ಹಬ್ಬದ ಸಂಭ್ರಮ; ವೆಸ್ಪಾ ಸ್ಕೂಟರ್ ದರ ಕಡಿತ

Posted By:

ಇಟಲಿ ದ್ವಿಚಕ್ರ ವಾಹನ ತಯಾರಕ ಕಂಪನಿ ಪಿಯಾಜಿಯೊ ತನ್ನ ಜನಪ್ರಿಯ ಮಾಡೆಲ್ ಆದ ವೆಸ್ಪಾ ಸ್ಕೂಟರ್‌ಗಳ ದರಗಳಲ್ಲಿ ಗಣನೀಯ ಕಡಿತ ಮಾಡಿರುವುದು ಗ್ರಾಹಕರನ್ನು ಅತ್ತ ಸೆಳೆಯುವಂತೆ ಮಾಡಿದೆ.

ಪ್ರಮುಖವಾಗಿಯೂ ಹಬ್ಬದ ಸಂಭ್ರಮ ಕಾಲಘಟ್ಟವನ್ನು ಗುರಿ ಮಾಡಿಕೊಂಡಿರುವ ಪಿಯಾಜಿಯೊ, ತನ್ನ ಶ್ರೇಷ್ಠ ಬ್ರಾಂಡ್ ಆದ ವೆಸ್ಪಾ ಸ್ಕೂಟರ್‌ಗೆ ಆನ್ ರೋಡ್ ದರ 75000 ರೂಪಾಯಿಗಳಿಷ್ಟಿತ್ತು. ಆದರೆ ಇದೀಗ 68000 ರೂ.ಗಳ ವರೆಗೆ ದರ ಕಡಿತಗೊಳಿಸಲಾಗಿದೆ. ಹೊಸ ಸ್ಟೈಲಿಷ್ ಲುಕ್‌ನಲ್ಲಿರುವ ವೆಸ್ಪಾ ಖಂಡಿತವಾಗಿಯೂ ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯಿದೆ.

ವೆಸ್ಪಾ ದರ ಕಡಿತ

ವೆಸ್ಪಾ ದರ ಕಡಿತ

ನೂತನ ವೆಸ್ಪಾ ಎಲ್‌ಎಕ್ಸ್125 4 ಸ್ಟ್ರೋಕ್ ಪವರ್‌ನಿಂದ ನಿಯಂತ್ರಿಸಲ್ಪಡಲಿದ್ದು, 3 ವಾಲ್ವೆ, ಸಿಂಗಲ್ ಸಿಲಿಂಡರ್, ಎರ್ ಕೂಲ್ಡ್ ಎಂಜಿನ ಹೊಂದಿದೆ.

ಮಾಕ್ಸಿಮಮ್ ಪವರ್ 10.06 ಪಿಎಸ್ @ 7500 ಆರ್‌ಪಿಎಂ

ಮ್ಯಾಕ್ಸಿಮಮ್ ಟರ್ಕ್ಯೂ 10.6 ಎನ್‌ಎಂ@6000 ಆರ್‌ಪಿಎಂ

ವೆಸ್ಪಾ ಕಲರ್ ವೆರಿಯಂಟ್

ವೆಸ್ಪಾ ಕಲರ್ ವೆರಿಯಂಟ್

ವೆಸ್ಪಾ ಎಲ್‌ಎಕ್ಸ್124 ಆರು ನೂತನ ಕಲರ್ ವೆರಿಯಂಟ್‌ಗಳಲ್ಲಿ ಗ್ರಾಹಕರ ಕೈಸೇರಲಿವೆ. ನೀರೊ ವೊಲ್ಕನೊ, ಮಾಂಟೆ ಬಿಯನ್‌ಕೊ, ರುಸ್ಸೊ ಡ್ರಾಗನ್, ಗಿಯಲ್ಲೊ ಲೈಮ್, ಮಿಡ್‌ನೈಟ್ ಬ್ಲ್ಯು ಹಾಗೂ ರುಸ್ಸೊ ಚಿಯಾಂಟಿ.

ವೆಸ್ಪಾ ಸೆಲ್ಫ್/ಕಿಕ್ ಸ್ಟಾರ್ಟ್

ವೆಸ್ಪಾ ಸೆಲ್ಫ್/ಕಿಕ್ ಸ್ಟಾರ್ಟ್

ನೂತನ ವೆಸ್ಬಾ ಎಲ್‌ಎಕ್ಸ್ 125 ರಿಜಿಡ್ ಮೊನೊಕ್ಯೂ ಸ್ಟೀಮ್ ಫ್ರೇಮ್ ಹೊಂದಿದೆ. ಅಲ್ಲದೆ ಮಾಲಿಕರಿಗೆ ಸೆಲ್ಫ್ ಸ್ಟಾರ್ಟ್ ಅಥವಾ ಕಿಕ್ ಸ್ಟಾರ್ಟ್ ಆಯ್ಕೆ ಹೊಂದಿದೆ.

ವೆಸ್ಪಾ ಡಿಸೈನ್

ವೆಸ್ಪಾ ಡಿಸೈನ್

ಸ್ಕೂಟರ್‌ಗಳ ಪೈಕಿ ಬೆಳೆಬಾಳುವ ವೆಸ್ಪಾ ಅತಿ ಪ್ರಾಮುಖ್ಯವೆನಿಸಿದೆ. ಟೈಮ್‌ಲೆಸ್ ಡಿಸೈನ್ ವಿಶಿಷ್ಟ ಜೀವನಶೈಲಿಯ ಸಂಕೇತವಾಗಿದೆ.

ವೆಸ್ಪಾ ಜತೆ ಹಬ್ಬವನ್ನು ಆಚರಿಸಿ

ವೆಸ್ಪಾ ಜತೆ ಹಬ್ಬವನ್ನು ಆಚರಿಸಿ

ಹಬ್ಬದ ಸಂಭ್ರಮದಲ್ಲಿ ಸೀಮಿತ ಅವಧಿಯಲ್ಲಿ ಮಾತ್ರ ಆಫರ್ ಚಾಲ್ತಿಯಲ್ಲಿರಲಿದ್ದು, ಹಾಗಾಗಿ ಆದಷ್ಟು ಬೇಗನೇ ಹತ್ತಿರದ ಡೀಲರ್‌ಶಿಪ್‌ಗೆ ತೆರಳಿ ವಿಸ್ಪಾ ಎಲ್‌ಎಕ್ಸ್ 125 ನಿಮ್ಮದಾಗಿಸಿ.

English summary
Piaggio the Italian manufacturer of the iconic Vespa, launched the Vespa LX125 at approximately INR 75,000/- (On-road). The company has been quick to notice this and now has slashed the prices down to INR 68,000/- (festive season offer).

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark