ಬಿಎಂಡಬ್ಲ್ಯು ಸ್ಪೋರ್ಟ್ಸ್ ಬೈಕ್ ಆಗಮನ ಸನ್ನಿಹಿತ

Posted By:
ದೇಶದ ರಸ್ತೆಗೆ ಆಫ್ ರೋಡ್ F650GS ಬೈಕನ್ನು ಶೀಘ್ರದಲ್ಲಿ ಪರಿಚಯಿಸಲು ಬಿಎಂಡಬ್ಲ್ಯು ಮೋಟರ್ಡ್ ಯೋಜಿಸಿದೆ. ಸುಮಾರು 9.99 ಲಕ್ಷ ರುಪಾಯಿ ಎಕ್ಸ್ ಶೋರೂಂ ದರವಿರುವ ಎಫ್650ಜಿಎಸ್ ಪ್ರಸಕ್ತ ಮೇ ತಿಂಗಳಲ್ಲೇ ಆಗಮಿಸಲಿದೆ.

ನೂತನ ಬಿಎಂಡಬ್ಲ್ಯು ಸ್ಪೋರ್ಟ್ಸ್ ಬೈಕಿನ ದರ ಮೂರು ತಿಂಗಳ ತರುವಾಯ ಸುಮಾರು 12 ಲಕ್ಷ ರುಪಾಯಿಗೆ ತಲುಪುವ ನಿರೀಕ್ಷೆಯಿದೆ. ಹೀಗಾಗಿ ಬಿಎಂಡಬ್ಲ್ಯು ಬೈಕ್ ಖರೀದಿಸುವ ಯೋಚನೆ ಇದ್ದವರೂ ಆರಂಭಿಕ ದರದಲ್ಲೇ ಖರೀದಿಸಿದ್ರೆ ಕೆಲವು ಲಕ್ಷ ರುಪಾಯಿ ಉಳಿಸಬಹುದು.

ಎಫ್650ಜಿಎಸ್ ಬೈಕ್ ಫ್ಯೂಯಲ್ ಇಂಜೆಕ್ಟೆಡ್ 800ಸಿಸಿ ಪ್ಯಾರಲಾಲ್ ಟ್ವಿನ್ ಎಂಜಿನ್ ಹೊಂದಿದೆ. ಇದು 72 ಪಿಎಸ್ ಮತ್ತು 75ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಬೈಕ್ ಕವಾಸಕಿ ನಿಂಜಾ 650ಆರ್ ಮಾದರಿಯಲ್ಲೇ ಇದೆ.

ನೂತನ ಬೈಕ್ ಆರು ಸ್ಪೀಡಿನ ಗೇರ್ ಬ್ಯಾಕ್ಸ್ ಹೊಂದಿದೆ. ಕಂಪನಿಯು ನೂತನ ಬೈಕನ್ನು ನವನೀತ್ ಮೋಟರ್ಸ್ ಮೂಲಕ ದೇಶಕ್ಕೆ ಪರಿಚಯಿಸಲಿದೆ. ಕಂಪನಿಯು ಈ ಡೀಲರ್ ಮಳಿಗೆಯಲ್ಲಿ ಎಸ್1000ಆರ್‌ಆರ್ ಸ್ಪೋರ್ಟ್ಸ್ ಬೈಕ್ ಮತ್ತು ಆಫ್ ರೋಡರ್ ಆರ್1200ಜಿಎಸ್ ಮಾರಾಟ ಮಾಡುತ್ತಿದೆ.

ಬಿಎಂಡಬ್ಲ್ಯು ಕಂಪನಿಯ ಡೀಲರ್ಷಿಪ್ ಮಳಿಗೆ ಬೆಂಗಳೂರಿನಲ್ಲೂ ಇದೆ.

English summary
BMW Motorrad is planning to launch its F650GS sports bike in India with an initial price of Rs.10 lakhs. It is expected to increase the price to Rs.12 lakhs later.
Story first published: Saturday, May 5, 2012, 14:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark