ಹರ್ಲಿ ಬೆಸ್ಟ್, ಬಿಎಂಡಬ್ಲ್ಯು, ಡುಕಾಟಿ ಡೀಲರ್ಸ್ ನೆಕ್ಸ್ಟ್

Posted By:
ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಹರ್ಲಿ ಡೇವಿಡ್‌ಸನ್ ಡೀಲರುಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾದ ಪಿಯಿಡ್ ಪಿಪೆರ್ ಮ್ಯಾನೇಜ್ ಮೆಂಟ್ ಕಂಪನಿ(ಪಿಪಿಎಂಸಿ)ಯ ನೂತನ ಸಮೀಕ್ಷೆ ಈ ಮಾಹಿತಿ ಬಹಿರಂಗಪಡಿಸಿದೆ.

ಗ್ರಾಹಕರೊಂದಿಗೆ ಕಂಪನಿ ಡೀಲರುಗಳ ಉತ್ತಮ ಬಾಂಧವ್ಯ, ಗ್ರಾಹಕ ಸ್ನೇಹಿ ವ್ಯವಹಾರ, ಬೈಕ್ ಖರೀದಿ ನಂತರದ ಸಂಬಂಧ ಇತ್ಯಾದಿ ಪ್ರಮುಖ ಅಂಶಗಳನ್ನು ಸಮೀಕ್ಷೆಯಲ್ಲಿ ಅವಲೋಕಿಸಲಾಗಿದೆ. ಅತ್ಯುತ್ತಮ ಗ್ರಾಹಕ ಸೇವೆಯಲ್ಲಿ ಬಿಎಂಡಬ್ಲ್ಯು ಮತ್ತು ಡುಕಾಟಿ ಕಂಪನಿಗಳ ಡೀಲರುಗಳ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಬಿಎಂಡಬ್ಲ್ಯು ಮತ್ತು ಡುಕಾಟಿ ನಂತರದ ಸ್ಥಾನಗಳನ್ನು ಟ್ರಯಂಪ್, ವಿಕ್ಟರಿ ಮತ್ತು ಭಾರತದ ಬ್ರಾಂಡ್ ಪೊಲಾರಿಷ್ ಇಂಡಸ್ಟ್ರೀಸ್ ಪಡೆದಿದೆ. ಹದಿನಾರು ದ್ವಿಚಕ್ರವಾಹನ ಬ್ರಾಂಡುಗಳ ಡೀಲರುಗಳನ್ನು ಸಮೀಕ್ಷೆ ನಡೆಸಲಾಗಿದೆ.

"ಡೀಲರುಗಳ ಕಾರ್ಯಕ್ಷಮತೆ ಇನ್ನಷ್ಟು ಗ್ರಾಹಕ ಸ್ನೇಹಿಯಾಗಬೇಕಿದೆ" ಎಂದು ಪಿಪಿಎಂಸಿ ಡೀಲರ್ಷಿಪ್ ಕಸ್ಟಮರ್ ರಿಲೇಷನ್ ಷಿಪ್ ವಿಭಾಗದ ಅಧ್ಯಕ್ಷ ಮತ್ತು ಸಿಇಒ ಫ್ರಾನ್ ಒಗಾನ್ ಹೇಳಿದ್ದಾರೆ.

English summary
Harley Davidson dealers have been ranked as the top when it comes to treating buyers who come to their store, according to Pied Piper Management Company, a American based company. BMW and Ducati finished in a tie in second place.
Story first published: Saturday, May 19, 2012, 10:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark