ದೇಶದಲ್ಲಿ ಹರ್ಲಿ ಡೇವಿಡ್‌ಸನ್ 9ನೇ ಶೋರೂಂ

Posted By:
ಅಮೆರಿಕದ ಜೀವನಶೈಲಿ ಬೈಕ್ ತಯಾರಿಕ ಕಂಪನಿ ಹರ್ಲಿ ಡೇವಿಡ್‌ಸನ್ ಕಂಪನಿಯು ದೇಶದಲ್ಲಿ ಒಂಬತ್ತನೇಯ ಶೋರೂಂ ತೆರೆಯಲು ನಿರ್ಧರಿಸಿದೆ. ಗೋವಾದ ಪಂಜಿಮ್ ನಗರದಲ್ಲಿ ನೂತನ ಡೀಲರ್‌ಷಿಪ್ ಮಳಿಗೆ ತೆರೆಯುವ ಕುರಿತು ಕಂಪನಿ ಆಲೋಚಿಸುತ್ತಿದೆ.

ಇಲ್ಲಿ ಕೇವಲ ಬೈಕ್ ಮಾರಾಟ ಮಾತ್ರವಲ್ಲದೇ ತನ್ನಲ್ಲಿರುವ ವೈವಿಧ್ಯಮಯವಾದ ಬ್ರಾಂಡೆಡ್ ಆಕ್ಸೆಸರಿಗಳನ್ನು ಮಾರಾಟ ಮಾಡಲು ಕೂಡ ಕಂಪನಿ ನಿರ್ಧರಿಸಿದೆ. ಈ ಶೋರೂಂನಲ್ಲಿ ಕಂಪನಿಯ ಎಲ್ಲಾ ಬೈಕುಗಳು ದೊರಕಲಿದೆ. ಮುಂದಿನ ತಿಂಗಳು ದೇಶದ ರಸ್ತೆಗೆ ಆಗಮಿಸಲಿರುವ ನೂತನ ಬೈಕೊಂದು ಇಲ್ಲಿರುವ ನಿರೀಕ್ಷೆಯಿದೆ.

ಹರ್ಲಿ ಡೇವಿಡ್‌ಸನ್ ಕಂಪನಿಯು ಇತ್ತೀಚೆಗೆ ಸೋಫ್ಟೈಲ್ ಸ್ಲಿಮ್ ಮತ್ತು ಸೆವೆಂಟಿ ಟು ಎಂಬೆರಡು ಬೈಕುಗಳನ್ನು ಪರಿಚಯಿಸಿತ್ತು. ಇವೆರಡು ಬೈಕುಗಳು ಇನ್ನೂ ದೇಶದ ರಸ್ತೆಗೆ ಆಗಮಿಸಿಲ್ಲ. ಅಮೆರಿಕದ ಬೈಕ್ ಸ್ಪೆಷಲಿಸ್ಟ್ ಹರ್ಲಿ ಡೇವಿಡ್ ಸನ್ ವಿಶೇಷ ಕ್ರೂಷ್ ಬೈಕ್ "ಫ್ಯಾಟ್ ಬೈಕ್"ನ್ನು ಕೂಡ ದೇಶದಲ್ಲಿ ಮಾರಾಟ ಮಾಡುತ್ತಿದೆ.

ಕಂಪನಿಯು ದೇಶದ ರಸ್ತೆಗೆ ಇತ್ತೀಚೆಗೆ ಎಫ್ಎಕ್ಸ್ ಡಿಬಿ ಸ್ಟ್ರೀಟ್ ಬೊಬೊ ಮತ್ತು ಎಫ್ಎಕ್ಸ್ ಡಿಸಿ ಸೂಪರ್ ಗ್ಲೈಡ್ ಕಸ್ಟಮ್ ಎಂಬ ಎರಡು ಸೂಪರ್ ಬೈಕುಗಳನ್ನು ಪರಿಚಯಿಸಿದೆ. ಇವೆರಡರ ಎಕ್ಸ್ ಶೋರೂಂ ದರ ಕ್ರಮವಾಗಿ 9.95 ಲಕ್ಷ ರುಪಾಯಿ ಮತ್ತು 11.5 ಲಕ್ಷ ರುಪಾಯಿ ಆಗಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

English summary
American life style motorcycle manufacturer Harley Davidson is set to open its 9th Indian showroom in Goa. Harley is reportedly looking to open the dealership at the state's capital city Panjim.
Story first published: Wednesday, April 11, 2012, 15:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark