ಹರ್ಲಿ ಡೇವಿಡ್ಸನ್: ಎರಡು ಸೂಪರ್ ಬೈಕುಗಳು ರಸ್ತೆಗೆ

Harley-Davidson Launches Two Bikes
ಈಗ ಹೆಚ್ಚಿನ ಕಾರು ಮತ್ತು ಬೈಕು ಕಂಪನಿಗಳು ಭವಿಷ್ಯದ ವಾಹನಗಳನ್ನು ಅಭಿವೃದ್ಧಿಪಡಿಸುವಲ್ಲಿ ಬ್ಯುಸಿಯಾಗಿಬಿಟ್ಟಿವೆ. ಆದರೆ ಹರ್ಲಿ ಡೇವಿಡ್ ಸನ್ ಮಾತ್ರ ಈಗಾಗಲೇ ಎರಡು ಬೈಕುಗಳನ್ನು ಹೊರತಂದಿದೆ. ಆ ನೂತನ ಬೈಕುಗಳ ಹೆಸರು ಸೋಫ್ಟೈಲ್ ಸ್ಲಿಮ್ ಮತ್ತು ಸೆವೆಂಟಿ ಟು.

ಹರ್ಲಿ ಡೇವಿಡ್ ಸನ್ ಕಂಪನಿಯು ಹಲವು ವರ್ಷಗಳ ನಂತರ ಪ್ರಪ್ರಥಮ ಬಾರಿಗೆ ಎರಡು ಹೊಸ ಬೈಕುಗಳನ್ನು ಪರಿಚಯಿಸಿದೆ. ಇದರಲ್ಲಿ ಹರ್ಲಿ ಡೇವಿಡ್ ಸನ್ ಸೆವೆಂಟಿ ಟು ಬೈಕ್ 1,200ಸಿಸಿಯ ಏರ್ ಕೂಲ್ಡ್ ವಿ ಟ್ವಿನ್ ಎಂಜಿನ್ ಹೊಂದಿದ್ದು, 96 ಟಾರ್ಕ್ ಪವರ್ ನೀಡುತ್ತದೆ. ಇದರಲ್ಲಿ ಎಬಿಎಸ್ ಆವೃತ್ತಿ ದೊರಕುತ್ತಿಲ್ಲ. ಇದರ ದರ ಸುಮಾರು 10,499 ಡಾಲರ್.

ಮತ್ತೊಂದು ಬೈಕಿನ ಹೆಸರು ಸ್ಲಿಮ್ ಮೋಟರ್ ಸೈಕಲ್. ಇದು 1,690 ಸಿಸಿ ವಿಟ್ವಿನ್ ಎಂಜಿನ್ ಹೊಂದಿದ್ದು 132 ಟಾರ್ಕ್ ಪವರ್ ನೀಡುತ್ತದೆ. ಇದು 7.9 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಇದರ ದರ ಸುಮಾರು 15,499 ಡಾಲರ್. ಇದು ಎಬಿಎಸ್ ಆಯ್ಕೆಯಲ್ಲಿ ದೊರಕುತ್ತಿದೆ.

ಇವೆರಡು ಬೈಕುಗಳು ದೇಶದ ರಸ್ತೆಗೆ ಆಗಮಿಸುವ ಕುರಿತು ಯಾವುದೇ ಸೂಚನೆ ದೊರಕಿಲ್ಲ.

Most Read Articles

Kannada
English summary
Harley-Davidson Launches Two Bikes the Seventy-Two and the Softail Slim. Seventy-Two 1200 cc V-Twin powertrain and Softail Slim owned 1690 cc Twin Cam 103B(TM) powertrain.
Story first published: Monday, February 6, 2012, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X