀಡುವುದರಿಂದ ದೊರಕುವ ಬಾಡಿಗೆ ಮಾತ್ರವಲ್ಲದೇ ಸೈಕಲ್ ಮೇಲೆ ಜಾಹೀರಾತುಗಳನ್ನು ನೀಡಿ ಹಣ ಗಳಿಸುವ ಅವಕಾಶವೂ ಇದರಲ್ಲಿದೆ.

ಬಾಡಿಗೆ ಸೈಕಲ್ ಸೌಲಭ್ಯ ಪಡೆಯುವ ಮುನ್ನ ನೋಂದಾಯಿಸಿಕೊಳ್ಳಬೇಕು. ನಂತರ ನಿಮಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಡಾಕಿಂಗ್ ಸ್ಟೇಷನ್‌ಗೆ ತೆರಳಿ ಸೈಕಲ್ ಪಡೆದು ನಿಗದಿತ ಅವಧಿಯಲ್ಲಿ ಸಂಚಾರ ಮಾಡಬಹುದು. ನಂತರ ಮತ್ತೊಂದು ಸ್ಟೇಷನಿನಲ್ಲಿ ಸೈಕಲ್ ಹಿಂತುರುಗಿಸಬಹುದು.

English summary
BMRCL has set up automated bicycle sharing systems to help commuters reach Metro stations. The authority has made tender calls for providing space near the Metro stations for docking stations.
Story first published: Monday, July 2, 2012, 12:13 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark