ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

Written By:

ದೇಶದ ಅತಿ ಎತ್ತರದಲ್ಲಿರುವ ಪರ್ವತ ಶಿಖರವಾದ ಹಿಮಾಲಯದ ಬಗ್ಗೆ ನಾವು ಅನೇಕ ಬಾರಿ ಚರ್ಚಿಸಿರುತ್ತೇವೆ. ಆದರೆ ಹಿಮಾಲಯದಂತಹ ಮಹಾನ್ ಪರ್ವತ ಶಿಖರವನ್ನು ಅದರಲ್ಲೂ ವಿಶೇಷವಾಗಿ ಮೊಟೊಕ್ರಾಸ್ ರೈಡಿಂಗ್ ಮೂಲಕ ಸ್ವಾಧೀನ ಪಡಿಸುವುದೆಂದರೆ ಅಂದೊಂದು ಸಾಹಸವೇ ಸರಿ!

ಕರ್ನಾಟಕದ ಹೆಮ್ಮೆಯ ಸಿಎಸ್ ಸಂತೋಷ್ ಇಂತಹದೊಂದು ಸಾಹಸವನ್ನು ಮಾಡಿದ್ದು, 14ನೇ ಮಾರುತಿ ಸುಜುಕಿ 2012ರಲ್ಲಿ 'ರೇಡ್ ಡಿ ಹಿಮಾಲಯ' ಸ್ಪರ್ದೆಯಲ್ಲಿ ಚಾಂಪಿಯನ್ ಎನಿಸಿಕೊಂಡಿದ್ದಾರೆ.

28ರ ಹರೆಯದ ಸಂತೋಷ್ ಮೂಲತ: ಬೆಂಗಳೂರು ನಿವಾಸಿಯಾಗಿದ್ದು ಈಗಾಗಲೇ ದುಬೈ ನ್ಯಾಷನಲ್ ಮೊಟೊಕ್ರಾಸ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

ಹಿಮಾಲಯದ ಪರ್ವತ ಶಿಖರದಲ್ಲಿ ಈ ಕನ್ನಡಿಗ ಸಾಧನೆ ಅದ್ಭುತವೆನಿಸಿದೆ. ಎಕ್ಸ್‌ಟ್ರೀಮ್ ಮೋಟಾರ್‌ಬೈಕ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಂತೋಷ್ ಇಂತಹದೊಂದು ಸಾಹಸ ಮಾಡಿದ್ದಾರೆ.

ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

ಸಂತೋಷ್ ಗೆಲುವು ಅವಿಸ್ಮರಣೀಯವಾಗಿದೆ. ಫೇಡರೇಷನ್ ಇಂಟರ್‌ನ್ಯಾಷನಲ್ ಮೋಟಾರ್‌ಸೈಕಲಿಸಂನಿಂದ ಮಾನ್ಯತೆ ಪಡೆದ ದೇಶದ ಏಕೈಕ ಆಫ್ ರೋಡ್ ರ‌್ಯಾಲಿ ಇದಾಗಿದೆ. ಪ್ರಸಕ್ತ ಸಾಲಿನಲ್ಲಿ ಜಗತ್ತಿನಾದ್ಯಂತ ಒಟ್ಟು 12 ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು.

ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

ಈ ಹಿಂದೆ ಸಂತೋಷ್, 2005, 2007, 2008 ಹಾಗೂ 2010ನೇ ಇಸವಿಯಲ್ಲಿ ಇಂಡಿಯನ್ ನ್ಯಾಷನಲ್ ಸೂಪರ್‌ಕ್ರಾಸ್ ಚಾಂಪಿಯನ್ ಪಟ್ಟ ಆಲಂಕರಿಸಿದ್ದರು. ಅಲ್ಲದೆ ದುಬೈ ನಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಸುಜುಕಿ ತಂಡದ ಸದಸ್ಯನಾಗಿದ್ದ ಸಂತೋಷ್ ದೇಶವನ್ನು ಪ್ರತಿನಿಧಿಸಿದ್ದರು.

ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

ರೈಡಿಂಗ್ ಬಗ್ಗೆ ನನ್ನ ಹೆತ್ತವರಲ್ಲಿ ಭಯ ಕಾಡಿತ್ತು. ಯಾಕೆಂದರೆ ಇಂದೊಂದು ಅಪಾಯಕಾರಿ ರೇಸ್. ಈ ನಡುವೆ ಶ್ರೀಲಂಕಾಕ್ಕೆ ತೆರಳುವಂತೆ ನನ್ನ ಸಹವರ್ತಿಗಳು ಹುರಿದುಂಬಿಸಿದರು. ಅಲ್ಲಿ ವಿಜೇತನಾದ ನನ್ನ ಕೆರಿಯರ್ ತಿರುವಿಗೆ ಕಾರಣವಾಗಿತ್ತು. ಇಷ್ಟಕ್ಕೂ ಬೈಕಿಂಗ್ ನನ್ನ ಫ್ಯಾಷನ್. ಮುಂದಿನ ವರ್ಷಾರಂಭದಲ್ಲಿ ಮಾರುತಿ ಸುಜುಕಿ ಡೆಸರ್ಟ್ ಸ್ಟ್ರೋಮ್‌ನಲ್ಲಿ ಭಾಗವಹಿಸಲಿದ್ದೇನೆ. ಅಲ್ಲದೆ 2013ರ ಮಾರ್ಚ್‌ನಲ್ಲಿ ಸಾಗಲಿರುವ ಅಬುದಾಬಿ ಡಸರ್ಟ್ ಚಾಲೆಂಜ್ ರೇಸಿಂಗ್ ಟೂರ್ನಿಯನ್ನು ಎದುರು ನೋಡುತ್ತಿದ್ದೇನೆ. ಏಷ್ಯನ್ ಮೊಟೊಕ್ರಾಸ್ ಚಾಂಪಿಯನ್‌ಶಿಪ್ ಗೆಲ್ಲುವುದು ನನ್ನ ಗುರಿ ಎಂದು ಸಂತೋಷ್ ಮುಂದಿನ ಯೋಜನೆ ಬಗ್ಗೆ ವಿವರಿಸಿದ್ದಾರೆ.

ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

ರೈಡಿಂಗ್ ಜೀವನವನ್ನು ಬದಲಾಯಿಸುವ ಅನುಭವವಾಗಿದೆ. ಇದನ್ನು ನಾನು ಆನಂದಿಸುತ್ತಿದ್ದೇನೆ. ಖಂಡಿತವಾಗಿ ಭಯ ಕಾಡುತ್ತಿರುತ್ತದೆ. ಆದರೆ ಯಾವತ್ತೂ ನಿಲ್ಲಬಾರದು. ಕೊನೆಯ ಹಂತ ತಲುಪುವವರೆಗೂ ಛಲ ಬಿಡಬಾರದು ಎಂದು ಸಂತೋಷ್ ರೈಡಿಂಗ್ ಬಗ್ಗೆ ವಿವರಿಸಿದ್ದಾರೆ.

ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

ಮಾರುತಿ ಸುಜುಕಿ ಹಾಗೂ ಶಿಮ್ಲಾ ತಲಹದಿಯ ಹಿಮಾಲಯನ್ ಮೊಟೊಸ್ಪೋರ್ಟ್ ಅಸೋಸಿಯೇಷನ್ (ಎಚ್‌ಎಂಎ) ಜಂಟಿ ಸಹಯೋಗದಲ್ಲಿ ರೇಡ್ ಡಿ ಹಿಮಾಲಯ ರೇಸಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

ಮೋಟಾರು ವಾಹನಗಳು ಸಂಚರಿಸಬಹುದಾದ ಅತಿ ಎತ್ತರದ ಶಿಖರದಲ್ಲಿ ರೈಡಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಸಮುದ್ರ ಮಟ್ಟದಿಂದ ಭಾರಿ ಎತ್ತರದಲ್ಲಿರುವ ದಾರ್ಚಾ (3360 ಮೀ. ಎತ್ತರ), ಕೀಲಾಂಗ್ (3440 ಮೀ. ಎತ್ತರ), ಲೇಹ್ (3524 ಮೀ.ಎತ್ತರ), ಕಾಜಾ (3650 ಮೀ.ಎತ್ತರ), ಢಂಕ (3894 ಮೀ. ಎತ್ತರ), ಲೋಸರ್ (4079 ಮೀ. ಎತ್ತರ), ರುಮ್ಟ್‌ಸೆ (4300 ಮೀ. ಎತ್ತರ), ಕುಂಜುಮ್ ಲಾ (4551 ಮೀ. ಎತ್ತರ), ಕಾಮಿಕ್ (4587 ಮೀ. ಎತ್ತರ) ಮತ್ತು ಪಾಂಗ್ (4600 ಮೀ. ಎತ್ತರ) ಶಿಖರಗಳಲ್ಲಿ ಸಾಹಸ ರೈಡಿಂಗ್ ನಡೆಸಲಾಗಿತ್ತು.

ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

ಮಾರುತಿ ಸುಜುಕಿ 14ನೇ ರೇಡ್ ಡಿ ಹಿಮಾಲಯ ಸ್ಪರ್ಧೆ ಅಕ್ಟೋಬರ್ 7ರಂದು ಆರಂಭಗೊಂಡು ಅಕ್ಟೋಬರ್ 12ರ ವರೆಗೆ ಸಾಗಿತ್ತು. ಅಲ್ಲದೆ ಒಟ್ಟು 1800 ಕಿಲೋ ಮೀಟರ್‌ಗಳನ್ನು ಕ್ರಮಿಕರಿಸಿತ್ತು. ಫೋರ್ ವೀಲರ್ ವಿಭಾಗದಲ್ಲಿ 150 ತಂಡವನ್ನೊಳಗೊಂಡಂತೆ 300 ಸ್ಪರ್ಧಿಗಳು ಹಾಗೂ 35 ಬೈಕರುಗಳು ನಿರಾಶ್ರಯ ಭೂಪ್ರದೇಶಗಳ ಹಾಗೂ ವಿಪರೀತ ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೇ ಸಾಹಸ ಸ್ಪರ್ಧೆಗಿಳಿದಿದ್ದರು.

ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

ಹೊಂಡಾ 450ರಲ್ಲಿ ರೈಡಿಂಗ್ ಮಾಡಿದ್ದ ಸಂತೋಷ್ ಅಮೋಘ ಸಾಧನೆ ಮಾಡಿದ್ದಾರೆ. ಅವರು ಕಳೆದ ವರ್ಷದ ಚಾಂಪಿಯನ್ ಆಸ್ಟ್ರೀಯಾದ ವಿಜೇತ ಹೆಲ್ಲಿ ಫ್ರಾವುವಾಲ್ನರ್ ಅವರನ್ನು ಮಣಿಸಿದ್ದಾರೆ. ಹೆಲ್ಲಿ ಆರು ಬಾರಿ ಆಸ್ಟ್ರೀಯಾ ಮೋಟೊ ಚಾಂಪಿಯನ್‌ ಆಗಿದ್ದಾರೆ.

ರೇಡ್ ಡಿ ಹಿಮಾಲಯ; ಬೆಂಗ್ಳೂರಿಗ ಸಂತೋಷ್ ಚಾಂಪಿಯನ್!

ಈ ಸಾಹಸ ಕ್ರೀಡೆ ಗೆದ್ದಿರುವುದರಲ್ಲಿ ಅತೀವ ಸಂತೋಷಗೊಂಡಿದ್ದು ಮತ್ತೆ ತವರಿಗೆ ಮರಳಲು ಸಂತಸಗೊಂಡಿದ್ದೇನೆ. ಇದೀಗ ರೇಸ್ ಬಗ್ಗೆ ಕಣ್ಣಾಯಿಸಿದಾಗ ಇದರಲ್ಲಿ ಫಿನಿಷ್ ಮಾಡಿದ ಎಲ್ಲ ರೈಡರ್‌ಗಳು ಪ್ರಶಂಸೆಗೆ ಅರ್ಹರಾಗಿದ್ದಾರೆ. ಯಾಕೆಂದರೆ ಗೆಲುವೊಂದೇ ಪ್ರಾಮುಖ್ಯವಲ್ಲ ಎಂದು ಸಂತೋಷ್ ಸಹ ಸ್ಪರ್ಧಾಳುಗಳ ಬಗ್ಗೆಯೂ ದೊಡ್ಡತನದ ಮಾತುಗಳನ್ನಾಡಿದ್ದಾರೆ.

English summary
CS Santosh conquered the 14th Maruti Suzuki, 2012 Raid de Himalaya on his first ever outing. CS Santosh participated in the Xtreme motorbikes category, which is considered to be the ultimate adventure in rallying.
Story first published: Wednesday, November 14, 2012, 9:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark