ಮೂರುವರೆ ಲಕ್ಷ ರುಪಾಯಿಯ ಹೀರೋ ಸೈಕಲ್ ಬೇಕೆ?

 Hero introduced first carbon bicycle India
ಸೈಕಲ್ ಈಗ ಬಡವರ ಬಂಡಿಯಾಗಿ ಉಳಿದಿಲ್ಲ. ಐಟಿ, ಬಿಟಿ ಎನ್ನದೇ ಎಲ್ಲರಿಗೂ ಬೇಕು. ಜನರೆಲ್ಲ ಕಾರು ಬೈಕು ಬಿಟ್ಟು ಚಲ್ ಮೇರಿ ಬೈಸಿಕಲ್ ಎನ್ನುತ್ತಿದ್ದಾರೆ.

ಎಲ್ಲರಿಗೂ ಸಲ್ಲುವ ಪರಿಸರ ಮತ್ತು ಆರೋಗ್ಯ ಸ್ನೇಹಿ ಬೈಸಿಕಲ್ ದರವಿಂದು ಅಂದಿನ ಒಂದೆರಡು ಸಾವಿರ ರು. ಲೆಕ್ಕದಲ್ಲಿ ಉಳಿದಿಲ್ಲ. ಈಗ ಲಕ್ಷ ಲಕ್ಷ ರುಪಾಯಿಗೂ ಹತ್ತನ್ನೆರಡು ಕೆಜಿಯ ಹಗುರ ಸೈಕಲ್ ಗಳು ದೊರೆಯುತ್ತವೆ.

ಈಗ ಹೆಚ್ಚಿನ ಬೈಸಿಕಲ್ ಕಂಪನಿಗಳು ಲೈಫ್ ಸ್ಟೈಲ್ ಬೈಸಿಕಲ್ ಸೆಗ್ಮೆಂಟಿನತ್ತ ದೃಷ್ಟಿ ಹರಿಸುತ್ತಿವೆ. ಇತ್ತೀಚೆಗೆ ಬಿಎಸ್ಎ ಕಂಪನಿಯು ಇಂತಹ ಬೈಸಿಕಲ್ ಪರಿಚಯಿಸಿತ್ತು.

ಇದೀಗ ಜಗತ್ತಿನ ಬೃಹತ್ ಬೈಸಿಕಲ್ ಕಂಪನಿ ಹೀರೋ ಸೈಕಲ್ ಕೂಡ ಲೈಫ್ ಸ್ಟೈಲ್ ಬೈಸಿಕಲ್ ನತ್ತ ದೃಷ್ಟಿ ಹರಿಸಿದೆ. ಕಂಪನಿಯು ನೂತನ ಹರ್ಬಲ್ ಟ್ರಯಲ್ ಲೈಫ್ ಸ್ಟೈಲ್ ಬೈಸಿಕಲ್ ಬ್ರಾಂಡನ್ನು ಪರಿಚಯಿಸಿದೆ. ಈ ಬ್ರಾಂಡ್ ಮೂಲಕ ಕಂಪನಿಯು ಹದಿನೇಳು ಮಾಡೆಲ್ ಸೈಕಲ್ ಗಳನ್ನು ತಂದಿದೆ.

ಇದರಲ್ಲಿ ರೆಡ್ ಡಾಟ್ ಕಾರ್ಬನ್ ಫೈಬರ್ ಬೈಸಿಕಲ್ ದರ ಸುಮಾರು 43 ಸಾವಿರ ರುಪಾಯಿ ಇದೆ. ಟಾಪ್ ಎಂಡ್ ಹರ್ಬನ್ ಮಾಡೆಲ್ ಬೈಸಿಕಲೊಂದರ ದರ ಬರೋಬ್ಬರಿ 3.5 ಲಕ್ಷ ರು. ಇದೆ. ವಿಶೇಷವೆಂದರೆ ಇದು ಕಂಪನಿಯ ಮೊದಲ ಕಾರ್ಬನ್ ಫೈಬರ್ ಬೈಸಿಕಲ್ ಆಗಿದೆ.

ಹರ್ಬನ್ ಟ್ರಯಲ್ ಬೈಸಿಕಲ್ ಬ್ರಾಂಡ್ ಹಗುರ ಮತ್ತು ಅತ್ಯಧಿಕ ಕಾರ್ಯಕ್ಷಮತೆಯ ಫೀಚರುಗಳನ್ನು ಹೊಂದಿದೆ. ಕಾರ್ಬನ್ ಫೈಬರ್ ಹೀರೋ ಹರ್ಬನ್ ಫೈಬರ್ ಟ್ರಯಲ್ ರೆಡ್ ಡಾಟ್ ಬೈಸಿಕಲ್ ತೂಕ ಕೇವಲ 12.9 ಕೆ.ಜಿ. ಕಾರ್ಬನ್ ಫೈಬರ್ ಬೈಸಿಕಲ್ ಗಳು ದೇಶಕ್ಕೆ ಹೊಸತೇನಲ್ಲ.

ಇತ್ತೀಚೆಗೆ ಬಿಎಸ್ಎ ಕಂಪನಿಯು ನೂತನ ಫೈಬರ್ ಬೈಸಿಕಲ್ ಗಳನ್ನು ಪರಿಚಯಿಸಿತ್ತು. ಬಿಎಸ್ಎ ಕಂಪನಿಯು ಜಾಗತಿಕವಾಗಿ ಬಿಂಚಿ, ಕೊನೊಡಲೆ, ಜಿಟಿ ಮತ್ತು ಕೊನಾ ಎಂಬ ಹಗುರ ಫೈಬರ್ ಬೈಸಿಕಲ್ ಗಳನ್ನು ಮಾರಾಟ ಮಾಡುತ್ತಿದೆ.

ದೇಶದಲ್ಲಿಂದು ಹಗುರ ಲೈಫ್ ಸ್ಟೈಲ್ ಸೈಕಲುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆರಾಮದಾಯಕತೆ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಇಂತಹ ಹಗುರ ಸೈಕಲುಗಳನ್ನು ಇಲ್ಲಿ ಪರಿಚಯಿಸಲು ಅಂತಾರಾಷ್ಟ್ರೀಯ ಬ್ರಾಂಡುಗಳು ನಿರ್ಧರಿಸಿವೆ.

Most Read Articles

Kannada
English summary
Hero Cycles, world’s largest bicycle manufacturer, announced their foray into high-end bicycles with the launch of brand “Urban Trail”, “Red Dot”. The first product of the series was unveiled February 20 and will be available at a price tag of Rs. 43, 000. Red Dot is made of carbon fiber and is the most affordable carbon bike available in India, apart from the 16 other models. Going forward, under Urban Trail several other luxury products will be introduced costing up to Rs. 3.5 lakhs.
Story first published: Tuesday, February 21, 2012, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X