ಐಐಎಸ್‌ಸಿ ಕಾಲೇಜು ಕ್ಯಾಂಪಸ್ಸಿನಲ್ಲಿ ನಮ್ಮ ಸೈಕಲ್ ಟ್ರಿಣ್ ಟ್ರಿಣ್!

Posted By:
ಬೆಂಗಳೂರು, ಆ 7: ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉತ್ತೇಜಿಸುವ ನಿಟ್ಟಿನಲ್ಲಿ ವಿನೂತನ "ನಮ್ಮ ಸೈಕಲ್" ಕಾರ್ಯತಂತ್ರವೊಂದಕ್ಕೆ ಸೋಮವಾರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕ್ಯಾಂಪಸಿನಲ್ಲಿ ಚಾಲನೆ ದೊರಕಿದೆ.

ಇನ್ಮುಂದೆ ವಿದ್ಯಾರ್ಥಿಗಳು ನಮ್ಮ ಸೈಕಲ್ ವೆಬ್ ತಾಣಕ್ಕೆ ಲಾಗಿನ್ ಆಗಿ ನೋಂದಣಿ ಐಡಿ ಪಡೆದರೆ ಸುಲಭವಾಗಿ ಬಾಡಿಗೆ ಸೈಕಲ್ ಪಡೆಯಬಹುದು. ಇದು CiSTUP, ಐಐಎಸ್ ಸಿ ಮತ್ತು ರೈಡ್ ಎ ಸೈಕಲ್ ಪೌಂಡೇಷನ್ ಜಂಟಿ ಕಾರ್ಯತಂತ್ರವಾಗಿದೆ. ಈ ಯೋಜನೆ ಆರಂಭಕ್ಕೆ ಬೆಂಬಲವಾಗಿ ಟಿಐ ಸೈಕಲ್ಸ್ ಇಂಡಿಯಾ ಸುಮಾರು 150 ಸೈಕಲುಗಳನ್ನು ನೀಡಿದೆ.

ಸೈಕಲ್ ಹಂಚಿಕೆ ಮಾಡಲು ಸುಲಭವಾಗುವಂತೆ ಗುಬ್ಬಿ ಲ್ಯಾಬ್ಸ್ "ಬೈಸಿಕಲ್ ಶೇರಿಂಗ್ ಸಾಫ್ಟ್ ವೇರ್" ವಿನ್ಯಾಸ ಮಾಡಿಕೊಟ್ಟಿದೆ. "ಸೈಕಲ್ ಸವಾರಿ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಉದ್ದೇಶ" ಎಂದು ರೈಡ್ ಎ ಸೈಕಲ್ ನ ಎಚ್ಆರ್ ಮುರಳಿ ಹೇಳುತ್ತಾರೆ.

ಸೆಲೆಕ್ಟ್, ರೈಡ್ ಮತ್ತು ರಿಟರ್ನ್ ಸಿಸ್ಟಮ್ ಮೂಲಕ ಈ ನಮ್ಮ ಸೈಕಲ್ ಯೋಜನೆ ಕಾರ್ಯನಿರ್ವಹಿಸುತ್ತದೆ. ನಮ್ಮ ಸೈಕಲ್ ವೆಬ್ ತಾಣಕ್ಕೆ ವಿದ್ಯಾರ್ಥಿಗಳು ಪ್ರವೇಶಿಸಿ ಒಂದು ರಿಜಿಸ್ಟ್ರೇಷನ್ ಐಡಿ ಪಡೆಯಬೇಕು. ಯಾವುದೇ ಸ್ಟೇಷನಿನಿಂದ ಒಂದು ಸೈಕಲ್ ಪಡೆದು, ಮತ್ತೊಂದು ಸೈಕಲ್ ಸ್ಟೇಷನಿನಲ್ಲಿ ಸೈಕಲ್ ಹಿಂತುರುಗಿಸಬಹುದು.

ಬೆಂಗಳೂರಿನ ಜಯನಗರದ ಹೆಚ್ಚಿನ ರಸ್ತೆಯಲ್ಲಿ ಈಗ ಸೈಕಲ್ ಟ್ರ್ಯಾಕ್ ಸಿದ್ದಗೊಂಡಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಸೈಕಲ್ ಬಳಕೆ ಹೆಚ್ಚಿಸಿಕೊಳ್ಳಲು ನಮ್ಮ ಸೈಕಲ್ ನಂತಹ ಯೋಜನೆಗಳು ಪ್ರೋತ್ಸಾಹ ನೀಡಲಿದೆ.

ನಮ್ಮ ಸೈಕಲ್ ಬಾಡಿಗೆ ಪಡೆಯಲು ತಿಂಗಳ ಪಾಸ್, ಅರ್ಧವಾರ್ಷಿಕ ಪಾಸ್ ಮತ್ತು ಪ್ರೀಪೆಯ್ಡ್ ಟಿಕೇಟುಗಳು ಲಭ್ಯವಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೇ ಕಾಲೇಜು ಸಿಬ್ಬಂದಿಗಳು ಈ ಸೇವೆಯನ್ನು ಪಡೆಯಬಹುದಾಗಿದೆ.

ಪ್ರಿಪೇಯ್ಡ್ ಶುಲ್ಕ: ತಿಂಗಳಿಗೆ 100 ರುಪಾಯಿ. ಆರು ತಿಂಗಳಿಗೆ 500 ರು. ಮೊದಲ ಅರ್ಧಗಂಟೆಗೆ ಬಾಡಿಗೆ ನೀಡಬೇಕಿಲ್ಲ. ಅರ್ಧಗಂಟೆಯ ನಂತರದ ಶುಲ್ಕಗಳು ಈ ಕೆಳಗಿನಂತೆ ಇವೆ.

ಮೊದಲ ಅರ್ಧಗಂಟೆ ಉಚಿತ. ನಂತರ ಒಂದು ಗಂಟೆವರೆಗೆ 5 ರು. ಒಂದುವರೆಗಂಟೆಗೆ 20 ರು. ಎರಡು ಗಂಟೆವರೆಗೆ 30 ರುಪಾಯಿ. ನಂತರ ಗಂಟೆಗೆ 10 ರು.ವಿನಿಂತೆ ಬಾಡಿಗೆ ಹೆಚ್ಚಾಗುತ್ತ ಹೋಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ಸೈಕಲ್ ವೆಬ್ ತಾಣಕ್ಕೆ ಸೈಕಲ್ ಹೊಡೆಯಿರಿ.

English summary
Students at the Indian Institute of Science can now hire cycles to ride around the huge campus through the nammacycle.in website. This initiative has been started by TI cycles india, IISc and Ride A Cycle Foundation.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark